ಕಷ್ಟದ ದಿನದಲ್ಲಿ ಉಪೇಂದ್ರ - ಬಿರಾದರ್ ನಡುವೆ ಆಗಿತ್ತು ಈ ಒಪ್ಪಂದ
Recommended Video
'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಹೆಮ್ಮೆಯ ಪೋಷಕ ನಟ, ಹಾಸ್ಯ ಕಲಾವಿದ ವೈದ್ಯನಾಥ್ ಬಿರಾದರ್ ಬಂದಿದ್ದರು. ಈ ವೇಳೆ ಚಿತ್ರರಂಗದ ತಮ್ಮ ಹಿಂದಿನ ಅನೇಕ ನೆನಪುಗಳನ್ನು ಹಂಚಿಕೊಂಡರು.
ಬಿರಾದರ್ ಜೀವನದ ಅನೇಕ ಕುತೂಹಲಕಾರಿ ಘಟನೆ ಕಾರ್ಯಕ್ರಮದ ಮೂಲಕ ತಿಳಿಯಿತು. ಅದರಲ್ಲಿ ಒಂದು ನಟ, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಬಿರಾದರ್ ನಡುವೆ ಆದ ಒಪ್ಪಂದ.
ಆಗಿನ್ನು ಉಪೇಂದ್ರ ಸಂಭಾಷಣೆ ಹಾಗೂ ಹಾಡು ಬರೆದುಕೊಂಡು ಇದ್ದರು. ಬಿರಾದರ್ ಕೂಡ ಅವಕಾಶಗಳಿಗಾಗಿ ಅಲೆದಾಡುತ್ತಿದ್ದರು. ಹೀಗಿರುವಾಗ ಒಮ್ಮೆ ಆಕಸ್ಮಿಕವಾಗಿ ಭೇಟಿಯಾದ ಈ ಇಬ್ಬರು ಒಂದು ಒಪ್ಪಂದ ಮಾಡಿಕೊಂಡಿದ್ದರು. ಆ ಬಗ್ಗೆ ಬಿರಾದರ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಂಕೇತ್ ಸ್ಟೂಡಿಯೋದಲ್ಲಿ ಭೇಟಿ
ನಟ ಉಪೇಂದ್ರ ಹಾಗೂ ಬಿರಾದರ್ ಇಬ್ಬರು ಚಿತ್ರರಂಗದಲ್ಲಿ ಆ ವೇಳೆ ಗುರುತಿಸಿಕೊಂಡಿರಲಿಲ್ಲ. ಆಗಾಗಿ, ಒಂದು ಸಣ್ಣ ಅವಕಾಶ ಸಿಗಬೇಕು ಎಂದರೂ ತುಂಬ ಕಷ್ಟ ಪಡಬೇಕಿತ್ತು. ಆಗ ಸಂಕೇತ್ ಸ್ಟೂಡಿಯೋದಲ್ಲಿ ಇಬ್ಬರು ಆಕಸ್ಮಿಕವಾಗಿ ಭೇಟಿ ಮಾಡಿದರು. ''ನಮಸ್ಕಾರ ನಾನು ಉಪೇಂದ್ರ, ಗುರುರಾಜ್ ಹೊಸಕೋಟೆ ಅವರ ತಂಡದಲ್ಲಿ ನಿಮ್ಮನ್ನು ನೋಡಿದ್ದೇನೆ'' ಎಂದು ಇಬ್ಬರ ಪರಿಚಯ ಶುರು ಆಯ್ತು.

ಬಿರಾದರ್ - ಉಪ್ಪಿ ನಡುವೆ ಒಪ್ಪಂದ
ಆಗ ಸಮಯದಲ್ಲಿ ಉಪೇಂದ್ರ ಮತ್ತು ಬಿರಾದರ್ ಒಂದು ಒಪ್ಪಂದ ಮಾಡಿಕೊಂಡರು. ''ನಾನು ಕೆಲ ನಿರ್ದೇಶಕರ ಜೊತೆಗೆ ಕೆಲಸ ಮಾಡುತ್ತಿದ್ದೇನೆ ಅಲ್ಲಿ ನಟರ ಅಗತ್ಯ ಇದ್ದರೆ ನಿಮಗೆ ತಿಳಿಸುತ್ತೇನೆ. ನೀವು ಮಾಡುವ ಸಿನಿಮಾಗಳಲ್ಲಿ ರೈಟರ್ ಬೇಕಾಗಿದ್ದರೆ ನನಗೆ ಹೇಳಿ'' ಎಂದು ಪರಸ್ಪರ ಇಬ್ಬರು ಮಾತನಾಡಿಕೊಂಡಿದ್ದರು.

ಕಾಶೀನಾಥ್ ಚಿತ್ರದಲ್ಲಿ ಒಂದಾದ ಉಪ್ಪಿ - ಬಿರಾದರ್
ಒಂದು ನಾಟಕದಲ್ಲಿ ಬಿರಾದರ್ ನಟನೆ ನೋಡಿದ್ದ ಕಾಶೀನಾಥ್, ಅವರಿಗೆ ತಮ್ಮ 'ಅಜಗಜಾಂತರ' ಸಿನಿಮಾದಲ್ಲಿ ಒಂದು ಸಣ್ಣ ಪಾತ್ರ ನೀಡಿದ್ದರು. ಆ ದೃಶ್ಯವನ್ನು ಉಪೇಂದ್ರ ಇನ್ನು ಚೆನ್ನಾಗಿ ಮಾಡುವ ಸಲಹೆ ನೀಡಿದ್ದರು. ಬಿರಾದರ್ ಹಾಗೂ ಉಪ್ಪಿ ಕಾಂಬಿನೇಶನ್ ನಿಂದ ಆ ದೃಶ್ಯ ತುಂಬ ಚೆನ್ನಾಗಿ ಮೂಡಿ ಬಂತು.

ಕಾರ್ಯಕ್ರಮದಲ್ಲಿ ಬಿರಾದರ್ ಬಗ್ಗೆ ಉಪ್ಪಿ ಮಾತು
ಬಿರಾದರ್ ಅವರ ಬಗ್ಗೆ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಉಪೇಂದ್ರ ಮಾತನಾಡಿದರು. ''ನಾನು ಅವರಿಗೆ ಪರಿಚಯ ಆಗುವ ಮೊದಲೇ ಅವರ ಬಗ್ಗೆ ನನಗೆ ಗೊತ್ತಿತ್ತು. ಗುರುರಾಜ್ ಹೊಸಕೋಟೆ ಅವರ ತಂಡದಲ್ಲಿ ಅವರು ಇದ್ದರು. ಅವರಿಗೆ ನಿರ್ದೇಶನ ಮಾಡುವ ಅವಕಾಶ ಕೂಡ ನನಗೆ ಸಿಕ್ಕಿದೆ. ರಾಷ್ಟ್ರ ಪ್ರಶಸ್ತಿ ಪಡೆದ ಅವರು ಸಾಧಕರ ಸೀಟ್ ಮೇಲೆ ಕೂರಲು ನಿಜವಾದ ಅರ್ಹತೆ ಹೊಂದಿದ್ದಾರೆ'' ಎಂದರು ಉಪ್ಪಿ


Click it and Unblock the Notifications











