ಸದ್ದಿಲ್ಲದೇ ಸಪ್ತಪದಿ ತುಳಿದ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್ ; ಹುಡುಗ ಯಾರು ಗೊತ್ತಾ ?

ಮದುವೆ ಎನ್ನುವುದು ನಿರಂತರ ಕಲಿಕೆಯ ಪ್ರಕ್ರಿಯೆ. ಬದ್ದತೆ, ಹೊಂದಾಣಿಕೆ, ಸಂತೋಷದ ಜೀವನ. ಬದುಕಿನ ಮಹತ್ವದ ಹಂತ. ಎರಡು ಜೀವಗಳು ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಕುಗ್ಗದೇ ಜೀವನಪೂರ್ತಿ, ಒಬ್ಬರಿಗೊಬ್ಬರು ಬೆನ್ನೆಲುಬಾಗಿ ಜೊತೆಯಾಗಿ ಇರಬೇಕಾದಂತಹ ಒಂದು ಬಂಧನ. ಇಂತಹ ಬಂಧನಕ್ಕೆ ಈ ವರ್ಷ ಹಲವು ತಾರೆಯರು ಒಳಗಾಗಿದ್ದಾರೆ. ಈ ಸಾಲಿಗೆ ಈಗ ಕನ್ನಡ ಕಿರುತೆರೆಯ ನಾಯಕಿ ಗೀತಾ ಭಾರತಿ ಭಟ್ ಕೂಡ ಸೇರಿಕೊಂಡಿದ್ದಾರೆ.

ಹೌದು, ಗೀತಾ ಭಾರತಿ ಭಟ್ .. ''ಬ್ರಹ್ಮಗಂಟು'' ಧಾರಾವಾಹಿಯ ಮೂಲಕ ಕನ್ನಡಿಗರ ಮನ ಗೆದ್ದ ಚೆಲುವೆ. ಈ ಧಾರಾವಾಹಿಯ ಮೂಲಕ ಗುಂಡಮ್ಮ ಎಂದೇ ಚಿರಪರಿಚಿತರಾದ ಗೀತಾ ಆ ನಂತರ ಬೆಳ್ಳಿತೆರೆಯಲ್ಲಿ ಕೂಡ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ''ಲವ್ ಮಾಕ್ಟೇಲ್'' ಚಿತ್ರದಲ್ಲಿ ಅಭಿನಯಿಸಿದ್ದರು.

BRAHMAGANTU BOND SEALED Geetha Bharati Bhat Marries Rajaram Bhat in Intimate Ceremony

''ಲವ್ ಮಾಕ್ಟೇಲ್'' ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ತೀರಾ ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ನನಗೆ ಇವತ್ತು ಕೂಡ ಪಶ್ಚಾತಾಪ ಇದೆ ಎಂದು ಹೇಳಿದ್ದರು. ಹೂ ತರ ಇದ್ಲು, ಹೂಕೋಸು ತರ ಆಗೋದ್ಲು ಎಂದೆಲ್ಲ ನನ್ನೆದುರೇ ನನ್ನ ದೇಹಾಕೃತಿಯನ್ನು ಹಂಗಿಸಿದರು ಎಂದು ಹೇಳಿ ಭಾವುಕರಾಗಿದ್ದರು. ಇಷ್ಟೇ ಅಲ್ಲ ಸಂತೋಷ್ ಕೋಡಂಕೇರಿ ನಿರ್ದೇಶನದ ''ರವಿಕೆ ಪ್ರಸಂಗ'' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದ ಗೀತಾ ಭಟ್ ''ಬಿಗ್ ಬಾಸ್‌'' ಕನ್ನಡ 8ನೇ ಸೀಸನ್‌ನಲ್ಲಿ ಕೂಡ ಭಾಗವಹಿಸಿದ್ದರು. ಇನ್ನು ಗೀತಾ ಭಟ್ ಕೇವಲ ನಟಿ ಮಾತ್ರ ಅಲ್ಲ ಅತ್ಯುತ್ತಮ ಗಾಯಕಿ ಕೂಡ ಹೌದು.

ಇಂಥಾ ಗೀತಾ ಭಾರತಿ ಭಟ್ ಸದ್ಯ ಸದ್ದಿಲ್ಲದೇ ಮದುವೆಯಾಗಿದ್ದಾರೆ. ಬ್ರಹ್ಮಾವರ ರಾಜರಾಮ್ ಭಟ್ ಅವರ ಜೊತೆ ಸಪ್ತಪದಿಯನ್ನು ತುಳಿದಿದ್ದಾರೆ. ಗೀತಾ ಭಾರತಿ ಭಟ್ ಅವರ ಮದುವೆಗೆ ಅವರ ಕುಟುಂಬಸ್ಥರು ಮತ್ತು ಅತ್ಯಾಪ್ತರು ಸಾಕ್ಷಿಯಾಗಿದ್ದಾರೆ.

BRAHMAGANTU BOND SEALED Geetha Bharati Bhat Marries Rajaram Bhat in Intimate Ceremony

ಇನ್ನು ಗೀತಾ ಭಾರತಿ ಭಟ್ ಮತ್ತು ಬ್ರಹ್ಮಾವರ ರಾಜರಾಮ್ ಭಟ್ ಅವರದ್ದು ಲವ್ ಮ್ಯಾರೇಜಾ..? ಅರೆಂಜ್ ಮ್ಯಾರೇಜಾ..? ಇಬ್ಬರು ಮೊದಲು ಭೇಟಿಯಾಗಿದ್ದು ಎಲ್ಲಿ..? ಬ್ರಹ್ಮಾವರ ರಾಜರಾಮ್ ಭಟ್ ಅವರ ಹಿನ್ನೆಲೆ ಏನು..? ಎಂಬ ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸದ್ಯ ಗೊತ್ತಿಲ್ಲವಾದರೂ ಗೀತಾ ಭಟ್ ಅವರ ಈ ಹೊಸ ಬದುಕಿಗೆ ಹಲವರು ಶುಭಾಶಯ ಕೋರುತ್ತಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ನವ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಇನ್ನುಳಿದಂತೆ ಮದುವೆಯ ನಂತರವೂ ಗೀತಾ ಭಾರತಿ ಭಟ್ ಕಿರುತೆರೆಯಲ್ಲಿ ಸಕ್ರಿಯರಾಗಿರುತ್ತಾರಾ..? ತಮ್ಮ ಅಭಿನಯದಿಂದ ಅಭಿಮಾನಿಗಳ ಮನತಣಿಸುತ್ತಾರಾ ಎನ್ನುವ ಪ್ರಶ್ನೆಗೆ ಕೂಡ ಉತ್ತರ ಇನ್ನೂ ಸಿಗಬೇಕಿದೆ. ತಮ್ಮ ಅಭಿಮಾನಿಗಳಿಗೆ ಕಾಡುತ್ತಿರುವ ಈ ಎಲ್ಲ ಪ್ರಶ್ನೆಗಳಿಗೆ ಗೀತಾ ಭಾರತಿ ಭಟ್ ಶೀಘ್ರದಲ್ಲಿಯೇ ಉತ್ತರ ಕೊಡುವ ನಿರೀಕ್ಷೆ ಇದೆ.

More from Filmibeat

English summary
Brahmagantu fame Geetha Bharati Bhat ties the knot! Don't miss the photos and details of the actress's wedding to Bramavara Rajaram Bhat in an intimate event.
Read more about: marriage wedding ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X