BBK 11: ಬಿಗ್ ಬಾಸ್‌ನಲ್ಲಿ ಐಶ್ವರ್ಯಾ ಹಾಕಿದ್ದ ಈ ಸೀರೆ ಬೆಲೆ ಎಷ್ಟು? ಸಾಮಾನ್ಯ ಜನರ ಕೈಗು ಎಟಕುತ್ತದೆ!

By ಎಸ್ ಸುಮಂತ್

ಬಿಗ್ ಬಾಸ್ ಮನೆಯೊಳಗೆ ಐಶ್ವರ್ಯಾ ಸಿಂಧೋಗಿ ಸ್ಟೈಲ್ ಐಕಾನ್ ಆಗಿದ್ದಾರೆ. ದಿನವೂ ಬ್ಯೂಟಿಫುಲ್ ಆಗಿ ಮಿಂಚುತ್ತಾರೆ. ಮೇಕಪ್ ಇರಬಹುದು ಅಥವಾ ಯಾವುದೇ ಡ್ರೆಸ್ ಆಗಲಿ ಅದರಲ್ಲಿ ಆಕರ್ಷಿಸುತ್ತಾರೆ. ಖುಷಿ ಖುಷಿಯಾಗಿದ್ದ ಐಶ್ವರ್ಯಾಗೆ ಈ ವಾರ ಬೇಸರದ ಸಂಗತಿ ಎದುರಾಗಿದೆ. ಬೆಸ್ಟ್ ಫ್ರೆಂಡ್ ಆಗಿದ್ದ ಶಿಶಿರ್ ಮನೆಯಿಂದ ಹೊರ ನಡೆದಿದ್ದಾರೆ.

ಓಡಾಡುವಾಗ ಜೊತೆಯಾಗಿ, ಕುಂತಲ್ಲಿ ನಿಂತಲ್ಲಿ ಸಹಪಾಠಿಯಾಗಿದ್ದ ಶಿಶಿರ್ ಈ ವಾರ ಎಲಿಮಿನೇಟ್ ಆಗಿ ಮನೆಯಿಂದ ಹೊರಗೆ ಬಂದಿದ್ದಾರೆ. ಶಿಶಿರ್ ಔಟ್ ಎಂದು ಹೇಳಿದ ಕೂಡಲೇ ಐಶ್ವರ್ಯಾ ಜೋರಾಗಿ ಅಳುವುದಕ್ಕೆ ಶುರು ಮಾಡಿದ್ದರು. ಮನೆಯವರೆಲ್ಲ ಸಮಾಧಾನ ಮಾಡಿದ್ದಾರೆ.

Biggboss season 11 Aishwarya Sindhogi stuns in semi silk saree at house see price

ಸದ್ಯ ಇಂದು ಶಿಶಿರ್ ಇಲ್ಲದ ಮನೆಯಲ್ಲಿ ಒಂಟಿಯಾಗಿ ಆಡುವುದಕ್ಕೆ ಶುರು ಮಾಡಿದ್ದಾರೆ ಐಶ್ವರ್ಯಾ. ಆದರೆ ಐಶ್ಚರ್ಯಾ ಮನೆಯಲ್ಲಿ ಹಾಕುವ ಬಟ್ಟೆ ಬೆಲೆ ಎಷ್ಟು ಗೊತ್ತಾ..?

ಫ್ಯಾಷನ್ ಐಕಾನ್ ಐಶ್ವರ್ಯಾ

ಐಶ್ವರ್ಯಾ ಮೊದಲೇ ಹೇಳಿದಂತೆ ಯಾವುದೇ ಡ್ರೆಸ್ ಹಾಕಿಕೊಂಡರು ತುಂಬಾ ಬ್ಯೂಟಿಫುಲ್ ಆಗಿ ಕಾಣಿಸುತ್ತಾರೆ. ಯಾವಾಗಲೂ ಫ್ಯಾನ್ಸಿ ಗೌನ್‌ಗಳಲ್ಲಿಯೇ ಹೆಚ್ಚು ಕಾಣಿಸಿಕೊಳ್ಳುವ ಐಶು, ಬೇಬಿ ಡಾಲ್ ಥರ ಕಾಣಿಸುತ್ತಾರೆ. ಇವರ ಬಿಗ್ ಬಾಸ್ ಲುಕ್‌ಗೆ ಗಂಡು ಮಕ್ಕಳ ಹಾರ್ಟ್ ಅತ್ತಿತ್ತ ಕದಲಿರೋದಂತು ಸತ್ಯ.

ಸೀರೆಯಲ್ಲೂ ಮಿಂಚುವ ಐಶ್ವರ್ಯಾ

ಬರೀ ಮಾಡ್ರನ್ ಡ್ರೆಸ್ ಮಾತ್ರವಲ್ಲ ಆಗಾಗ ಸೀರೆಯಲ್ಲಿಯೂ ಕಂಗೊಳಿಸುತ್ತಾರೆ ಐಶ್ಚರ್ಯಾ. ಸೀರೆ ಆಯ್ಕೆ, ಉಡುವ ಸ್ಟೈಲ್ ಎಲ್ಲದು ಕೂಡ ಇಲ್ಲಿ ಬಹಳ ಮುಖ್ಯವಾಗುತ್ತದೆ. ಸೀರೆ ನೋಡುವುದಕ್ಕಿಂತ ಉಟ್ಟಾಗ ಚೆನ್ನಾಗಿ ಕಾಣುವಂತ ಸೀರೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಐಶ್ಚರ್ಯಾ ಸಿಂಧೋಗಿ ಇತ್ತೀಚೆಗೆ ಬಿಗದ ಬಾಸ್ ಮನೆಯಲ್ಲಿ ಒಂದು ಸೀರೆ ಹಾಕಿದ್ದರು. ಫ್ಲವರ್ ವಿತ್ ಪ್ಲೈನ್ ಸೀರೆ. ಅಂದ್ರೆ ಬಾರ್ಡರ್ ಪಿಂಕ್ ಕಲರ್ ನಲ್ಲಿ ಪ್ಲೈನ್ ಆಗಿತ್ತು. ಅದರ ಮೇಲೆ ಗೋಲ್ಡನ್ ಕಲರ್ ಎಳೆ ಕೂಡ ಇತ್ತು. ಐಶ್ವರ್ಯಾ ಈ ಸೀರೆಯಲ್ಲಿ ಸಿಕ್ಕಾಪಟ್ಟೆ ಅಂದವಾಗಿ ಕಾಣಿಸ್ತಾ ಇದ್ದರು. ಸಿಂಗಲ್ ಪಿನ್ ಬೇರೆ ಮಾಡಿಕೊಂಡಿದ್ದರು.

ಕೈಗೆಟಗುವ ಬೆಲೆಯಲ್ಲಿ ಈ ಸೀರೆ

ಸಾಮಾನ್ಯವಾಗಿ ಬಿಗ್ ಬಾಸ್ ಮನೆಗೆ ಹೋದಾಗ ನಟಿಮಣಿಯರಿಗೆ ಒಂದಷ್ಟು ಸ್ಪಾನ್ಸರ್ ಇರುತ್ತೆ. ಅದರಿಂದ ಬಿಸಿನೆಸ್ ಮಾಡುವವರಿಗೂ ಫ್ರೀ ಪ್ರಮೋಷನ್ ಆಗುತ್ತದೆ. ಅದರಲ್ಲೂ ಬಿಗ್ ಬಾಸ್ ಮನೆಗೆ ಹೋದ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗೋದು ಗ್ಯಾರಂಟಿ. ಅವರ ಪೇಜ್ ಗಳಿಗೆ ಫಾಲೋವರ್ಸ್ ಕೂಡ ಹೆಚ್ಚಾಗುತ್ತಾರೆ. ಹೀಗಾಗಿ ಒಂದು ಟ್ಯಾಗ್‌ ಮಾಡಿದರು ಪ್ರಮೋಷನ್ ಚೆನ್ನಾಗಿಯೇ ಆಗಲಿದೆ. ಹೀಗಾಗಿ ಐಶು ಹಾಕಿರೋ ಸೆಮಿ ಮೈಸೂರ್ ಸಿಲ್ಕ್ ಕೂಡ ಸ್ಪಾನ್ಸರ್ ಆಗಿನೇ ಬಂದಿರೋದು. ಅದರ ಬೆಲೆ 3,200 ರೂಪಾಯಿ. ಸೀರೆ ಅದ್ಭುತವಾಗಿದ್ದು, ಹಬ್ಬ ಹರಿದಿನಗಳು ಎಂದಾಗ ಸಾಮಾನ್ಯರು ಕೂಡ ಈ ಸೀರೆ ಕೊಳ್ಳಬಹುದು.

ಈ ಸೀರೆಗಿದೆ ಡಿಮ್ಯಾಂಡ್

ಇನ್ನು ಐಶ್ಚರ್ಯಾಗೆ ಸೀರೆ ಮಾತ್ರವಲ್ಲ ಕೆಲವೊಂದು ಡ್ರೆಸ್‌ಗಳನ್ನು ಕಳುಹಿಸಿ ಕೊಡುವುದು ವೈಭವಿ ಸಿಲ್ಕ್ ಸ್ಯಾರಿ ಅವರು. ಬೆಂಗಳೂರಿನಲ್ಲಿಯೇ ಇವರ ಶಾಪ್ ಇದ್ದು, ಆನ್ಲೈನ್ ಡೆಲಿವರಿ ಇದೆ. ಅವರದ್ದೇ ಆದ ಸೋಷಿಯಲ್ ಮೀಡಿಯಾದಲ್ಲಿ ತಮ್ಮಲ್ಲಿರುವ ಎಲ್ಲಾ ರೀತಿಯ ಕಲೆಕ್ಷನ್ ಹಾಕಿದ್ದಾರೆ. ಸದ್ಯಕ್ಕೆ ಐಶ್ಚರ್ಯಾ ಹಾಕಿರುವ ಈ ಸೆಮಿ ಸಿಲ್ಕ್ ಸ್ಯಾರಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ.

More from Filmibeat

English summary
Colors kannada bigboss Written Update on Bigboss season 11 aishwarya personal story. Here is the details about Aishwarya sindogi dress price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X