ಹಣಕ್ಕಾಗಿ ಅರೆ ಬೆತ್ತಲೆ ಫೋಟೊ ; ಬಿಗ್ ಬಾಸ್ ಸ್ಫರ್ಧಿ ವಿರುದ್ದ ದೂರು ದಾಖಲು

ಹೇಳಿ ಕೇಳಿ ಇದು ಕಲರ್‌ಫುಲ್ ಲೋಕ. ಈ ಲೋಕದಲ್ಲಿ ಎಲ್ಲವೂ ರಂಗು ರಂಗಾಗಿರಬೇಕು. ಇಂತಹ ಪ್ರಪಂಚದಲ್ಲಿ ಭದ್ರವಾಗಿ ನೆಲೆಯೂರಬೇಕು ಅಂದರೆ, ಸಾಧ್ಯವಾದಷ್ಟು ಕಡಿಮೆ ಬಟ್ಟೆಯನ್ನು ಧರಿಸಬೇಕು, ಮೈಮಾಟವನ್ನು ಪ್ರದರ್ಶನಕ್ಕೆ ಇಡಬೇಕು ಅನ್ನುವ ಕಲ್ಪನೆ ಅನೇಕ ನಾಯಕಿಯರಲ್ಲಿದೆ. ಇನ್ನೂ ಇದು ಸೊಶಿಯಲ್ ಮೀಡಿಯಾ ಕಾಲ. ಈ ''5G'' ಕಾಲದಲ್ಲಿ ಬಟ್ಟೆ ಬಿಚ್ಚುವುದು.. ಫೋಟೊಗೆ ಪೋಸು ಕೊಡುವುದು.. ಈಗೀಗ ತೀರಾ ಕಾಮನ್ ಆಗಿ ಬಿಟ್ಟಿದೆ.

ಎಲ್ಲವೂ ಶೀಘ್ರವಾಗಿಯೇ ಆಗಬೇಕೆಂಬ ಹುಂಬತನದಲ್ಲಿ ಜನ ಕೂಡ ತಮ್ಮ ''ಬೆತ್ತಲೆ'' ರೂಪ ನೋಡಲು ಬಯಸುತ್ತಾರೆ ಎಂದು ತಪ್ಪು ತಿಳಿದುಕೊಳ್ಳುವ ಸಾಕಷ್ಟು ಮಂದಿ ಇಂತಹ ಕುಕೃತ್ಯಗಳನ್ನು ಎಗ್ಗಿಲ್ಲದೇ ಸಿಗ್ಗಿಲ್ಲದೇ ಮಾಡುತ್ತಲೇ ಇರುತ್ತಾರೆ. ಆ ಪೈಕಿ ವಿಷ್ಣು ಪ್ರಿಯಾ ಕೂಡ ಒಬ್ಬರು ಎನ್ನುವುದು ಸದ್ಯದ ಆರೋಪ.

Bold Photos Big Trouble Criminal Case Filed Against Anchor Vishnu Priya

ಹೌದು, ವಿಷ್ಣುಪ್ರಿಯಾ.. ಪಕ್ಕದ ಆಂಧ್ರದ ಪ್ರಖ್ಯಾತ ನಿರೂಪಕಿ. ಈಟಿವಿ ವಾಹಿನಿಯಲ್ಲಿ ಪ್ರಸಾರವಾದ ''ಪೋವೇ ಪೋರಾ'' ಎಂಬ ಕಾರ್ಯಕ್ರಮದ ನಿರೂಪಣೆ ಮಾಡುವ ಮೂಲಕ ಆಂಧ್ರದೆಲ್ಲೆಡೆ ಮನೆ ಮಾತಾದವರು ಇವರು.

''ಯಮದೊಂಗ''.. ''ಶಿವಪ್ಪತಿಗಾರಂ'' ಸೇರಿ ಕೆಲ ಚಿತ್ರಗಳಲ್ಲಿಯೂ ಕೂಡ ಇವರು ಅಭಿನಯಿಸಿದ್ದಾರೆ. ತಮ್ಮ ಮಾತು ಮತ್ತು‌ ಮೈಮಾಟದಿಂದಲೇ ಆಗಾಗ ಸದ್ದು ಮಾಡುವ, ಪಡ್ಡೆ ಹುಡುಗರ ಕಣ್ಣು ಕುಕ್ಕುವ ವಿಷ್ಣುಪ್ರಿಯಾ ತೆಲುಗಿನ ''ಬಿಗ್ ಬಾಸ್'' ಮನೆಗೆ ಕಳೆದ ವರ್ಷ ಹೋಗಿದ್ದರು. ಸೀಸನ್ 8ರಲ್ಲಿ ಭಾಗವಹಿಸಿದ್ದರು. ಹೆಚ್ಚು ಕಡಿಮೆ ಕೊನೆಯವರೆಗೆ ಮನೆಯಲ್ಲಿಯೇ ಉಳಿದು 98 ದಿನಗಳ ನಂತರ ಹೊರ ಬಂದರು.

ಇಂಥಾ ವಿಷ್ಣುಪ್ರಿಯಾ ಕಳೆದ ಕೆಲ ದಿನಗಳಿಂದ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ದೇಹಸಿರಿಯನ್ನು ಧಾರಾಳವಾಗಿ ಪ್ರದರ್ಶನ ಮಾಡುತ್ತಿದ್ದಾರೆ. ಇನ್ನು ಹಲವರಿಗೆ ಗೊತ್ತಿರುವಂತೆ ಇನ್‌ಸ್ಟಾಗ್ರಾಮ್ ಈಗ ಕೇವಲ ಸಾಮಾಜಿಕ ಜಾಲತಾಣ ಮಾತ್ರ ಅಲ್ಲ. ಬಿಸಿನೆಸ್ ಮಾಡೆಲ್ ಕೂಡ ಹೌದು.

399 ರೂಪಾಯಿ ಹಣ ನೀಡಿ ನೀವು ಚಂದಾದಾರರಾದರೆ ಮುಗೀತು. ಬೇರೆ ಯಾರು ನೋಡಿರದ.. ಬೇರೆ ಎಲ್ಲಿಯೂ ಸಿಗದ.. ನಿಮ್ಮ ನೆಚ್ಚಿನ ತಾರೆಯರ ಫೋಟೊಗಳನ್ನು ನೀವು ನೋಡಬಹುದು. ಸದ್ಯ ಈ ''ಸಬ್‌ಸ್ಕ್ರಿಪ್ಶನ್'' ಫೀಚರ್ ನ ಕೆಲವರು ಅರೆಬೆತ್ತಲೆ ಸಂಸ್ಕೃತಿಯನ್ನು ಪೋಷಿಸಲು ಉಪಯೋಗ ಮಾಡುತ್ತಿದ್ದಾರೆ. ಪಡ್ಡೆ ಹುಡುಗರ ದಾರಿ ತಪ್ಪಿಸಿ ದುಡ್ಡು ಮಾಡುತ್ತಿದ್ಧಾರೆ.

Bold Photos Big Trouble Criminal Case Filed Against Anchor Vishnu Priya

ಹೀಗಾಗಿಯೇ ಆತಂಕವನ್ನು ವ್ಯಕ್ತಪಡಿಸಿರುವ ಎಐಎಸ್‌ಎಫ್ (All India Student Federation) ನಾಯಕರು ಸದ್ಯ ವಿಷ್ಣುಪ್ರಿಯಾ ವಿರುದ್ಧ ವಿಜಯವಾಡದ ಸೂರ್ಯಾರಾವ್ ಪೇಟೆ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವಿಷ್ಣುಪ್ರಿಯ ಅವರ ಇತ್ತೀಚಿನ ಸೋಷಿಯಲ್ ಮೀಡಿಯಾ ಚಟುವಟಿಕೆಗಳು ಸಮಾಜದ ನೈತಿಕತೆಯನ್ನು ಹಾಳುಮಾಡುತ್ತಿವೆ ಎಂಬ ಆರೋಪವನ್ನು ಮಾಡಿರುವ ಎಐಎಸ್‌ಎಫ್ ನಾಯಕರು ಹಣಕ್ಕಾಗಿ ವಿಷ್ಣುಪ್ರಿಯಾ ಅರೆ ಬೆತ್ತಲೆ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂಬ ಆರೋಪವನ್ನು ಕೂಡ ಮಾಡಿದ್ದಾರೆ.ಈ ಮೂಲಕ ಯುವಜನತೆ ದಾರಿತಪ್ಪಿಸುತ್ತಿದ್ದಾರೆ ಎಂದಿದ್ದಾರೆ.

ತಮ್ಮ ದೂರಿನಲ್ಲಿ ವಿಷ್ಣುಪ್ರಿಯಾ ಅವರ ಇನ್‌ಸ್ಟಾಗ್ರಾಮ್ ಹಾಟ್ ಶೋ ಕುರಿತು ಕೂಡ ಉಲ್ಲೇಖ ಮಾಡಿರುವ ಎಐಎಸ್‌ಎಫ್‌ನ ರಾಜ್ಯ ಉಪಾಧ್ಯಕ್ಷ ಎಂ. ಸಾಯಿ ಕುಮಾರ್ , ವಿಷ್ಣುಪ್ರಿಯಾ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ಕೂಡಲೇ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಕ್ರಿಮಿನಲ್ ಪ್ರಕರಣ ದಾಖಲಿಸುವಂತೆಯೂ ಮನವಿ ಮಾಡಿದ್ದಾರೆ.

ವಿಜಯವಾಡ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದು, ವಿಷ್ಣುಪ್ರಿಯ ಅವರ ಈ ಕೆಲಸದಿಂದ ಐಟಿ ಕಾಯ್ದೆಯ (IT Act) ನಿಯಮದ ಉಲ್ಲಂಘನೆ ಆಗುತ್ತಿದೆಯಾ ಎಂದು ಪರಿಶೀಲನೆ ನಡೆಸುತ್ತಿದ್ದಾರೆ. ಅಂದ್ಹಾಗೇ ವಿಷ್ಣುಪ್ರಿಯಾ ಅವರಿಗೆ 1892 ಚಂದಾದಾರರಿದ್ದಾರೆ. ಇವರೆಲ್ಲ ಪ್ರತಿ ತಿಂಗಳು ₹399 ರೂಪಾಯಿಯನ್ನು ವಿಷ್ಣುಪ್ರಿಯಾ ಅವರಿಗೆ ನೀಡುತ್ತಿದ್ಧಾರೆ.

More from Filmibeat

English summary
"Why is Vishnu Priya in legal trouble? From paid subscriptions to a formal police complaint, discover why the famous anchor’s recent bold photos have sparked a criminal investigation and a demand for a social media ban."
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X