ಈ ಯುಗಾದಿಗೆ ಯಶ್ ರಿಂದ ಅಭಿಮಾನಿಗಳಿಗೆ ವಿಶೇಷ ಉಡುಗೊರೆ

By Suneetha

ಈ ಯುಗಾದಿ ಹಬ್ಬ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಭರ್ಜರಿ ಸಂಭ್ರಮ ತಂದುಕೊಡಲಿದೆ. ಯಾಕಂತೀರಾ? ಯಾಕೆಂದರೆ, ಯಶ್ ಅವರ ಹಿಟ್ ಸಿನಿಮಾ 'ಮಾಸ್ಟರ್ ಪೀಸ್' ಈ ಯುಗಾದಿಗೆ ನಿಮ್ಮ ಮನೆಯಲ್ಲಿ ಪ್ರದರ್ಶನಗೊಳ್ಳಲಿದೆ.

ಹೌದು ಫಸ್ಟ್ ಡೇ ಫಸ್ಟ್ ಶೋ ಮಿಸ್ಸಾಗಿ ನೊಂದುಕೊಂಡಿದ್ದ ಅಭಿಮಾನಿಗಳು ಆರಾಮವಾಗಿ ನಿಮ್ಮ ಮನೆಯಲ್ಲಿಯೇ ಅಮ್ಮ ಮಾಡಿಕೊಟ್ಟ ಕಡ್ಲೆಪುರಿನೋ, ಪಾಪ್ ಕಾರ್ನೋ ಪಕ್ಕದಲ್ಲಿಟ್ಟುಕೊಂಡು ಯುಗಾದಿ ಹಬ್ಬದಂದು ಸಂಜೆ ಮಿಸ್ ಮಾಡದೇ ಉದಯ ಟಿವಿ ಮುಂದೆ ಹಾಜರಾಗಿ.[ಲಕ್ಷಗಟ್ಟಲೇ ವೀಕ್ಷಕರನ್ನು ಸಂಪಾದಿಸಿದ 'ಅಣ್ಣಂಗೆ ಲವ್ ಆಗಿದೆ']

Biggest TV Premiere Movie: Yash's Masterpiece On April 8th

ನಿರ್ದೇಶಕ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ಸಿನಿಮಾ ಯುಗಾದಿ ಹಬ್ಬದ ವಿಶೇಷ ಸಿನಿಮಾವಾಗಿ ನಿಮ್ಮ ನೆಚ್ಚಿನ ಉದಯ ಟಿವಿಯಲ್ಲಿ ಪ್ರೀಮಿಯರ್ ಬ್ಲಾಕ್ ಬಸ್ಟರ್ ಮೂವಿಯಾಗಿ ಹೊರಬರಲಿದ್ದು, ಏಪ್ರಿಲ್ 8, ಸಂಜೆ 7 ಘಂಟೆಗೆ ತಪ್ಪದೇ ವೀಕ್ಷಿಸಿ.

ಅಂತೂ ಯಶ್ ಅಭಿಮಾನಿಗಳಿಗೆ ಈ ಬಾರಿಯ ಯುಗಾದಿ ಹಬ್ಬ ಮಾತ್ರ ಸ್ಪೆಷಲ್ ಹಬ್ಬವಾಗಿ ಪರಿಣಮಿಸಲಿದೆ. ಜೊತೆಗೆ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಹಬ್ಬಕ್ಕೆ ಒಳ್ಳೆ ಉಡುಗೊರೆಯನ್ನೇ ನೀಡಿದ್ದಾರೆ.[250 ಥಿಯೇಟರ್ ಗಳಲ್ಲಿ 25 ದಿನಗಳನ್ನು ಪೂರೈಸಿದ 'ಮಾಸ್ಟರ್ ಪೀಸ್']

Biggest TV Premiere Movie: Yash's Masterpiece On April 8th

ನಟಿ ಶಾನ್ವಿ ಶ್ರೀವಾತ್ಸವ ಅವರು ಯಶ್ ಅವರ ಜೊತೆ 'ಮಾಸ್ಟರ್ ಪೀಸ್' ಚಿತ್ರದಲ್ಲಿ ರೋಮ್ಯಾನ್ಸ್ ಮಾಡಿದ್ದರು. ಚಿತ್ರ ಬಿಡುಗಡೆ ಆದ ಫಸ್ಟ್ ಡೇ ಇಡೀ ಗಾಂಧಿನಗರದಲ್ಲಿ ಹಬ್ಬದ ವಾತಾವರಣವನ್ನೇ ಸೃಷ್ಟಿ ಮಾಡಿದ್ದ 'ಮಾಸ್ಟರ್ ಪೀಸ್' ಸಿನಿಮಾ ವಾರಕ್ಕೆ ಕೋಟಿ-ಕೋಟಿ ಬಾಚಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.[ವಿದೇಶದಲ್ಲಿ 'ಮಾಸ್ಟರ್ ಪೀಸ್' ಹವಾ ಬಲು ಜೋರು ಗುರು]

Biggest TV Premiere Movie: Yash's Masterpiece On April 8th

ಅಭಿಮಾನಿಗಳೇ ಮರೆಯದಿರಿ ನಾಳೆ (ಏಪ್ರಿಲ್ 8) ಸಂಜೆ 7 ಘಂಟೆಗೆ ತಪ್ಪದೇ ನಿಮ್ಮ ಮೆಚ್ಚಿನ ಉದಯ ಟಿವಿ ವೀಕ್ಷಿಸಿ. 'ಮಾಸ್ಟರ್ ಪೀಸ್' ಟಿವಿ ಪ್ರೀಮಿಯರ್ ಶೋನ ಹೊಸ ಪ್ರೋಮೋ ವಿಡಿಯೋ ಇಲ್ಲಿದೆ ನೋಡಿ....

Annange Love Aagidhe with Shanvi Srivastava... "Master Piece" Nimma Yash Baruthidane this #Ugadi Festival April 8th at 7pm on Udaya Television

Posted by Udaya Television on Tuesday, April 5, 2016

More from Filmibeat

English summary
The directorial debut of Manju Mandavya's 'Masterpiece', starring Yash and Shanvi Srivastava, will be telecasted on TV. It is the biggest TV premiere movie that is happening on April 8th as a treat to festival to all the Kannada audiences for the Ugadi festival. The action movie will be telecasted in Udaya TV, entertainment channel, at 7 PM.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X