BBK 11: ಬಿಗ್‌ಬಾಸ್ ಮನೆಯಲ್ಲಿ ರಾಜಕೀಯ ದೊಂಬರಾಟ ಶುರು; ಚೈತ್ರಾ ಗೆಲ್ತಾರಾ?

By ಎಸ್ ಸುಮಂತ್

ಈ ಬಾರಿಯ ಬಿಗ್ ಬಾಸ್ ಶುರುವಾದಾಗಿನಿಂದಾನೂ ಒಂದಲ್ಲ ಒಂದು ಜಗಳ, ಕಿತ್ತಾಟವನ್ನೇ ಪ್ರದರ್ಶಿಸುತ್ತಿದೆ. ಬಿಗ್ ಬಾಸ್ ವೇದಿಕೆ ಮೇಲೆ‌ ನಾನು ನಾನಾಗಿರ್ತೀನಿ, ತಾಳ್ಮೆ ಜಾಸ್ತಿ, ಎಂಟರ್ಟೈನ್ಮೆಂಟ್ ನನ್ನ ಪಾಸಿಟಿವ್ ಕ್ಯಾರೆಕ್ಟರ್ ಅಂತೆಲ್ಲಾ ಹೇಳಿದ್ದ ಸ್ಪರ್ಧಿಗಳೇ ಇಂದು ಉಲ್ಟಾ ಆಗಿದ್ದಾರೆ. ಹೇಳಿದ್ದಷ್ಟೇ ಆದ್ರೆ ಮನೆಯಲ್ಲಿ ಪ್ರತಿ ಸಲ ಜಗಳಗಳೇ ನಡೆಯುತ್ತಿವೆ.

ಬಿಗೆ ಬಾಸ್ ನೋಡುವ ವೀಕ್ಷಕರಿಗೆ ಒಂದಷ್ಟು ಮನರಂಜನೆ ಸಿಗದೆ ಹೋದರೆ ಹೇಗೆ..? ಜಗಳದ ನಡುವೆ ನಕ್ಕು ನಲಿಯುವಂತ ಎಲಿಮಿನೆಂಟ್ಸ್ ಕೂಡ ಇರಬೇಕು. ಆದರೆ ಈ ಬಾರಿಯ ಬಿಗ್ ಬಾಸ್‌ನಲ್ಲಿ ಮನರಂಜನೆಯೇ ಸಿಗುತ್ತಿಲ್ಲ, ಬರೀ ಜಗಳ ಎಂದೇ ಬೇಸರ ವ್ಯಕ್ತಪಡಿಸುತ್ತಿದ್ದರು. ಲಾಯರ್ ಜಗದೀಶ್ ಇದ್ದಷ್ಟು ಸಮಯ ಮನರಂಜನೆ ನೀಡುತ್ತಿದ್ದರು. ಆದರೆ ಅವರು ಎಕ್ಸಿಟ್ ಆದ್ಮೇಲೆ ಮನರಂಜನೆಯೇ ಕಡಿಮೆಯಾಗಿತ್ತು. ಇದೀಗ ಗಾಯಕ ಹನುಮಂತ ಎಂಟ್ರಿಯಿಂದ ಸಿಕ್ಕಾಪಟ್ಟೆ ನಕ್ಕು ನಲಿಯುತ್ತಿದ್ದಾರೆ.

Biggboss kannada season 11 election task for housemates

ದೊಡ್ಮನೆ ಈಗ ಬಿಗ್ ಬಾಸ್ ಸೌಧ

ದೊಡ್ಮನೆ ಈಗ ರಾಜಕೀಯ ರಣರಂಗವಾಗಿ ಬದಲಾಗಿದೆ. ರಾಜಕೀಯದಾಟದಲ್ಲಿ ಯಾರೂ ಗೆಲ್ತಾರೆ ಎಂಬುದೇ ಬಹಳ‌ಮುಖ್ಯ. ಎರಡು ರಾಜಕೀಯ ಪಕ್ಷಗಳಾಗಿ ವಿಂಗಡಿಸಿರುವ ಬಿಗ್ ಬಾಸ್ ಒಂದಕ್ಕೆ ಪ್ರಾಮಾಣಿಕ 'ಸಮರ್ಥರ ನ್ಯಾಯವಾದಿ ಪಕ್ಷ' ಹಾಗೂ ಎರಡನೆಯದು 'ಧರ್ಮ ಸೇನಾ ಪಕ್ಷ' ಎಂದು ಹೆಸರು ನೀಡಿದೆ. ಯಾವ ಆಟವನ್ನೇ ಕೊಟ್ರು ರಾಜಕೀಯ ಮಾಡೋ ಮನೆಯಲ್ಲಿ ರಾಜಕೀಯವನ್ನೇ ಆಟವನ್ನಾಗಿ ಮಾಡಿದರೆ ಇನ್ನೆಷ್ಟು ರಾಜಕೀಯ ಮಾಡ್ತಾರೆ ಎಂಬುದನ್ನು ನೋಡಬೇಕಿದೆ.

ಎರಡು ಪಕ್ಷವಾಗಿ ಬದಲಾದ ಮನೆ

ಎರಡು ಬಣಗಳು ನಿರ್ಮಾಣವಾಗಿದ್ದು ತ್ರಿವಿಕ್ರಮ್ ಬಣದಲ್ಲಿ ಚೈತ್ರಾ, ಭವ್ಯಾ, ಅನುಷಾ ರೈ, ಮಾನಸ, ಸುರೇಶ್, ಧನಂಜಯ ಇದ್ದಾರೆ. ಐಶ್ವರ್ಯಾ ಟೀಂನಲ್ಲಿ ಶಿಶಿರ್, ಮೋಕ್ಷಿತಾ, ಹಂಸ, ಧರ್ಮ, ಗೌತಮಿ, ಮಂಜಣ್ಣ ಇದ್ದಾರೆ.

Biggboss kannada season 11 election task for housemates

ಸರ್ಕಾರ ರಚನೆ ಪಣ ತೊಟ್ಟ ಚೈತ್ರಾ

ಬಿಗ್ ಬಾಸ್ ಮನೆಯಲ್ಲಿ ರಾಜಕಾರಣ ಶುರುವಾಗಿದ್ದಕ್ಕೆ ಎಲ್ಲರೂ ರಾಜಕಾರಣಿಗಳ ಫೀಲ್‌ನಲ್ಲಿದ್ದಾರೆ. ಜೈಕಾರ, ಕೇಕೆ, ಚಪ್ಪಾಳೆ, ಭಾಷಣಗಳೇ ಕೇಳಿಸುತ್ತಿವೆ. ತ್ರಿವಿಕ್ರಮ್ ರಾಜಕೀಯದ ಬಗ್ಗೆ ಮಾತನಾಡುವುದಕ್ಕೆ ಶುರು ಮಾಡಿದ್ದಾರೆ. ನೆರೆದಿದ್ದ ಕಂಟೆಸ್ಟೆಂಟ್‌ಗಳನ್ನ ಕುರಿತು ಆಶ್ವಾಸನೆ ನೀಡುತ್ತಿದ್ದಾರೆ. ರಾಜಕೀಯ ನನಗೆ ಹೊಸದೆ ಇರಬಹುದು ಎಂದು ಹೇಳುತ್ತಿದ್ದರೆ ಆ ಕಡೆ ಕೂತ ವಿರೋಧ ಪಕ್ಷದ ನಾಯಕ ಮಂಜು, ಕಾಲೆಳೆಯುತ್ತಿದ್ದಾರೆ. ಹಿಂದೆ ಇರೋರಿಗೆ ಕೇಳಿಸ್ತಾ ಇಲ್ಲಣೋ ಎಂದಿದ್ದಾರೆ. ಬಳಿಕ ಅದೇ ಪಕ್ಷದ ಚೈತ್ರಾ, ನಾವೂ ಸರ್ಕಾರ ರಚನೆ ಮಾಡಿಯೇ ಮಾಡ್ತೀವಿ ಎಂದು ಗಟ್ಟಿ ಧ್ವನಿಯಲ್ಲಿ ಹೇಳಿದ್ದಾರೆ.

ಖುಷಿ ಕೊಡ್ತು ಬಿಗ್ ಬಾಸ್ ಶೋ

ಎರಡು ರಾಜಕೀಯ ಪಕ್ಷಗಳು ಒಟ್ಟಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಬಿಳಿ ಕೆಂಪಿ ಬಣ್ಣದ್ದು ಒಂದು ಪಕ್ಷವಾದರೆ ಬಿಳಿ ನೀಲಿಯದ್ದು ಇನ್ನೊಂದು ಪಕ್ಷ. ಹೀಗಾಗಿ ಮನೆಯ ಅಂದವನ್ನು ರಾಜಕೀಯ ಆವರಿಸಿಕೊಂಡಿದೆ. ಈ ಕಾನ್ಸೆಪ್ಟ್‌ನಿಂದಾದರೂ ಕೊಂಚ ಹಾಸ್ಯಮಯ ವಾತಾವರಣ ಸೃಷ್ಟಿಯಾಗುವುದರಲ್ಲಿ ಅನುಮಾನವೇ ಇಲ್ಲ. ಇದು ವೀಕ್ಷಕರ ನಿರೀಕ್ಷೆಯನ್ನು ಹೆಚ್ಚಿಸಿದೆ. ಅಬ್ಬ ಕಡೆಗೂ ಒಂದೊಳ್ಳೆ ಕಾನ್ಸೆಪ್ಟ್ ಕೊಟ್ರಿ. ಇನ್ಮುಂದಾದ್ರೂ ಎಂಟರ್ಟೈನ್ಮೆಂಟ್ ಸಿಗುತ್ತಲ್ಲ ಎಂದು ಖುಷಿ ಪಟ್ಟಿದ್ದಾರೆ. ಕೆಲವರು ಚೈತ್ರಾ ಕುಂದಾಪುರ ಅವರಿಗೆ ಹೇಳಿ ಮಾಡಿಸಿದ ಟಾಸ್ಕ್ ಎಂದು ಕೆಲವರು ಕಾಮೆಂಟ್ ಹಾಕಿದ್ದಾರೆ.

More from Filmibeat

English summary
Colors kannada bigboss Written Update on Bigboss season 11 October 23rd episode. Here is the details about Politics starts in Bigg Boss house;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X