ಮತ್ತೆ ಗುಂಡಮ್ಮನಾದ ನಟಿ ಗೀತಾ ಭಾರತಿ ಭಟ್ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿ
'ಬ್ರಹ್ಮಗಂಟು' ಧಾರಾವಾಹಿಯ ನಟಿ ಗೀತಾ ಭಾರತಿ ಭಟ್ ಈಗ ಸ್ಯಾಂಡಲ್‌ವುಡ್‌ನಲ್ಲಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ.
ಸೂಪರ್ ಹಿಟ್ 'ಬ್ರಹ್ಮಗಂಟು' ಧಾರಾವಾಹಿ ಹಾಗೂ 'ಸೂಪರ್ ಕ್ವೀನ್' ರಿಯಾಲಿಟಿ ಶೋ ಮೂಲಕ ಚಿರಪರಿಚಿತರಾಗಿರುವ ನಟಿ ಗೀತಾ ಭಾರತಿ ಭಟ್ ಈಗ ಸ್ಯಾಂಡಲ್‌ವುಡ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಆಸೆಯಿಂದ ಕಿರುತೆರೆಗೆ ಎಂಟ್ರಿಕೊಟ್ಟು, ಕೊನೆಗೆ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡು ಗೀತಾ, ದಪ್ಪಗಿದ್ದರೂ ಕೂಡ ಎಲ್ಲರ ಗಮನ ಸೆಳೆದಿದ್ದರು.
ತೂಕ ಇಳಿಸಿಕೊಂಡಿದ್ದ ನಟಿ
ಗೀತಾ ಬಾಸ್ಕೆಟ್ ಬಾಲ್ ಪ್ಲೇಯರ್ ಆಗಿದ್ದರು. ಕಾರಣಾಂತರಗಳಿಂದ ಆಕೆ ದಪ್ಪಗಾಗಿದ್ದರು. ಸಣ್ಣಗಾಗಬೇಕು ಎಂದು ತೀರ್ಮಾನಿಸಿ ಒಂದೂವರೆ ವರ್ಷ ವರ್ಕೌಟ್ ಮಾಡಿದರು. ಡಯೆಟಿಷಿಯನ್ ಸಲಹೆ ಮೇರೆಗೆ ಡಯೆಟ್ ಮಾಡಿ ತಮ್ಮ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿದ್ದರು. ವರ್ಕೌಟ್, ಡಯೆಟ್ ಮಾಡಿರೋದರಿಂದ ಗೀತಾ ಜೀವನ ಶೈಲಿ ಒಳ್ಳೆಯ ರೀತಿಯಲ್ಲಿ ಕೂಡ ಬದಲಾಗಿತ್ತು. ಗೀತಾ ಅವರು 50 ಕೆಜಿ ತೂಕ ಇಳಿಸಿಕೊಳ್ಳುವ ಟಾರ್ಗೆಟ್ ಇಟ್ಟುಕೊಂಡಿದ್ದರು. 30 ಕೆಜಿ ತೂಕ ಇಳಿಸಿಕೊಂಡಿರುವ ಬಗ್ಗೆ ಅವರೇ ಮಾಹಿತಿ ನೀಡಿದ್ದರು.
ಮತ್ತೆ ದಪ್ಪಗಾದ ಗೀತಾ
ಇದೀಗ ಗೀತಾ ಮತ್ತೆ ದಪ್ಪಗಾಗಿದ್ದಾರೆ. ಆಕೆ ಸಂಕ್ರಾಂತಿ ಹಬ್ಬಕ್ಕೆ ಸೀರೆಯಲ್ಲಿ ಮಿಂಚಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ ಫೋಟೋಗಳನ್ನು ನೋಡಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ. ವರ್ಕೌಟ್ ಎಲ್ಲಾ ಸ್ಟಾಪ್ ಮಾಡಿ ಮತ್ತೆ ದಪ್ಪ ಆಗಿದ್ದೀರಾ..? ಯಾಕೆ ವರ್ಕೌಟ್, ಡಯಟ್ ಎಲ್ಲಾ ಏನಾಯ್ತು ಎಂದು ಪ್ರಶ್ನಿಸಿದ್ದಾರೆ. ಆದರೆ, ಗೀತಾ ಮತ್ತೆ ದಪ್ಪಗಾಗಿರುವುದು ಯಾಕೆ ಎನ್ನುವ ಬಗ್ಗೆ ಆಕೆಯೇ ಸ್ಪಷ್ಟನೆಯನ್ನು ನೀಡಬೇಕಿದೆ.

ಸ್ಯಾಂಡಲ್‌ನಲ್ಲಿ ನಟಿ ಗೀತಾ
ಗೀತಾ ಅವರು ಕಿರುತೆರೆ ಅಷ್ಟೇ ಅಲ್ಲದೇ, ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಸಿನಿಮಾ ಒಂದಕ್ಕೆ ಬಣ್ಣ ಹಚ್ಚಿರುವ ಗೀತಾ, ಇದೀಗ ಅದರ ಟ್ರೈಲರ್ ಕೂಡ ರಿಲೀಸ್ ಆಗಿದೆ. ವರ್ಕೌಟ್ ಜೊತೆಗೆ ಸದ್ದಿಲ್ಲದೇ ಸಿನಿಮಾದಲ್ಲೂ ನಟಿಸಿದ್ದಾರೆ. ಚಿತ್ರದ ಹೆಸರು ಡಿಫರೆಂಟ್ ಆಗಿದೆ. 'ರವಿಕೆ ಪ್ರಸಂಗ' ಎನ್ನುವ ಚಿತ್ರದಲ್ಲಿ ಗೀತಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ನ್ಯಾಷನಲ್ ಇಶ್ಯು ಎಂದು ಟ್ಯಾಗ್ ಲೈನ್ ಕೊಡಲಾಗಿದೆ. ಫೆಬ್ರವರಿ 16 ರಂದು ಸಿನಿಮಾ ರಿಲೀಸ್ ಆಗಲಿದೆ. ಟ್ರೈಲರ್ ಬಹಳ ಕಾಮಿಡಿಯಾಗಿದ್ದು, ಸಿನಿಮಾ ಸಂಪೂರ್ಣವಾಗಿ ಮನರಂಜನೆ ನೀಡುವುದರಲ್ಲಿ ಅನುಮಾನವೇ ಇಲ್ಲ.
ಹೀರೋಯಿನ್ ಆಗಿ ಗೀತಾ
ಸಂತೋಷ್ ಕೋಡೆನ್ಕೇರೆ ನಿರ್ದೇಶನದಲ್ಲಿ 'ರವಿಕೆ ಪ್ರಸಂಗ' ಸಿನಿಮಾ ಮೂಡಿ ಬಂದಿದೆ. ಈ ಚಿತ್ರದಲ್ಲಿ ಸುಮನ್ ರಂಗನಾಥ್, ರಾಕೇಶ್ ಮಯ್ಯ, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕಾಟಾರ್, ಪ್ರವೀಣ್ ಅಥರ್ವ, ರಘು ಪಾದೇಶ್ವರ್, ಕುಶಿ ಆಚಾರ್ ಮತ್ತು ರಾಹು ಪಾದೇಶ್ವರ್ ಸೇರಿದಂತೆ ಹಲವರು ನಟಿಸಿದ್ದಾರೆ. ಇನ್ನು ರವಿಕೆ ವಿಚಾರವಾಗಿ ಕೋರ್ಟ್‌ನಲ್ಲಿ ಧಾವೆ ಹೂಡುವ ಕಥೆ ಇದಾಗಿದ್ದು, ಎಲ್ಲರನ್ನು ನಗಿಸುವ ಕಾಮಿಡಿ ಸಿನಿಮಾ ಎನ್ನಬಹುದು. ಇದರಲ್ಲಿ ಗೀತಾ ಅವರದ್ದು ಲೀಡ್ ರೋಲ್ ಆಗಿದೆ. ಕೇವಲ ಒಂದು ರವಿಕೆಯ ಸುತ್ತ ನಡೆಯುವ ಈ ಕಥೆಯ ಟ್ರೈಲರ್ ನೋಡಲು ಚೆನ್ನಾಗಿದ್ದು, ಇದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.


Click it and Unblock the Notifications











