ನಟಿ ಗೀತಾ ಭಾರತಿ ಭಟ್‌ ತೂಕ ಇಳಿಸಿಕೊಳ್ಳಲು ಏನೆಲ್ಲಾ ಕರಸತ್ತು ಮಾಡ್ತಿದ್ದಾರೆ ಗೊತ್ತಾ?

ಬ್ರಹ್ಮಗಂಟು ಧಾರಾವಾಹಿಯ ನಟಿ ಗೀತಾ ಭಾರತಿ ಭಟ್ ಈಗ ಫುಲ್ ಫೇಮಸ್ ಆಗಿದ್ದಾರೆ. ಕಾರಣಾಂತರಗಳಿಂದ ಗೀತಾ ಅವರು ದಪ್ಪಗಾಗಿದ್ದರು. ಇದರಿಂದ ನೋಡುಗರೆಲ್ಲರೂ ಯಾಕೆ ಅಷ್ಟೊಂದು ದಪ್ಪಗಿದ್ದಾರೆ? ಸಣ್ಣಗಾಗಲು ಪ್ರಯತ್ನಪಟ್ಟಿಲ್ವಾ? ಅವರು ಆ ರೀತಿ ಮಾಡಿ ಸಣ್ಣಗಾಗಬಹುದಿತ್ತು, ಈ ತರ ಡಯೆಟ್ ಮಾಡಿದರೆ ಸಣ್ಣಗಾಗುವುದು ಸುಲಭ ಎಂದು ಗೀತಾ ಅವರಿಗೆ ಬಿಟ್ಟಿ ಸಲಹೆಯನ್ನೂ ಕೊಡುತ್ತಿದ್ದರು.

ಆದರೆ ಈಗ ಅವೆಲ್ಲವನ್ನು ಪಕ್ಕಕ್ಕಿಟ್ಟು ಗೀತಾ ಅವರು ತುಂಬಾ ಸ್ಪೋರ್ಟೀವ್ ಆಗಿ ತಮ್ಮ ಆರೋಗ್ಯಕ್ಕೋಸ್ಕರ ಅನೇಕ ವರ್ಷಗಳ ಬಳಿಕ ಸಣ್ಣಗಾಗಲು ನಿರ್ಧಾರ ಮಾಡಿದ್ದಾರೆ. ಇದು ಗೀತಾ ಅವರ ಹಲವು ವರ್ಷಗಳ ಕನಸು. ಕಳೆದ ಹತ್ತು ತಿಂಗಳಿಂದ ಸತತ ಪ್ರಯತ್ನ ಪಡುತ್ತಿದ್ದಾರೆ.

ಜಂಕ್ ಫುಡ್ ನಿಂದ ಹಿಡಿದು ತಮ್ಮ ಜೀವನ ಶೈಲಿಯನ್ನು ಸಂಪೂರ್ಣವಾಗಿ ಬದಲಿಸಿಕೊಂಡಿದ್ದಾರೆ. ಊಟ, ತಿಂಡಿ, ನಿದ್ದೆ ಎಲ್ಲವನ್ನೂ ಬದಲಿಸಿಕೊಂಡಿದ್ದು, ಸಣ್ಣಗಾಗುವ ದಾರಿಯಲ್ಲಿದ್ದಾರೆ. ಇದೀಗ ಅವರು ಮೊದಲಿಗಿಂತ ಕೊಂಚ ತೆಳ್ಳಗಾಗಿದ್ದಾರೆ.

ಗೀತಾ ಭಾರತಿ ಭಟ್‌ರದ್ದು ಸ್ಟ್ರಿಕ್ಟ್ ಡಯೆಟ್

ಗೀತಾ ಭಾರತಿ ಭಟ್‌ರದ್ದು ಸ್ಟ್ರಿಕ್ಟ್ ಡಯೆಟ್

ಗೀತಾ ಭಾರತಿ ಭಟ್ ಅವರು ಡಯೆಟಿಷಿಯನ್ ಸಲಹೆ ಮೇರೆಗೆ ಡಯೆಟ್ ಮಾಡುತ್ತಿದ್ದಾರೆ. ಇದರಿಂದ ತಮ್ಮ ಆರೋಗ್ಯ ಸುಧಾರಿಸಿಕೊಳ್ಳಲು ಮುಂದಾಗಿದ್ದಾರೆ. ಇದು ಬಹಳ ಉದ್ದದ ಜರ್ನಿ, ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಸ್ವತಃ ಅವರೇ ಹೇಳಿದ್ದಾರೆ. ಕಳೆದ 10 ತಿಂಗಳಿನಿಂದ ವರ್ಕೌಟ್, ಡಯೆಟ್ ಮಾಡಿರೋದರಿಂದ ಗೀತಾ ಅವರು ಈಗ ತುಂಬ ಲೈಟ್ ಆಗಿ ಫೀಲ್ ಆಗಲು ಶುರುವಾಗಿದೆಯಂತೆ. ಜೀವನ ಶೈಲಿ ಒಳ್ಳೆಯ ರೀತಿಯಲ್ಲಿ ಕೂಡ ಬದಲಾಗಿದೆ ಎಂದು ಹೇಳಿದ್ದಾರೆ.

ಗುಂಡಮ್ಮ ಎಂದು ಹೀಯಾಳಿಸುತ್ತಿದ್ದರು

ಗುಂಡಮ್ಮ ಎಂದು ಹೀಯಾಳಿಸುತ್ತಿದ್ದರು

ಗೀತಾ ಭಾರತಿ ಭಟ್ ಅವರು ಕೆಲ ವರ್ಷಗಳ ಹಿಂದೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಗೀತಾ ಎಂಬ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಸೀರಿಯಲ್‌ನಲ್ಲಿದ್ದ ಪಾತ್ರದಂತೆ ಗೀತಾ ಕೂಡ ತುಂಬ ದಪ್ಪಗಿದ್ದರು. ಗೀತಾ ದಪ್ಪ ಇರುವುದಕ್ಕೂ ಕಾರಣವಿತ್ತು. ವಾಲಿಬಾಲ್ ಆಟಗಾರ್ತಿ ಆಗಿದ್ದ ಗೀತಾ ಅವರು ಅಪಘಾತದಿಂದಾಗಿ ಬಹಳ ದಿನ ಹಾಸಿಗೆ ಹಿಡಿಯುವಂತಾಗಿತ್ತು. ಆಗ ಗೀತಾ ಅವರು ತೀರಾ ದಪ್ಪಗಾದರು. ಆರೋಗ್ಯ ಸಮಸ್ಯೆಯನ್ನೂ ಎದುರಿಸಬೇಕಾಯ್ತು. ಗೀತಾ ಅವರು ಕಿರುತೆರೆಗೆ ಕಾಲಿಡುವ ಮುಂಚೆ ಇವರನ್ನು ನೋಡಿ ಹಲವರು ಟೀಕೆ ಮಾಡುತ್ತಿದ್ದರು. ಆದರೆ ತಮ್ಮ ನಟನೆಯಿಂದ ಅವರು ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ.

ಕಿರುತೆರೆಯ ಪ್ರೀತಿಯ ಗುಂಡಮ್ಮನಾದ ಗೀತಾ

ಕಿರುತೆರೆಯ ಪ್ರೀತಿಯ ಗುಂಡಮ್ಮನಾದ ಗೀತಾ

ಸರಿಗಮಪ ಶೋಗೆ ಹಾಡಲು ಬಂದ ಗೀತಾ ಕೊನೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದರಲ್ಲಿ ಅದ್ಭುತವಾಗಿ ನಟಿಸಿ ಎಲ್ಲರ ಮನ ಗೆದ್ದರು. ನಂತರ ಬಿಗ್ ಬಾಸ್ ನಲ್ಲೂ ಭಾಗವಹಿಸಿದರು. ಆದರೆ ಜನ ಗುಂಡಮ್ಮ ಸಣ್ಣಮ್ಮ ಆಗಲಿ ಎಂದು ಪದೇ ಪದೇ ಕಮೆಂಟ್ ಮಾಡುವುದು, ಸಲಹೆ ಕೊಡುವುದು ಮಾಡುತ್ತಿದ್ದರು. ಇದನ್ನೆಲ್ಲಾ ನೋಡಿದ ಗೀತಾ ಅವರು ತಾವೇ ಸಣ್ಣಗಾಗಲು ಮನಸ್ಸು ಮಾಡಿದರು.

ಗುಂಡಮ್ಮ ಅಲ್ಲ..ಸಣ್ಣಮ್ಮ

ಗುಂಡಮ್ಮ ಅಲ್ಲ..ಸಣ್ಣಮ್ಮ

ಯಾರೋ ಏನೋ ಹೇಳ್ತಾರೆ ಅಂತ ಗೀತಾ ಸಣ್ಣಗಾಗಲು ನಿರ್ಧಾರ ಮಾಡಿಲ್ಲ. ಕಳೆದ 10 ತಿಂಗಳಿನಿಂದ ವರ್ಕೌಟ್ ಮಾಡಲು ಪ್ರಾರಂಭಿಸಿದರು. ಜೊತೆಗೆ ಡಯೆಟ್ ಕೂಡ ಮಾಡುತ್ತಿದ್ದಾರೆ. ಸ್ನೇಹಿತರು ಸಿಹಿ, ಪಾನಿಪುರಿ-ಮಸಾಲ್ ಪುರಿ ತಿನ್ನುತ್ತಿದ್ದಾಗ ಗೀತಾಗೂ ಕೂಡ ತಿನ್ನಬೇಕು ಅಂತ ಅನಿಸುತ್ತದೆ. ಆದರೆ ಅವರು ಸಣ್ಣಗಾಗಲೇಬೇಕು ಎಂದು ನಿರ್ಧಾರ ಮಾಡಿರೋದರಿಂದ ಎಲ್ಲ ಜಂಕ್‌ ಫುಡ್‌ಗಳಿಗೂ ಬ್ರೇಕ್ ಹಾಕಿದ್ದಾರೆ. ಹೀಗೆಲ್ಲಾ ಕಷ್ಟಪಟ್ಟ ಗೀತಾ ಅವರು 50 ಕೆಜಿ ತೂಕ ಇಳಿಸಿಕೊಳ್ಳುವ ಟಾರ್ಗೆಟ್ ಇಟ್ಟುಕೊಂಡಿದ್ದರು. ಇದೀಗ ಅರ್ಧ ದಾರಿ ಬಂದಿದ್ದಾರೆ. ಅಂದರೆ 25 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಟಾರ್ಗೆಟ್ ಕಂಪ್ಲೀಟ್ ಮಾಡಲಿದ್ದಾರೆ.

More from Filmibeat

English summary
Brahma gantu serial Actress Geetha bharathi bhat Weight Loss Journey. Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X