BBK10 Live: ಪೂಜಾರಿಯಾದ ಸ್ನೇಕ್‌ ಶ್ಯಾಮ್: ಸಂತು- ಇಶಾನಿ ಕೈ ಕೈ ಹಿಡಿದು ಸುತ್ತಾಟ: 6 ಜನರಿಗೆ ಯೂನಿಫಾರ್ಮ್

ಬಿಗ್‌ಬಾಸ್ ಕನ್ನಡ ಸೀಸನ್ 10 ಅದ್ಧೂರಿಯಾಗಿ ಆರಂಭವಾಗಿದೆ. ಈಗಾಗಲೇ 17 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾರೆ. ಅದರಲ್ಲಿ 6 ಜನರ ಸ್ಥಿತಿ ಅತಂತ್ರವಾಗಿದೆ. ಮೊದಲ ದಿನವೇ ಶಾಸಕ ಪ್ರದೀಪ್ ಈಶ್ವರ್‌ ಬಿಗ್‌ಬಾಸ್ ಮನೆ ಪ್ರವೇಶಿಸಿ ಎಲ್ಲರಿಗೂ ಸ್ವೀಟ್ ಶಾಕ್ ಕೊಟ್ಟಿದ್ದಾರೆ.

ಜೀಯೋ ಸಿನಿಮಾದಲ್ಲಿ 24 ಗಂಟೆ ಬಿಗ್‌ಬಾಸ್ ಮನೆಯಲ್ಲಿ ಏನೆಲ್ಲಾ ನಡೆಯುತ್ತದೆ ಎನ್ನುವುದನ್ನು ಲೈವ್ ನೋಡಬಹುದಾಗಿದೆ. ಈಗಾಗಲೇ ಮೊದಲದ ದಿನದ ಲೈವ್ ಶುರುವಾಗಿದೆ. ಸ್ಪರ್ಧಿಗಳು ಹೊಸ ಮನೆಗೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದಾರೆ. ಯಾರು ಯಾರೊಟ್ಟಿಗೆ ಬೆರೆಯಬೇಕು ಎನ್ನುವ ಗೊಂದಲ ಮುಂದುವರೆದಿದೆ. ಸಮಾನ ಮನಸ್ಕರು ಜೊತೆಯಾಗುತ್ತಿದ್ದಾರೆ. ತುಕಾಲಿ ಸಂತು, ರ್ಯಾಪರ್ ಇಶಾನಿ ಅದೇರೀತಿ ಮೈಕಲ್ ಹಾಗೂ ಸ್ನೇಹಿತ್ ಬಹಳ ಕ್ಲೋಸ್ ಆಗಿದ್ದಾರೆ.

BBK10-day-1-highlights

ಸ್ನೇಕ್‌ ಶ್ಯಾಮ್ ಇದೀಗ ಬಿಗ್‌ಬಾಸ್ ಮನೆಗೆ ಪೂಜಾರಿ ರೀತಿ ಆಗಿಬಿಟ್ಟಿದ್ದಾರೆ. ಅಂಗಿ ಬಿಚ್ಚಿ ಮನೆಯಲ್ಲಿ ದೇವರ ಪೂಜೆ ಮಾಡುವ ಜವಾಬ್ದಾರಿ ವಹಿಸಿಕೊಂಡಂತೆ ಕಾಣುತ್ತಿದೆ. ಇನ್ನು ತುಕಾಲಿನ ಸಂತುನ ಅಣ್ಣ ಅಣ್ಣ ಎಂದು ಕರೆದು ಇಶಾನಿ ಗೋಳಾಡಿಸುತ್ತಿದ್ದಾರೆ. ಇಶಾನಿನ ಕೈ ತೊಳೆದುಕೊಂಡು ಮುಟ್ಟಬೇಕು ಎಂದು ಸ್ನೇಕ್ ಶ್ಯಾಮ್ ಹೇಳಿದ್ದು ಅದಕ್ಕೆ ಸಂತು ಸರಿ ಎಂದಿದ್ದಾರೆ. ನಾವಿಬ್ಬರ ಹೀಗೆ ಇದ್ದರೆ ನಮ್ ಹೆಂಡ್ತಿ ಏನು ಅಂದುಕೊಳ್ಳುತ್ತಾಳೆ ಗೊತ್ತಾ ಅಂತ ಸಂತು ತಮಾಷೆ ಮಾಡಿದ್ದಾರೆ. ಅಣ್ಣ ಎಂದು ಮತ್ತೆ ಇಶಾನಿ ಕರೆದಿದ್ದಾರೆ.

ಇನ್ನು ಬಿಗ್‌ಬಾಸ್ ಪ್ರೀಮಿಯರ್ ವೇದಿಕೆಯಲ್ಲಿ ಲೈವ್ ವೀಕ್ಷಕರ ವೋಟಿಂಗ್‌ನಲ್ಲಿ ಫೇಲ್ ಆಗಿದ್ದ 6 ಜನ ಸ್ಪರ್ಧಿಗಳು ಬಿಗ್‌ಬಾಸ್ ಮನೆ ಪ್ರವೇಶಿಸಿರೋದು ಗೊತ್ತೇಯಿದೆ. ಸಂಗೀತಾ ಶೃಂಗೇರಿ, ಡ್ರೋಣ್ ಪ್ರತಾಪ್, ತನಿಷಾ, ರಕ್ಷಕ್, ವರ್ತೂರು ಸಂತೋಷ್ ಕೇಸರಿ ಬಣ್ಣದ ಯೂನಿಫಾರ್ಮ್‌ ತೊಟ್ಟುಕೊಂಡಿರುವುದನ್ನು ಕೂಡ ನೋಡಬಹುದು.

ಸ್ನೇಹಿತ್ ಹಾಗೂ ಮೈಕಲ್ ಜಿಮ್ ವರ್ಕೌಟ್ ಬಗ್ಗೆ ಹೆಚ್ಚು ಚರ್ಚಿಸುತ್ತಿದ್ದಾರೆ. ಪೂಲ್ ಏರಿಯಾದಲ್ಲಿ ವರ್ಕೌಟ್ ಮಾಡುತ್ತಾ ಕಾಣಿಸಿಕೊಂಡಿದ್ದಾರೆ.

More from Filmibeat

English summary
biggboss kannada season 10 Day 1 highlights
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X