Brahmagantu ; ದೀಪಾಳಿಗೆ ಸೌಂದರ್ಯ ಕೊಟ್ಟ ಶಿಕ್ಷೆ ಏನು : ಸುಕನ್ಯಾಗೆ ಸಿಕ್ಕ ಆಫರ್ ಯಾವುದು..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ನರಸಿಂಹ ಅಪ್ಪ-ಅಮ್ಮನ ಮಾತುಗಳನ್ನು ಕದ್ದು ಕೇಳಿಸಿಕೊಂಡಾಗಿನಿಂದ ಕುಡಿಯುವುದನ್ನು ಬಿಡಬೇಕು ಎಂದುಕೊಂಡಿದ್ದಾನೆ. ದೀಪಾಳ ಸ್ನೇಹಿತರಾದ ಗಣೇಶ-ಸುಬ್ರಹ್ಮಣ್ಯರನ್ನು ನೋಡಿ ಅವರಿಗೆ ಚಾಕ್ಲೇಟ್ ಕೊಡಿಸಿ ಹೊರಡುತ್ತಾನೆ. ಇದೇ ವೇಳೆಗೆ ಅದೇ ದಾರಿಯಲ್ಲಿ ಕಾರೊಂದು ಬರುತ್ತದೆ. ಶಾಲೆಗೆ ಹೋಗುತ್ತಿದ್ದ ಮಕ್ಕಳ ಮೇಲೆ ರಸ್ತೆಯಲ್ಲಿ ತುಂಬಿದ್ದ ಕೊಚ್ಚೆ ನೀರನ್ನು ಹಾರಿಸುತ್ತದೆ. ಇದನ್ನು ನೋಡಿದ ನರಸಿಂಹ ಕೋಪ ಮಾಡಿಕೊಂಡು ಕಾರನ್ನು ನಿಲ್ಲಿಸುತ್ತಾನೆ.


ಸಂಜನಾಳಿಗೆ ನರಸಿಂಹನೇ ಸರಿ

ಕಾರಿನಿಂದ ಸಂಜನಾ ಇಳಿದು ಬರುತ್ತಾಳೆ. ಈಗಾಗಲೇ ನರಸಿಂಹ ಮತ್ತು ಸಂಜನಾ ಸಾಕಷ್ಟು ವಿಚಾರಕ್ಕೆ ವೈಮನಸ್ಸನ್ನು ಹೊಂದಿದ್ದು, ಈಗ ಇದೊಂದು ಆಡ್ ಆಗಿದೆ. ನರಸಿಂಹ ನಿನಗೆ ಬಹಳ ಕೊಬ್ಬಿದೆ. ಮಕ್ಕಳ ಬಟ್ಟೆಯನ್ನು ಮರಿಯಾದೆಯಿಂದ ತೊಳೆದುಕೊಡು ಎನ್ನುತ್ತಾನೆ. ಆದರೆ ಸಂಜನಾ ಅವನ ಮಾತನ್ನು ಕೇಳುವುದಿಲ್ಲ. ನೀನೇನು ಹೀರೋನಾ. ನಾಲ್ಕಾಣಿ ಮಕ್ಕಳಿಂದ ಹೀರೋ ಎನಿಸಿಕೊಳ್ಳುವ ಒಂದು ರೂಪಾಯಿಯವನು ಎಂದು ಹೀಯಾಳಿಸುತ್ತಾಳೆ. ನರಸಿಂಹ ತನ್ನ ಬೈಕ್ ವೀಲ್ ಮೂಕ ಅದೇ ಕೊಚ್ಚೆ ನೀರನ್ನು ಸಂಜನಾಳ ಮೇಲೆ ಹಾರಿಸುತ್ತಾನೆ. ಇದರಿಂದ ಸಂಜನಾ ಕೋಪ ಮಾಡಿಕೊಳ್ಳುತ್ತಾಳೆ. ನಿನಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಹೇಳುತ್ತಾಳೆ.

Brahmagantu Serial 01 August episode written update

ದೀಪಾಳಿಗೆ ಬರೆಯ ಶಿಕ್ಷೆ

ಚಿರಾಗ್ ಗೆ ರಾತ್ರಿ ಬಳೆ ಸುಟ್ಟು ಸುಟ್ಟಿಗೆ ಹಾಕಿದ್ದು ತಾನೇ ಎಂದು ದೀಪಾ ಸೌಂದರ್ಯಾಳ ಮುಂದೆ ಒಪ್ಪಿಕೊಂಡಿದ್ದಾಳೆ. ಇದರಿಂದ ಕೋಪ ಮಾಡಿಕೊಂಡ ಸೌಂದರ್ಯ ನಿನ್ನನ್ನು ಈ ಮನೆಯಲ್ಲಿ ಇಟ್ಟುಕೊಂಡಿರುವುದೇ ದೊಡ್ಡ ತಪ್ಪು. ಅಂತಹದರಲ್ಲಿ ಹೀಗೆಲ್ಲಾ ಮಾಡುತ್ತೀಯಾ. ನಿನಗೆ ಉಪವಾಸ ಹಾಕಿದರೂ ಬುದ್ಧಿ ಬರಲಿಲ್ವಾ ಎಂದು ಬೈಯುತ್ತಾಳೆ. ಚಾಕುವನ್ನು ಬಿಸಿ ಮಾಡಿಕೊಂಡು ನೀನು ಬರೆ ಹಾಕೋ ಎಂದು ಹೇಳುತ್ತಾಳೆ. ದೀಪಾ ತಾನೇ ಚಾಕುವನ್ನು ಬಿಸಿ ಮಾಡಿಕೊಂಡು ಕೈ ಮೇಲೆ ಬರೆ ಹಾಕಿಕೊಳ್ಳುತ್ತಾಳೆ. ಇದನ್ನು ನೋಡಿದ ಅರ್ಚನಾ ದೀಪಾಳನ್ನು ತಡೆದು, ಸೌಂದರ್ಯಾಗೆ ಬೈಯುತ್ತಾಳೆ. ದೀಪಾ ಸುಟ್ಟಿಗೆ ಹಾಕಿದ್ರಿಂದಾನೇ ಚಿರಾಗ್ ಗೆ ಜ್ವರ ಕಮ್ಮಿಯಾಗಿದ್ದು ಎಂದು ಹೇಳುತ್ತಾಳೆ.

ಸುಕನ್ಯಾಗೆ ಸಿಕ್ತು ಅಧಿಕಾರ

ಈ ಗಲಾಟೆಯಲ್ಲಿ ದೀಪಾಳ ಕನ್ನಡಕ ಅಕಸ್ಮಾತ್ ಆಗಿ ಕೆಳಗೆ ಬೀಳುತ್ತದೆ. ದೀಪಾ ಕಣ್ಣು ಕಾಣದೇ ಒದ್ದಾಡುತ್ತಾಳೆ. ಆಗ ಅರ್ಚನಾ ಕನ್ನಡಕವನ್ನು ತೆಗೆದುಕೊಡುತ್ತಾಳೆ. ಇದನ್ನು ಸುಕನ್ಯಾ ಗಮನಿಸುತ್ತಾಳೆ. ಸೌಂದರ್ಯ ಸುಕನ್ಯಾಳನ್ನು ಕರೆದು.ನಿಮಗೆ ಈ ಮನೆಯ ಅಧಿಕಾರ ಬೇಕು ಎಂದರೆ, ದೀಪಾಳನ್ನು ಈ ಮನೆಯಿಂದ ಓಡಿಸಬೇಕು. ಆದರೆ, ಅವಳಿಗೆ ಚಿತ್ರಹಿಂಸೆ ಕೊಟ್ಟು ಓಡಿಸಿದೆವು ಎಂಬುದು ಯಾರಿಗೂ ಗೊತ್ತಾಗಬಾರದು. ಬದಲಿಗೆ ಅವಳೇ ಈ ಮನೆಯವರ ಸಹವಾಸ ಬೇಡ ಎಂದು ಹೋದಂತೆ ಇರಬೇಕು ಎಂದು ಚಾಲೆಂಜ್ ಹಾಕುತ್ತಾಳೆ. ಇದರಲ್ಲಿ ಸುಕನ್ಯಾ ಗೆದ್ದರೆ, ಅವಳಿಗೆ ಈ ಮನೆಯ ಅಧಿಕಾರವನ್ನು ಕೊಡುವುದಾಗಿ ಹೇಳುತ್ತಾಳೆ.

brahmagantu-serial-01-august-episode-written-update

ಬೇಸರ ಮಾಡಿಕೊಂಡ ಚಿರಾಗ್

ಬಹಳ ವರ್ಷಗಳಿಂದ ಈ ಮನೆಯ ಅಧಿಕಾರವನ್ನು ತನ್ನ ವಶ ಮಾಡಿಕೊಳ್ಳಲು ಯತ್ನಿಸುತ್ತಿರುವ ಸುಕನ್ಯಾಳಿಗೆ ಇದು ಸುವರ್ಣಾವಕಾಶ ಸಿಕ್ಕಂತಾಗಿದೆ. ಹೀಗಾಗಿ ಸುಕನ್ಯಾ ದೀಪಾಳ ಕನ್ನಡಕವನ್ನು ಕದ್ದು, ಅವಳು ಕಣ್ಣು ಕಾಣದೇ ಮನೆಯವರಿಂದಲೂ ಸೌಂದರ್ಯ ಮತ್ತು ಚಿರಾಗ್ ನಿಂದ ಪದೇ ಪದೇ ಬೈಯಿಸಿಕೊಂಡು ಓಡಿ ಹೋಗಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಇನ್ನು ಚಿರಾಗ್ ಗೆ ಸುಟ್ಟಿಗೆ ಹಾಕಿರುವ ಜಾಗದಲ್ಲಿ ನೋವಾಗುತ್ತಿರುತ್ತದೆ. ಇದನ್ನು ಆತನ ಗೆಳೆಯ ತಪ್ಪಾಗಿ ತಿಳಿದು ಏನು ಸಮಾಚಾರ ಎಂದು ರೇಗಿಸಿದಾಗ, ಚಿರಾಗ್ ದೀಪಾಳ ಜೊತೆಗೆ ಮದುವೆಯಾದ ಕಹಿ ಘಟನೆಯನ್ನು ಹೇಳಿಕೊಂಡು ಬೇಸರ ಮಾಡಿಕೊಳ್ಳುತ್ತಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X