BBK 11: ಬೇಕೆನ್ರಪ್ಪ ಸಂಬಂಧಗಳು; ಮೋಕ್ಷಿತಾ ಕಣ್ಣೀರಿಗೆ ಕಿಚ್ಚನ ಖಡಕ್ ಪ್ರಶ್ನೆ
ಬಿಗ್ ಬಾಸ್ ಮನೆಗೆ ಹೋದಾಗಲೇ ಒಂದಷ್ಟು ಸಂಬಂಧಗಳು ಸೃಷ್ಟಿಯಾಗುತ್ತವೆ. ಕೆಲವೊಂದು ಸಂಬಂಧಗಳು ಹೊರಗೆ ಪರಿಚಯವಿದ್ದು, ಒಳಗೆ ಹೋದ ಮೇಲೆ ಸ್ಟ್ರಾಂಗ್ ಆಗ್ತಾವೆ. ಇನ್ನು ಕೆಲವೊಂದು ಸಂಬಂಧಗಳು ಹೊರಗೆ ಚೆನ್ನಾಗಿದ್ದರೂ ಒಳಗೆ ಕಿತ್ತೋಗ್ತವೆ. ನಾವೀಗ ಮಾತಾಡೋಕೆ ಹೊರಟಿದ್ದು ಎರಡನೆಯದ್ದು. ಅದು ಮೋಕ್ಷಿತಾ ಹಾಗೂ ಗೌತಮಿ ಹಾಗೂ ಮಂಜು ವಿಚಾರ.
ಹೌದು ಮನೆಯಿಂದ ಹೊರಗಡೆಯೇ ಗೌತಮಿ ಹಾಗೂ ಮೋಕ್ಷಿತಾ ಫ್ರೆಂಡ್ಸ್ ಆಗಿದ್ದರು. ತಾವಿಬ್ಬರು ಬೆಸ್ಟ್ ಫ್ರೆಂಡ್ ಎಂಬ ಫೀಲ್‌ನಲ್ಲಿದ್ದರು. ಅಪರೂಪಕ್ಕೆ ಒಮ್ಮೆ ಸಿಕ್ಕಾಗ, ಸಭೆ ಸಮಾರಂಭದಲ್ಲಿ ನಿಂತಾಗ ಫ್ರೆಂಡ್‌ಶಿಪ್ ವಾವ್ ಎನಿಸಿತ್ತು. ಆದರೆ ಬಿಗ್ ಬಾಸ್‌ಗೆ ಬಂದಾಗ ರಿಯಾಲಿಟಿ ಹೊರಗೆ ಬರೋದಕ್ಕೆ ಶುರುವಾಯ್ತು. ಈಗ ಫ್ರೆಂಡ್‌ಶಿಪ್ ಇರಲಿ, ಮುಖ ನೋಡುವುದಕ್ಕೂ ಅಸಹ್ಯ ಎನಿಸುವಷ್ಟು ದೂರ ಆಗಿದ್ದಾರೆ.

ಅಣ್ಣನಾಗಿದ್ದ ಮಂಜಣ್ಣ ಈಗ ದುಷ್ಮನ್
ಆರಂಭದಲ್ಲಿ ಒಂದೇ ಥರ ಬಟ್ಟೆಗಳನ್ನೇ ಹಾಕುತ್ತಿದ್ದ ಗೌತಮಿ ಹಾಗೂ ಮೋಕ್ಷಿತಾ ಈಗ ದೂರ ದೂರ ಆಗಿದ್ದಾರೆ. ಅದಕ್ಕೆ ಕಾರಣವೂ ಇಬ್ಬರು ನಡೆದುಕೊಳ್ಳುವ ರೀತಿ. ಅದರಲ್ಲೂ ಮಂಜಣ್ಣನ ನಡೆಗೆ ಮೋಕ್ಷಿತಾ ಬೇಸತ್ತು ಹೋಗಿದ್ದಾರೆ. ಮೂವರ ಸ್ನೇಹ ಈಗ ಛೀ ಥೂ ಎಂಬ ಲೆವೆಲ್ಲಿಗೆ ಬಂದು ನಿಂತಿದೆ.
ಮೋಕ್ಷಿತಾ & ಮಂಜು ಜಿದ್ದಾಜಿದ್ದಿ
ಕಾಲ ಚ್ಚ ಸುದೀಪ್ ತಮ್ಮ ಭಾನುವಾರದ ವೇದಿಕೆಯಲ್ಲಿ ಮಾಮೂಲಿ ಬೋರ್ಡ್ ಆಟ ಆಡಿಸಿದರು. ಮೋಕ್ಷಿತಾ ಕೈಗೆ ಸ್ಯಾಡಿಸ್ಟ್ ಎಂಬ ಬೋರ್ಡ್ ಬಂತು. ಅದನ್ನ ಸೀದಾ ತೆಗೆದುಕೊಂಡು ಹೋಗಿ ಮಂಜಣ್ಣನಿಗೆ ಕೊಟ್ಟು ಕಾರಣ ಹೇಳಿದರು. ಮಂಜಣ್ಣನಿಗೆ ಬಕೆಟ್ ಎಂಬ ಬೋರ್ಡ್ ಸಿಕ್ಕಾಗ ಸೀದಾ ಮೋಕ್ಷಿತಾಗೆ ಕೊಟ್ಟರು. ಗೆಲ್ಲುವುದಕ್ಕಾಗಿ ಎಲ್ಲೆಂದರಲ್ಲಿ ಬಕೆಟ್ ಹಿಡಿಯುತ್ತಾರೆ ಎಂಬ ಮಾತನ್ನ ಮಂಜಣ್ಣ ಹೇಳಿದರು. ಇದು ಮೋಕ್ಷಿತಾಗೆ ತುಂಬಾನೇ ನೋವು ಮಾಡಿತು. ಮಂಜಣ್ಣ ಹಾಗೂ ಮೋಕ್ಷಿತಾ ಬೋರ್ಡ್ ಜಿದ್ದಾಜಿದ್ದಿಗೆ ಬಿದ್ದಿದ್ದರು.
ಮೋಕ್ಷಿತಾ ಕಣ್ಣೀರು
ಬಕೆಟ್ ಎಂಬುದಕ್ಕೆ ಕಿಚ್ಚ ಪ್ರತಿಕ್ರಿಯೆಯನ್ನು ಕೇಳಿದರು. ಆಗ ಮೋಕ್ಷಿತಾ, 'ನಾನ್ಯಾವತ್ತು ಅಲ್ಲಿಂದ ಇಲ್ಲಿ ಇಲ್ಲಿಂದ ಅಲ್ಲಿ ಹೇಳಿಲ್ಲ ಸರ್. ಬಕೆಟ್ ಹಿಡ್ಕೊಂಡು ಖಂಡಿತ ಓಡಾಡಿಲ್ಲ. ನಾಮಿನೇಷನ್ ಮಾಡಿದಾಗಲೂ ಯಾಕೆ ಮಾಡಿದ್ರಿ ಅಂತ ಕೇಳಲ್ಲ. ನನ್ನ ಪಾಡಿಗೆ ನಾನು ಸುಮ್ಮನೆ ಇರ್ತೀನಿ. ಅವರ ಜೊತೆಗೆ ಇದ್ದಾಗ ತುಂಬಾ ಕುಗ್ಗಿಸುತ್ತಾ ಇದ್ದರು. ವಿಕ್ರಂಗೆ ಒಳ್ಳೆಯವನು ಅಂತ ಯಾಕೆ ಹೇಳ್ತೀಯಾ ಅಂತ ನಂಗೆ ಡಿಮೋಟಿವೇಟ್ ಮಾಡ್ತಾ ಇದ್ರು. ಯಾವುದಕ್ಕೂ ಮುಂದೆ ಹೋಗದಂತೆ ತಡೆಯುತ್ತಿದ್ದರು. ಆ ಕಾರಣದಿಂದ ನಾನು ಅವರಿಂದ ದೂರ ಬಂದೆ. ಈಗಲೂ ಅದನ್ನೇ ಮಾಡುತ್ತಾ ಇದ್ದಾರೆ' ಎಂದು ಕಣ್ಣೀರು ಹಾಕಿದರು.
ರೊಚ್ಚಿಗೆದ್ದು ಕಿಚ್ಚ ಹೇಳಿದ್ದೇನು?
ಕಿಚ್ಚನಿಗೆ ಇದು ಕೋಪ ತರಿಸಿತ್ತು. ಮೋಕ್ಷಿತಾಗೆ ಕುಳಿತುಕೊಳ್ಳಲು ಹೇಳಿ ಬೇಕೆನ್ರಪ್ಪ ಸಂಬಂಧ. ನಾನಿಲ್ಲಿ ಯಾರ ಪರವಾಗಿಯೂ ಮಾತಾಡ್ತಾ ಇಲ್ಲ. ಆದರೆ ಸಂಬಂಧ ಸಂಬಂಧ ಅಂತ ಹೇಳಿ ನೀವೂ ಮಾಡೋದಾದ್ರೂ ಏನು. ಮೋಕ್ಷಿತಾ ಅವರೇ ನೀವ್ಯಾಕೆ ಅಳಬೇಕು. ಅವರು ಬೇಡ ಎನಿಸಿದರೆ ನೀವೂ ಬಿಟ್ಟು ಬಿಡಿ. ಬೇಡದವರ ಮಾತುಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಎಲ್ಲರಿಗೂ ಸೇರಿಸಿ ಬುದ್ದಿ ಮತು ಹೇಳಿದ್ದಾರೆ.


Click it and Unblock the Notifications











