BBK 11: ಮಂಜು ಮಾನಸಿಕವಾಗಿ ಕುಗ್ಗಿಸುತ್ತಾರೆ; ಕಿಚ್ಚನ ಪ್ರಶ್ನೆಗೆ ಹೌದು ಎಂದ ಗೌತಮಿ
ಸುದೀಪ್ ಅವರ ವೀಕೆಂಡ್ ಪಂಚಾಯ್ತಿ ಮಜವಾಗಿರುತ್ತದೆ. ಯಾಕಂದ್ರೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಹಾರಾಡಿದವರ ರೆಕ್ಕೆ ಕಟ್ ಮಾಡಿದ್ರೆ, ಸೈಲೆಂಟ್ ಆಗಿ ಹಿಂದೆ ಸರಿದವರಿಗೆ ಏನರ್ಜಿ ಬೂಸ್ಟ್ ನೀಡುತ್ತಾರೆ. ಕಿಚ್ಚ ಬಂದು ಹೋದ್ಮೇಲೆ ಬಿಗ್ ಬಾಸ್ ಮನೆ ಬೇರೆಯದ್ದೇ ತಿರುವು ಪಡೆದುಕೊಳ್ಳುತ್ತದೆ. ಕಿಚ್ಚನ ಮಾತಿಗೆ ಹಲವು ಸ್ಪರ್ಧಿಗಳು ಬದಲಾಗುತ್ತಾರೆ.
ಬಿಗ್ ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಸ್ಟ್ರಾಂಗ್ ಕಂಟೆಸ್ಟೆಂಟ್ ಆಗಿ, ಸ್ಟಾಟರ್ಜಿ ಮಾಡುವ ಮೂಲಕ ಗುರುತಿಸಿಕೊಳ್ಳುವುದು ಮಂಜಣ್ಣ. ಆಟದಲ್ಲಿ ಕೊಂಚ ಸ್ಟ್ರಾಂಗ್ ಇರೋದು ತ್ರಿವಿಕ್ರಮ್. ಆದರೂ ಮಂಜಣ್ಣನಿಗೆ ಟಕ್ಕರ್ ಏನು ಕೊಡುವುದಿಲ್ಲ. ಈಗ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದು ಸಖತ್ ಟಕ್ಕರ್ ಕೊಡ್ತಾ ಇರೋದು ರಜತ್.

ಮಂಜಣ್ಣ ಗೆಲ್ಲುವುದಕ್ಕಾಗಿ ತನ್ನ ಜೊತೆಗಿರುವವರನ್ನು ಸುಲಭದಲ್ಲಿ ಕುಗ್ಗಿಸುತ್ತಾರೆ. ಅಂದ್ರೆ ಶಕ್ತಿಯಿಂದಲ್ಲದೆ ಹೋದರೂ ಯುಕ್ತಿಯಿಂದ ಮಾಡು ಎಂಬುದನ್ನ ಚೆನ್ನಾಗಿಯೇ ಅನುಸರಿಸುತ್ತಾರೆ. ಹೆಣ್ಣು ಮಕ್ಕಳನ್ನೆಲ್ಲ ಯುದ್ಧದಿಂದ ಗೆಲ್ಲುವ ಬದಲಿಗೆ ಮಾನಸಿಕವಾಗಿ ಸೋಲಿಸುತ್ತಾರೆ. ಈ ಆರೋಪಕ್ಕೆ ಸ್ವತಃ ಗೌತಮಿಯೇ ಹೌದು ಎಂದಿದ್ದಾರೆ.
ಮಂಜು ಮಾನಸಿಕವಾಗಿ ಕುಗ್ಗಿಸುತ್ತಾರೆ?
ಹಲವು ಬಾರಿ ಹೆಣ್ಣು ಮಕ್ಕಳು ಮಂಜಣ್ಣನಿಗೆ ಮಾನಸಿಕವಾಗಿ ಕುಗ್ಗಿಸಬೇಡಿ ಎಂದಿದ್ದಾರೆ. ಈಗಾಗಲೇ ಮೋಕ್ಷಿತಾ ಹಾಗೂ ಐಶ್ವರ್ಯಾ ಅವರಿಬ್ಬರು ಹೇಳಿದ್ದಾರೆ. ಇದೀಗ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು 'ಮಂಜು ಅವರು ಮಾನಸಿಕವಾಗಿ ಕುಗ್ಗಿಸುವುದರಲ್ಲಿ ಪಂಟರು' ಎಂಬ ಪ್ರಶ್ನೆಯನ್ನ ಕೇಳಿದ್ದಾರೆ. ಇದಕ್ಕೆ ಗೌತಮಿ, ಚೈತ್ರಾ, ಐಶ್ವರ್ಯಾ, ಮೋಕ್ಷಿತಾ, ಶಿಶಿರ್, ಸುರೇಶ್, ತ್ರಿವಿಕ್ರಂ, ರಜತ್ ಹೌದು ಎಂದಿದ್ದಾರೆ. ಇದಕ್ಕೆ ಉತ್ತರ ಕೊಟ್ಟ ಮಂಜು, 'ಅವರನ್ನ ಮಾನಸಿಕವಾಗಿ ನಾನು ಕುಗ್ಗಿಸುತ್ತೀನಿ ಅಂದ್ರೆ ಅವರ ಸಾಮರ್ಥ್ಯವೇನು. ಬಿಗ್ ಬಾಸ್ ಮನೆಗೆ ಬರುವಾಗ ಅಷ್ಟು ದಿನಗಳ ಕಾಲ ಇರಬೇಕು ಎಂದು ಬಂದವರು ಮಾನಸಿಕವಾಗಿ ಸಾಮರ್ಥ್ಯವಿರಬೇಕು. ಆದರೆ ಈಗ ನನಗೆ ಅನುಮಾನ ಆಗ್ತಾ ಇದೆ, ಇವರ್ಯಾರು ಮಾನಸಿಕವಾಗಿ ಸ್ಟೇಬಲ್ ಇಲ್ಲ ಅನ್ನೋದು' ಎಂದಿದ್ದಾರೆ.
ಗೌತಮಿಯೇ ಒಪ್ಪಿಕೊಂಡ್ರು ಸತ್ಯ
'ಆಟದಲ್ಲಿ ಮಾಡಿರುವುದನ್ನ ನಾನು ನೋಡಿದ್ದೀನಿ. ಆಟ ಅಂತ ಬಂದಾಗ ಡೈವರ್ಟ್ ಮಾಡುವ ಉದ್ದೇಶದಿಂದ ಆ ರೀತಿ ಮಾಡುತ್ತಾರೆ' ಎಂದಿದ್ದಾರೆ. ಇಷ್ಟು ದಿನ ಮಂಜು ಜೊತೆಗೆ ಹೆಚ್ಚಾಗಿ ಇದ್ದಂತ ಗೌತಮಿ ಅವರೇ ಈ ರೀತಿ ಹೇಳಿದ್ದು ಶಾಕ್ ಆಗಿದೆ. ಅಂದ್ರೆ ಐಶೂ ಹಾಗೂ ಗೌತಮಿ ಹೇಳಿದ್ದೆ ಸತ್ಯ ಎಂಬಂತೆ ಆಗಿದೆ.
ಮೋಕ್ಷಿತಾ ಕೊಟ್ರು ಕ್ಲಾರಿಟಿ
ಮೋಕ್ಷಿತಾ, ಮಂಜು ಟೀಂನಿಂದ ಹೊರಗೆ ಬಂದಿದ್ದೇ ಮಾನಸಿಕವಾಗಿ ಕುಗ್ಗಿಸುತ್ತೀರಾ ಎಂಬ ಕಾರಣಕ್ಕೆ. ಆ ಪ್ರಶ್ನೆಗೆ ಕಿಚ್ಚನ ವೇದಿಕೆಯಲ್ಲಿ ಮತ್ತೊಮ್ಮೆ ಕ್ಲಾರಿಟಿ ಕೊಟ್ಟಿರುವ ಮೋಕ್ಷಿತಾ, 'ಮಾನಸಿಕವಾಗಿ ಕುಗ್ಗುವ ಮುಖಗಳ, ಹೋಗಿ ಎಲ್ಲಾದರೂ ನೇಣು ಹಾಕಿಕೊಳ್ಳಿ ಇದೇ ಮಾತನ್ನ ಅವರು ಹೇಳಿದ್ದರು. ನಂಗೆ ದೇವರ ಮೇಲೆ ಭಕ್ತಿ ಜಾಸ್ತಿ ಸರ್. ಅಮ್ಮ ಅವರಿಗೆ ಸರಿಯಾಗಿ ಕೊಡ್ತಾರೆ ಅವಳಿಗೆ ಅಂತಾನೇ ಹೇಳಿದ್ರು. ಅವತ್ತಿನಿಂದ ನಾನು ಕುಗ್ಗಿದ್ದೇನೆ' ಎಂದು ಮೋಕ್ಷಿತಾ ಆರೋಪಿಸಿದ್ದಾರೆ.
ಆ ಮಾತು ಆಡಿದ್ರಾ ಮಂಜಣ್ಣ?
'ಮಾನಸಿಕವಾಗಿ ಕುಗ್ಗಿಸುವ ಪ್ರಯತ್ನ ಮಾಡ್ತೀರ ಎಂದು ನಾನು ಹೇಳಿದ್ದೆ. ಅದಕ್ಕೆ ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದೀರಾ ಅಂದ್ರೆ ಹೋಗಿ ನೇಣು ಹಾಕಿಕೊಳ್ಳಿ ಅಂತ ಹೇಳುತ್ತಾರೆ. ನಂಗೆ ಕ್ಲಾರಿಟಿ ಇದೆ. ಇಡೀ ಮನೆ ಆ ಮಾತನ್ನು ಕೇಳಿಸಿಕೊಂಡಿದ್ದಾರೆ' ಎಂದು ಐಶ್ವರ್ಯಾ ಅವರು ಮಂಜು ವಿರುದ್ಧ ಆರೋಪ ಮಾಡಿದ್ದಾರೆ.


Click it and Unblock the Notifications











