Bigg Boss: ಕಿಚ್ಚನ ಚಪ್ಪಾಳೆ ಪಡೆದ ತುಕಾಲಿ ಸಂತೋಷ್: ನಾಮಿನೇಷನ್‌ನಿಂದ ಬಚಾವಾಗಿದ್ದು ಯಾರು?
ಬಿಗ್ ಬಾಸ್ ಮನೆಯಲ್ಲಿ ಈ ವಾರ ವಿನಯ್ ಗೌಡ, ಸಿರಿ, ಪವಿ ಪೂವಪ್ಪ, ಮೈಕಲ್, ಸಂಗೀತ ಶೃಂಗೇರಿ ಹಾಗೂ ಪ್ರತಾಪ್ ಇಷ್ಟು ಜನರು ಈ ವಾರ ನಾಮಿನೇಟ್ ಆಗಿದ್ದರು. ಇವರಲ್ಲಿ ಈ ವಾರ ಸೇಫ್ ಆಗಿ ಉಳಿಯುವವರು ಯಾರು, ಎಲಿಮಿನೇಟ್ ಆಗಿವವರು ಯಾರು ಎಂಬ ಕುತೂಹಲ ಹೆಚ್ಚಾಗಿದೆ.
ಬಿಗ್ ಬಾಸ್ ಸೀಸನ್ 10ರ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಕಿಚ್ಚ ಸುದೀಪ್ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಮಯ ಪ್ರಜ್ಞೆ ಇಲ್ವಾ? ಎಂದು ಖಡಕ್ ಆಗಿಯೇ ಶಾಕ್ ಕೊಟ್ಟಿದ್ದರು.

ಬಿಗ್ ಬಾಸ್ ಮ್ಯೂಸಿಕ್ ಎರಡೆರಡು ಸಲ ಹಾಕಿದರೂ ವಿನಯ್, ಪ್ರತಾಪ್ ಎಲ್ಲರೂ ಮಲಗೇ ಇರುತ್ತಾರೆ. ಸುದೀಪ್ ವೇದಿಕೆ ಮೇಲೆ ಬಂದರೂ ಕೂಡ ವಾಶ್ ರೂಮ್‌ನಲ್ಲಿ ಇರುತ್ತಾರೆ. ಎಲ್ಲರೂ ಸುದೀಪ್ ಎಂಟ್ರಿ ಅನ್ನು ನೆಗ್ಲೆಟ್ ಮಾಡಿದ್ದಕ್ಕೆ ಬೇಸರ ಮಾಡಿಕೊಂಡಿದ್ದಾರೆ.
ಎಲ್ಲರಿಗೂ ಕ್ಲಾಸ್ ತೆಗೆದುಕೊಂಡ ಕಿಚ್ಚ
ಪ್ರತೀ ವಾರವೂ ಕೂಡ ಸ್ಪರ್ಧಿಗಳನ್ನು ಖುಷಿ ಖುಷಿಯಾಗಿ ಮಾತನಾಡಿಸುತ್ತಿದ್ದ ಸುದೀಪ್ ಈ ವಾರ ಗರಂ ಆಗಿ ಎಲ್ಲರ ಗ್ರಹಚಾರ ಬಿಡಿಸಿದ್ದಾರೆ. ರಿಯಾಲಿಟಿ ಶೋ ಎಂದರೆ ನಿಮಗೆಲ್ಲಾ ತಮಾಷೆಯಾಗಿದೆಯಾ? ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಮಾಡುವುದು ಎಂದರೆ ನಿಮ್ಮ ಅರ್ಥವೇನು? ಎಂದು ಮೈಕಲ್‌ನ ತರಾಟೆಗೆ ತೆಗೆದುಕೊಂಡರು. ಪದೇ ಪದೇ ಮೈಕ್ ವಿಚಾರಕ್ಕೆ ರೂಲ್ಸ್ ತಪ್ಪುತ್ತಿರುವ ತುಕಾಲಿ ಸಂತೋಷ್‌ಗೂ ಬೈದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಸಿರಿ ಒಬ್ಬರೇ ಎಲ್ಲಾ ರೂಲ್ಸ್ ಅನ್ನು ಫಾಲೋ ಮಾಡುವುದು ಎಂದು ಸ್ಪರ್ಧಿಗಳೇ ಒಪ್ಪಿಕೊಂಡಿದ್ದಾರೆ. ಬಿಗ್ ಬಾಸ್ ಅನ್ನು ಸ್ಪರ್ಧಿಗಳು ಬಹಳ ಈಸಿಯಾಗಿ ತೆಗೆದುಕೊಂಡಿರುವುದಕ್ಕೆ ಆರಂಭದಲ್ಲಿ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡರು.
ಕಿಚ್ಚನ ಚಪ್ಪಾಳೆ ಪಡೆದ ತುಕಾಲಿ
ವಾರದಲ್ಲಿ ನಡೆದ ಪ್ರತಯೊಂದು ವಿಚಾರದ ಬಗ್ಗೆಯೂ, ಸ್ಪರ್ಧಿಗಳು ಮಾಡಿದ ತಪ್ಪಿಗೆ ಬೈಯುತ್ತಾ, ಅವರಿಂದಾದ ಒಳ್ಳೆಯ ಕ್ಷಣಗಳನ್ನು ಹೊಗಳುತ್ತಾ, ತುಕಾಲಿ ಸಂತೋಷ್‌ಗೆ ಈ ವಾರ ಲಕ್ಕಿ ವಾರ ಎಂದು ಹೇಳಿದ್ದಾರೆ. ಅಲ್ಲದೇ ಈ ವಾರದ ಕಿಚ್ಚನ ಚಪ್ಪಾಳೆ ಕೂಡ ತುಕಾಲಿ ಸಂತೋಷ್ ಪಾಲಾಗಿದೆ. ಈ ವಾರ ಮನರಂಜನೆ ಹಾಗೂ ಕ್ರಿಯಾತ್ಮಕತೆಯಿಂದ ಕೂಡಿದ್ದ ವಿದ್ಯಾರ್ಥಿಯಾಗಿ ವಿಶೇಷವಾದ ಸವಲತ್ತುಗಳನ್ನು ಪಡೆದಿದ್ದಾರೆ. ಇದರ ಜೊತೆಗೆ ಉತ್ತಮ ಪಟ್ಟವೂ ತುಕಾಲಿಗೆ ದೊರೆತಿದ್ದು, ಈಗ ಕಿಚ್ಚನ ಚಪ್ಪಾಳೆಯನ್ನೂ ಪಡೆದಿದ್ದಾರೆ.

ನಾಮಿನೇಷನ್‌ನಿಂದ ವಿನಯ್ ಸೇಫ್
ಇನ್ನು ಈ ವಾರ ನಡೆದ ಟಾಸ್ಕ್ ಹಾಗೂ ಟಾಸ್ಕ್‌ನಲ್ಲೂ ರಾಜಕೀಯ ಮಾಡಿದ್ದು, ಹೀಗೆ ಪ್ರತಿಯೊಂದು ವಿಚಾರದ ಬಗ್ಗೆಯೂ ಸುದೀಪ್ ನಗುನಗುತಲೇ ಸ್ಪರ್ಧಿಗಳಿಗೆ ಅವರ ತಪ್ಪುಗಳನ್ನು ತೋರಿಸಿಕೊಟ್ಟರು. ಸುದೀಪ್ ಎದುರಿಗೆ ತಮ್ಮ ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದರೂ ಕೂಡ. ನಾಯಿ ಬಾಲ ಡೊಂಕು ಎಂಬಂತೆ ತಮ್ಮ ತಮ್ಮ ಆಲೋಚನೆಗಳು ತಮ್ಮದೇ ದಾರಿಯಲ್ಲಿ ಮುಂದುವರೆಸಿದ್ದಾರೆ. ಇನ್ನು ನಾಮಿನೇಷನ್ ವಿಚಾರ ಬಂದರೆ, ಆನೆಗೆ ಮತ್ತೂ ಒಂದು ವಾರ ಆಡಲು ಅವಕಾಶ ಸಿಕ್ಕಿದೆ.


Click it and Unblock the Notifications











