BBK 11: ಕಿಚ್ಚನಿಂದ ಹನುಮಂತಗೆ ಗಿಫ್ಟ್; ಮಾಣಿಕ್ಯನ ಮಾನವೀಯ ಗುಣಕ್ಕೆ ಫ್ಯಾನ್ಸ್ ಫಿದಾ!

By ಎಸ್ ಸುಮಂತ್

ಬಿಗ್ ಬಾಸ್ ಮನೆಗೆ ಹೋಗಿರುವವರೆಲ್ಲ ಆಲ್ಮೋಸ್ಟ್ ಸಿಟಿ ಮಂದಿ. ಅದರಲ್ಲೂ ಬಣ್ಣದ ಲೋಕದಲ್ಲಿ ಇರುವವರೆ. ಬ್ಯೂಟಿ, ಫಿಟ್ನೆಸ್‌ಗೆ ಅಂತಾನೇ ಇವರೆಲ್ಲ ಸಮಯವನ್ನ ಮೀಸಲಿಡುತ್ತಾರೆ. ಅದು ಅವರ ವೃತ್ತಿ ಬದುಕಿಗೆ ಅನಿವಾರ್ಯತೆ ಕೂಡ. ಆದರೆ ಹನುಮಂತಗೆ ಅಷ್ಟೆಲ್ಲ ಬ್ಯೂಟಿ ಮೆಂಟೈನ್ ಅಗತ್ಯವಿಲ್ಲ.

ಹಳ್ಳಿಯಲ್ಲಿ, ಅದರಲ್ಲೂ ಕುರಿ ಕಾಯುತ್ತಾ ಜೀವನ ನಡೆಸುವ ಮಂದಿ ಹೇಗಿರುತ್ತಾನೋ ಅದೇ ಥರವೇ ಬಿಗ್ ಬಾಸ್ ಮನೆಯಲ್ಲಿ ಹನುಮಂತ ಬದುಕುತ್ತಿದ್ದಾರೆ. ಅದನ್ನು ಕೆಲವೊಮ್ಮೆ ಶೋಗಳ ಟಿಆರ್‌ಪಿಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪವೂ ಇದೆ.

biggboss kannada 11 Wildcard Contestant Hanumantha receives Gift from Sudeep

ಕುರಿ ಕಾಯಲು ಹೋಗುವವರು ವಾರಕ್ಕೆ 2 ಬಾರಿ ಸ್ನಾನ ಮಾಡುವುದು ಹೆಚ್ಚು. ಹನುಮಂತ ಕೂಡ ಬಿಗ್‌ಬಾಸ್ ಮನೆಯಲ್ಲಿ ಸ್ನಾನ ಪ್ರತಿದಿನ ಮಾಡಲ್ಲ. ಅದು ಮನೆಯವರಿಗೆ ಇರಿಸು ಮುರಿಸು ಎನಿಸಿದೆ. ಸುಮಾರು ಸಲ ಎಲ್ಲರೂ ಹೇಳಿದ್ದಾರೆ ನೀನು ಸ್ನಾನ ಮಾಡು ಅಂತ. ಇದೇ ವಿಚಾರ ಕಿಚ್ಚ ಸುದೀಪ್ ಪಂಚಾಯ್ತಿಯಲ್ಲೂ ಬಂದಿತ್ತು. ಸುದೀಪ್ ಅವರು ನಗುತ್ತಲೇ ಕೇಳಿದ್ದರು, ಹನುಮಂತ ಯಾಕೆ ಸ್ನಾನ ಮಾಡಲ್ಲ ಅಂತ. ಆಗ ಹನುಮಂತು ಕೊಂಚ ಬೇಸರದಲ್ಲಿಯೇ ಬಟ್ಟೆ ಇಲ್ಲ ಸರ್. ತಂದಿರೋದೆ ಕಡಿಮೆ. ಅದಕ್ಕೆ ಜಳಕ ಮಾಡಲ್ಲ ಅಂದ್ರು. ಸುದೀಪ್ ಅವರಿಗೆ ಆ ನೋವು ಅರ್ಥವಾಯ್ತು. ತಕ್ಷಣವೇ ಆ ಟಾಪಿಕ್ ಬಿಟ್ಟು ಮುಂದೆ ಹೋದ್ರು. ಆದ್ರೆ ಈಗ ಕರುನಾಡೇ ಮೆಚ್ಚುವಂತೆ ನಡೆದುಕೊಂಡಿದ್ದಾರೆ.

ಹನುಮಂತಗೆ ಕಿಚ್ಚನ ಗಿಫ್ಟ್

ಕಿಚ್ಚ ಸುದೀಪ್ ಕಡೆಯಿಂದ ಜನ ಅಂದೇ ಇದನ್ನು ನಿರೀಕ್ಷೆ ಮಾಡಿದ್ದರು. ಸುದೀಪ್ ಅವರು ಹನುಮಂತು ಕಷ್ಟಕ್ಕೆ ಖಂಡಿತ ಕರಗುತ್ತಾರೆಂದು. ಈಗ ಅದು ಸತ್ಯವಾಗಿದೆ. ಹನುಮಂತಗೆ ಅಗತ್ಯವಿರುವ ಬಟ್ಟೆ ಜೊತೆಗೆ ಒಂದು ಲೆಟರ್ ಕಳುಹಿಸಿದ್ದಾರೆ. ಆ ಲೆಟರ್‌ನಲ್ಲಿ ಮನೆ ಮಂದಿಯ ಗುಣವೂ ಅಡಗಿದೆ. 'ಮೈ ಮುಚ್ಚೋ ಬಟ್ಟೆ ನೋಡಿ ಮಾನವ ಅಳಿಬ್ಯಾಡ್ರಿ.. ಮನಸ ತೋರೋ ನಗುವ ನೋಡಲು ಸುಮ್ಮನೆ ಇರಬೇಡಿ. ಕುರಿಯ ಕಾಯೋ ಕುರಿಗಾಹಿ ಕೊಡುತ್ತಾನೋ ಕಂಬಳಿ.. ಲೋ ತಮ್ಮ ಹನುಮಂತ ದಿನವೂ ಜಳಕ ಮಾಡೋ.. ದಿನದಿನವೂ ಪದವ ಕಟ್ಟಿ ಹೊಸ ಹಾಡು ಹಾಡೋ.. ಇಂತಿ ಕಿಚ್ಚ' ಎಂದು ಒತ್ರ ಬರೆದಿದ್ದಾರೆ.

ಹನುಮಂತ ಖುಷಿಗೆ ಪಾರವೇ ಇಲ್ಲ

ಹನುಮಂತು ಅಂದು ಬಟ್ಟೆ ಇಲ್ಲ ಎಂದಿದ್ದಕ್ಕೆ ಇಂದು ಬಟ್ಟೆಯ ರಾಶಿಯೇ ಮನೆಗೆ ಬಂದಿದೆ. ಯಾರಾದರೂ ನೀವು ಹಾಕಿರುವ ಜಾಕೆಟ್ ಇಷ್ಟ ಅಂದ್ರೆ ಅದನ್ನ ಗಿಫ್ಟ್ ಆಗಿ ಕೊಟ್ಟು ಬಿಡುವ ಕಿಚ್ಚ, ಹನುಮಂತಗೆ ಹೊಸ ಬಟ್ಟೆಯನ್ನೇ ಕೊಡಿಸಿದ್ದಾರೆ. ಪತ್ರದಲ್ಲಿರುವ ಪದಗಳು, ಬಟ್ಟೆ ನೋಡಿ ಹನುಮಂತಗೆ ಏನು ಹೇಳಬೇಕು ಎಂಬುದು ತೋಚಲಿಲ್ಲ. ಮನಸ್ಸಾರೆ ತನ್ನದೇ ಸ್ಟೈಲ್‌ನಲ್ಲಿ ಧನ್ಯವಾದ ಹೇಳಿದ್ದಾರೆ.

3 ಸಾವಿರದ ಚಡ್ಡಿ ಗಿಫ್ಟ್

ಬಿಗ್ ಬಾಸ್ ಮನೆಯಲ್ಲಿ ಸುಮಾರು ದಿನದಿಂದ ಮೂರು ಸಾವಿರದ ಚಡ್ಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಧನರಾಜ್ ಹಾಗೂ ಹನುಮಂತು ಯಾವಾಗಲೂ ಸುರೇಶ್ ಮಾವನನ್ನ ರೇಗಿಸುತ್ತಾ ಇರುತ್ತಾರೆ. ಇದೀಗ ಕಿಚ್ಚ ಸುದೀಪ್ ಶರ್ಟ್, ಪ್ಯಾಂಟ್ ಜೊತೆಗೆ ಮೂರು ಸಾವಿರ ಬೆಲೆ ಬಾಳುವ ಎಲ್ಲಾ ಬ್ರ್ಯಾಂಡ್ ಚಡ್ಡಿಗಳನ್ನು ಕಳುಹಿಸಿದ್ದಾರೆ.

ಊರಲ್ಲಿರುವ ಹನುಮಂತ ಪೋಷಕರು

ಬಿಗ್ ಬಾಸ್ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೂ ಮನೆಯಿಂದ ಪ್ರತಿ ವಾರ ಬಟ್ಟೆ ಬರುತ್ತದೆ. ಆದರೆ ಹನುಮಂತುಗೆ ಅದು ಸಾಧ್ಯವಿಲ್ಲ. ಯಾಕಂದ್ರೆ ಅವರ ತಂದೆ ತಾಯಿ ಪಕ್ಕ ತಾಂಡಾದವರು. ಅವರಿಗೆ ಅಲ್ಲಿಂದ ಬೆಂಗಳೂರಿಗೆ ಬರುವುದೇ ಗೊತ್ತಾಗಲ್ಲ. ಇನ್ನು ಬಟ್ಟೆ ಕಳುಹಿಸುವುದು ಅಸಾಧ್ಯದ ಮಾತು. ಹೀಗಾಗಿ ಮನೆಯಿಂದ ತಂದಿರುವ ಬಟ್ಟೆಗಳನ್ನೇ ಹಾಕಿಕೊಳ್ಳುತ್ತಿದ್ದಾರೆ.

More from Filmibeat

English summary
Actor Sudeep Sends special gift for Hanumantha in bigg boss house; Here is the details about People of Karnataka are happy for Sudeep's humanity;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X