BBK 11: ಬಿಗ್ ಬಾಸ್ ಮನೆಯಲ್ಲಿ ಗೌತಮಿ ಹಾಕಿದ್ದ ಈ ಸೀರೆ ಬೆಲೆ ಎಷ್ಟು ಗೊತ್ತಾ?

By ಎಸ್ ಸುಮಂತ್

ಬಿಗ್ ಬಾಸ್ ಮನೆಯ ಜರ್ನಿ ಇನ್ನು ಸ್ವಲ್ಪ ದಿನಗಳಲ್ಲಿಯೇ ಮುಕ್ತಾಯವಾಗಲಿದೆ. ಆದರೆ ಈಗಲೂ ಮನೆಯಲ್ಲಿ ಸ್ಪರ್ಧಿಗಳು ತುಂಬಿ ತುಳುಕುತ್ತಿದ್ದಾರೆ. ಬಿಗ್ ಬಾಸ್ ಹೊಸ ಹೊಸ ಟಾಸ್ಕ್‌ಗಳನ್ನ ನೀಡುತ್ತಲೆ ಇದೆ. ಟಾಸ್ಕ್ ವಿಚಾರದಲ್ಲಿ ಎಂಜಾಯ್ ಮಾಡುವವರು ಒಂದಷ್ಟು ಸ್ಪರ್ಧಿಗಳಾದರೆ‌ ಜಗಳ ಆಡಿಕೊಂಡು, ಕಿತ್ತಾಡುವವರು ಇನ್ನಷ್ಟು ಮಂದಿ. ಅದರ ನಡುವೆ ಆಗಾಗ ಒಂದಷ್ಟು ಮನರಂಜನೆಯನ್ನು ನೀಡುತ್ತಾರೆ.

ಬಿಗ್ ಬಾಸ್ ಹೊರಗಿನ ಪ್ರಪಂಚಕ್ಕೆ ಸಂಪರ್ಕವಿಲ್ಲ. ಅಲ್ಲಿಯೇ ಇರಬೇಕು, ಅಲ್ಲಿಯೇ ಓಡಾಡಬೇಕು, ಅಲ್ಲಿಯೇ ಟಾಸ್ಕ್ ಆಡಬೇಕು. ಆದರೂ ಮನೆಯೊಳಗಿರುವ ಮಹಿಳಾ ಸ್ಪರ್ಧಿಗಳ ಬ್ಯೂಟಿಫುಲ್ ಆಗಿ ರೆಡಿಯಾಗ್ತಾರೆ. ಅದರಲ್ಲೂ ಗೌತಮಿ ಜಾದವ್ ಸೀರೆಯನ್ನೇ ಹೆಚ್ಚಾಗಿ ಹಾಕುತ್ತಾರೆ. ಆ ಸೀರೆಗಳೆಲ್ಲ ಅವರಿಗೆ ಗಿಫ್ಟ್ ಆಗಿ, ಪ್ರೀತಿಯಿಂದ ಕಳುಹಿಸಿಕೊಡ್ತಾ ಇರೋದು. ಸೀರೆಗಳು ಕಂಪ್ಲೀಟ್ ಆಗಿ ಬರ್ತಾ ಇರೋದು ಮೈಸೂರ್ ಶ್ರೀ ಅವರ ಕಲೆಕ್ಷನ್‌ನಿಂದ.

Biggboss Kannada season 11 gouthami jadav Stuns In 5 950 rs saree in house

ಗೌತಮಿ ಹಾಕುವ ಸೀರೆಗಳೆಲ್ಲಾ ಸೂಪರ್

ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಒಂದು ರೀತಿ ಇದ್ದರೆ ವೀಕೆಂಡ್ ಪಂಚಾಯ್ತಿಗೆ ಸ್ಪರ್ಧಿಗಳೆಲ್ಲಾ ಬಹಳ ಮಹತ್ವ ಕೊಡುತ್ತಾರೆ. ಹೊರಗೆ ಆಗಿದ್ರೆ ಶೂಟಿಂಗ್ ಅಂತ ಹೋದಾಗ ಮೇಕಪ್ ಮಾಡೋಕೆ ಒಬ್ಬರು, ಸೀರೆ ಹಾಕೋಕೆ ಒಬ್ರು ಅಂತ ಬೇಜಾನ್ ಆಪ್ಶನ್ ಇರ್ತಾ ಇತ್ತು. ಆದರೆ ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಅವರೇ ಮೇಕಪ್ ಮಾಡಿಕೊಳ್ಳುತ್ತಾರೆ. ಅದರಲ್ಲೂ ಗೌತಮಿ ಹಾಕುವ ಸೀರೆಗಳು ಎಲ್ಲರನ್ನ ಆಕರ್ಷಿಸುತ್ತಾ ಇದೆ.

ವೆರೈಟಿ ಸೀರೆಗಳನ್ನುಟ್ಟು ಪೋಸ್

ಇತ್ತೀಚೆಗೆ ಗೌತಮಿ ಹಾಕಿದ್ದ ಒಂದು ಸೀರೆ ಎಲ್ಲರ ಗಮನ ಸೆಳೆದಿತ್ತು. ಮರೂನ್ ಕಲರ್ ಪ್ಲೈನ್ ಸೀರೆ. ಮರೂನ್ ಕಲರ್ ಬಾರ್ಡರ್ ಇತ್ತು. ಈ ಕಾಂಬಿನೇಷನ್ನೇ ಎಲ್ಲರನ್ನ ಆಕರ್ಷಣೆ ಮಾಡಿತ್ತು. ಒಂದಷ್ಟು ಜನ ಆ ಸೀರೆ ಬಗ್ಗೆ ಮಾಹಿತಿಯನ್ನು ಸರ್ಚ್ ಮಾಡಿದ್ದಾರೆ. ಗೌತಮಿ ಇದೊಂದೆ ಅಲ್ಲ ತುಂಬಾನೇ ವೆರೈಟಿ ಸೀರೆಗಳನ್ನ ಹಾಕುತ್ತಾ ಇರುತ್ತಾರೆ.

ಈ ಸೀರೆಯ ಬೆಲೆ ಎಷ್ಟು ಗೊತ್ತಾ..?

ಗೌತಮಿ ಹಾಕಿರುವ ಈ ಸೀರೆ ಕಂಪ್ಲೀಟ್ ಪ್ಯೂರ್ ಕ್ರೇಪ್ ಮೈಸೂರ್‌ ಸಿಲ್ಕ್ ಸೀರೆ. ಇದು 75 ಗ್ರಾಂ ಥಿಕ್ನೆಸ್ ಇರುವಂತ ಸೀರೆ. ಇದರ ಬೆಲೆ 5,950 ರೂಪಾಯಿ ಇದೆ. ಮೈಸೂರು ಸ್ಯಾರಿ ಕಲೆಕ್ಷನ್ ಅವರು ಮತ್ತೆ ಈ ಸೀರೆಗಳನ್ನ ಸ್ಟಾಕ್ ಮಾಡಿದ್ದಾರೆ. ಯಾಕಂದ್ರೆ ಈ ಸೀರೆಗಳಿಗೆ ಅಷ್ಟು ಡಿಮ್ಯಾಂಡ್ ಇದೆ. ವಾಟ್ಸಾಪ್ ಮೂಲಕ ಆರ್ಡರ್ ಮಾಡಬಹುದಾಗಿದೆ.

ಮೈಸೂರಿನಿಂದ ಬರುವ ಸೀರೆಗಳು

ಗೌತಮಿ ಅವರು ಕೂಡ ಪ್ರತಿಯೊಂದು ಸೀರೆಗೂ ಪ್ರೊಫೈಲ್ ಟ್ಯಾಗ್ ಮಾಡಿದ್ದಾರೆ. ಬಿಗ್ ಬಾಸ್ ಕಡೆಯಿಂದ ಕಳುಹಿಸಿಕೊಡುವ ಫೋಟೊಗಳನ್ನು ಗೌತಮಿ ಪ್ರೊಫೈಲ್ ನಲ್ಲಿ ಅಪ್ಲೋಡ್ ಮಾಡುವ ಮೂಲಕ ಸೀರೆ ಗಿಫ್ಟ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಗೌತಮಿ ಹಾಕಿರುವ ಆಲ್ಮೋಸ್ಟ್ ಸೀರೆಗಳ ಫೋಟೋಗೆ ಇವರನ್ನೇ ಟ್ಯಾಗ್ ಮಾಡಲಾಗಿದೆ. ಅಂದ್ರೆ ಶ್ರೀ ಕಲೆಕ್ಷನ್ ಕಡೆಯಿಂದಾನೇ ಸೀರೆಗಳನ್ನ ನೀಡಲಾಗಿದೆ. ವೀಕೆಂಡ್ ಪಂಚಾಯ್ತಿಗೆ ಅಲ್ಲದೆ ಡೈಲಿ ವಿಶೇಷವಾಗಿ ಕಾಣಿಸುವಂತೆ ಶ್ರೀ ಕಲೆಕ್ಷನ್ ಅವರು ಮಾಡಿದ್ದಾರೆ. ಬ್ಲೌಸ್ ಕೂಡ ಅವರಿಂದಾನೇ ಕಳುಹಿಸಿಕೊಟ್ಟಿದ್ದಾರೆ. ಗೌತಮಿ‌ ಕೂಡ ಸೀರೆಯಲ್ಲಿಯೇ ಹೆಚ್ಚು ಮಿಂಚುತ್ತಿದ್ದಾರೆ.

More from Filmibeat

English summary
BBK 11: What is the price of the Mysore silk saree that Gautami wore in bigg boss house?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X