ಚಂದ್ರಿಕಾ ಬಾಳಿನಲ್ಲಿ ನಡೆದ ಒಂದು ಕಹಿ ಘಟನೆ
ನಿಕಿತಾ ಅವರಿಗೆ ಭಾಷೆಯೇ ಅಂಗವೈಕಲ್ಯ. ಹಾಗಾಗಿ ಬಿಗ್ ಬಾಸ್ ಅವರ ಕಡೆಗೆ ಒಂದು ಹಿಡಿ ಅನುಕಂಪವನ್ನು ಹೆಚ್ಚಾಗಿಯೇ ತೋರಿಸಿದ್ದಾರೆ ಅಷ್ಟೇ. ಆದಷ್ಟು ಕನ್ನಡ ಭಾಷೆಯನ್ನು ಕಲಿಯಲಿ ಎಂಬ ಉದ್ದೇಶದಿಂದಲೇ ಹೊರತು ಇನ್ನೇನು ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಚಂದ್ರಿಕಾ ಅವರು ತಮ್ಮ ಹಳೆಯ ಕಹಿ ಘಟನೆಯೊಂದನ್ನೂ ನೆನೆದರು. ಅತ್ತೆ ಮಾವಂದಿರ ಜೊತೆ ಇದ್ದಾಗ ಒಮ್ಮೆ ತನ್ನ ಮಗ ಜ್ವರದಿಂದ ಬಳಲುತ್ತಿದ್ದ. ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹಿಂತಿರುಗಿದಾಗ ನಮ್ಮ ಅತ್ತೆ ಮಾವಂದಿರು ನನ್ನ ಮತ್ತು ನನ್ನ ಮಗನ ಬಟ್ಟೆ ಸಾಮಗ್ರಿಗಳನ್ನು ರಸ್ತೆಗೆ ಎಸೆದಿದ್ದರು.

ನಾನು ಇರುವುದೇ ಹೀಗೆ. ನನ್ನ ತನವನ್ನು ನಾನು ಎಂದು ಬಿಟ್ಟುಕೊಟ್ಟವನಲ್ಲ. ಬಿಗ್ ಬಾಸ್ ನನಗೆ ಒಂದು ಅವಕಾಶ ಕೊಟ್ಟಿದೆ. ಇಲ್ಲಿಂದ ಹೊರಹೋದರೂ ನನ್ನ ಈ ಮುಖವೇ ಸಾಗರ ಇದ್ದಂತೆ. ಇದನ್ನು ಈಜಲು ಬಾಯಿಯ ಹರಿಗೋಲು ಉಪಯೋಗಿಸಿ ಈಜುತ್ತಾ ಹೋಗುತ್ತೇನೆ ಎಂದರು.
ಇನ್ನು ನರೇಂದ್ರ ಬಾಬು ಶರ್ಮಾ ಅವರ ಬಗ್ಗೆಯೂ ಸುದೀಪ್ ಈ ಬಾರಿ ಸ್ವಲ್ಪ ಕೆಣಕಿದರು. ಗುರುಗಳೇ ತಾವು ಹಾಕಿದ್ದ ಆನೆ ವೇಷ ಸೂಪರ್ ಆಗಿತ್ತು. ನಿಮ್ಮನ್ನು ನೋಡಿರುವ ಪುಟ್ಟ ಮಕ್ಕಳೆಲ್ಲಾ ನನಗೆ ಅದೇ ತರಹದ ಆನೆ ಬೇಕು ಎಂದು ಹಠ ಹಿಡಿದಿದ್ದಾರೆ ಎಂದು ಜೋಕ್ ಮಾಡಿದರು.


Click it and Unblock the Notifications











