Brahmagantu; ದ್ವೇಷದ ಜ್ವಾಲೆಯಲ್ಲಿ ಉರಿಯುತ್ತಿದೆ ಸೌಂದರ್ಯ ಮನಸ್ಸು ..!

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಮತ್ತು ಚಿರಾಗ್ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದಿದ್ದಾರೆ. ಚಿರಾಗ್ ದೀಪಾಳಿಗೆ ಈಜು ಬರುವುದಿಲ್ಲ ಎಂದುಕೊಂಡಿದ್ದು, ಅವಳನ್ನು ಎತ್ತಿಕೊಂಡು ಬರುತ್ತಾನೆ. ಆದರೆ, ದೀಪಾ ತನಗೆ ಈಜಲು ಬರುತ್ತದೆ. ನನ್ನ ಪಾಡಿಗೆ ನಾನು ಕನ್ನಡಕವನ್ನು ಹುಡುಕುತ್ತಿದ್ದೆ. ಸಿಕ್ಕ ಮೇಲೆ ಬರುತ್ತಿದ್ದೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಚಿರಾಗ್ ಗೆ ಗಾಬರಿಯಾಗುತ್ತದೆ.ಇನ್ನು ದೀಪಾ ಮತ್ತು ಚಿರಾಗ್ ನೀರಿಗೆ ಬಿದ್ದಿದ್ದನ್ನು ನೋಡಿದ ಸುಕನ್ಯಾ ಬಾಯಿ ಬಡಿದುಕೊಳ್ಳುತ್ತಾಳೆ. ನಿನ್ನೆಯಷ್ಟೇ ಚಿರಾಗ್ ಗೆ ಜ್ವರ ಬಂದಿತ್ತು. ಈಗಷ್ಟೇ ಹುಷಾರಾಗಿದ್ದಾನೆ. ಅವನನ್ನು ಸ್ವಿಮ್ಮಿಂಗ್ ಪೂಲ್ ಗೆ ತಳ್ಳುತ್ತೀಯಾ ಎಂದು ದೀಪಾಳಿಗೆ ಬೈಯುತ್ತಾಳೆ.

ದೀಪಾ ಪರ ನಿಂತ ಅರ್ಚನಾ

ಅಷ್ಟೇ ಅಲ್ಲದೇ, ನಿನ್ನನ್ನು ಈ ಮನೆಯಲ್ಲಿ ಕೆಲಸದವಳನ್ನಾಗಿ ಇಟ್ಟುಕೊಂಡಿರುವುದೇ ಹೆಚ್ಚು. ಅದರಲ್ಲಿ ಹೀಗೆ ಒಂದಾದ ಮೇಲೆ ಒಂದು ಎಡವಟ್ಟುಗಳನ್ನು ಮಾಡುತ್ತಿದ್ದೀಯಾ. ನಿನ್ನನ್ನು ಹೀಗೆ ಬಿಟ್ಟರೆ ಆಗುವುದಿಲ್ಲ. ಇರು ಸೌಂದರ್ಯಾನ ಕರೆಯುತ್ತೇನೆ. ನೀನು ಮಾಡಿದ್ದನ್ನೆಲ್ಲಾ ಹೇಳುತ್ತೇನೆ. ನಿನಗೆ ಅವಳೇ ಸರಿ ಎಂದು ಬೈಯುತ್ತಿರುತ್ತಾಳೆ. ಸುಕನ್ಯಾ ಜೊತೆ ಸೇರಿಕೊಂಡು ಅವಳ ಮಗಳು ಕೂಡ ದೀಪಾಳದ್ದೇ ತಪ್ಪು ಎಂಬಂತೆ ಮಾತನಾಡುತ್ತಿರುತ್ತಾಳೆ. ಇದೆಲ್ಲವನ್ನೂ ನೋಡಿದ ಅರ್ಚನಾ ದೀಪಾಳ ಪರ ಮಾತನಾಡಲು ಬರುತ್ತಾಳೆ. ನಾನು ಎಲ್ಲವನ್ನೂ ನೋಡಿದ್ದೇನೆ ತಪ್ಪು ಯಾರದ್ದು ಎಂದು ಗೊತ್ತಿದೆ ಎನ್ನುತ್ತಾಳೆ. ರಚನಾ ಮತ್ತು ಸುಕನ್ಯಾಳಿಗೆ ನಿಮ್ಮಿಬ್ಬರಿಂದಲೇ ದೀಪಾ ಮತ್ತು ಚಿರಾಗ್ ನೀರಿಗೆ ಬಿದ್ದಿದ್ದು. ಈ ವಿಷಯವನ್ನ ಸೌಂದರ್ಯಳಿಗೆ ಹೇಳಲಾ ಎನ್ನುತ್ತಾಳೆ ಆಗ ಇಬ್ಬರೂ ಸುಮ್ಮನಾಗುತ್ತಾರೆ.

brahmagantu-serial-05-august-episode-written-update


ಮಾಡಿದ ಪ್ಲಾನ್ ಉಲ್ಟಾ ಆಯ್ತು

ದೀಪಾಳನ್ನು ಅರ್ಚನಾ ಅಲ್ಲಿಂದ ಕಳಿಸುತ್ತಾಳೆ. ಚಿರಾಗ್ ಗೆ ಈ ವಿಷಯವನ್ನ ಸೌಂದರ್ಯಾಗೆ ಹೇಳಬೇಡ ಎಂದು ಹೇಳುತ್ತಾಳೆ. ಅಷ್ಟರಲ್ಲಿ ಸೌಂದರ್ಯ ಅಲ್ಲಿಗೆ ಬಂದು ಏನಾಯ್ತು ಎಂದು ಕೇಳಿದಾಗ ಚಿರಾಗ್ ಗೆಳೆಯ ಅವನನ್ನು ಪೂಲ್ ಗೆ ತಳ್ಳಿದ ಎಂದು ಹೇಳಿ ಯಾಮಾರಿಸುತ್ತಾಳೆ. ಸೌಂದರ್ಯ ಕೋಪ ಮಾಡಿಕೊಳ್ಳುತ್ತಾಳೆ. ದೀಪಾಳನ್ನು ಮನೆಯಿಂದ ಓಡಿಸಲು ಸುಕನ್ಯಾ ಮಾಡಿದ್ದ ಪ್ಲಾನ್ ಕಂಪ್ಲೀಟ್ ಆಗಿ ಉಲ್ಟಾ ಆಗಿದೆ. ಇದೆಲ್ಲವನ್ನೂ ಗಮನಿಸುತ್ತಿರುವ ಸುಕನ್ಯಾಳ ಪತಿ ಎಂಜಾಯ್ ಮಾಡುತ್ತಿದ್ದಾನೆ.

ಮನೆಯವರ ಮೇಲೆ ಸೌಂದರ್ಯಾಳಿಗೆ ದ್ವೇಷ

ಇನ್ನು ಚಿರಾಗ್ ಗೆ ತಲೆ ಒರೆಸಿ ಸೌಂದರ್ಯ ಬುದ್ಧಿ ಹೇಳುತ್ತಿರುತ್ತಾಳೆ. ಚಿರಾಗ್ ಅತ್ತಿಗೆ ನಿಮ್ಮ ಮಡಿಲಲ್ಲಿ ಮಲಗಬೇಕು ಎನಿಸುತ್ತಿದೆ ಎನ್ನುತ್ತಾನೆ. ಸೌಂದರ್ಯ ಅದಕ್ಕೆ ಚಿರಾಗ್ ತಲೆ ತಟ್ಟುತ್ತಿರುತ್ತಾಳೆ. ಆಗ ಚಿರಾಗ್ ಅತ್ತಿಗೆ ನಿಮಗೆ ಯಾವತ್ತೂ ಮಗು ಬೇಕು ಅಂತ ಅನಿಸಲೇ ಇಲ್ವಾ ಎಂದು ಕೇಳುತ್ತಾನೆ. ಆಗ ಸೌಂದರ್ಯ ನನಗೆ ನೀನೊಬ್ಬನೇ ಸಾಕು. ನನಗೆ ಮಗು ಆದರೆ ನಿನ್ನ ಮೇಲಿನ ಪ್ರೀತಿ ಹೊರಟು ಹೋಗುತ್ತೆ ಅಂತ ಭಯ ಎನ್ನುತ್ತಾಳೆ. ಬಳಿಕ ರೂಮಿಗೆ ಹೋಗಿ ನಿನ್ನ ಅಪ್ಪ ಮಾಡಿರೋ ತಪ್ಪಿಗೆ ಅನ್ಯಾಯವಾಗಿ ದ್ವೇಷ ಸಾಧಿಸಿಕೊಳ್ಳಲು ಈ ಮನೆಗೆ ಬಂದಿದ್ದೀನಿ. ಯಾವುದೇ ಕಾರಣಕ್ಕೂ ಈ ಮನೆಯಲ್ಲಿ ಮಗು ಹುಟ್ಟ ಬಾರದು. ತೊಟ್ಟಿಲು ತೂಗಬಾರದು ಎಂದು ಹೇಳಿಕೊಳ್ಳುತ್ತಾಳೆ. ಆದರೆ, ಯಾಕಾಗಿ ಸೌಂದರ್ಯ ದ್ವೇಷ
ಕಾರುತ್ತಿದ್ದಾಳೆ ಎಂಬುದು ಗೊತ್ತಿಲ್ಲ.

brahmagantu-serial-05-august-episode-written-update

ಜಯರಾಂಗೆ ಸತ್ಯ ಹೇಳುತ್ತಾಳಾ ಅರ್ಚನಾ

ಜಯರಾಂ ಮಗಳ ಜೊತೆಗೆ ಮಾತನಾಡಿಲ್ಲ ಎಂದು ಮನೆಗೆ ಬಂದಿರುತ್ತಾನೆ. ದೀಪಾಳಿಗೆ ಫೋನ್ ಮಾಡುತ್ತಾನೆ. ಅರ್ಚನಾ ಫೋನ್ ರಿಸೀವ್ ಮಾಡುತ್ತಾಳೆ. ಜಯರಾಂ ಆಗ ನೀವು ನನ್ನ ಮಗಳನ್ನು ರಾಣಿಯಂತೆ ನೋಡಿಕೊಳ್ಳುತ್ತಿದ್ದೀರಂತೆ. ವಿಷಯ ಕೇಳಿ ಬಹಳ ಖುಷಿಯಾಯ್ತು ಎನ್ನುತ್ತಾನೆ. ಈ ಮಾತನ್ನು ಕೇಳಿದ ಅರ್ಚನಾ ಅವರ ತಂದೆಗೆ ಸತ್ಯ ಹೇಳಲು ಮುಂದಾಗಿದ್ದಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X