BBK 11: ಭವ್ಯಾ ಅವರನ್ನ ಗೆಲ್ಲಿಸಲು ಬಂದ ಕೋಚ್; ಇನ್ಮೇಲಾದ್ರೂ ಬದಲಾಗ್ತಾರಾ ತ್ರಿವಿಕ್ರಮ್?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಫಿನಾಲೆಗೆ ಹತ್ತಿರವಾಗುತ್ತಿದ್ದಾರೆ. ಮುಕ್ಕಾಲು ಭಾಗ ಜರ್ನಿ ಮುಗಿಸಿದ್ದಾರೆ. ಆದರೂ ಯಾರಲ್ಲೂ ಬದಲಾವಣೆ ಏನು ಆಗಿಲ್ಲ. ಕೆಲವೊಂದು ಸಲ ವಾರದ ಕಥೆಯಲ್ಲಿ ಕಿಚ್ಚ ಕೊಡುವ ಡೋಸ್ ಕೆಲವರಲ್ಲಿ ಏನರ್ಜಿ ನೀಡುತ್ತೆ. ಬಳಿಕ ಬದಲಾಗುತ್ತಾರೆ. ಕಳಪೆ ಎನಿಸಿಕೊಂಡವರೇ ಮುಂದಿನ ವಾರಕ್ಕೆ ಉತ್ತಮರಾಗುತ್ತಾರೆ.
ಕಿಚ್ಚನಿಂದ ಕ್ಲಾಸ್ ತೆಗೆದುಕೊಂಡವರೆಲ್ಲ ಬದಲಾಗಿದ್ದಾರೆ. ಚೈತ್ರಾ ಇರಬಹುದು, ರಜತ್ ಇರಬಹುದು. ಹಾರಾಡುತ್ತಿದ್ದವರು ಸುದೀಪ್ ಮಾತಿನ ನಂತರ ಬೆಸ್ಟ್ ಪರ್ಫಾಮೆನ್ಸ್ ನೀಡಿದ್ದಾರೆ. ಆದರೆ ತ್ರಿವಿಕ್ರಮ್ ಹಾಗೂ ಭವ್ಯಾ ವಿಚಾರದಲ್ಲಿ ಅದ್ಯಾಕೋ ಅದು ಸಕ್ಸಸ್ ಆಗ್ತಾ ಇಲ್ಲ. ಈ ವಾರವೂ ಕೂಡ ಕಿಚ್ಚ ನೇರವಾಗಿಯೇ ಪ್ರಶ್ನಿಸಿ, ಮನೆಯವರಿಂದ ಉತ್ತರ ಪಡೆದಿದ್ದಾರೆ. ನೋಡೋಣಾ ಇರುವ ಕಾಲು ಭಾಗದ ಜರ್ನಿಯಲ್ಲಾದರೂ ಬದಲಾವಣೆ ಕಾಣುತ್ತಾರಾ ಅಂತ. ಹಾಗಾದ್ರೆ ಕಿಚ್ಚ ಕೇಳಿದ್ದೇನು..? ಮನೆಯವರು ಹೇಳಿದ್ದೇನು ಎಂಬ ಡಿಟೈಲ್ ಮುಂದಕ್ಕೆ ಓದಿ.

Yes/No ಆಡಿಸಿದ ಕಿಚ್ಚ
ವೀಕೆಂಡ್ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಎಸ್ ಆರ್ ನೋ ಆಟವನ್ನ ಆಡಿಸುತ್ತಾರೆ. ಇದರಲ್ಲಿ ತಪ್ಪು ಮಾಡುತ್ತಿರುವವರಿಗೆ, ಆಟ ಆಡದೆ ಮಾರ್ಗ ಬದಲಾಯಿಸಿದವರಿಗೆ, ಇನ್ನೊಬ್ಬರಿಗಾಗಿ ಇರುವವರಿಗಾಗಿ ಪ್ರಶ್ನೆಗಳ ಮೂಲಕ ಎಚ್ಚರಿಸುವ ಆಟವಿದು. ಈ ವಾರ ಕೂಡ ಅದನ್ನ ಮಾಡಲಾಗಿದೆ. ಅದರಲ್ಲಿ ಮುಖ್ಯವಾಗಿ ತ್ರಿವಿಕ್ರಂ ಹಾಗೂ ಭವ್ಯಾ ಬಗೆಗಿನ ಪ್ರಶ್ನೆಯನ್ನ ಕೇಳಲಾಗಿದೆ.
ಕಿಚ್ಚನ ಪ್ರಶ್ನೆ ತ್ರಿವಿಕ್ರಮ್‌ಗೆ ಅರ್ಥವಾಗುತ್ತಾ?
ಕಿಚ್ಚನ ಪ್ರಶ್ನೆಯಲ್ಲಿ ತ್ರಿವಿಕ್ರಮ್ ಬಿಗ್ ಬಾಸ್ ಮನೆಗೆ ಬಂದಿರುವುದು ಆಟ ಆಡುವುದಕ್ಕಲ್ಲ ಬದಲಿಗೆ ಭವ್ಯಾ ಅವರಿಗೆ ಗೈಡ್ ಮಾಡುವುದಕ್ಕೆ ಎಂಬ ಪ್ರಶ್ನೆಗೆ ಮನೆಯಲ್ಲಿ ಹಲವರು ಹೌದು ಎಂಬ ಕಾರ್ಡ್ ಅನ್ನೇ ತೋರಿಸಿದ್ದಾರೆ. ತ್ರಿವಿಕ್ರಂ ಹಾಗೂ ಭವ್ಯಾ ಒಟ್ಟೊಟ್ಟಿಗೆ ಇರುವುದು, ಸದಾ ಉಳಿಸುವ ಪ್ರಯತ್ನ ನಡೆಯುವುದು ಮನೆಯವರ ಕಣ್ಣಿಗೆ ಚೆನ್ನಾಗಿ ಕಂಡಿದೆ. ಹೀಗಾಗಿ ಕಿಚ್ಚನ ಮಾತಿಗೆ ಹೌದು ಎಂದಿದ್ದಾರೆ.
ತಳುಕು ಬಳುಕು ಮಾಡುವವರ ಜೊತೆಗಿಲ್ಲ
ಮನೆಯವರ ಮಾತನ್ನಾಗಲೀ.. ಕಿಚ್ಚನ ಪ್ರಶ್ನೆಯನ್ನಾಗಲೀ ತ್ರಿವಿಕ್ರಂ ಒಪ್ಪಿಲ್ಲ. ನೋ ಎಂದಿದ್ದಾರೆ. ಅದಕ್ಕೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. 'ಮನೆಯೊಳಗೆ ತಳುಕು ಬಳುಕು ಇರುವವರ ಜೊತೆಗೆ ಇರುವುದಕ್ಕಿಂತ, ಸ್ಟ್ರಾಂಗ್ ಆಗಿ ಇರುವವರ ಜೊತೆಗೆ ಇರುವುದು ಒಳ್ಳೆಯದು ಅನ್ನಿಸ್ತು. ಯಾರ ಜೊತೆಗೆ ಇದ್ದರೆ ಗೆಲ್ಲಬಹುದು ಎಂಬುದು ನನಗೆ ಅರ್ಥವಾಗಿದೆ. ನಾನು ಕುಗ್ಗಿದಾಗ ಭವ್ಯ ಕೂಡ ಹುಮ್ಮಸ್ಸು ತುಂಬುತ್ತಾರೆ. ಹಾಗೇ ಮನೆಯಲ್ಲಿ ಯಾರೇ ಕುಗ್ಗಿದರು, ನೋವಾದರೂ ಸಹಾಯ ಮಾಡಬೇಕಾ ಎಂದೇ ಕೇಳಿದ್ದೇನೆ. ಅದು ಬರೀ ಭವ್ಯ ಅವರಿಗೆ ಮಾತ್ರ ಕೇಳಿರುವುದಲ್ಲ' ಎಂದಿದ್ದಾರೆ. ಈ ಹಿಂದೆ ಕೂಡ ತ್ರಿವಿಕ್ರಮ್ ಹಾಗೂ ಭವ್ಯ ಬಗ್ಗೆ ಇದೇ ಥರ ಪ್ರಶ್ನೆಗಳೇ ಬಂದಿದ್ದವು. ಈಗಲೂ ಅದು ರಿಪೀಟ್ ಆಗಿದೆ. ಈಗಲಾದರೂ ತ್ರಿವಿಕ್ರಂ ಬದಲಾಗುತ್ತಾರಾ ನೋಡಬೇಕಿದೆ.
ತ್ರಿವಿಕ್ರಮ್ ಬಗ್ಗೆ ಭವ್ಯ ಕ್ಲಾರಿಟಿ
ಇನ್ನು ಈ ಪ್ರಶ್ನೆಗೆ ಭವ್ಯ ಕಡೆಯಿಂದ ಕೂಡ ಸಮ್ಮತಿ ಇಲ್ಲ. ಅದಕ್ಕೆ ಉತ್ತರಿಸಿರುವ ಭವ್ಯ, ' ಕಾಳಜಿ ತೋರಿಸುವುದರಿಂದ ಅವರ ಆಟವನ್ನ ಅವರು ಮರೆತಿಲ್ಲ. ನಾನೇನೆ ತಪ್ಪು ಮಾಡಿದ್ರು ಸಲಹೆ ಕೇಳುವುದು ತ್ರಿವಿಕ್ರಮ್ ಬಳಿ. ಒಂಟಿತನ ಫೀಲ್ ಆದಾಗ ಧೈರ್ಯ ತುಂಬ್ತಾರೆ. ಆಟ ಅಂತ ಬಂದಾಗ ಆಟವಾಡ್ತೀವಿ. ಫ್ರೆಂಡ್ಶಿಪ್ ನ ಆಟದ ನಡುವೆ ತರಲ್ಲ. ಒಂದು ವೇಳೆ ಎಲಿಮಿನೇಷನ್ ನಲ್ಲಿ ನಾವಿಬ್ಬರೆ ನಿಂತಾಗ ನೀನು ಹೋಗು ಅಂತ ಇಬ್ಬರು ಹೇಳ್ತೀವಿ' ಎಂಬ ಕ್ಲಾರಿಟಿಯನ್ನ ಕೊಟ್ಟಿದ್ದಾರೆ.


Click it and Unblock the Notifications











