BiggBoss: ಪ್ರತಾಪ್ ರಾಗಿಮುದ್ದೆ ಮಾಡಿದ್ದೇ ತಪ್ಪಾಯ್ತಾ? ಪ್ರತಾಪ್ ವಿರುದ್ಧ ತಿರುಗಿ ಬಿದ್ದ ನಮ್ರತಾ, ವಿನಯ್
ಬಿಗ್ ಬಾಸ್ ಸೀಸನ್ 10 ಮತ್ತೊಂದು ವೀಕೆಂಡ್ ಸಮೀಪದಲ್ಲಿದೆ. ಈ ವಾರ ಎಲ್ಲರೂ ಕೂಡ ಬಿಗ್ ಬಾಸ್ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಾಗಿದ್ದು ಸಕತ್ ಎಂಜಾಯ್ ಮಾಡಿದ್ದಾರೆ. ಸದ್ಯಕ್ಕೆ ಬಿಗ್ ಬಾಸ್ ಪ್ರಾಥಮಿಕ ಪಾಠಶಾಲೆಯ ಟಾಸ್ಕ್ ಮುಗಿದಿದ್ದು ಈಗ ಎಲ್ಲರೂ ಕೂಡ ಸಹ ಸಹಜ ಸ್ಥಿತಿಗೆ ಬಂದಿದ್ದಾರೆ.
ಪ್ರತಾಪ್ ರಾಗಿ ಮುದ್ದೆ ತಯಾರು ಮಾಡುತ್ತೇನೆ ಎಂದು ಹೇಳಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಸ್ವಲ್ಪ ದಪ್ಪ ಮುದ್ದೆಗಳನ್ನು ಕಟ್ಟು ಎಂದಿದ್ದಾರೆ. ಕಾರ್ತಿಕ್ ನಾನು ಸಹ ಮುದ್ದೆ ತಿನ್ನುತ್ತೇನೆ ಎಂದಿದ್ದು ಎಲ್ಲರ ಮಾತು ಕೇಳಿ ಪ್ರತಾಪ್ ಮುದ್ದೆ ಮಾಡಿದ್ದಾರೆ. ಆದರೆ ಪ್ರತಾಪ್ ಮುದ್ದೆ ಮಾಡಿದ್ದೆ ಈಗ ಎಡವಟ್ಟಿಗೆ ಕಾರಣವಾಗಿದೆ.

ಪ್ರತಾಪ್ ಬಿಗ್ ಬಾಸ್ ಮನೆಗೆ ಬಂದಾಗಿನಿಂದಲೂ ಕೂಡ ಇತರ ಸದಸ್ಯರ ಕೋಪಕ್ಕೆ ಗುರಿಯಾಗುತ್ತಿದ್ದಾರೆ. ಅದರಲ್ಲೂ ನಮ್ರತಾ, ವಿನಯ್ ಪ್ರತಾಪ್ ಅವರನ್ನ ಟಾರ್ಗೆಟ್ ಮಾಡಿ ಮಾತನಾಡುತ್ತಾ ಇರುತ್ತಾರೆ. ಇನ್ನು ತುಕಾಲಿ ಸಂತೋಷ್ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ ಪ್ರತಾಪ್ ಮುದ್ದೆ ಮಾಡಿದ್ದು ಬಿಗ್ ಬಾಸ್ ಶಿಕ್ಷೆ ಕೊಟ್ಟಂತೆ ಕಾಣುತ್ತಿದೆ. ಇದಕ್ಕಾಗಿ ಪ್ರತಾಪ್ ನಾನು ಮಾಡಿದ ತಪ್ಪಿಗೆ ನನಗೆ ಶಿಕ್ಷೆ ಕೊಡಿ ಎಂದು ಕೇಳಿದ್ದಾರೆ. ಬಿಗ್ ಬಾಸ್ ಮನೆಗೆ ಗ್ಯಾಸ್ ಕನೆಕ್ಷನ್ ಕಟ್ ಆಗಿದೆ. ಇದಕ್ಕೆ ವಿನಯ್ ಹಾಗೂ ನಮ್ರತಾ ಪ್ರತಾಪ್ ಮೇಲೆ ಕೋಪ ಮಾಡಿಕೊಂಡಿದ್ದಾರೆ.
ಹೊಸ ಪ್ರೋಮೋದಲ್ಲಿ ಪ್ರತಾಪ್ ರಾಗಿ ಮುದ್ದೆ ಮಾಡಿದ್ದಾರೆ. ಇದಕ್ಕಾಗಿ ಬಿಗ್ ಬಾಸ್ ಶಿಕ್ಷೆ ಕೊಟ್ಟಿದ್ದು ನೀನು ಮಾಡಿದ ತಪ್ಪಿಗೆ ಮನೆಯವರೆಲ್ಲ ಶಿಕ್ಷೆ ಅನುಭವಿಸುವಂತಾಗಿದೆ ಎಂದು ನಮ್ರತಾ ಹೇಳಿದ್ದಾರೆ. ತನ್ನ ತಪ್ಪಿಗೆ ತಾನೇ ಜವಾಬ್ದಾರಿ ಹೊರುತ್ತೇನೆ ಎಂದು ಪ್ರತಾಪ್ ಹೇಳಿದ್ದಾರೆ. ಆದರೆ ಇಲ್ಲಿ ಎಲ್ಲರೂ ಕೂಡ ಪ್ರತಾಪ್ ಮಾಡಿರುವ ಮುದ್ದೆ ಚಪ್ಪರಿಸಿಕೊಂಡು ತಿಂದಿದ್ದಾರೆ. ಆದರೆ ಕೊನೆಗೆ ಬಿಗ್ ಬಾಸ್ ಶಿಕ್ಷೆಯನ್ನು ನೀಡಿದ್ದು ಕಾರಣ ಮಾತ್ರ ಗೊತ್ತಾಗಿಲ್ಲ.
ರಾಗಿಮುದ್ದೆ ಮಾಡಿ ಪ್ರತಾಪ್ ಎಡವಟ್ಟು?
ಬಿಗ್ ಬಾಸ್ ಮನೆಯಲ್ಲಿ ಸಣ್ಣಪುಟ್ಟ ಕಾರಣಗಳು ಸಹ ಕೆಲವೊಮ್ಮೆ ಶಿಕ್ಷೆಗೆ ಗುರಿಯಾಗುತ್ತವೆ. ಈಗ ಪ್ರತಾಪ್ ಮುದ್ದೆ ಮಾಡಿದ್ದೆ ಸಮಸ್ತೆ ತಂದೊಡ್ಡಿದೆ. ಪ್ರತಾಪ್ ಬಹಳ ಹುಮ್ಮಸ್ಸಿನಲ್ಲಿ ಯಾರಿಗೆ ರಾಗಿ ಮುದ್ದೆ ಬೇಕು ಎಂದು ಕೇಳಿದ್ದಾರೆ. ಇದಕ್ಕೆ ಕಾರ್ತಿಕ್ ನಾನು ತಿನ್ನುತ್ತೇನೆ ಮಾಡು ಎಂಬ ಮಾತನ್ನು ಹೇಳಿದ್ದಾರೆ. ರಾಗಿಮುದ್ದೆ ಮಾಡುವಾಗ ಕಾರ್ತಿಕ್ ಸಹಾಯ ಮಾಡಿದ್ದಾರೆ. ನಂತರ ತುಕಾಲಿ ಸಂತೋಷ್ ಮುದ್ದೆ ದಪ್ಪವಾಗಿ ಕಟ್ಟು ಎಂದಿದ್ದಾರೆ.

ಪ್ರತಾಪ್ ಮೇಲೆ ನಮ್ರತಾ ಕೂಗಾಟ
ಡ್ರೋನ್ ಪ್ರತಾಪ್ ಮುದ್ದೆ ಮಾಡಿ ಹಾಟ್ ಬಾಕ್ಸ್‌ಗೆ ಹಾಕಿದ್ದಾರೆ. ಮುದ್ದೆಯನ್ನು ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್, ಮೈಕಲ್, ಪ್ರತಾಪ್ ಎಲ್ಲರೂ ಕೂಡ ತಿಂದಿದ್ದಾರೆ. ನಂತರ ಬಿಗ್ ಬಾಸ್ ಮನೆಯಲ್ಲಿ ಏನಾಯಿತು ಗೊತ್ತಿಲ್ಲ ಇದ್ದಕ್ಕಿದ್ದಂತೆ ಗ್ಯಾಸ್ ಸ್ಟವ್ ಅನ್ನು ಆಫ್ ಮಾಡಲಾಗಿದೆ. ಗ್ಯಾಸ್ ಸ್ಟೌವ್‌ಗೆ ಕೊಟ್ಟಿದ್ದ ಗ್ಯಾಸ್ ಕನೆಕ್ಷನ್ ಬಂದ್ ಮಾಡಲಾಗಿದೆ. ಇದೇ ವಿಚಾರಕ್ಕೆ ಪ್ರತಾಪ್ ಮೇಲೆ ನಮ್ರತಾ ಕೂಗಾಡಿದ್ದಾರೆ.
ಪ್ರತಾಪ್ ಮೇಲೆ ವಿನಯ್ ಗರಂ
ಮನೆಯಲ್ಲಿ ಗ್ಯಾಸ್ ಕನೆಕ್ಷನ್ ಕಟ್ ಆಗಿದ್ದು ಸಿರಿ ಗ್ಯಾಸ್ ಕನೆಕ್ಷನ್ ಇಲ್ಲ ಎಂದು ಮೊದಲು ಹೇಳಿದ್ದಾರೆ. ಇದಕ್ಕೆ ಪ್ರತಾಪ್ ಬಿಗ್ ಬಾಸ್ ದಯವಿಟ್ಟು ಕೊಟ್ಟುಬಿಡಿ ಗ್ಯಾಸ್ ಕನೆಕ್ಷನ್ ನನ್ನು ಇಲ್ಲದೆ ಇದ್ದರೆ ಇವರೆಲ್ಲರೂ ನನ್ನನ್ನ ಸುಮ್ಮನೆ ಬಿಡುವುದಿಲ್ಲ ಎಂದು ಕೇಳಿಕೊಂಡಿದ್ದಾರೆ. ನಂತರ ವಿನಯ್ ನನಗೆ ರಾತ್ರಿ ಊಟ ಏನಾದರೂ ಆಗಲಿಲ್ಲ ಅಂದ್ರೆ ದೇವರಾಣೆ ನಾನು ಸುಮ್ಮನೆ ಬಿಡುವುದಿಲ್ಲ ಎಂದಿದ್ದಾರೆ.
ಬಿಗ್‌ಬಾಸ್ ಬಳಿ ಮನವಿ
ಇನ್ನು ಪ್ರತಾಪ್, ತುಕಾಲಿ ಸಂತೋಷ್, ವರ್ತೂರು ಸಂತೋಷ್ ಮೂವರು ಬಿಗ್ ಬಾಸ್ ಬಳಿ ಬಂದು ಮನೆಯಲ್ಲಿರುವವರು ಈಗಾಗಲೇ ರಾಕ್ಷಸರ ರೀತಿ ವರ್ತಿಸುತ್ತಾ ಇದ್ದಾರೆ. ದಯವಿಟ್ಟು ಗ್ಯಾಸ್ ಕನೆಕ್ಷನ್ ಕೊಟ್ಟುಬಿಡಿ ಎಂದು ಮನವಿಯನ್ನು ಮಾಡಿದ್ದಾರೆ. ಇನ್ನು ಪ್ರತಾಪ್‌ಗೆ ತುಂಬಾನೇ ಬೇಸರವಾಗಿದೆ ಯಾಕೆಂದರೆ ಏನಾದರೂ ಗ್ಯಾಸ್ ಕನೆಕ್ಷನ್ ಕೊಟ್ಟಿಲ್ಲ ಎಂದರೆ ಮನೆಯಲ್ಲಿರುವ ಒಬ್ಬೊಬ್ಬರು ಕೂಡ ಒಂದೊಂದು ರೀತಿ ಮಾತನಾಡುತ್ತಾರೆ ಎಂಬುದು ಗೊತ್ತಾಗಿದೆ. ಇದಕ್ಕಾಗಿ ಬಿಗ್ ಬಾಸ್ ಬಳಿ ವಿನಂತಿಸಿಕೊಂಡಿದ್ದಾರೆ. ಮೂವರ ಮನವಿಯನ್ನು ಬಿಗ್ ಬಾಸ್ ಪುರಸ್ಕರಿಸುತ್ತಾರಾ ನೋಡಬೇಕಾಗಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಬಿಗ್‌ಬಾಸ್ ಶೋ ಉಚಿತವಾಗಿ ಲೈವ್ ವೀಕ್ಷಿಸಬಹುದು.


Click it and Unblock the Notifications











