Biggboss: ಈ ವಾರದ ಕಳಪೆ ಪಟ್ಟ ಸಿಕ್ಕಿದ್ದು ಯಾರಿಗೆ ಗೊತ್ತಾ..?

By ಪ್ರಿಯಾ ದೊರೆ

ಬಿಗ್ ಬಾಸ್ ಮನೆಯಲ್ಲಿ ವಾರವಿಡಿ ಆಟವಾಡಿ ಗ್ರೂಪ್‌ನಲ್ಲಿ ಒಂದು ರೀತಿ ಮಾತನಾಡುವ ಸ್ಪರ್ಧಿಗಳು, ವಾರದ ಕೊನೆಯಲ್ಲಿ ಕಳಪೆ, ಉತ್ತಮ ಕೊಡುವಾಗ ಕಂಪ್ಲೀಟ್ ಒಪಿನಿಯನ್ ಬದಲಾಗಿರುತ್ತೆ.

ಇಷ್ಟು ದಿನ ಕ್ಯಾಪ್ಟನ್ ಆಯ್ಕೆ, ಉಸ್ತುವಾರಿ ವಿಚಾರದಲ್ಲಿ ಮನೆಯ ಸ್ಪರ್ಧಿಗಳು ಸಾಕಷ್ಟು ತಪ್ಪುಗಳನ್ನು ಮಾಡಿದ್ದರಿಂದ ಈಗ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ರೂಮಿಗೆ ಬೀಗ ಜಡಿದಿದೆ.

Biggboss kannada season 10: who declared as the worst performer of this week?

ಈಗ ಎಲ್ಲರೂ ವೈಯಕ್ತಿಕವಾಗಿ ಆಡಿ, ತಮ್ಮ ಗುರಿಯನ್ನು ಮುಟ್ಟುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಈ ವಾರದ ಆಟವೂ ಎಲ್ಲರಿಗೂ ಮಸ್ತ್ ಮಜಾ ಕೊಟ್ಟಿದ್ದಂತೂ ನಿಜ.

ಈ ವಾರ ದೊಡ್ಮನೆಯಲ್ಲಿ ಜಾಲಿ ಜಾಲಿ

ಬಿಗ್ ಬಾಸ್ ಪ್ರಾಥಮಿಕ ಶಾಲೆಯಲ್ಲಿ ಎಲ್ಲರೂ ಮಕ್ಕಳಾಗಿ ಹಾಗೂ ಎಲ್ಲರೂ ಅಧ್ಯಾಪಕರಾಗಿ ಭಾಗವಹಿಸಿದ್ದರು. ಶಾಲೆಯ ಯೂನಿಫಾರ್ಮ್ ಧರಿಸಿ, ಕೈಯಲ್ಲಿ ಸ್ಲೇಟ್ ಹಿಡಿದು ಬಿಗ್ ಬಾಸ್ ಸ್ಪರ್ಧಿಗಳು ಜಾಲಿಯಾಗಿ ವಾರ ಕಳೆದಿದ್ದಾರೆ. ಪ್ರತೀ ವಾರದಂತೆ ಈ ವಾರ ಯಾವ ಆಟವನ್ನೂ ಅಗ್ರೆಸ್ಸಿವ್ ಆಗಿ ಆಡದೇ, ಯಾರೂ ಜಗಳ ಮಾಡದೇ, ಸುಸೂತ್ರವಾಗಿ ಒಂದು ವಾರ ಕಳೆದಿದ್ದಾರೆ. ವಿನಯ್ ಸೈಲೆಂಟ್ ಸ್ಟುಡೆಂಟ್ ಆಗಿದ್ದು, ಸಂಗೀತಾ ಪ್ರತಾಪ್ ಜೊತೆ ಸೇರಿ ಒಂದಷ್ಟು ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ಇನ್ನು ತನಿಷಾ ಹಾಗೂ ಸಿರಿ ಹೆಚ್ಚು ಸ್ಟಾರ್ ಪಡೆದಿದ್ದು, ಉಪನ್ಯಾಸಕರಾಗಿ ವರ್ತೂರು ಸಂತೋಷ್ ಮತ್ತು ಅವಿನಾಶ್ ಕಡಿಮೆ ದೂರುಗಳನ್ನು ಪಡೆದರು.

ಮನರಂಜನೆ ನೀಡಿದ ತುಕಾಲಿ

ಬಿಗ್ ಬಾಸ್ ಪ್ರಾಥಮಿಕ ಶಾಲೆಯನ್ನು ತೆರೆದಾಗಿನಿಂದಲೂ ತುಕಾಲಿ ಸಂತೋಷ್ ಎಲ್ಲರಿಗೂ ಮನರಂಜನೆಯನ್ನು ನೀಡಿದ್ದಾರೆ. ಅಲ್ಲಿ-ಇಲ್ಲಿ ಕೊಂಚ ಹೆಚ್ಚಿನ ತರ್ಲೆ ಮಾಡಿದ್ದು, ಕೊನೆಗೆ ತುಕಾಲಿ ತಮ್ಮ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಸಹ ಕೇಳಿದ್ದಾರೆ. ತುಕಾಲಿ ಮನರಂಜನೆಯನ್ನು ಮೆಚ್ಚಿಕೊಂಡ ಮನೆಯವರೆಲ್ಲರೂ ತುಕಾಲಿಗೆ ವೋಟ್ ಮಾಡಿದ್ದಾರೆ. ಪಾಲಿಟಿಕ್ಸ್ ಪಾಠ ಮಾಡಿದರೂ ಎಲ್ಲರನ್ನೂ ತರಗತಿಯಲ್ಲಿ ಎಂಗೇಜ್ ಮಾಡಿದ್ದ ಕಾರ್ತಿಕ್ ಅನ್ನು ಕೂಡ ಸ್ಪರ್ಧಿಗಳು ಬೆಸ್ಟ್ ಅಧ್ಯಪಕನನ್ನಾಗಿ ಸೆಲೆಕ್ಟ್ ಮಾಡಿದ್ದಾರೆ. ಹೆಚ್ಚು ಮನರಂಜನೆ ನೀಡಿದ್ದು ತುಕಾಲಿ ಸಂತೋಷ್ ಹಾಗೂ ಚೆನ್ನಾಗಿ ಪಾಠ ಮಾಡಿದ ಕಾರ್ತಿಕ್‌ಗೆ ಬಿಗ್ ಬಾಸ್ ಕಡೆಯಿಂದ ವಿಶೇಷವಾದ ಸವಲತ್ತು ದೊರೆತಿದೆ.

Biggboss kannada season 10: who declared as the worst performer of this week?

ಸೈಲೆಂಟ್ ಡಬಲ್ ಗೇಮ್

ಇನ್ನು ಸಂಗೀತಾಳಿಗೆ ಕಾರ್ತಿಕ್ ತನಗೆ ಸ್ಟಾರ್ ಕೊಡಲಿಲ್ಲ ಅನ್ನೋ ಬೇಸರದ ಜೊತೆಗೆ ತನಿಷಾ ಹಳೆ ವಿಚಾರವನ್ನು ಮಾತನಾಡಿದಳು ಎಂಬ ಕೋಪ. ಪ್ರತಾಪ್ ಜೊತೆಗೆ ಸೇರಿಕೊಂಡು ಗುಸುಗುಸು ಎಂದು ಹಲವು ಲೆಕ್ಕಾಚಾರ ಹಾಕಿ ತನ್ನ ಡಬಲ್ ಗೇಮ್ ಅನ್ನು ಮುಂದುವರೆಸಿದ್ದಾರೆ. ಇದು ಮನೆಯವರಿಗೆಲ್ಲಾ ಬೇಸರ ತಂದಿದೆ. ಆದರೆ, ವಾರ ಪೂರ್ತಿ ಪವಿ ಬಹಳ ಸೈಲೆಂಟ್ ಆಗಿದ್ದು, ಮನೆಯಲ್ಲಿ ತನ್ನ ಇರುವಿಕೆಯ ಬಗ್ಗೆಯೇ ತೋರಿಸಿಕೊಳ್ಳಲಿಲ್ಲ.

ಕಳಪೆ ಪಟ್ಟ ಪಡೆದ ಪವಿ

ಇನ್ನು ಈ ವಾರದ ಕಳಪೆ ಹಾಗೂ ಉತ್ತಮ ಯಾರು ಎಂದು ಮನೆಯವರು ತಮ್ಮಿಷ್ಟದಂತೆ ಹೆಸರು ಹೇಳಿದ್ದು, ತುಕಾಲಿ ಮನರಂಜನೆ ನೀಡಿದ್ದಕ್ಕೆ ಉತ್ತಮ ಪಡೆದು ಸಂತಸಗೊಂಡಿದ್ದಾರೆ. ಆದರೆ, ಸೈಲೆಂಟ್ ಆಗಿದ್ದ ಪವಿ ಪೂವಪ್ಪಗೆ ಕಳಪೆ ಪಟ್ಟಕ್ಕೆ ಹೆಚ್ಚು ವೋಟ್ ಸಿಕ್ಕಿದ್ದು, ಪವಿ ಎಲ್ಲರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ. ಹೀಗಾಗಿ ಪವಿ ಈ ವಾರ ಕಳಪೆ ಪಟ್ಟ ಹೊತ್ತು ಜೈಲು ಸೇರೋದು ಪಕ್ಕಾ ಆಗಿದೆ. ಇನ್ನು ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ? ಕಿಚ್ಚನ ಚಪ್ಪಾಳೆ ಯಾರ ಪಾಲಾಗುತ್ತೆ? ಅನ್ನೋ ಕುತೂಹಲ ಮೂಡಿದೆ.

More from Filmibeat

English summary
biggboss kannada 10: this contestant declared as the worst performer of this week;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X