BBK 11: ಚೈತ್ರಾ ಶನಿವಾರ ಮಾತ್ರ ಲಿಪ್ ಸ್ಟಿಕ್ ಹಾಕಲ್ಲ ಅನ್ನೋದೆ ರಜತ್ ಬೇಸರ!

By ಎಸ್ ಸುಮಂತ್

ಸೂಪರ್ ಸಂಡೇ ವಿತ್ ಸುದೀಪ ಪಂಚಾಯ್ತಿಯಲ್ಲಿ ಒಂದಷ್ಟು ಎಂಟರ್ಟೈನ್ಮೆಂಟ್ ಸನ್ನಿವೇಶಗಳನ್ನ ನಾವೂ ಕಾಣಬಹುದು. ವಾರವಿಡೀ ಸ್ಪರ್ಧಿಗಳು ತಮಗೆ ತೋಚಿದಂತೆ ಆಡುತ್ತಾ ಸಾಗುತ್ತಾರೆ, ವಾರವಿಡೀ ಕೆಲವೊಂದು ಸಲ ಬಿಗ್ ಬಾಸ್‌ಗೆ ಚಳ್ಳೆ ಹಣ್ಣು ತಿನ್ನಿಸುವುದಕ್ಕೆ ಪ್ರಯತ್ನ ಪಟ್ಟಿರುತ್ತಾರೆ. ಅದೆಲ್ಲವನ್ನು ಕಿಚ್ಚ ಸುದೀಪ್ ತಮ್ಮ ವೇದಿಕೆಯಲ್ಲಿ ಹೊರಗೆ ಹಾಕಿಸುತ್ತಾರೆ. ಅದು ಸುದೀಪ್ ಅವರ ಕಲೆ. ನಗು ನಗುತ್ತಲೇ ತಪ್ಪುಗಳನ್ನ ಮನವರಿಕೆ ಮಾಡುತ್ತಾರೆ.

ಕಿಚ್ಚನ ಪಂಚಾಯ್ತಿಯನ್ನು ನೋಡೋಕೆನೆ ಚಂದ. ಯಾಕಂದ್ರೆ ಅಷ್ಟು ನಕ್ಕು ನಲಿಸುತ್ತಾರೆ. ಮನೆಯವರಿಗೆ ಅಲ್ಲಿಯೇ ಒಂದಷ್ಟು ಟಾಸ್ಕ್ ಗಳನ್ನ ನೀಡುತ್ತಾರೆ. ಕೆಲವೊಮ್ಮೆ ಅಂತು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾರೆ. ಹೀಗಾಗಿಯೇ ಕಿಚ್ಚನ ಪಂಚಾಯ್ತಿಗೆ ರೇಟಿಂಗ್ ಜಾಸ್ತಿ. ಇವತ್ತು ರಜತ್ ಹಾಗೂ ಚೈತ್ರಾ ವಿಚಾರಕ್ಕೆ ಒಳ್ಳೆ ಮನರಂಜನೆ ಸಿಕ್ಕಿದೆ.

Biggboss kannada season 11 Rajath Funny joke about chaitra kundapura goes viral

Yes or No ರೌಂಡ್

ಕಿಚ್ಚ ಸುದೀಪ್ ನಡೆಸಿಕೊಡುವ ಪಂಚಾಯ್ತಿಯಲ್ಲಿ ತಪ್ಪದೆ Yes or No ರೌಂಡ್ ಇದ್ದೆ ಇರುತ್ತದೆ. ಪ್ರತಿ ಸೀಸನ್‌ನಲ್ಲೂ ಈ ರೌಂಡ್ ಮಾಡಿಕೊಂಡು ಬರುತ್ತಾರೆ. ಸ್ಪರ್ಧಿಗಳ ನಡವಳಿಕೆ ಮೇಲೆ ಪ್ರಶ್ನೆಯನ್ನ ಕೇಳ್ತಾರೆ. ಮನೆ ಮಂದಿಗೆ ಅವರ ಮೇಲಿರುವ ಅಭಿಪ್ರಾಯವನ್ನ ಆ ರೌಂಡ್ ಮೂಲಕ ಅರ್ಥ ಮಾಡಿಸುತ್ತಾರೆ. ಆದರೆ ಕೆಲವರಿಗೆ ಅದು ಅರ್ಥವೇ ಆಗುವುದಿಲ್ಲ.

ಚೈತ್ರಾ ಬಗ್ಗೆ ಏನಿತ್ತು ಪ್ರಶ್ನೆ?

ಎಲ್ಲರ ಕೈಗೂ ಬೋರ್ಡ್‌ಗಳನ್ನ ಕೊಟ್ಟು, ಚೈತ್ರಾ ಬಗ್ಗೆ ಪ್ರಶ್ನೆ ಕೇಳಲಾಯ್ತು. ಈ ಮನೆಗೆ ಬೇಡದ ವ್ಯಕ್ತಿ ಚೈತ್ರಾ ಎಂಬ ಪ್ರಶ್ನೆಯನ್ನು ಕಿಚ್ಚ ಸುದೀಪ್ ಕೇಳುತ್ತಾರೆ. ಇದಕ್ಕೆ ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆದರೆ ಜನರಿಗೆ ಚೈತ್ರಾರನ್ನು ಉಳಿಸಬೇಕೆಂಬ ಭಾವನೆ ಇದೆ. ಹೀಗಾಗಿಯೇ ಅವರನ್ನ ಉಳಿಸಲು ವೋಟ್ ಮಾಡುತ್ತಾರೆ. ಅಷ್ಟೇ ಅಲ್ಲ ಚೈತ್ರಾರ ಊರಿನ ಕಡೆ ಗೆದ್ದು ಬಾ ಮಗಳೇ ಎಂ ಬ್ಯಾನರ್ ಕೂಡ ಹಾಕಿದ್ದಾರೆ.

ಕಿಚ್ಚನಿಗೆ ಶಾಕ್ ಕೊಟ್ಟ ರಜತ್

ಈ ಪ್ರಶ್ನೆಗೆ ಉತ್ತರ ನಿರೀಕ್ಷಿಸಿದ್ದ ಸುದೀಪ್, ರಜತ್ ಕಡೆಯಿಂದ ಎಸ್ ಎಂದೇ ಬರುತ್ತೆ ಎಂದು ವೀಕ್ಷಕರು ಬಯಸುತ್ತಿದ್ದರು. ಆದರೆ ರಜತ್ ಸೆಕೆಂಡ್ ಕಾದು ಆಮೇಲೆ ನೋ ಎಂಬ ಉತ್ತರ ತೋರಿಸಿದರು. ಇದು ಸುದೀಪ್ ಅವರಿಗೂ ಶಾಕ್ ಆಗಿತ್ತು. ಯಾಕಂದ್ರೆ ರಜತ್ ಸಿಕ್ಕಾಪಟ್ಟೆ ರೇಗಿಸುವುದು ಚೈತ್ರಾ ಅವರನ್ನೇ. ತಮ್ಮ ಬಾಸ್ ಬಾಸ್ ಅಂತ ಹೇಳಿ ಹೇಳಿ ರೇಗಿಸುತ್ತಾನೇ ಇರುತ್ತಾರೆ. ಹೀಗಾಗಿ ರಜತ್ ಏನು ಉತ್ತರ ಕೊಡಬಹುದು ಎಂಬ ಕುತೂಹಲವಿತ್ತು.

ಶನಿವಾರ ಲಿಪ್ ಸ್ಟಿಕ್ ಹಾಕಲ್ವಾ?

ರಜತ್ ನೋ ಎಂಬ ಆಪ್ಶನ್ ತೋರಿಸಿದಾಗ ಕಿಚ್ಚ ಶಾಕಿಂಗ್ ರಿಯಾಕ್ಷನ್ ಕೊಟ್ರು. ಅದಕ್ಕೆ ರಜತ್ ಕೊಟ್ಟ ಉತ್ತರ 'ಬಿಗ್ ಬಾಸ್ ಮನೆಗೆ ಚೈತ್ರಾ ಬಹಳ ಮುಖ್ಯ ಸರ್. ಯಾವಾಗ ಹೇಗಿರಬೇಕು, ಕ್ಯಾಮರಾ ಎಲ್ಲಿದೆ, ಅಲ್ಲಿ ಹೇಗಿರಬೇಕು ಎಂಬುದೆಲ್ಲ ಗೊತ್ತು. ಬಿಗ್ ಬಾಸ್ ಅನ್ನ ಚೆನ್ನಾಗಿ ಅರ್ಥ ಮಾಡಿಕೊಂಡಿರೋದು ಚೈತ್ತಾ ಮಾತ್ರ. ಆದ್ರೆ ಶನಿವಾರ ಮಾತ್ರ ಲಿಪ್ ಸ್ಟಿಕ್ ಹಾಕಿ ಬರೋಲ್ಲ' ಎಂದು ಬೇಸರ ಹೊರ ಹಾಕಿದ್ದಾರೆ.

More from Filmibeat

English summary
BBK 11; Here is the details about Rajath talks about Chaitra lipstick;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X