Bigg boss: ಸಂಗೀತಾ ಟೀಮ್‌ಗೆ ಟಾರ್ಚರ್ ಕೊಡುತ್ತಿರುವ ಸಂತೋಷ್ ಟೀಂ: ನಮ್ರತಾ ಮಾತಿಗೆ ಸಂಗೀತಾ ಕಣ್ಣೀರು..!

By Shruthi Harishgowda

ಬಿಗ್ ಬಾಸ್ ಮನೆ ಈಗ ರೋಚಕ ಟ್ವಿಸ್ಟ್‌ಗೆ ಕಾರಣವಾಗುತ್ತಾ ಸಾಗುತ್ತಿದೆ. ಈ ಹಿಂದೆ ರಾಕ್ಷಸರಾಗಿದ್ದ ಸಂಗೀತಾ ಮತ್ತವರ ಟೀಮ್ ಗಂಧರ್ವರ ಮೇಲೆ ದಾಳಿ ಮಾಡಿತ್ತು. ಆದರೆ ಅಷ್ಟರ ಮಟ್ಟಿಗೆ ದಾಳಿ ಮಾಡಿರಲಿಲ್ಲ. ಈಗ ವರ್ತೂರು ಸಂತೋಷ್ ನೇತೃತ್ವದ ತಂಡ ಸಂಗೀತಾ ಟೀಂ ಮೇಲೆ ಸವಾರಿ ಮಾಡುತ್ತಿದೆ.

ರಾಕ್ಷಸರಾಗಿರುವ ವರ್ತೂರು ಸಂತೋಷ್ ಟೀಮ್ ನಲ್ಲಿರುವ ವಿನಯ್ ಹಾಗೂ ನಮ್ರತಾ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಈ ಕಡೆ ಗಂಧರ್ವರು ಯಾವುದೇ ರಾಕ್ಷಸರು ಕೊಡುತ್ತಿರುವ ಕಾಟವನ್ನು ತಾಳ್ಮೆಯಿಂದಲೇ ಸಹಿಸಿಕೊಳ್ಳುತ್ತಾ ಇದ್ದಾರೆ. ಇನ್ನು ವಿನಯ್ ಹಾಗೂ ಕಾರ್ತಿಕ್ ಇಬ್ಬರೂ ಸಹ ಕಿತ್ತಾಡಿಕೊಳ್ಳುತ್ತಲೇ ಇದ್ದಾರೆ. ವಿನಯ್ ಬುದ್ಧಿ ಕಾರ್ತಿಕ್‌ಗೆ ಸ್ವಲ್ಪವು ಇಷ್ಟವಾಗುತ್ತಿಲ್ಲ. ನೀವು ಮಾಡಿದ್ದಕ್ಕಿಂತ ದುಪ್ಪಟ್ಟು ನಾವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

Biggboss Kannada: Gandharvaru Rakshasaru Teams contestants fight each other in task

ಗಂಧರ್ವರ ಟೀಮ್‌ನಲ್ಲಿರುವ ಕಾರ್ತಿಕ್ ಹಾಗೂ ಸಂಗೀತಾ ಮೇಲೆ ರಾಕ್ಷಸರಿಗೆ ಕಣ್ಣು ಬಿದ್ದಂತೆ ಕಾಣುತ್ತಿದೆ. ಇವರಿಬ್ಬರಿಗೆ ಜಾಸ್ತಿ ಕ್ವಾಟ್ಲೆ ಕೊಡುತ್ತಿದ್ದಾರೆ. ಸಂಗೀತಾಗಂತೂ ವರ್ತೂರು ಸಂತೋಷ್ ನೀನು ರಾಕ್ಷಸಿಯಂತೆ ಆಡುತ್ತೀಯ ಎಂದಿದ್ದಾರೆ. ವಿನಯ್ ನಾನು ಕಾರ್ತಿಕ್, ಪ್ಯಾಂಟ್ ಬಿಚ್ಚಿಸಿ ಬರೀ ಚಡ್ಡಿಯಲ್ಲಿ ಆಟವನ್ನು ಆಡಿಸುತ್ತೇನೆ ಎಂದು ಪವಿ, ನಮ್ರತಾ ಹಾಗೂ ಸ್ನೇಹಿತ್ ಮುಂದೆ ಹೇಳಿದ್ದಾರೆ.

ಸ್ನೇಹಿತ್ ಈ ಮೊದಲು ಗಂಧರ್ವರಾಗಿದ್ದ ವಿನಯ್ ಟೀಂ ಮೇಲೆ ರಾಕ್ಷಸರು ಮುಗಿ ಬಿದ್ದರೆ ಪೌಲ್ ಮಾಡಿ ಆಟದಿಂದಲೇ ತೆಗೆಯುತ್ತಿದ್ದರು. ಆದರೆ ರಾಕ್ಷಸರು, ಗಂಧರ್ವರ ಟೀಮ್ ಕೈಯಲ್ಲಿ ಮಾಡಬಾರದ ಕೆಲಸ ಮಾಡಿಸುತ್ತಿದ್ದರೂ ಕೂಡ ಮೌನವಾಗಿಯೇ ಇದ್ದಾರೆ. ಇದು ಗಂಧರ್ವರ ತಂಡವನ್ನು ಮತ್ತಷ್ಟು ಕೆರಳಿಸಿದೆ.

ವಿನಯ್ ಹೇಳಿದ ತರಹವೇ ಸ್ನೇಹಿತ್ ಕೇಳುತ್ತಾರೆ ಎಂದು ಮೊದಲಿಂದಲೂ ಸಹ ಗೊತ್ತಿತ್ತು. ಕ್ಯಾಪ್ಟನ್ ಆಗಿರುವುದರಿಂದ ಎಲ್ಲರಿಗೂ ಕೂಡ ನ್ಯಾಯಯುತವಾಗಿಯೇ ಸಹಹೆ, ಸೂಚನೆ ನೀಡಬೇಕು. ಆದರೆ ಇಲ್ಲಿ ಸ್ನೇಹಿತ್ ಆ ರೀತಿ ಮಾಡದೇ ತಮ್ಮ ಪಾಡಿಗೆ ತಾವು ಇದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸ್ನೇಹಿತ್ ನಡೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಎಷ್ಟೇ ಬುದ್ಧಿ ಹೇಳಿದರೂ ಕಲಿಯಲಿಲ್ಲ ಎಂದು ತನಿಶಾ ಹಾಗೂ ಸಂಗೀತಾ ಮಾತನಾಡಿಕೊಂಡಿದ್ದಾರೆ. ಅವನು ಕ್ಯಾಪ್ಟನ್ ಆಗುವುದಕ್ಕೆ ಲಾಯಕ್ಕಿಲ್ಲ ಅನ್ನೋ ಮಾತು ಪದೇಪದೇ ಮನೆಯಲ್ಲಿ ಕೇಳಿಬರ್ತಿದೆ.

ರಾಕ್ಷಸರ ಕೈಯಲ್ಲಿ ಸಿಕ್ಕಿಬಿದ್ದಾಗ ಗಂಧರ್ವರು

ಬಿಗ್ ಬಾಸ್ ಮನೆ ಈಗ ಕುರುಕ್ಷೇತ್ರವಾಗಿ ಮಾರ್ಪಟ್ಟಿದೆ. ಇಲ್ಲಿ ಪ್ರತಿ ಕ್ಷಣವು ಕೂಡ ವಾಗ್ಯುದ್ಧ ನಡೆಯುತ್ತಲೇ ಇದೆ. ಗಂಡು ಮಕ್ಕಳಿಗಿಂತ ಹೆಣ್ಣು ಮಕ್ಕಳ ಬಾಯಿ ಜೋರಾಗಿದ್ದು ತನಿಷಾ, ನಮ್ರತಾ ಹಾಗೂ ಸಂಗೀತಾ ಈ ಮೂವರ ನಡುವೆಯೂ ಪದೇ ಪದೇ ಮಾತಿನ ಚಕಮಕಿ ನಡೆಯುತ್ತಿದೆ. ಮತ್ತೆ ಬಿಗ್ ಬಾಸ್ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರ ನಡುವೆ ಮಾತಿನ ಚಕಮಕಿ ನಡೆದಿದೆ. ಸಂಗೀತಾ, ಸಿರಿ ಬಳಿ ನಾವೇನು ರಾಕ್ಷಸರ ಸೇವಕರಲ್ಲ ಎಂಬ ಮಾತನ್ನು ಹೇಳಿದ್ದಾರೆ. ಪದೇಪದೇ ಟಾರ್ಗೆಟ್ ಮಾಡಿ ನಮ್ಮ ಬಗ್ಗೆ ಮಾತನಾಡುತ್ತಾ ಇದ್ದಾರೆ ಏನಾದರೂ ಮಾತನಾಡಿದರೆ ನಮ್ಮನ್ನೇ ತಪ್ಪು ಎಂದು ದೂಷಣೆ ಮಾಡುತ್ತಾರೆ ಎಂದು ಆರೋಪಿಸಿದ್ದಾರೆ.

Biggboss Kannada: Gandharvaru Rakshasaru Teams contestants fight each other in task

ನಾವೇನು ಸೇವಕರಲ್ಲ ಎಂದ ಸಂಗೀತಾ

ನಮ್ರತಾ ಯಾವುದೋ ಒಂದು ವಿಚಾರಕ್ಕೆ ಪದೇ- ಪದೇ ಗಂಧರ್ವರ ಟೀಮ್ ಮೇಲೆ ಮುಗಿ ಬೀಳುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಇದು ಸಂಗೀತಾಗೆ ಇಷ್ಟವಾಗಿಲ್ಲ. ನಂತರ ಅಡುಗೆ ಮನೆಯಲ್ಲಿ ಗಂಧರ್ವರು ಹಾಗೂ ರಾಕ್ಷಸರ ನಡುವೆ ಕಿರಿಕ್ ನಡೆದಿದೆ. ಇದೇ ವೇಳೆ ಕಾರ್ತಿಕ್ ಮುಖಕ್ಕೆ ಏನನ್ನು ಬಳಿದು ನಂತರ ಕೈಗೆ ಒಂದು ವಸ್ತುವನ್ನು ಕೊಟ್ಟು ಕೆಳಗಡೆ ನಡೆದುಕೊಂಡು ಬಾ ಎಂದು ವಿನಯ್ ಹೇಳಿದ್ದಾರೆ. ಅದೇ ರೀತಿ ಕಾರ್ತಿಕ್ ಮಾಡಿದ್ದು ನನ್ನ ಕೈಲಿ ಆಗೋದೆ ಇಲ್ಲ ಎಂದು ಮಲಗಿ ಬಿಟ್ಟಿದ್ದಾರೆ. ವಿನಯ್ ಅಂತೂ ಪದೇ ಪದೇ ಕಾರ್ತಿಕ್‌ನ ಟಾರ್ಗೆಟ್ ಮಾಡುತ್ತಾ ದೈಹಿಕವಾಗಿ ಹಿಂಸೆ ಕೊಡುತ್ತಿದ್ದಾರೆ.

ನಮ್ರತಾ ಮಾತಿಗೆ ಸಂಗೀತಾ ಕಣ್ಣೀರು

ನಮ್ರತಾ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಕೂಡ ಸಂಗೀತಾ ಮೇಲೆ ಮುಗಿಬಿದ್ದಿದ್ದಾರೆ. ಅವಳು ಹೇಳಿಕೊಟ್ಟಿರುವುದಂತೆ ಅದಕ್ಕೆ ಈ ರೀತಿ ಆಡುತ್ತಾ ಇದ್ದಾರೆ ಎಂಬ ಮಾತನ್ನು ಆಡಿದ್ದಾರೆ. ನಮ್ರತಾ ಮಾತಿಗೆ ಸಂಗೀತಾ ಕಣ್ಣೀರು ಹಾಕಿದ್ದಾರೆ. ಇದಕ್ಕೆ ಸಿರಿ ಬಳಿ ಬಂದ ಸಂಗೀತಾ ಅವರು ಕೆಟ್ಟದಾಗಿ ಆಡುತ್ತಿದ್ದಾರೆ ಅವರು ಆಡುತ್ತಿರುವುದಕ್ಕೆ ನನ್ನನ್ನ ಯಾಕೆ ದೂಷಣೆ ಮಾಡುತ್ತೀರಾ ಎಂದು ಅಲವತ್ತುಕೊಂಡಿದ್ದಾರೆ.

ಆಟವಾಡದ ಹೇಡಿಗಳು ಎಂದ ಸಂಗೀತಾ

ಇನ್ನು ತುಕಾಲಿ ಸಂತೋಷ್ ಕೂಡ ಅವರು ಆಟವಾಡುವುದಿಲ್ಲ ಎಂದು ಹೇಳಬೇಕಾಗಿತ್ತು ಎಂದು ಜೋರು ಮಾಡಿದ್ದಾರೆ. ತುಕಾಲಿ ಸಂತೋಷ್ ಮಾತಿಗೆ ನಮ್ರತಾ ಅವರು ಹೇಡಿಗಳು ಎಂಬ ಪದ ಬಳಸಿದ್ದಾರೆ. ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಹೆಚ್ಚು ಗಮನ ಸೆಳೆಯುತ್ತಿದೆ.

More from Filmibeat

English summary
Here is the details about bigboss Rakshasaru team torching to Gandhavrvaru team, sangeetha crying;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X