BBK 11: ಫಸ್ಟ್ ನೈಟ್ ರೂಮ್ ಅಷ್ಟೇ, ಒಬ್ಬೊಬ್ಬರು ಕೊಟ್ಟ ರಿಯಾಕ್ಷನ್ ಕಿಚ್ಚ ಸುಸ್ತೋ ಸುಸ್ತು!

By ಎಸ್ ಸುಮಂತ್

'ಸೂಪರ್ ಸಂಡೇ ಸುದೀಪ' ಪಂಚಾಯ್ತಿಯಲ್ಲಿ ಒಂದಷ್ಟು ಫನ್, ಒಂದಷ್ಟು ರಿಯಾಲಿಟಿ, ಒಂದಷ್ಟು ಮನಸ್ತಾಪಗಳ ನಿವಾರಣೆ ಎಲ್ಲವೂ ನಡೆಯುತ್ತದೆ. ಅದರಲ್ಲೂ ಸುದೀಪ್ ಅವರು ನಡೆಸುವ ಪಂಚಾಯ್ತಿಗೆ ಎಲ್ಲರು ಕಾಯುತ್ತಾರೆ. ಶನಿವಾರ ಮಾಡಿದ ತಪ್ಪುಗಳಿಗೆ, ಮಿಸ್ಟೇಕ್ ಗಳಿಗೆ ಸರಿಯಾದ ರೀತಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಆದರೆ ಭಾನುವಾರ ಒಂದಷ್ಟು ಆಟಗಳನ್ನೇ ಆಡಿಸುತ್ತಾ ಮನೆ ಮಂದಿಯನ್ನು ನಗೆಗಡಲಲ್ಲಿ ತೇಲಿಸುತ್ತಾರೆ.

ಭಾನುವಾರ ಮುಖ್ಯವಾಗಿ ನಡೆಯುವುದು ಎಲಿಮಿನೇಷನ್. ವಾರ ವಾರಕ್ಕೂ ಒಬ್ಬೊಬ್ಬರು ಮನೆಗೆ ಹೋಗುತ್ತಾರೆ. ಈಗ ಬಹಳಷ್ಟು ಆಸಕ್ತಿ ಎಂದರೆ ಯಾರೂ ಎಲಿಮಿನೇಷನ್ ಆಗಬಹುದು ಎಂಬುದೇ ಕುತೂಹಲ. ಹೀಗಾಗಿ ಭಾನುವಾರದ ಶೋಗೆ ಎಲ್ಲರೂ ಕಾಯುತ್ತಿದ್ದಾರೆ.

Biggboss kannada season 11 Sudeep funny dumb charades Task to housemates

ಹೊಸ ಟಾಸ್ಕ್ ಕೊಟ್ಟ ಕಿಚ್ಚ

ಮನೆ ಮಂದಿಯನ್ನು ನಕ್ಕು ನಲಿಸುವುದರ ಜೊತೆಗೆ ನೋಡುಗರನ್ನು ನಕ್ಕಿ ನಲಿಸುವ ಟಾಸ್ಕ್ ಒಂದನ್ನ ಕಿಚ್ಚ ಸುದೀಪ್ ನೀಡಿದ್ದಾರೆ. ಎದುರಿಗೆ ಒಬ್ಬರು ನಿಂತಿರುತ್ತಾರೆ. ಟಿವಿಯಲ್ಲಿ ಒಂದು ಪಿಕ್ಚರ್ ಬರುತ್ತೆ. ಅದನ್ನ ಸೌಂಡ್ ಮೂಲಕ ಹೇಳಬೇಕು. ಅದನ್ನ ಎದುರಿಗೆ ಇರುವವರು ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದು, ಆ ಸೌಂಡ್ ಮೂಲಕವೇ ಅರ್ಥ ಮಾಡಿಕೊಂಡು ಹೇಳಬೇಕು. ಯಾವುದೇ ರೀತಿಯಾಗಿ ನೇರವಾಗಿ ಹೇಳಬಾರದು, ಮಾತಿನಲ್ಲಿ ಹೇಳಬಾರದು. ಇದೇ ಟಾಸ್ಕ್.

ಯಾರೆಲ್ಲ ಬಂದು ಫೇಲ್ ಆದ್ರು?

ಮೊದಲ ರೌಂಡ್‌ನಲ್ಲಿಯೇ ಗೌತಮಿ ಹಾಗೂ ಮಂಜು ಬಂದ್ರು. ಗೌತಮಿ ಕಣ್ಣಿಗೆ ಬಟ್ಟೆ ಕಟ್ಟಿದರೆ ಮಂಜು ಆಕ್ಷನ್ ಮಾಡಿದ್ರು. ಬಟ್ ನೋ ಯೂಸ್. ಆಮೇಲೆ, ಧನರಾಜ್ ಹಾಗೂ ಐಶ್ಚರ್ಯಾ ಬಂದ್ರು ಧನರಾಜ್ ಕಡೆಯಿಂದಾನೂ ಆಗದೇ ಇದ್ದ ಕಾರಣ ಮಂಜು ಕೂಡ ಬಂದ್ರು. ಅಲ್ಲಿಯೂ ಐಸ್ ಕ್ರೀಂ ಸಕ್ಸಸ್ ಆಗಲಿಲ್ಲ.

ಹನುಮಂತ ಅಂಡ್ ಮೋಕ್ಷಿತಾ ಫೇಲ್

ನೆಕ್ಸ್ಟ್ ರೌಂಡ್‌ಗೆ ಹನುಮಂತು ಹಾಗೂ ಮೋಕ್ಷಿತಾ ಬಂದ್ರು. ಅವರಿಗೆ ಹೆಲಿಕಾಪ್ಟರ್ ಪಿಕ್ಚರ್ ಕೊಟ್ರು. ಹನುಮಂತು ಕೊಟ್ಟ ಸೌಂಡ್‌ಗೆ ಎಲ್ಲರೂ ಸುಸ್ತಾಗಿ ಹೋದ್ರು. ಪಟ್ ಪಟ್ ಅಂತಿದ್ದ ಹನುಮಂತು ಕೊಟ್ಟ ಕ್ಲೂಗೆ ಮೋಕ್ಷಿತಾ ಉತ್ತರ ಹೇಳಲೇ ಇಲ್ಲ. ಕಿಚ್ಚ ಸುದೀಪ್ ಕೂಡ ಆಮೇಲೆ ರೇಗಿಸಿದರು. ಗುಡಗುಡು ಅಂತೆ ಸೌಂಡ್ ಆದ್ರೂ ಚೇಂಜ್ ಮಾಡಿ ಅಂದ್ರು. ಆದ್ರೆ ಹನುಮಂತ ಉತ್ತರ ಕೊಡುವಾಗ ಕಿಚ್ಚ ಕೂಡ ಬಿದ್ದು ಬಿದ್ದು ನಕ್ಕರು.

ಹನುಮಂತ ಕಡೆಯಿಂದ ಭರ್ಜರಿ ಗಿಫ್ಟ್

ಶೋಭಾ ಹಾಗೂ ರಜತ್‌ಗೆ ಫಸ್ಟ್ ನೈಟ್ ಅರೆಂಜ್ಮೆಂಟ್ ಪಿಕ್ಚರ್ ಕೊಟ್ಟಿದ್ದರು. ಆದರೆ ರಜತ್ ಕೊಟ್ಟ ಕ್ಲೂ ಶೋಭಾಗೆ ಅರ್ಥವೇ ಆಗ್ಲಿಲ್ಲ.. ಕೊಂಚ ಮುಜುಗರ ಅನ್ನಿಸ್ತು. ಶೋಭಾ ಕಡೆಗೂ ಕಂಡು ಹಿಡಿಯಲೇ ಇಲ್ಲ. ಶಿಶಿರ್ ಬಂದ್ರು ಆಗಲಿಲ್ಲ.. ತ್ರಿವಿಕ್ರಂ ಬಂದ್ರು ನೋ ಚಾನ್ಸ್.. ಅದು ಸಕ್ಸಸ್ ಆಗಲಿಲ್ಲ. ಆದರೆ ಹನುಮಂತ ನಾನ್ ಬರ್ತೀನಿ ಸರ್ ಎಂದಾಗ ಕಿಚ್ಚ ರೇಗಿಸಿದರು. ಏನೋ ತೋರಿಸುತ್ತೀನಿ ಅಂದ್ರಲ್ಲ ತೋರಿಸಿ ಅಂದ್ರು. ಆಗ ಹನುಮಂತು, ತೋರಿಸಂಗಿಲ್ಲ ರೀ ಹೇಳ್ತೀನಿ. ಹೇಹೇ ಐ ಹಂ ಅಹಾ..ಎಂದಾಕ್ಷಣಾ ಶೋಭಾ ಮೇ ಬಿ ಫಸ್ಟ್ ನೈಟ್ ರೂಮ್ ಎಂದು ಉತ್ತರ ಹೇಳಿಯೇ ಬಿಟ್ರು. ಹನುಮಂತ ಕಡೆಯಿಂದ ಮನೆ ಮಂದಿಗೆಲ್ಲಾ ಗಿಫ್ಟ್ ಕೂಡ ಸಿಕ್ತು.

More from Filmibeat

English summary
BBK 11: Here is the details about Hanumanthu won the first night task.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X