BBK 11: ಹಾಟ್ ಸೀಟಲ್ಲಿ ಕೂತಿದ್ದ ಭವ್ಯಾಗೆ ಕಹಿ-ಸಿಹಿ ಸುದ್ದಿ ಕೊಟ್ಟ ಕಿಚ್ಚ

By ಎಸ್ ಸುಮಂತ್

ಕಳೆದ ಎರಡ್ಮೂರು ದಿನದಿಂದ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ವಿಚಾರ ಅಂದ್ರೆ ಈ ವಾರ ಭವ್ಯಾ ಮನೆಯಿಂದ ಹೊರಗೆ ಬರ್ತಾರೆ ಎಂಬುದೇ ಆಗಿತ್ತು. ನಾಮಿನೇಷನ್‌ನಲ್ಲಿ ಕೂಡ ಭವ್ಯಾ ಅವರಿದ್ದರು. ಆದರೆ ಭವ್ಯಾ ಫಿನಾಲೆ ವೀಕ್‌ಗೆ ಹೋಗಲೇಬೇಕೆಂದು ಬಯಸಿದ್ದರು. ಆದರೆ ಹೊರಗೆ ಬರಬಹುದು ಎನ್ನಲಾಗ್ತಿತ್ತು. ಭವ್ಯಾ ಲಕ್ ಚೆನ್ನಾಗಿದೆ, ಜನರ ಬೆಂಬಲ ಅವರಿಗಿದೆ ಎಂಬುದು ಈ ವೀಕ್‌ನಲ್ಲಿಪ್ರೂವ್ ಆಗಿದೆ.

ಈ ವಾರ ರಜತ್, ಭವ್ಯಾ, ಮಂಜು, ಧನರಾಜ್ ನಾಮಿನೇಷನ್ ಆಗಿದ್ದರು. ಎಲ್ಲರ ಮುಖದಲ್ಲೂ ಟೆನ್ಶನ್ ಎದ್ದು ಕಾಣಿಸುತ್ತಾ ಇತ್ತು. ಇಷ್ಟು ದಿನ ಇದ್ದು ಫಿನಾಲೆ ತಲುಪದೆ ಹೋಗಿ ಬಿಡ್ತೀವಲ್ಲ ಎಂಬ ಬೇಸರದ ನಡುವೆ, ಹೋಗಲ್ಲವೇನೋ ಎಂಬ ಸಣ್ಣ ನಂಬಿಕೆ. ಅದರ ಜೊತೆಗೆ ಭವ್ಯಾ ಮಾಮೂಲಿ ವಿಕೆಂಡ್‌ನಂತೆ ಇಂದು ಕಾಣಿಸಲೇ ಇಲ್ಲ. ಫುಲ್ ಹ್ಯಾಪಿ ಮೂಡ್ನಲ್ಲಿದ್ದರು. ಅದೇ ಖುಷಿಯಲ್ಲಿ ಬಚಾವ್ ಆದ್ರು.

Biggboss kannada season 11 Kichcha Sudeep Good and bad news to bhavya gowda

ಫಿನಾಲೆ ತಲುಪಿದ ಭವ್ಯಾ

ವೀಕೆಂಡ್ ಆರಂಭವಾದಾಗಿನಿಂದ ಭವ್ಯಾ ಫುಲ್ ಜೋಶ್‌ನಲ್ಲಿದ್ರು. ನಗು ನಗುತ್ತಾ ಸುದೀಪ್ ಅವರ ಜೊತೆಗೆ ಮಾತಾನಾಡುತ್ತಾ ಕುಳಿತರು. ಒಂದು ಕಡೆ ಭಯ, ಮತ್ತೊಂದು ಕಡೆ ನಂಬಿಕೆ. ಕಡೆಗೂ ಭವ್ಯಾ ಫಿನಾಲೆ ತಲುಪಿದ್ದಾರೆ. ತ್ರಿವಿಕ್ರಂ, ಮೋಕ್ಷಿತಾ, ಹನುಮಂತು ಜೊತೆಗೆ ಫಿನಾಲೆ ತಲುಪಿದರು ಭವ್ಯಾ ಹಾಗೂ ರಜತ್.

ಭವ್ಯಾಗೆ ಚಮ್ಕಾಯಿಸಿದ ಕಿಚ್ಚ

ಕಿಚ್ಚ ಸುದೀಪ್ ಅವರು ಎಂಡ್ ಮೂಮೆಂಟ್‌ನಲ್ಲಿ ಸಿಕ್ಕಾಪಟ್ಟೆ ಟೆನ್ಶನ್ ಕೊಟ್ಟು ಬಿಡುತ್ತಾರೆ. ಸೇಫ್ ಆಗಿದ್ದನ್ನ ಹೇಳುವಾಗ ಒಂದು ಬ್ರೇಕ್ ತೆಗೆದುಕೊಳ್ಳುತ್ತಾರೆ. ಆಗಲೇ ಸ್ಪರ್ಧಿಗಳು ಅರ್ಧ ಟೆನ್ಶನ್ ಆಗಿ ಬಿಡುತ್ತಾರೆ. ಅದೇ ರೀತಿ ಭವ್ಯಾ ಅವರಿಗೂ ಚಮ್ಕಾಯಿಸಿದ್ದಾರೆ. ಭವ್ಯಾ ಯು ಆರ್ ಸೇಫ್ ಅಂತ ಹೇಳಿದ್ದಾರೆ. ಆದರೆ ನಂಬಲಿಲ್ಲ. ನಿಜನಾ ಸರ್ ಎಂದಾಗ ಸುದೀಪ್ ಅವರು ಸುಮ್ಮನೆ ಹೇಳಿದ್ದು ಎಂದಿದ್ದಾರೆ. ಮತ್ತೆ ಅದೇ ಮಾತನ್ನ ಹೇಳಿ ಮತ್ತೆ ಶಾಕ್ ಕೊಟ್ಟಿದ್ದಾರೆ. ಮೂರನೇ ಬಾರಿಗೆ ಯು ಆರ್ ಸೇಫ್ ಅಂತ ಹೇಳುವುದರ ಜೊತೆಗೆ ಕಂಗ್ರಾಟ್ಸ್ ಹೇಳುವ ಮೂಲಕ ಸತ್ಯ ಒಪ್ಪಿಸಿದ್ದಾರೆ.

ಜನತೆಗೆ ಭವ್ಯಾ ಧನ್ಯವಾದ

ಫಿನಾಲೆಯಲ್ಲಿ ಗೆಲ್ಲುವುದು ಸೋಲುವುದಕ್ಕಿಂತ ಫಿನಾಲೆ ತಲುಪಿದ್ವಿ ಎಂಬುದೇ ಒಂದಷ್ಟು ಸ್ಪರ್ಧಿಗಳಿಗೆ ಸಮಾಧಾನವಾಗುತ್ತದೆ. ಮನೆಗೆ ಆರಂಭದಲ್ಲಿ ಹೋಗುವ 17 ಸ್ಪರ್ಧಿಗಳಿಗೆ ಆ ಅದೃಷ್ಟ ಇರುವುದಿಲ್ಲ. ಆದರೆ ಫಿನಾಲೆ ತಲುಪಿದವರಿಗೆ ಕಪ್ ಗೆದ್ದಷ್ಟೇ ಸಮಾಧಾನ ತಂದುಕೊಡುತ್ತದೆ. ಈಗ ಭವ್ಯಾಗೂ ಅದೇ ಖುಷಿ ಆಗ್ತಾ ಇರೋದು.

ಪ್ರಪೋಸ್ ವಿಚಾರ ಹೈಡ್

ರಜತ್ ಹಾಗೂ ಭವ್ಯಾ ಅವರನ್ನು ಸೇಫ್ ಅಂತ ಹೇಳಿದ ಕಿಚ್ಚ, ಮಂಜು ಹಾಗೂ ಧನರಾಜ್ ನಡುವೆ ಟೆನ್ಶನ್ ಇಟ್ಟರು. ಮಂಜುಗೆ ಇದ್ದ ಕೊಂಚ ನಂಬಿಕೆಯೇ ಅಲ್ಲಿ ಉಳಿಯಿತು. ಇದರ ನಡುವೆ ರಜತ್ ಅವರಿಗೆ ಮತ್ತೊಮ್ಮೆ ಕೇಳಿದರು, ಆದರೂ ಆ ಸತ್ಯ ಹೊರಗೆ ತರಲೇ ಇಲ್ವಲ್ಲ ಅಂತ. ಕಿಚ್ಚನ ಮಾತಿಗೆ ತ್ರಿವಿಕ್ರಂ ಅವರೇ ಮಾತನಾಡಿ, ಯಾವ ಸತ್ಯ ಹೇಳಿ ಅಣ್ಣ. ನಿಮ್ಮ ಮುಂದೆ ಹೇಳುವುದಕ್ಕೆ ಕಷ್ಟ ಅಲ್ಲ ಅಂತ ಹೇಳಿ ಯಾಮಾರಿಸಿದರು. ಸುದೀಪ್ ಕೂಡ ಅದನ್ನ ಅಷ್ಟಕ್ಕೆ ಬಿಟ್ಟು ಮುಂದಕ್ಕೆ ಹೋದರು.

More from Filmibeat

English summary
BBK 11: Here is the details about Bhavya finally reached the finale;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X