Bigg Boss Kannada Season 9 : ಒಟಿಟಿ ಆಯ್ತು ಟಿವಿಯಲ್ಲಿ ಬಿಗ್‌ಬಾಸ್; 9ನೇ ಸೀಸನ್‌ನ ಪ್ರೋಮೊ ಔಟ್
ಎಂಟು ಯಶಸ್ವಿ ಆವೃತ್ತಿಗಳನ್ನು ಪೂರೈಸಿರುವ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನ ಒಂಬತ್ತನೇ ಆವೃತ್ತಿಗೆ ದಿನಗಣನೆ ಆರಂಭಗೊಂಡಿದೆ. ಇಷ್ಟು ವರ್ಷಗಳ ರೀತಿ ಈ ಬಾರಿ ನೇರವಾಗಿ ಟಿವಿ ಬಿಗ್ ಬಾಸ್ ನಡೆಸದೇ ಒಟಿಟಿ ಬಿಗ್ ಬಾಸ್ ಅನ್ನು ಆಯೋಜಿಸಲಾಗಿದೆ. ವೂಟ್ ಅಪ್ಲಿಕೇಶನ್‌ನಲ್ಲಿ ಬಿಗ್ ಬಾಸ್ ಕನ್ನಡ ಒಟಿಟಿಯ ನೇರಪ್ರಸಾರ ಲಭ್ಯವಿದ್ದು, ಈಗಲೂ ಸಹ ಶೋ ನಡೆಯುತ್ತಿದೆ.
ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡಿದ್ದ ಅಭ್ಯರ್ಥಿಗಳನ್ನು ಒಟಿಟಿ ಬಿಗ್ ಬಾಸ್‌ಗೆ ಕಳುಹಿಸಲಾಗಿದ್ದು, ನಿರೀಕ್ಷಿಸಿದ ಯಶಸ್ಸನ್ನು ಸಾಧಿಸುವಲ್ಲಿ ಕಾರ್ಯಕ್ರಮ ಗೆದ್ದಿದೆ ಎನ್ನಬಹುದು. ಇನ್ನು ಈ ಒಟಿಟಿ ಬಿಗ್ ಬಾಸ್ ಶೋ ಮುಕ್ತಾಯವಾಗಲು ಬೆರಳೆಣಿಕೆಯಷ್ಟು ದಿನಗಳು ಮಾತ್ರ ಬಾಕಿ ಉಳಿದಿದ್ದು, ಒಟಿಟಿ ಬಿಗ್ ಬಾಸ್ ಮುಕ್ತಾಯಗೊಂಡ ಬೆನ್ನಲ್ಲೇ ಟಿವಿ ಬಿಗ್ ಬಾಸ್ ಶುರುವಾಗಲಿದೆ.
ಮೊದಲೇ ತಿಳಿಸಿದಂತೆ ಒಟಿಟಿಯಲ್ಲಿ ಅಂತಿಮವಾಗಿ ಉಳಿದುಕೊಳ್ಳಲಿರುವ ಕೆಲ ಸ್ಪರ್ಧಿಗಳನ್ನು ನೇರವಾಗಿ ಬಿಗ್ ಬಾಸ್ ಸೀಸನ್ ಒಂಬತ್ತಕ್ಕೆ ಕಳುಹಿಸಲಿದ್ದು, ಆ ಅಭ್ಯರ್ಥಿಗಳನ್ನು ಹೊರತುಪಡಿಸಿ ಹೊಸದಾಗಿ ಯಾರನ್ನು ಬಿಗ್ ಬಾಸ್ ಮನೆಗೆ ಕಳುಹಿಸಲಾಗುತ್ತದೆ ಎಂಬ ಕುತೂಹಲ ಬಿಗ್ ಬಾಸ್ ವೀಕ್ಷಕ ವೃಂದದಲ್ಲಿದೆ. ಅದರಲ್ಲಿಯೂ ಈ ಬಾರಿಯ ಬಿಗ್ ಬಾಸ್‌ನಲ್ಲಿ ಸಖತ್ ಸದ್ದು ಮಾಡುತ್ತಿರುವ ಸ್ಪರ್ಧಿಗಳಾದ ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಬಿಗ್ ಬಾಸ್ ಟಿವಿ ಕಾರ್ಯಕ್ರಮಕ್ಕೆ ಬಡ್ತಿ ಪಡೆಯುವ ಸಾಧ್ಯತೆಗಳಿವೆ.

ಇನ್ನು ಇಂದು ( ಸೆಪ್ವೆಂಬರ್ 7 ) ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಒಂಬತ್ತನೇ ಸೀಸನ್‌ನ ಪ್ರೋಮೊ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ವಿಡಿಯೋ ವೈರಲ್ ಆಗಿದೆ. ಈ ಪ್ರೋಮೊದಲ್ಲಿ ಬಿಗ್ ಬಾಸ್ ಟಿವಿ ಸೀಸನ್ ಬರುತ್ತಿದೆ ಎಂಬ ಮಾಹಿತಿಯನ್ನು ನೀಡಲಾಗಿದ್ದು, ಕಾರ್ಯಕ್ರಮ ಎಂದಿನಿಂದ ಶುರುವಾಗಲಿದೆ ಎಂಬುದನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ಸದ್ಯ ಒಟಿಟಿ ಬಿಗ್ ಬಾಸ್‌ನ ಐದನೇ ವಾರ ಜರುಗುತ್ತಿದ್ದು, ಮುಂದಿನ ವಾರಾಂತ್ಯಕ್ಕೆ ಅಂತ್ಯವಾಗಲಿದೆ. ಈ ವಾರ ಸೋನು ಶ್ರೀನಿವಾಸ್ ಗೌಡ, ಸೋಮಣ್ಣ ಮಾಚಿಮಾಡ, ನಂದಿನಿ, ಆರ್ಯವರ್ಧನ್, ಜಸ್ವಂತ್ ಬೋಪಣ್ಣ ಹಾಗೂ ಜಯಶ್ರೀ ಬೋಪಣ್ಣ ಡೇಂಜರ್ ಝೋನ್‌ನಲ್ಲಿದ್ದು, ಯಾರು ಹೊರಬೀಳಬಹುದು ಎಂಬ ಪ್ರಶ್ನೆ ಹಾಗೂ ಕುತೂಹಲ ವೀಕ್ಷಕರಲ್ಲಿದೆ. ಮುಂದಿನ ವಾರಾಂತ್ಯಕ್ಕೆ ಬಿಗ್ ಬಾಸ್ ಒಟಿಟಿ ಮುಗಿದ ಬೆನ್ನಲ್ಲೇ ಟಿವಿ ಬಿಗ್ ಬಾಸ್‌ಗೆ ಚಾಲನೆ ದೊರೆಯಲಿದೆ.


Click it and Unblock the Notifications











