Brahmagantu ; ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ ಗಂಡ ಹೆಂಡತಿ : ದೀಪಾಳ ನೆರವಿಗೆ ಬಂದ ಚಿರಾಗ್..!

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಜಯರಾಂ ತನ್ನ ಮಗಳು ದೀಪಾ ಅರಾಮಾಗಿದ್ದಾಳೆ ಎಂದು ನೆಮ್ಮದಿಯಾಗಿದ್ದಾನೆ. ರೂಪಾಳನ್ನು ಮನಸಾರೆ ಕೊಂದಿದ್ದಾನೆ.ರೂಪಾ ತಾನು ಹೀರೋಯಿನ್ ಆಗಬೇಕು ಎಂದು ಕನಸು ಕಾಣುತ್ತಿದ್ದು, ಅರವಿಂದ್ ಫೋಟೋಗ್ರಾಫರ್ ಅನ್ನು ಕರೆಸಿದ್ದಾನೆ. ರೂಪಾಳ ಫೋಟೋಶೂಟ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ರೂಪಾಳಿಗೆ ಫೋಟೋಗ್ರಾಫರ್ ಶಿಲಾಬಾಲಿಕೆ ಥರ ಫೋಟೋ ತೆಗೆಯುತ್ತಿದ್ದಾನೆ ಎಂದು ಬೈದು ಕಳಿಸುತ್ತಾಳೆ. ಅರವಿಂದ್ ಮುಂಬೈನಿಂದ ಕರೆಸಲು ಒಂದು ಲಕ್ಷ ಹಣ ಖರ್ಚಾಗುತ್ತದೆ ಎಂದು ಹೇಳುತ್ತಾನೆ. ಈಗ ರೂಪಾ ತನ್ನ ಬಳಿ ಇರುವ ಹಣವನ್ನು ಕೊಡುತ್ತಾಳಾ ಎಂಬುದೇ ಅನುಮಾನವಾಗಿದೆ.

ಕನ್ನಡಕ ಹಾಳು ಮಾಡಿದ ರಚನಾ

ಇತ್ತ ದೀಪಾಳನ್ನು ಮನೆಯಿಂದ ಓಡಿಸುವ ಜವಾಬ್ದಾರಿ ಈಗ ಸುಕನ್ಯಾ ಮೇಲಿದೆ. ಹೀಗಾಗಿ ಸುಕನ್ಯಾ ಮತ್ತು ಅವಳ ಮಗಳು ರಚನಾ ಸೇರಿಕೊಂಡು ಹೊಸ ಪ್ಲಾನ್ ಮಾಡಿದ್ದಾರೆ. ದೀಪಾ ಮುಖ ತೊಳೆಯುವಾಗ ರಚನಾ ಅವಳ ಕನ್ನಡಕವನ್ನು ತೆಗೆದುಕೊಂಡು ಸ್ಟೀಲ್ ನಾರಿನಲ್ಲಿ ಉಜ್ಜಿ ಹಾಳು ಮಾಡಿದ್ದಾಳೆ. ಇದರಿಂದ ದೀಪಾಳಿಗೆ ಕಣ್ಣು ಕಾಣಿಸುತ್ತಿಲ್ಲ. ಕನ್ನಡಕ ಇಲ್ಲದಿದ್ದರೆ, ಕಣ್ಣು ಕಾಣದ ದೀಪಾ, ಈಗ ಕುರುಡಾಗಿಯೇ ಮನೆ ಕೆಲವನ್ನು ಮಾಡಬೇಕಿದೆ. ಇಲ್ಲದೇ ಹೋದರೆ ಅವಳನ್ನು ಮನೆಯಿಂದ ಹೊರಗೆ ಕಳಿಸುವುದು ಪಕ್ಕಾ.

Brahmagantu Serial 02 August episode written update

ದೀಪಾಳ ಚಿಂತೆಯಲ್ಲಿ ಮುಳುಗಿರುವ ಸೌಂದರ್ಯ

ಸೌಂದರ್ಯಾಳಿಗೆ ಚಿರಾಗ್ ನದ್ದೇ ಚಿಂತೆಯಾಗಿದೆ. ಸೌಂದರ್ಯವತಿಯನ್ನು ತಂದು ಚಿರಾಗ್ ಗೆ ಮದುವೆ ಮಾಡಬೇಕು ಎಂದುಕೊಂಡಿದ್ದಳು. ಆದರೆ, ದುರಾದೃಷ್ಟವಶಾತ್ ಈಗ ಕುರೂಪಿ ದೀಪಾಳನ್ನು ಚಿರಾಗ್ ಮದುವೆಯಾಗಿದ್ದಾನೆ. ಅವಳನ್ನು ಈ ಮನೆಯಿಂದ ಹೇಗೆ ಹೊರಗೆ ಹಾಕುವುದು. ಚಿರಾಗ್ ಬದುಕನ್ನು ಹೇಗೆ ಸರಿ ಮಾಡುವುದು ಎಂಬ ಚಿಂತೆಯಲ್ಲಿ ಮುಳುಗಿ ಹೋಗಿದ್ದಾಳೆ. ತಾನು ಮಾಡುತ್ತಿರುವ ಕೆಲಸದ ಮೇಲೂ ಸೌಂದರ್ಯಾಳಿಗೆ ಗಮನವಿಲ್ಲ. ಸೌಂದರ್ಯ ಮನದೊಳಗೆ ಕೊರಗುತ್ತಿರುವುದನ್ನು ನೋಡಿ ಅವರ ಅಣ್ಣ ಖುಪಿ ಪಟ್ಟಿದ್ದಾನೆ.

ಕಣ್ಣು ಕಾಣದೇ ಒದ್ದಾಡುವ ದೀಪಾ

ಇತ್ತ ದೀಪಾ ಕಣ್ಣು ಕಾಣದಿದ್ದರೂ ಸುಕನ್ಯಾ ಹೇಳಿದ ಕೆಲಸ ವನ್ನು ಮಾಡಬೇಕಿದೆ. ಸುಕನ್ಯಾ ಕೂಡ ದೀಪಾಳಿಗೆ ಬೈಯುತ್ತಲೇ ಗಿಡಗಳಿಗೆ ನೀರು ಹಾಕಲು ಹೇಳಿದ್ದಾಳೆ. ಕಣ್ಣು ಕಾಣದ ದೀಪಾ ರಸ್ತೆ ಮೇಲೆ ನೀರು ಹಾಕಿದ್ದು, ರಚನಾ ಹೊಸ ಕೆಲಸವನ್ನು ಹೇಳಿದ್ದಾಳೆ. ಸ್ವಿಮ್ಮಿಂಗ್ ಪೂಲ್ ಬಳಿ ನನ್ನ ಮೊಬೈಲ್ ಇದೆ ತಂದುಕೊಡು ಎಂದಿದ್ದಾಳೆ. ಸ್ವಿಮ್ಮಿಂಗ್ ಪೂಲ್ ಬಳಿ ದೀಪಾ ಹೋಗಿ ನೀರಿನಲ್ಲಿ ಬೀಳಲಿ ಎಂಬುದು ರಚನಾ ಪ್ಲಾನ್ ಆಗಿದೆ. ಆದರೆ, ಚಿರಾಗ್ ಬೇರೆ ಮನಸ್ಸು ಸರಿಯಿಲ್ಲ ಎಂದು ಸ್ವಿಮ್ಮಿಂಗ್ ಮಾಡಲು ತಯಾರಾಗಿ ಬಂದಿದ್ದಾನೆ.

Brahmagantu Serial 02 August episode written update

ನೀರಿಗೆ ಬಿದ್ದವಳನ್ನು ಕಾಪಾಡಿದ ಚಿರಾಗ್

ಕಣ್ಣು ಕಾಣದ ದೀಪಾ ತಡವರಿಸಿಕೊಂಡು ಹೇಗೋ ಸ್ವಿಮ್ಮಿಂಗ್ ಪೂಲ್ ತಲುಪಿದ್ದಾಳೆ. ಆದರೆ, ಮೊಬೈಲ್ ಹುಡುಕಲು ಹೋಗಿ ಎದುರಿಗೆ ಬಂದ ಚಿರಾಗ್ ಗೆ ಡಿಕ್ಕಿ ಹೊಡೆದಿದ್ದಾಳೆ. ಇದರಿಂದ ಚಿರಾಗ್ ಮತ್ತು ದೀಪಾ ಇಬ್ಬರೂ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದಿದ್ದಾರೆ. ಈಜು ಬರದ ದೀಪಾ ನೀರಿನಲ್ಲಿ ಒದ್ದಾಡುತ್ತಿರುವಾಗ ಚಿರಾಗ್ ಆಕೆಯನ್ನು ಎತ್ತಿಕೊಂಡು ಬಂದಿದ್ದಾನೆ. ಇದೆಲ್ಲವನ್ನೂ ಅರ್ಚನಾ ಗಮನಿಸಿದ್ದು, ಮುಂದೆ ಸೌಂದರ್ಯಾಳಿಂದ ದೀಪಾಳಿಗೆ ದೊಡ್ಡ ಆಪತ್ತು ಕಾದಿದೆಯಾ..? ಅಥವಾ ಈ ಬಾರಿ ದೀಪಾಳನ್ನು ಅರ್ಚನಾ ಬದಲು ಅವಳ ತಮ್ಮ ಚಿರಾಗ್ ಕಾಪಾಡುತ್ತಾನಾ ಎಂಬ ಕುತೂಹಲ ಮೂಡಿದೆ. ಒಟ್ಟಿನಲ್ಲಿ ದೀಪಾ ಮತ್ತು ಚಿರಾಗ್ ಒಂದಾಗುವ ಕಾಲ ಸ್ವಲ್ಪ ಸ್ವಲ್ಪವೇ ಹತ್ತಿರವಾಗುತ್ತಿದ್ದು, ಸೌಂದರ್ಯ ಪ್ಲಾನ್ ಹಾಳಾಗುವುದಂತೂ ಗ್ಯಾರಂಟಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X