Brahmagantu: ಹೊಸ ರೂಪದಲ್ಲಿ 'ಬ್ರಹ್ಮಗಂಟು': ಅಕ್ಕನಿಗಾಗಿ ಜೀವ ಸವೆಸುವ ತಂಗಿ ಕಥೆ!
ಜೀ ಕನ್ನಡದಲ್ಲಿ ಈ ಹಿಂದೆ 'ಬ್ರಹ್ಮಗಂಟು' ಎಂಬ ಧಾರಾವಾಹಿ ಬರುತ್ತಿತ್ತು. ಆ ಧಾರಾವಾಹಿಯನ್ನು ಯಾರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಈಗಲೂ ಕಥೆಯೂ ನೆನಪಿದೆ, ನಟಿಯ ಹೆಸರು ಚಾಲ್ತಿಯಲ್ಲಿದೆ. 'ಬ್ರಹ್ಮಗಂಟು' ಎಂದರೆ ಗುಂಡಮ್ಮ ನೆನಪಿಗೆ ಬರುತ್ತಾರೆ. ಇದೀಗ ಅದೇ ಟೈಟಲ್ ಹೊತ್ತು ಮತ್ತೆ ಜೀ ಕನ್ನಡದಲ್ಲಿ ಬರುತ್ತಿದೆ.
ಈ ಹಿಂದಿನ 'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಬಾಹ್ಯ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯದ ಜೊತೆಗೆ ಗುಣದ ಮಹತ್ವವನ್ನು ಸಾರಿದ್ಧರು. ಇದೀಗ ಅದೇ ಹೆಸರಿನಲ್ಲಿ ಅಕ್ಕ-ತಂಗಿಯರ ಕಥೆಯನ್ನು ಹೊತ್ತು ಬರುತ್ತಿದೆ.

ಹೊಸ ಪ್ರೋಮೋ ಬಿಟ್ಟ ಜೀ ಕನ್ನಡ
ಈ ಮೊದಲೇ ಜೀ ಕನ್ನಡದಲ್ಲಿ ಬ್ರಹ್ಮಗಂಟು ಎಂಬ ಧಾರಾವಾಹಿ ಹಲವು ಎಪಿಸೋಡ್ ಗಳಿಂದ ಜನರ ಮನಸ್ಸನ್ನು ಗೆದ್ದಿತ್ತು. ಬಳಿಕ ಸುಖಾಂತ್ಯ ಕಂಡಿತ್ತು. ಇದೀಗ ಮತ್ತೆ ಬ್ರಹ್ಮಗಂಟು ಶುರುವಾಗುತ್ತಿದೆ. ಅದಕ್ಕೆ ಸಂಬಂಧಪಟ್ಟಂತ ಪ್ರೋಮೋ ಒಂದನ್ನು ರಿಲೀಸ್ ಮಾಡಿದೆ. ಹೊಸ ಪ್ರೋಮೋ ನೋಡಿದವರಿಗೆ ಕಥೆಯ ಬಗ್ಗೆ ಒಂದಷ್ಟು ಅಂದಾಜು ಸಿಕ್ಕಿದೆ. ಶೀಘ್ರದಲ್ಲಿಯೇ ಧಾರಾವಾಹಿ ಪ್ರಸಾರವಾಗಲಿದೆ. ಇನ್ನು ಅಧಿಕೃತ ದಿನಾಂಕವನ್ನು ಘೋಷಣೆ ಮಾಡಿಲ್ಲ. ಈಗಾಗಲೇ ಹೊಸ ಧಾರಾವಾಹಿಗಳನ್ನು ಜೀ ಕನ್ನಡ ನೀಡುತ್ತಿದೆ. ಅದರ ನಡುವೆ ಈಗ ಮತ್ತೊಂದು ಧಾರಾವಾಹಿ ಶುರುವಾಗುತ್ತಿದೆ.
ಅಕ್ಕ-ತಂಗಿ ಬಗ್ಗೆ ಜನ ಹೇಳೋದೆ ಬೇರೆ
ಪ್ರೋಮೋ ನೋಡಿದವರಿಗೆ ಇದೊಂದು ತುಂಬು ಕುಟುಂಬದ ಕಥೆ ಎಂಬುದು ಅರ್ಥವಾಗಿದೆ. ಅಪ್ಪ-ಅಮ್ಮ, ಎರಡು ಮುದ್ದಿನ ಹೆಣ್ಣು ಮಕ್ಕಳು. ಅಪ್ಪ-ಅಮ್ಮನಿಗೆ ಇಬ್ಬರು ಒಂದೇ ಸಮ. ಯಾರೂ ಹೆಚ್ಚಲ್ಲ, ಯಾರೂ ಕಡಿಮೆ ಅಲ್ಲ. ಅಕ್ಕ ನೋಡುವುದಕ್ಕೆ ಚೆನ್ನಾಗಿಯೇ ಇದ್ದಾಳೆ. ತಂಗಿಗೆ ಚಿಕ್ಕ ವಯಸ್ಸಿನಲ್ಲಿಯೇ ಕಣ್ಣಿಗೆ ಕನ್ನಡಕ ಬಂದಿದೆ. ಇದು ನೋಡುಗರ ಕಣ್ಣಲ್ಲಿ ಬೇರೆಯ ರೀತಿ ಕಾಣುತ್ತಿದೆ. ಅಕ್ಕ ಬ್ಯೂಟಿಫುಲ್, ತಂಗಿ ಅಷ್ಟಕ್ಕೆ ಅಷ್ಟೇ ಎಂದಿದ್ದಾರೆ. ಜನರ ಬಾಯಿ ಮುಚ್ಚಿಸುವುದು ಕಷ್ಟ ಎಂದು ಎಲ್ಲರಿಗೂ ಗೊತ್ತು. ಹೀಗಾಗಿ ಪೋಷಕರು ಸುಮ್ಮನಾಗಿದ್ದಾರೆ.
ಅಕ್ಕನಿಗಾಗಿ ತಂಗಿಯ ತ್ಯಾಗ
ತಂಗಿ, ಅಕ್ಕನಿಗಾಗಿಯೇ ತ್ಯಾಗ ಮಾಡುತ್ತಾಳೆ. ಅಕ್ಕ ಏನೇ ಕೇಳಿದರು ಇಲ್ಲ ಎನ್ನುವ ಮಾತೇ ಇಲ್ಲ. ಇಬ್ಬರಿಗೂ ಬಟ್ಟೆ ತಂದರೂ ಅಕ್ಕ ಆದವಳು ಎರಡು ಬಟ್ಟೆಯನ್ನು ಮೊದಲು ನಾನೇ ಹಾಕಿಕೊಳ್ಳುತ್ತೇನೆ ಎಂದರು ತಂಗಿಗೆ ಬೇಸರ ಮಾಡಿಕೊಳ್ಳುವುದಿಲ್ಲ. ಅಕ್ಕ ತಾನೇ ಪರವಾಗಿಲ್ಲ ಬಿಡಿ ಎಂದೇ ಸಮಾಧಾನ ಮಾಡಿಕೊಳ್ಳುತ್ತಾಳೆ. ಇದು ಅಕ್ಕನಿಗೆ ಅಹಂ ಉಂಟಾಗುವುದಕ್ಕೆ ಕಾರಣವಾಗಿದೆ. ತಂಗಿಯನ್ನು ಬಂಡವಾಳ ಮಾಡಿಕೊಂಡೆ ಅಕ್ಕ ತನ್ನ ಜೀವನ ಸಾಗಿಸುತ್ತಿದ್ದಾಳೆ. ತಂಗಿಗೆ ಅಕ್ಕ ಎಂದರೆ ಎಷ್ಟು ಇಷ್ಟ ಎಂದರೆ ದೇವರ ಬಳಿಯೂ ಅಕ್ಕನ ಬಗ್ಗೆಯೇ ಬೇಡಿಕೊಳ್ಳುತ್ತಾಳೆ.

ಸಿನಿಮಾ ಕಥೆ ಧಾರಾವಾಹಿಗೆ ತಂದರಾ?
ಈಗಂತೂ ಸಿನಿಮಾಗಳಂತೆ ಧಾರಾವಾಹಿ ಆಗಿ ಹೋಗಿದೆ. ಫೈಟ್, ಸಾಂಗ್ ಅಂತೆಲ್ಲಾ ಅದ್ದೂರಿಯಾಗಿ ಮಾಡುತ್ತಿದ್ದಾರೆ. ಈ ಪ್ರೋಮೋ ನೋಡಿದ ನೆಟ್ಟಿಗರು, ಧಾರಾವಾಹಿಯ ಕಥೆಯನ್ನು ಕಂಡು ಹಿಡಿದಿದ್ದಾರೆ. ಸಿನಿಮಾವನ್ನು ಧಾರಾವಾಹಿಯನ್ನು ಸಿನಿಮಾ ಕಥೆಯೆಂದೇ ಹೇಳುತ್ತಿದ್ದಾರೆ. 'ಸಿನಿಮಾ ಕಥೆಯನ್ನು ಸೀರಿಯಲ್ ಮಾಡ್ತಾವ್ರೆ, ಯಾರೇ ನೀ ಅಭಿಮಾನಿಯನ್ನು ತಂದು ಬ್ರಹ್ಮಗಂಟು ಸೀರಿಯಲ್ ಮಾಡ್ತಾವ್ರೆ, ಈ ಧಾರಾವಾಹಿಗೆ ಹೀರೋ ಯಾರಪ್ಪ, ಅಕ್ಕನ ಗಂಡನನ್ನು ತಂಗಿ ಮದುವೆಯಾಗುತ್ತಾಳೆ, ಆಮೇಲೆ ದ್ವೇಷ ಮುಂದುವರೆಯುತ್ತದೆ. ಇದೇ ಧಾರಾವಾಹಿ ಟ್ವಿಸ್ಟ್' ಅಂತೆಲ್ಲಾ ಕಮೆಂಟ್ ಹಾಕುವ ಮೂಲಕ ಧಾರಾವಾಹಿಯ ಕಥೆಯನ್ನೇ ಹೇಳಿಬಿಟ್ಟಿದ್ದಾರೆ. ನಮ್ಮ ಪ್ರೇಕ್ಷಕರು ಎಷ್ಟು ಫಾಸ್ಟ್ ಅನ್ನೋದನ್ನ ಈಗ ನಿರ್ದೇಶಕರು ಯೋಚಿಸಬೇಕಾಗಿದೆ.


Click it and Unblock the Notifications











