BBK 11: ರಾಜಕಾರಣಿಗಳ ಬಂಡವಾಳ ಬಯಲು ಮಾಡ್ತಿದ್ದ ಜಗದೀಶ್ ಬಿಗ್ ಬಾಸ್ ಸ್ಪರ್ಧಿಗಳ ಬಂಡವಾಳಕ್ಕೆ ಕೈ ಹಾಕಿದ್ರು!
ಬಿಗ್ ಬಾಸ್ ಶೋ ಈ ಬಾರಿ ಆರಂಭದಿಂದಾನೇ ಬೆಂಕಿ ಹೊತ್ತಿಕೊಳ್ಳುವಂತೆ ಆಗಿದೆ. ಈ ಹಿಂದಿನ ಸೀಸನ್‌ನಲ್ಲಿ ಈ ರೀತಿಯ ಜಗಳ, ಮನಸ್ತಾಪ ಬರ್ತಾ ಇದ್ದದ್ದೇ ಗೇಮ್‌ಶುರುವಾದಾಗ. ಟಾಸ್ಕ್ ಶುರುವಾಗ್ತಾ ಇದ್ದದ್ದೇ ಒಂದಷ್ಟು ದಿನಗಳು ಬಿಟ್ಟು. ಆದರೆ ಕಳೆದ ಸೀಸನ್‌ನಿಂದ ಆರಂಭದಲ್ಲಿಯೇ ಇಬ್ಭಾಗವಾಗಿ ಜಗಳಗಳು ಜೋರಾಗುತ್ತಿವೆ. ಈ ಬಾರಿ ಜಗದೀಶ್ ಮಾತಿಗೆ ಮುಂಚೆ ಟ್ರಿಗರ್ ಆಗುತ್ತಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 11 ನರಕ ಹಾಗೂ ಸ್ವರ್ಗ ಎಂಬ ಎರಡು ಭಾಗವಾಗಿದೆ. ಲಾಯರ್ ಜಗದೀಶ್ ಸ್ವರ್ಗವಾಸಿಯಾಗಿಯೇ ಇದ್ದರು, ನರಕವಾಸಿಗಳ ಜೊತೆಗೆ ಬಾಂಧವ್ಯವನ್ನು ಹೊಂದಿದ್ದಾರೆ. ಬಿಸಿ ನೀರು ಕೊಡಬಹುದು ಎಂದು ಹೇಳಿದಾಗ ಮಾನವೀಯತೆ ಮೆರೆಯಲು ಜಗದೀಶ್ ಆದ್ರೂ ಇದ್ದಾರಪ್ಪ ಎನಿಸುತ್ತಿತ್ತು. ಆದರೆ ಈಗ ನೋಡಿದ್ರೆ ಜಗದೀಶ್, ಮನೆಯೊಳಗೆ ಲಾಯರ್ ಗಿರಿ ಶುರು ಮಾಡಿದ್ದಾರೆ.

ಸ್ಪರ್ಧಿಗಳಿಗೆ ಭಯ ಹುಟ್ಟಿಸಿದ ಜಗದೀಶ್
ಸೋಷಿಯಲ್ ಮೀಡಿಯಾದಲ್ಲೆಲ್ಲಾ ಜಗದೀಶ್ ತಮ್ಮ ಮಾತುಗಳಿಂದಾನೇ ಫೇಮಸ್ ಆಗಿದ್ದರು. ಮಾಜಿ ಸಿಎಂಗಳ ವಿರುದ್ಧ ಕೆಂಡಕಾರುತ್ತಿದ್ದರು. ನಿಮ್ಮ ಬಂಡವಾಳವನ್ನ ಬಯಲು ಮಾಡ್ತೇನೆ ಎನ್ನುತ್ತಿದ್ದರು. ದರ್ಶನ್ ಕೊಲೆ ಕೇಸಿನಲ್ಲೂ ಮಾತನಾಡಿ, ತಪ್ಪು ಅವರದ್ದಲ್ಲ ಎಂದು ಹೇಳಿ ಸುದ್ದಿಯಾಗಿದ್ದರು. ಆದರೆ ಈಗ ಬಿಗ್ ಬಾಸ್ ಮನೆ ಮಂದಿಗೆ ಆತಂಕ ಹೆಚ್ಚಿಸಿದ್ದಾರೆ. ಹೊರಗಡೆ ನೀವೇನೇನು ಮಾಫಿಯಾಗಳನ್ನು ನಡೆಸುತ್ತಾ ಇದ್ದೀರಾ ಅದೆಲ್ಲವನ್ನು ಬಯಲು ಮಾಡ್ತೇನೆ ಎಂದಿದ್ದಾರೆ.
ಮನೆಯಲ್ಲಿ ಜಗದೀಶ್ ಹವಾ
ಬಿಗ್ ಬಾಸ್ ಮನೆಯೊಳಗೆ ತನ್ನದೇ ಲೋಕ ಎಂಬಂತೆ ಜೀವಿಸುತ್ತಿರುವ ಜಗದೀಶ್, ಮನಸ್ಸು ಮಾಡಿದ್ರೆ ನಾನೊಂದು ಹೆಲಿಕಾಪ್ಟರ್ ಬುಕ್ ಮಾಡುತ್ತೇನೆ. ಸರ್ಕಾರವನ್ನೇ ಅಲ್ಲಾಡಿಸಿ ಬಿಡುವ ಸಾಮರ್ಥ್ಯವಿದೆ ನನಗೆ ಎಂದೆಲ್ಲಾ ಏನೇನೋ ಹೇಳುತ್ತಿದ್ದಾರೆ. ಆದರೆ ಜಗದೀಶ್ ಮಾತಿಗೆ ಮನೆ ಮಂದಿಯೆಲ್ಲಾ ನಕ್ಕು ನಕ್ಕು ಸುಸ್ತಾಗುತ್ತಿದ್ದಾರೆ.
ಎದುರಾಕಿಕೊಳ್ಳುವ ಧೈರ್ಯವಿದೆಯಾ?
ಮಾತು ಮುಂದುವರೆಸಿದ ಜಗದೀಶ್ ಬಿಗ್ ಬಾಸ್‌ಗೆ ಸವಾಲು ಎಸೆದಿದ್ದಾರೆ. ಟೋಟಲ್ ಸೆಟ್ ಅನ್ನೇ ಉಡೀಸ್ ಮಾಡಿ ಬಿಡುತ್ತೀನಿ. ಯಾವನು ಇಲ್ಲಿಗೆ ಕಾಲಿಡಬಾರದು. ನನ್ನನ್ನೇ ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಶೋ ನಡೆಸುತ್ತೀರಾ ನೀವು. ಓಡ್ಸಿ ನೋಡೋಣಾ. ಆ್ಯಮ್ ಎಕ್ಸ್ ಪೋಸ್ ಯು ಅಂತಾನೂ ಹೇಳಿದ್ದಾರೆ. ಜಗದೀಶ್ ಇಷ್ಟೆಲ್ಲಾ ಸೀರಿಯಸ್ ಆಗಿ ಮಾತನಾಡುತ್ತಿದ್ದರು ಮನೆ ಮಂದಿ ಯಾಕೆ ನಗುತ್ತಿದ್ದಾರೆ ಎಂಬುದೇ ನೋಡುಗರ ಪ್ರಶ್ನೆ. ಅಂದ್ರೆ ಫುಲ್ ಎಪಿಸೋಡಲ್ಲೇನಾದರೂ ಟ್ವಿಸ್ಟ್ ಇದ್ಯಾ ಎಂಬುದನ್ನು ಕಾದು ನೋಡಬೇಕಿದೆ.
ಸುದೀಪ್ ಬುದ್ದಿ ಹೇಳಲು ಸಾಧ್ಯವಾ?
ಇನ್ನು ಶನಿವಾರ ಮತ್ತು ಭಾನುವಾರ ಕಿಚ್ಚನ ಜೊತೆಗೆ ಮಾತುಕತೆ ಇರುತ್ತದೆ. ಅಲ್ಲಿ ನಗು, ಅಳು, ಮನಸ್ತಾಪಗಳು, ಮುನಿಸುಗಳು ಅನಾವರಣವಾಗುತ್ತವೆ. ಅದಷ್ಟೇ ಅಲ್ಲ ಕಿಚ್ಚ ಸುದೀಪ್ ತಪ್ಪು ಮಾಡಿದವರಿಗೆ ತಿದ್ದಿಹೇಳುತ್ತಾರೆ. ಇದೀಗ ಲಾಯತ್ ಜಗದೀಶ್ ಗೆ ಕಿಚ್ಚ ಹೇಗೆ ಕ್ಲಾಸ್ ತೆಗೆದುಕೊಳ್ಳಬಹುದು ಎಂಬ ಕುತೂಹಲ ಸಾನ್ಯವಾಗಿಯೇ ಎಲ್ಲರಿಗೂ ಕಾಡುತ್ತಿದೆ. ಕಾಯ್ತಾ ಇದ್ದೀವಿ ಅಂತ ಕಮೆಂಟ್ ಗಳನ್ನು ಹಾಕುತ್ತಿದ್ದಾರೆ. ಬಿಗ್ ಬಾಸ್ ಬಗ್ಗೆ ಯಾರೇ ತಪ್ಪಾಗಿ ಮಾತನಾಡಿದರು ಕಿಚ್ಚ ಸುದೀಪ್ ಅದನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಈ ಹಿಂದಿನ ಸೀಸನ್‌ಗಳಲ್ಲಿ ರಕ್ಷಕ್ ಬುಲೆಟ್ ಹಾಗೂ ಸೋನು ಇದೇ ವಿಚಾರಕ್ಕೆ ಬುದ್ದಿ ಹೇಳಿಸಿಕೊಂಡಿದ್ದಾರೆ. ಈಗ ಜಗದೀಶ್‌ಗೆ ಯಾವ ರೀತಿಯ ಬುದ್ದಿ ಹೇಳ್ತಾರೆ ನೋಡಬೇಕಿದೆ.


Click it and Unblock the Notifications











