ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?

Recommended Video

Weekend With Ramesh Season 4: ಚೆನ್ನೈನಲ್ಲಿ ಭೇಟಿಯಾಗಿದ್ರು ಬಿರಾದಾರ್ ಮತ್ತು ರಾಜ್ | FILMIBEAT KANNADA

ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಬಿರಾದರ್ ಅವರು ಸಿನಿಮಾದಲ್ಲಿ ನಟಿಸಬೇಕೆಂಬ ಆಸೆಯಿಂದ ಬೆಂಗಳೂರಿಗೆ ಬಂದರು. ಕೈಯಲ್ಲಿ ದುಡ್ಡಿಲ್ಲ, ಬೆಂಗಳೂರಿನಲ್ಲಿ ಯಾರ ಪರಿಚಯವೂ ಇಲ್ಲ. ಆದರೂ ದೇವರ ಮೇಲೆ ಭಾರ ಹಾಕಿ ಬಂದೇ ಬಿಟ್ಟರು.

ಡಾ ರಾಜ್ ಕುಮಾರ್ ಅವರು ನಾಲ್ಕನೇ ಕ್ಲಾಸ್ ಓದಿ ಸಾಧಿಸಿದ್ದಾರೆ, ನಾನು ನಾಲ್ಕನೇ ಕ್ಲಾಸ್ ಅಷ್ಟೇ ಓದಿರುವುದು ಎಂಬ ಆತ್ಮವಿಶ್ವಾಸದಿಂದ ಬೆಂಗಳೂರಿನ ಬಸ್ ಹತ್ತಿದರು. ಅದೃಷ್ಟವಶಾತ್ ಅಂದ್ರೆ ಬಿರಾದರ್ ಬಳಿ ರಜನಿಕಾಂತ್, ವಿಷ್ಣುವರ್ಧನ್, ಡಾ ರಾಜ್ ಕುಮಾರ್ ಅವರ ಮನೆ ವಿಳಾಸವಿತ್ತು.

ಮೊದಲು ರಜನಿಕಾಂತ್ ಮನೆ ಬಳಿ ಹೋಗ್ತಾರೆ. ಆದರೆ ರಜನಿಕಾಂತ್ ಅವರು ಶೂಟಿಂಗ್ ಕಾರಣದಿಂದ ಚೆನ್ನೈಗೆ ಹೋಗಿರುತ್ತಾರೆ. ಆಮೇಲೆ ವಿಷ್ಣುವರ್ಧನ್ ಮನೆ ಹತ್ರಾ ಹೋಗ್ತಾರೆ, ವಿಷ್ಣು ಕೂಡ ಆಗತಾನೆ ಮನೆಯಿಂದ ಹೊರಗೆ ಹೋಗಿರ್ತಾರೆ. ನಂತರ ಅಣ್ಣಾವ್ರನ್ನ ನೋಡಲೇಬೇಕು ಎಂಬ ಗುರಿಯಿಂದ ಚೆನ್ನೈಗೆ ಬಸ್ ಹತ್ತುತ್ತಾರೆ. ಮುಂದೆ ಏನ್ ಆಯ್ತು? ಮುಂದೆ ಓದಿ.....

ಅಣ್ಣಾವ್ರಿಗಾಗಿ ಕಾದು ಕುಂತ ಬಿರಾದರ್

ಅಣ್ಣಾವ್ರಿಗಾಗಿ ಕಾದು ಕುಂತ ಬಿರಾದರ್

ಹೇಗೋ ಸಾಹಸ ಮಾಡಿ ಚೆನ್ನೈನಲ್ಲಿದ್ದ ಡಾ ರಾಜ್ ಕುಮಾರ್ ಅವರ ಮನೆ ಬಳಿ ಹೋದ ಬಿರಾದರ್ ಗೆ ಅಣ್ಣಾವ್ರು ಸಿಗಲಿಲ್ಲ. ವಾಚ್ ಮ್ಯಾನ್ ಕೂಡ ಮನೆ ಒಳಗೆ ಬಿಡಲಿಲ್ಲ. ಶೂಟಿಂಗ್ ಗೆ ಹೋಗಿದ್ದಾರೆ, ಸಂಜೆ ಬರ್ತಾರೆ ಎಂದಿದ್ದ. ಸರಿ ಅಣ್ಣಾವ್ರು ಬರೋವರಿಗೂ ಕಾಯೋಣ ಎಂದು ಮನೆ ಮುಂದಯೇ ಕಾದು ಕುಂತಿದ್ದರು ಬಿರಾದರ್.

ರಾಜ್ ನೋಡಿ ಅಣ್ಣಾ.....ಎಂದು ಕೂಗಿದರು

ರಾಜ್ ನೋಡಿ ಅಣ್ಣಾ.....ಎಂದು ಕೂಗಿದರು

ಊಟ, ನೀರು ಕುಡಿಯದೇ, ಆ ಕಡೆ ಈ ಕಡೆ ಹೋದಾಗ ಅಣ್ಣಾವ್ರು ಬಂದುಬಿಟ್ಟರೇ ಎಂಬ ಕಾರಣಕ್ಕಾಗಿ ಎಲ್ಲೋ ಎದ್ದು ಹೋಗದೇ ಸಂಜೆವರೆಗೂ ಅಲ್ಲೆ ಕುಳಿತಿದ್ದರು. ಅಣ್ಣಾವ್ರು ಬಂದರು. ರಾಜ್ ಅವರನ್ನ ನೋಡಲು ಒಳಗೆ ಹೋಗಲು ಪ್ರಯತ್ನಿಸಿದ ಬಿರಾದರ್ ಅವರನ್ನ ವಾಚ್ ಮ್ಯಾನ್ ಬಿಡಲಿಲ್ಲ. ಆಗ ಜೋರಾಗಿ ಅಣ್ಣಾ.....ಬೆಂಗಳೂರಿಂದ ಬಂದಿದ್ದೇನೆ ಎಂದಾಗ, ರಾಜ್ ಕೇಳಿಸಿಕೊಂಡು 'ಒಳಗೆ ಬಿಡಿ...' ಎಂದು ಸೂಚಿಸಿದರು.

ನಟಿಸಬೇಕು ಎಂದು ಕೇಳಿದ ಬಿರಾದರ್

ನಟಿಸಬೇಕು ಎಂದು ಕೇಳಿದ ಬಿರಾದರ್

ಯಾರು ನೀನು, ಇಲ್ಲಿಗೆ ಯಾಕೆ ಬಂದೆ ಎಂದು ಅಣ್ಣಾವ್ರು ಕೇಳಿದರು. ನಾನು ನಾಟಕ ಕಲಾವಿದ, ಸಿನಿಮಾದಲ್ಲಿ ಆಕ್ಟ್ ಮಾಡಬೇಕು ಎಂದು ಬಿರಾದರ್ ಹೇಳಿದರು. ಸರಿ ಒಂದು ವಾರದ ಬಳಿಕ ಬೆಂಗಳೂರಿನ ಕಂಠೀರವ ಸ್ಟುಡಿಯೋಗೆ ಶೂಟಿಂಗ್ ಮಾಡಲು ಬರ್ತೀವಿ. ಅಲ್ಲಿಗೆ ಬಾ ಎಂದರು. ಆದರೆ, ಬಿರಾದರ್ ಅವರು ಇಲ್ಲ ಅಣ್ಣಾ, ನಾನು ನಿಮ್ಮ ಮನೆಯಲ್ಲೇ ಇರ್ತೀನಿ ಎಂದು ಹಠ ಹಿಡಿದರು.

ದುಡ್ಡು ಕೊಟ್ಟು ಕಳುಹಿಸಿದರು

ದುಡ್ಡು ಕೊಟ್ಟು ಕಳುಹಿಸಿದರು

ಕಲಾವಿದರು ಮನೆಯಲ್ಲಿ ಇರಬಾರದು. ಆಕ್ಟ್ ಮಾಡಬೇಕು. ನೀನು ಈಗ ಹೋಗು, ನಾವು ಬೆಂಗಳೂರಿಗೆ ಬಂದಾಗ ಬಂದು ಭೇಟಿ ಮಾಡು ಎಂದರು. ಬಸ್ ಗೆ ಹೋಗಲು ಹಣ ಕೂಡ ಇರಲಿಲ್ಲ. ಅಣ್ಣಾವ್ರ ಬಳಿ ಕೇಳಿದಕ್ಕೆ ಮೂವತ್ತು ರೂಪಾಯಿ ನೀಡಿದರು. ಅದನ್ನ ಪಡೆದು ಬೆಂಗಳೂರಿಗೆ ಬಂದ ಬಿರಾದರ್ ಗೆ ಕಂಠೀರವ ಸ್ಟುಡಿಯೋ ಎಲ್ಲಿದೆ ಎಂಬುದು ಕೂಡ ಗೊತ್ತಿರಲಿಲ್ಲ. ಸೋ, ಹೀಗಾಗಿ ಊರಿಗೆ ವಾಪಸ್ ಹೋದರು.

More from Filmibeat

English summary
Kannada actor biradar met Kannada legendary actor Dr Rajkumar first time at chennai in the stage of thayige thakka maga
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X