Brahmagantu ; ದೀಪಾಳನ್ನು ಮನೆಯಿಂದ ಹೊರಗೆ ಕಳಿಸುತ್ತಾಳಾ ಸೌಂದರ್ಯ..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾಳಿಂದ ನೆಕ್ಲೇಸ್ ಪಡೆದ ಅರವಿಂದ್ ಫೋಟೋಗ್ರಾಫರ್‌ನ ಕರೆತಂದಿದ್ದಾನೆ. ರೂಪಾಳಿಗೆ ಮಾಡ್ರನ್ ಬಟ್ಟೆಗಳನ್ನು ಕೊಡಿಸಿದ್ದು ಅದರಲ್ಲೇ ಫೋಟೋಶೂಟ್ ಮಾಡಿಸಿಕೊಳ್ಳುವಂತೆ ಹೇಳಿದ್ದಾನೆ.ಫೋಟೋಗ್ರಾಫರ್ ಒಳ್ಳೊಳ್ಳೇ ಫೋಟೋಗಳನ್ನು ತೆಗೆದಿದ್ದು, ರೂಪಾ ಜೊತೆಗೆ ಸ್ವಲ್ಪ ಕ್ಲೋಸ್ ಆಗಿ ಮಾತನಾಡಿದ್ದಾನೆ. ಇದರಿಂದ ಅರವಿಂದ್ ಗೆ ಕೋಪ ಬಂದಿದೆ. ರೂಪಾಳಿಂದ ಫೋಟೋಗ್ರಾಫರ್ ಫೋನ್ ನಂಬರ್ ಪಡೆದಿದ್ದು, ಅರವಿಂದ್ ಅವನನ್ನು ಬೈದು ಕಳಿಸುತ್ತಾನೆ. ಅರವಿಂದ್ ರೂಪಾಳನ್ನು ಮಾರಟ ಮಾಡಿ ಲಕ್ಷಾಂತರ ರೂಪಾಯಿ ಹಣ ಮಾಡಬೇಕು ಎಂದುಕೊಂಡಿದ್ದಾನೆ.

ನರಸಿಂಹನ ಭ್ರಮೆಯಲ್ಲಿದ್ದಾಳಾ ಸಂಜನಾ

ಆದರೆ ಈ ಸತ್ಯ ರೂಪಾಳಿಗೂ ಗೊತ್ತಿಲ್ಲ. ತನಗೇ ಗೊತ್ತಿಲ್ಲದೇ ರೂಪಾ ಸಂಕಷ್ಟದ ಸುಳಿಗೆ ಸಿಲುಕಿಕೊಳ್ಳುತ್ತಿದ್ದಾಳೆ. ಇತ್ತ ನರಸಿಂಹನಿಗೆ ಎಲ್ಲೂ ಮದ್ಯ ಸಿಗದಂತೆ ಸಂಜನಾ ಮಾಡಿದ್ದು, ಅವಳ ಮೇಲೆ ರಿವೇಂಜ್ ತೀರಿಸಿಕೊಳ್ಳುತ್ತಿದ್ದಾನೆ. ಸಂಜನಾಳಿಗೆ ಈಗಾಗಲೇ ನರಸಿಂಹ ಭ್ರಮೆ ರೂಪದಲ್ಲಿ ಬಂದು ಕಾಡುತ್ತಿದ್ದಾನೆ. ಈಗಂತೂ ನೀನು ನನ್ನನ್ನು ಬಾರ್ ಗಳಿಂದ ಹೊರಗೆ ಹಾಕಿರಬಹುದು. ಆದರೆ, ನಾನು ನಿಮ್ಮ ಮನೆಗೆ ಬಂದು ನಿಮ್ಮ ಅಪ್ಪ ಬಚ್ಚಿಟ್ಟಿರುವ ಈ ಸ್ಕಾರ್ಚ್ ಅನ್ನು ನಿನ್ನ ಮುಂದೆ ನಿನ್ನ ಜೊತೆಗೆ ಒಂದು ಪೆಗ್ ಹಾಕಿ ಹೋಗುತ್ತೇನೆ ಎಂದು ಹೇಳುತ್ತಾನೆ. ಸಂಜನಾ ಕಿರುಚಿಕೊಂಡು ತನ್ನ ತಂದೆಯನ್ನು ಕರೆದಾಗ ಅಲ್ಲಿ ನರಸಿಂಹ ಇರುವುದೇ ಇಲ್ಲ. ಇದನ್ನು ನೋಡಿ ಸಂಜನಾಳೀಗೆ ಭ್ರಮೆ ಆಗಿರಬೇಕು ಎನ್ನುತ್ತಾನೆ. ಸಂಜನಾ ಕೂಡ ನಿಜವಾಗಿಯೂ ನರಸಿಂಹ ಬಂದಿದ್ದನಾ ಇಲ್ಲ ಭ್ರಮೆನಾ ಎಂದು ಯೋಚಿಸುವಂತಾಗಿದೆ.

brahmagantu-serial-09-august-episode-written-update

ಜಾಜಿಯನ್ನು ಉಳಿಸಲು ಸಿಕ್ಕಿಬಿದ್ದ ದೀಪಾ

ಇನ್ನು ಜಾಜಿ ತನ್ನ ಮನೆಯ ಸಮಸ್ಯೆ ಬಗ್ಗೆ ಫೋನ್ ನಲ್ಲಿ ಮಾತನಾಡುತ್ತಾ ಖಾಲಿ ಕುಕ್ಕರ್ ಅನ್ನು ಸ್ಟೌವ್ ಆನ್ ಮಾಡಿದ್ದು, ಸುಕನ್ಯಾ ಮಗಳು ಕವನ ಅಡುಗೆ ಮನೆಗೆ ಬಂದಾಗಲೇ ಕುಕ್ಕರ್ ಬ್ಲಾಸ್ಟ್ ಆಗಿದೆ. ಇದರಿಂದ ಸುಕನ್ಯಾ ದೊಡ್ಡ ರಂಪಾಟವನ್ನು ಮಾಡಿದ್ದಾಳೆ. ಸೌಂದರ್ಯ ಯಾರು ಕುಕ್ಕರ್ ಇಟ್ಟಿದ್ದು ಎಂದು ಕೇಳಿದ್ದಕ್ಕೆ ದೀಪಾ ಜಾಜಿಯನ್ನು ಉಳಿಸಲು ಹೋಗಿ ತಾನೇ ಮಾಡಿದ ತಪ್ಪು ಎಂದು ಹೇಳಿದ್ದಾಳೆ. ಸೌಂದರ್ಯ ಮಾವನನ್ನು ಕರೆಸಿ, ದೀಪಾ ಈ ಮನೆಯಲ್ಲಿ ಇರುವುದು ಬೇಡ ಎಂದು ನಡೆದಿದ್ದನ್ನೆಲ್ಲಾ ಹೇಳಿದ್ದಾಳೆ. ದೀಪಾ ಮಾಡಿದ ತಪ್ಪಿಗೆ ಈಗ ದೀಪಾ ತನ್ನ ಮನೆಗೆ ಹೋಗುವ ಪರೀಸ್ಥಿತಿ ಬಂದಿದೆ.

ಸೌಂದರ್ಯಾಗೆ ಮಾತು ಕೊಟ್ಟ ದೀಪಾ

ಮನೆ ಬಿಟ್ಟು ಹೋದರೆ ತಂದೆಗೆ ಸಮಸ್ಯೆ ಆಗುತ್ತದೆ. ಅಂತ ಹೇಳಿ ದೀಪಾ ತನಗೆ ಬೇರೆ ಶಿಕ್ಷೆ ಕೊಡಿ ಎಂದು ಕೇಳಿದ್ದಾಳೆ. ಆಗ ಅವರ ಮಾವ ದೀಪ ನಮ್ಮ ಮನೆಯಲ್ಲಿ ಇರುವುದು ಬೇಡ ಔಟ್ ಹೌಸ್ ನಲ್ಲಿ ಇರಲಿ ಎಂದು ಹೇಳುತ್ತಾನೆ. ದೀಪಾಳನ್ನು ಈ ಮನೆಗೆ ಕಾಲಿಡಬಾರದು ಎಂದು ಸೌಂದರ್ಯ ಕೇಳುತ್ತಾಳೆ. ಆಗ ದೀಪಾ ತನ್ನ ತಂದೆಯ ಮೇಲೆ ಆಣೆ ಮಾಡುತ್ತೀನಿ. ಯಾವುದೇ ಕಾರಣಕ್ಕೂ ಈ ಮನೆಯೊಳಗೆ ಕಾಲಿಡುವುದಿಲ್ಲ ಎಂದು ಹೇಳುತ್ತಾಳೆ.

brahmagantu-serial-09-august-episode-written-update


ಸೌಂದರ್ಯ ಪ್ಲಾನ್ ಗೆ ಪ್ರಭಾಕರ್ ಟಕ್ಕರ್

ಸೌಂದರ್ಯಾಳಿಗೆ ದೀಪಾ ಮನೆಯಿಂದ ಹೊರಗೆ ಹೋಗಿರುವುದು ಖುಷಿಯನ್ನು ಕೊಟ್ಟಿದೆ. ಆದರೆ, ಮನೆಯಲ್ಲಿ ಪ್ರೆಸ್ ಮೀಟ್ ನಡೆಯಲಿದ್ದು, ಅದರಲ್ಲಿ ದೀಪಾ ಬಗ್ಗೆ ಗೊತ್ತಾದರೆ ತೊಂದರೆ ಆಗುತ್ತದೆ ಎಂದು ಸೌಂದರ್ಯ ಪ್ರೆಸ್ ಮೀಟ್ ಮಾಡಬಾರದು ಎಂದು ಪ್ಲಾನ್ ಮಾಡುತ್ತದ್ದಾಳೆ. ಆದರೆ, ಪ್ರಭಾಕರ ತಂಗಿ ಅವಮಾನ, ನೋವಿನಿಂದ ನರಳಾಡಬೇಕು ಎಂದು ತಂಗಿಯ ಪ್ಲಾನ್ ಗೆ ಟಕ್ಕರ್ ಕೊಡಲು ಮುಂದಾಗಿದ್ದಾನೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X