Chandan Shetty; ಗುರುತೇ ಸಿಗದಂತೆ ಬದಲಾದ ಚಂದನ್ ಶೆಟ್ಟಿ; ಯಾಕಿ ಬದಲಾವಣೆ?
ಬಿಗ್ ಬಾಸ್ ಮಾಜಿ ಸ್ಪರ್ಧಿ, ರ್ಯಾಪರ್ ಚಂದನ್ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಟ್ರಾವೆಲ್ ಮಾಡ್ತಾ, ರ್ಯಾಪ್ ಸಾಂಗ್ ಮಾಡ್ತಾ ಲೈಫ್ ಎಂಜಾಯ್ ಮಾಡ್ತಾ ಇದ್ದಾರೆ.
ಇತ್ತೀಚೆಗೆ ಮಾಡಿದ ರ್ಯಾಪ್ ಸಾಂಗ್ ಅಂತು ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆದುಕೊಂಡಿದೆ. 'ಕಾಟನ್ ಕ್ಯಾಂಡಿ' ಹಾಡಿಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಸೋಶಿಯಲ್ ಮೀಡಿಯಾದಲ್ಲೆಲ್ಲಾ ಅದರದ್ದೇ ಹವಾ ಜೋರಾಗಿತ್ತು.

ರೀಲ್ಸ್ ಮಾಡೋರಂತು ತಾ ಮುಂದು ನಾ ಮುಂದು ಅಂತ ಕಾಟನ್ ಕ್ಯಾಂಡಿ ಹಾಡಿಗೆ ಹೆಜ್ಜೆ ಹಾಕಿದ್ದೇ ಆಯ್ತು. ರ್ಯಾಪ್ ಸಾಂಗ್ಸ್ ಲವ್ವರ್ಸ್ ರೆಸ್ಪಾನ್ಸ್, ರೀಚ್ ಕಂಡು ಚಂದನ್ ಶೆಟ್ಟಿ ಹಾಗೂ ಪಾಟ್ನರ್ ಸುಷ್ಮಿತಾ ಗೋಪಿನಾಥ್ ಪಾರ್ಟಿ ಕೂಡ ಮಾಡಿದ್ರು. ಸದ್ಯಕ್ಕೆ ಆ ಸಾಂಗ್ 21 ಮಿಲಿಯನ್ ಕ್ರಾಸ್ ಮಾಡಿದೆ. ರಿಲೀಸ್ ಆಗಿ ಕೇವಲ ಒಂದೇ ಒಂದು ತಿಂಗಳಾಗಿದೆ ಅಷ್ಟೆ. ಇಷ್ಟು ಕಡಿಮೆ ಸಮಯದಲ್ಲಿಯೇ ಇಷ್ಟೊಂದು ರೀಚ್ ಆಗಿರೋದು ಚಂದನ್ ಶೆಟ್ಟಿಗೆ ನಿಜಕ್ಕೂ ಖುಷಿ ನೀಡಿದೆ.
ಲುಕ್ ಬದಲಿಸಿಕೊಂಡ ಚಂದನ್
ಚಂದನ್ ಶೆಟ್ಟಿ ವೈಯಕ್ತಿಕ ಜೀವನ ಈಗ ಮುಚ್ಚುಮರೆ ಅಂತ ಏನಿಲ್ಲ. ಬದಲಿಗೆ ತೆರೆದ ಪುಸ್ತಕವಾಗಿದೆ. ಅಂದ್ರೆ ಅವರ ಡಿವೋರ್ಸ್ ವಿಚಾರ ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ. ಆದರೆ ಡಿವೋರ್ಸ್ ಆದ ಮೇಲೆ ಚಂದನ್ ಶೆಟ್ಟಿ ಸಾಕಷ್ಟು ಬದಲಾಗಿದ್ದಾರೆ ಎಂದರೆ ತಪ್ಪಗಲಾರದು. ಲೈಫ್‌ನ ಸಖತ್ ಎಂಜಾಯ್ ಮಾಡ್ತಾ ಇದಾರೆ. ಅದು ಅವರ ಸೋಶಿಯಲ್ ಮೀಡಿಯಾದಲ್ಲೂ ಕಾಣಿಸ್ತಾ ಇದೆ. ಸಿನಿಮಾ, ಸಾಂಗ್ಸ್ ಅಂತ ಆರಾಮಾಗಿ ಇರೋ ಚಂದನ್ ಶೆಟ್ಟಿ ಈಗ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಹೊಸ ಫೋಟೋಗೆ ಹೊಸ ಸಾಲು
ಸೆಲೆಬ್ರೆಟಿಗಳು ಫೋಟೋ ಜೊತೆಗೆ ಹಾಕುವ ಕ್ಯಾಪ್ಶನ್ ಬಹಳ ಮುಖ್ಯವಾಗುತ್ತದೆ. ಏನನ್ನ ಹೇಳುವುದಕ್ಕೆ ಹೊರಟಿದ್ದಾರೆ ಅನ್ನೋದು ಕೂಡ ಅದರಿಂದ ಅರ್ಥವಾಗಿ ಬಿಡುತ್ತದೆ. ಇದೀಗ ಎಲ್ಲರ ಚಿತ್ತ ಚಂದನ್ ಶೆಟ್ಟಿ ಕ್ಯಾಪ್ಶನ್ ಅತ್ತ ನೆಟ್ಟಿದೆ. "ಜೀವನದಲ್ಲಿ ಯಾವುದನ್ನೂ ಬದಲಾವಣೆ ಮಾಡುವುದಕ್ಕೆ ಸಾಧ್ಯವೇ ಆಗುವುದಿಲ್ಲವೋ ಆಗ ನಿಮ್ಮ ಲುಕ್ ಚೇಂಜ್ ಮಾಡಿಕೊಳ್ಳಿ" ಎಂದು ಬರೆದುಕೊಂಡಿದ್ದಾರೆ.
ರಾಶಿ ಕಮೆಂಟ್ಸ್ ಬರ್ತಿದೆ
ಚಂದನ್ ಶೆಟ್ಟಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಎರಡು ಫೋಟೋಗಳನ್ನ ಹಾಕಿಕೊಂಡಿದ್ದಾರೆ. ಅದರಲ್ಲಿ ಒಂದು ಕಲರ್ ಮತ್ತೊಂದು ವೈಟ್ ಅಂಡ್ ಬ್ಲಾಕ್. ಫುಲ್ ಶೇವ್ ಮಾಡಿ, ಮೀಸೆ ಇಲ್ಲದೇ ಕೊಂಚ ದಾಡಿ ಮಾತ್ರ ಸ್ಟೈಲಿಶ್ ಆಗಿ ಬಿಟ್ಟಿದ್ದಾರೆ. ಇದನ್ನು ನೋಡಿದ ಫ್ಯಾನ್ಸ್ ಕಮೆಂಟ್ ಮೂಲಕ ಪ್ರೋತ್ಸಾಹ ನೀಡುತ್ತಾ ಇದ್ದಾರೆ. ಈಗಷ್ಟೇ ಕಾಲೇಜಿಗೆ ಹೊರಟಿರೋ ಹೀರೋ ಥರ ಕಾಣಿಸ್ತಾ ಇದ್ದೀರಾ ಬ್ರೋ. ಮತ್ತೊಂದು ಮದುವೆ ಆಗ್ಬಿಡಿ ಎಂದೆಲ್ಲಾ ಹೇಳ್ತಾ ಇದಾರೆ.
ಸುಶ್ಮಿತಾ ಜೊತೆಗೆ ಲವ್ ಆಗಿದ್ಯಾ?
ಇನ್ನು ನಿವೇದಿತಾ ಗೌಡ ಜೊತೆಗೆ ಡಿವೋರ್ಸ್ ಆದ ಮೇಲೆ ಚಂದನ್ ಶೆಟ್ಟಿ ಹೆಸರು ಯಾರ್ಯಾರದ್ದೋ ಹೆಸರಿನ ಜೊತೆಗೆ ಲಿಂಕ್ ಆಗಿತ್ತು. 'ಕಾಟನ್ ಕ್ಯಾಂಡಿ' ಹಾಡಿನಲ್ಲಿ ಹೆಜ್ಜೆ ಹಾಕಿದ್ದ ಸುಷ್ಮಿತಾ ಅವರ ಜೊತೆಗೂ ಕೇಳಿ ಬಂದಿತ್ತು. ಚಂದನ್ ಶೆಟ್ಟಿ ಹಾಗೂ ಸುಷ್ಮಿತಾ ಒಳ್ಳೆ ಜೋಡಿ, ಮದುವೆಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ ಆ ಇಬ್ಬರು ಇದನ್ನ ಅಧಿಕೃತಗೊಳಿಸಿಲ್ಲ.


Click it and Unblock the Notifications











