Bigg Boss: ಮೈಕಲ್- ವರ್ತೂರು ಸಂತೋಷ್? ಈ ವಾರ ಕಳಪೆ ಪಟ್ಟ ಯಾರಿಗೆ?
ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳೆಲ್ಲರೂ ಕೂಡ ಟಾಪ್ ಫೈವ್‌ನಲ್ಲಿ ನಮ್ಮ ಹೆಸರು ಇರಬೇಕು ಎಂದುಕೊಂಡು ಆಟ ಆಡುತ್ತಿದ್ದಾರೆ. ತುಕಾಲಿ ಸಂತೋಷ್ ಈ ಬಗ್ಗೆ ವರ್ತೂರು ಸಂತೋಷ್ ಬಳಿ ಚರ್ಚೆ ನಡೆಸಿದ್ದಾರೆ. ನನ್ನ ಹೆಸರು ಟಾಪ್ ಫೈವ್‌ನಲ್ಲಿ ಬರಬೇಕು ಎಂದು ಅವರು ಹೇಳಿದ್ದಾರೆ.
ಈ ವಾರ ಕ್ಯಾಪ್ಟನ್ ಆದವರು ಸೆಮಿ ಫೈನಲ್‌ನಲ್ಲಿ ಇರುತ್ತಾರೆ ಎನ್ನಲಾಗ್ತಿದೆ. ಹಾಗಾಗಿ ಸಂಗೀತಾ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಕೂಡ ಕ್ಯಾಪ್ಟನ್ಸಿ ಟಾಸ್ಕ್ ರೇಸ್‌ನಲ್ಲಿ ಇದ್ದಾರೆ. ಸಂಗೀತಾ, ಸಿರಿ ನೀಡಿದ ವಿಶೇಷ ಅಧಿಕಾರವನ್ನು ಬಳಸಿ ಕಾರ್ತಿಕ್ ಹಾಗೂ ವಿನಯ್ ಇಬ್ಬರನ್ನು ಕೂಡ ಟಾಸ್ಕ್‌ನಿಂದ ಹೊರಗೆ ಇಟ್ಟಿದ್ದಾರೆ.

ಸಂಗೀತಾ, ತುಕಾಲಿ ಸಂತೋಷ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಯಾಕೆಂದರೆ ತಮ್ಮ ಜೊತೆಗೆ ಸ್ಟ್ರಾಂಗ್ ಕಂಟೆಸ್ಟೆಂಟ್ ಇದ್ದರೆ ತಾವು ಕ್ಯಾಪ್ಟನ್ ಆಗಲು ಆಗುವುದಿಲ್ಲ ಎಂಬ ಸ್ಟಾಟರ್ಜಿ ಕೂಡ ಇರಬಹುದು. ಸದ್ಯಕ್ಕೆ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಯ್ಕೆಯನ್ನು ಮಾಡಲಾಗುತ್ತದೆ. ಅದೇ ರೀತಿ ಉತ್ತಮ ಯಾರು? ಕಳಪೆ ಯಾರಿಗೆ? ಎಂಬುದರ ಚರ್ಚೆಯು ಕೂಡ ನಡೆಯುತ್ತಿದೆ.
ಪ್ರತಾಪ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದು ಇನ್ನು ಮನೆಯಲ್ಲಿ ಕಾಣಿಸಿಕೊಂಡಂತಿಲ್ಲ. ಮನೆಯಲ್ಲಿರುವ ಎಂಟು ಮಂದಿ ಸದಸ್ಯರಲ್ಲಿ ಈಗ ಮೈಕಲ್ ಹಾಗೂ ವರ್ತೂರು ಸಂತೋಷ್ ಅವರಿಗೆ ಕಳಪೆ ಪಟ್ಟ ನೀಡುವತ್ತ ಎಲ್ಲರ ಚಿತ್ತ ನೆಟ್ಟಿದೆ. ಮನೆಯಲ್ಲಿರುವ ತನಿಷಾ ಅಂತೂ ಮೈಕಲ್, ನನಗೆ ಕ್ಯಾಪ್ಟನ್ ಆದಾಗ ರೆಸ್ಪೆಕ್ಟ್ ನೀಡಲಿಲ್ಲ ಎಂಬ ಕಾರಣಕ್ಕೆ ಮೈಕಲ್ ಅವರನ್ನು ಕಳಪೆ ಪಟ್ಟದಲ್ಲಿ ಕೂರಿಸಿದ್ದಾರೆ.

ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ಸಂಕುಚಿತವಾಗುತ್ತಿದ್ದು ಈ ವಾರವು ಕೂಡ ಡಬಲ್ ಎಲಿಮಿನೇಷನ್ ಇರಲಿದೆ ಎಂಬುವುದು ವೀಕ್ಷಕರ ಅಭಿಪ್ರಾಯವಾಗಿದೆ. ಈಗ ಮನೆಯಲ್ಲಿ ಇರುವ ಸದಸ್ಯರ ಸಂಖ್ಯೆ ಒಂಬತ್ತು. ಹೀಗಾಗಿ ಎರಡು ವಾರ ಡಬಲ್ ಎಲಿಮಿನೇಷನ್ ನಡೆದರೆ ಐದು ಮಂದಿ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಳ್ಳಲಿದ್ದಾರೆ. ಸಂಗೀತಾ, ಕಾರ್ತಿಕ್, ವಿನಯ್ ,ತನಿಷಾ ಈ ನಾಲ್ಕು ಮಂದಿ ಕೂಡ ತಮ್ಮ ಹೆಸರು ಸೆಮಿ ಫೈನಲ್‌ವರೆಗೂ ಬರಬೇಕು ಎಂದು ಆಟ ಆಡುತ್ತಿದ್ದಾರೆ. ಸಂಗೀತಾ ಹೇಗೆ ಸ್ಟ್ರಾಂಗ್ ಕಂಟೆಸ್ಟೆಂಟ್‌ಗಳನ್ನು ತೆಗೆಯಲು ಆಗುತ್ತದೋ ಅಲ್ಲಲ್ಲಿ ತಮ್ಮ ಬುದ್ಧಿವಂತಿಕೆಯಿಂದ ಅವರನ್ನ ಹೊರಗಡೆ ಇಡುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇನ್ನು ಮುಂದೆ ಮತ್ತಷ್ಟು ಬುದ್ಧಿವಂತಿಕೆಯಿಂದ ಸ್ಪರ್ಧಿಗಳು ಆಟ ಆಡಲು ತಯಾರಿ ನಡೆಸಿದ್ದಾರೆ.
ಯಾರಿಗೆ ಸಿಗಲಿದೆ ಕಳಪೆ ಪಟ್ಟ
ಈ ವಾರ ಉತ್ತಮ ಹಾಗೂ ಕಳಪೆ ಪಟ್ಟವನ್ನು ಯಾರು ಹೊತ್ತುಕೊಳ್ಳಲಿದ್ದಾರೆ ಎಂಬುದೇ ಸರ್ಪ್ರೈಸ್ ಆಗಿ ಇಡಲಾಗಿದೆ. ಸದ್ಯಕ್ಕೆ ಮನೆಯ ಎಲ್ಲಾ ಸದಸ್ಯರು ಕೂಡ ಒಂದು ಕಡೆ ಸೇರಿದ್ದು ಯಾರಿಗೆ ಆ ಪಟ್ಟ ಎನ್ನುವುದನ್ನು ಹೇಳುತ್ತಿದ್ದಾರೆ. ಮೈಕಲ್ ಹಾಗೂ ವರ್ತೂರು ಸಂತೋಷ್ ಇಬ್ಬರಲ್ಲಿ ಯಾರು ಮತ್ತೆ ಜೈಲಿಗೆ ಹೋಗುತ್ತಾರೆ? ಎಂಬುದೇ ಇಲ್ಲಿ ಕುತೂಹಲವಾಗಿದೆ. ಈ ವಾರ ನಡೆದ ಟಾಸ್ಕ್‌ಗಳಲ್ಲಿ ವರ್ತೂರು ಸಂತೋಷ್ ಯಾವುದೇ ಆಟದಲ್ಲಿ ಭಾಗಿಯಾಗಿಲ್ಲ.
ಉತ್ತಮ ಪಟ್ಟ ಯಾರಿಗೆ?
ವರ್ತೂರು ಸಂತೋಷ್ ಅವರನ್ನೇ ಟಾರ್ಗೆಟ್ ಮಾಡಿ ಮನೆಯ ಸದಸ್ಯರು ಮಾತನಾಡುತ್ತಿದ್ದಾರೆ. ಹುಲಿ ಉಗುರು ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಾಗಿನಿಂದಲೂ ಕೂಡ ಬಿಗ್ ಬಾಸ್ ಮನೆಯಲ್ಲೂ ಅದೇ ಪಾಡು ವರ್ತೂರು ಸಂತೋಷ್‌ಗೆ ಎದುರಾಗಿದೆ. ಈಗಾಗಲೇ ಎರಡು ಬಾರಿ ವರ್ತೂರು ಅವರು ಬಿಗ್ ಬಾಸ್ ಮನೆಯಲ್ಲಿರುವ ಜೈಲಿಗೆ ಹೋಗಿ ಬಂದಿದ್ದಾರೆ. ಈ ವಾರವು ಕೂಡ ಸಂತೋಷ್ ಕಳಪೆ ಪಟ್ಟವನ್ನು ಹೊತ್ತುಕೊಳ್ಳುತ್ತಾರಾ? ಎಂಬುದನ್ನು ನೋಡಬೇಕಿದೆ.
ವರ್ತೂರು ಹೆಸರು ಹೇಳಿದ ಮೂವರು
ಕಳಪೆ ಪಟ್ಟಕ್ಕಾಗಿ ವರ್ತೂರು ಸಂತೋಷ್ ಹೆಸರನ್ನು ನಮ್ರತಾ, ಕಾರ್ತಿಕ್ ಹಾಗೂ ಮೈಕಲ್ ಮೂರು ಮಂದಿ ತೆಗೆದುಕೊಂಡಿದ್ದಾರೆ. ಮೈಕಲ್ ಹಾಗೂ ಕಾರ್ತಿಕ್ ಇಬ್ಬರೂ ಕೂಡ ಒಂದೇ ಕಾರಣ ಕೊಟ್ಟಿದ್ದಾರೆ. ವರ್ತೂರು ಸಂತೋಷ್ ಈ ವಾರ ನಡೆದ ಟಾಸ್ಕ್‌ಗಳಲ್ಲಿ ಭಾಗಿಯಾಗಲು ಅಷ್ಟೇನೂ ಆಸಕ್ತಿ ತೋರಲಿಲ್ಲ ಎಂದಿದ್ದಾರೆ. ತನಿಷಾ ಹಾಗೂ ತುಕಾಲಿ ಸಂತೋಷ್ ಇಬ್ಬರೂ ಮೈಕಲ್ ಹೆಸರು ಹೇಳಿದ್ದಾರೆ.
ತಮ್ಮನ್ನು ಸಮರ್ಥಿಸಿಕೊಂಡ ಹಳ್ಳಿಕಾರ್..!
ವರ್ತೂರು ಸಂತೋಷ್ ತಾವು ಯಾವ ಕಾರಣಕ್ಕೆ ಟಾಸ್ಕ್ ಆಡಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಮೊದಲಿಗೆ ಟಾಸ್ಕ್ ಆಡುತ್ತೇನೆ ಎಂದು ಬಂದೆ. ನೀವು ಎಲ್ಲರೂ ಕೂಡ ಸ್ಪೋರ್ಟ್ ಆಡಿದವರು ಆಟವನ್ನು ಆಡುತ್ತೇವೆ ಎಂದು ಹೇಳಿದ್ದೀರಿ. ನಾನು ಯಾವುದೇ ಸ್ಪೋರ್ಟ್ಸ್ ಆಡಿಲ್ಲ. ಆದರೆ ಹಳ್ಳಿಕಾರ್ ಎಂಬ ಹೊಸ ಆಟ ಹುಟ್ಟು ಹಾಕಿದ್ದೆ. ನಾನು ಎಂಬ ಮಾತನ್ನು ಹೇಳಿದ್ದಾರೆ. ಈ ವಾರ ಕಳಪೆ ಪಟ್ಟ ಹೊತ್ತು ವರ್ತೂರು ಸಂತೋಷ್ ಅವರು ಮತ್ತೊಮ್ಮೆ ಜೈಲಿಗೆ ಹೋಗುತ್ತಾರಾ ನೋಡಬೇಕಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಶೋ ಲೈವ್ ವೀಕ್ಷಿಸಬಹುದು.


Click it and Unblock the Notifications











