Brahmagantu ; ದೀಪಾಗೆ ತಾಳಿ ಕಟ್ಟಿದ ಚಿರಾಗ್ : ಸೌಂದರ್ಯ ಚಾಲೆಂಜ್‌ನಲ್ಲಿ ಸೋತಳಾ..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾ ಅರವಿಂದ್ ನ ನಂಬಿ ಓಡಿ ಹೋಗಿದ್ದಾಳೆ. ಹುಡುಗನ ಮನೆಯಲ್ಲಿ ಕೊಟ್ಟ ಒಡವೆ, ತಂದೆ ಮಾಡಿಸಿಟ್ಟಿದ್ದ ಒಡವೆ ಹಾಗೂ ಹಣ ಎಲ್ಲವನ್ನೂ ದೋಚಿಕೊಂಡು ರೂಪಾ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಅರವಿಂದ್ ಕೂಡ ಹಣದಾಸೆಗೆ ಹೀಗೆಲ್ಲಾ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ರೂಪಾ ಮೋಸ ಹೋಗುತ್ತಾಳಾ ಎಂಬ ಕುತೂಹಲ ಮೂಡಿದೆ. ತಾನು ದೊಡ್ಡ ಹೀರೋಯಿನ್ ಆಗಬೇಕು. ಮುಂಬೈನಲ್ಲಿ ಮನೆ ತೆಗೆದುಕೊಂಡು ರಾಣಿಯಂತೆ ಓಡಾಡಬೇಕು ಎಂದು ಆಸೆ ಪಟ್ಟಿರುವ ರೂಪಾ, ಅರವಿಂದ್ ನಂಬಿ ಮನೆಯವರಿಗೆ ಮೋಸ ಮಾಡಿದ್ದಾಳೆ.

ಚಿರಾಗ್ ಜೊತೆಗೆ ದೀಪಾ ಮದುವೆ

ಇತ್ತ ಮದುವೆ ಮನೆಯಲ್ಲಿ ಸಡಗರ ಸಂಭ್ರಮ ತುಂಬಿರಬೇಕಿತ್ತು. ಆದರೆ, ರೂಪಾ ಕಾಣದೇ ಇರುವುದಕ್ಕೆ ಎಲ್ಲರೂ ಗಾಬರಿಯಾಗಿದ್ದಾರೆ. ಸೌಂದರ್ಯ ಅವರ ಅಣ್ಣನೇ ರೂಪಾ ಹೆಸರಲ್ಲಿ ಪತ್ರವನ್ನು ಬರೆದಿಟ್ಟಿದ್ದು, ಅದನ್ನು ಚಿರಾಗ್ ಗೆ ನೀಡಿದ್ದಾನೆ. ಅದರಲ್ಲಿ ರೂಪಾ ತನ್ನ ಕೆರಿಯರ್ ಆಸೆಯಿಂದ ಮನೆ ಬಿಟ್ಟು ಹೋಗಿರುವುದಾಗಿ ಹೇಳಿದ್ದು, ಈ ವಿಚಾರವನ್ನು ಚಿರಾಗ್ ಹುಡುಗಿ ಮನೆಯವರಿಗೆ ತಿಳಿಸಿದ್ದಾನೆ. ಮಗಳು ಓಡಿ ಹೋಗಿರುವ ಸುದ್ದಿಯನ್ನು ಕೇಳಿದ ಕೂಡಲೇ ತಂದೆ ಶಾಕ್ ಆಗಿದ್ದಾರೆ. ಆದರೆ, ಊರಿನ ಜನರೆಲ್ಲಾ ಇದಕ್ಕೆಲ್ಲಾ ಕಾರಣ ಸೌಂದರ್ಯ ಮನೆಯವರು. ಇದ್ದಕ್ಕಿದ್ದ ಹಾಗೆ ಬಂದು ಮದುವೆ ಎಂದಿದ್ದಕ್ಕೆ ರೂಪಾ ಹೆದರಿಕೊಂಡಿರಬೇಕು ಎಂದಿದ್ದಾರೆ.

brahmagantu-serial-10-july-episode-written-update

ಊರಿನ ಜನ ಸೇರಿ ಗಲಾಟೆ

ಅಲ್ಲದೇ ಎಲ್ಲರೂ ದೀಪಾ ಬದುಕು ಹಾಳಾಗಬಾರದು. ಚಿರಾಗ್ ಈಗ ದೀಪಾಳನ್ನು ಮದುವೆಯಾಗಬೇಕು ಎಂದು ಹೇಳುತ್ತಿದ್ದಾರೆ. ಚಿರಾಗ್ ನನ್ನು ಮಂಟಪದಿಂದ ಹೊರಗೆ ಹೋಗದಂತೆ ಊರಿನ ಜನರೆಲ್ಲಾ ತಡೆದು ನಿಲ್ಲಿಸಿದ್ದಾರೆ. ಇತ್ತ ಸೌಂದರ್ಯ ಅವರ ಅಣ್ಣನೇ ಇದೆಲ್ಲವನ್ನೂ ಪ್ಲಾನ್ ಮಾಡಿದ್ದು, ಸೌಂದರ್ಯ ಬರುವ ದಾರಿಯನ್ನೂ ಕ್ಲೋಸ್ ಮಾಡಿಸಿದ್ದಾನೆ. ಪ್ರೊಟೆಸ್ಟ್ ಹೆಸರಲ್ಲಿ ಮದುವೆ ಮುಗಿಯುವವರೆಗೂ ಸೌಂದರ್ಯ ಊರು ತಲುಪದಂತೆ ಪೊಲೀಸರ ಸಹಾಯ ಪಡೆದಿದ್ದಾನೆ.

ದೀಪಾಳಿಗೆ ತಾಳಿ ಕಟ್ಟಿದ ಚಿರಾಗ್

ಊರ ಜನರೆಲ್ಲಾ ಸೇರಿ ಚಿರಾಗ್ ಮತ್ತು ದೀಪಾ ಮದುವೆ ಮಾಡಿಸಲು ಮುಂದಾಗಿದ್ದಾರೆ. ಗಲಾಟೆಯಲ್ಲಿರುವ ಸೌಂದರ್ಯ ಏನೂ ತಿಳಿಯದೇ ಚಿರಾಗ್ ಗೆ ಮದುವೆಯಾಗು ಎಂದು ಫೋನ್ ನಲ್ಲಿ ಹೇಳಿದ್ದಾಳೆ. ದೀಪಾಳಿಗೆ ಮದುವೆ ಇಷ್ಟವಿಲ್ಲ. ಹಾಗಿದ್ದರೂ ಬೇರೆ ದಾರಿ ಇಲ್ಲದೇ, ಅಪ್ಪ-ಅಮ್ಮನ ಮರಿಯಾದೆ ಉಳಿಸುವ ಸಲುವಾಗಿ ಮದುವೆಗೆ ಒಪ್ಪಿದ್ದು, ಹಸೆಮಣೆ ಏರಿದ್ದಾಳೆ. ಚಿರಾಗ್ ಕೂಡ ವಿಧಿ ಇಲ್ಲದೇ ತಾಳಿ ಕಟ್ಟಿದ್ದಾನೆ. ದೀಪಾ ಕೂಡ ಅಪ್ಪನ ಅಮ್ಮನ ಮಾತಿಗೆ ಬೆಲೆ ಕೊಟ್ಟಿದ್ದಾಳೆ. ದೀಪಾಳಿಗೆ ಅವರ ತಾಯಿ ಇನ್ಮುಂದೆ ಗಂಡನ ಮನೆಯೇ ಎಲ್ಲ. ನಮ್ಮ ಮನೆ ನಿನ್ನ ಪಾಲಿಗಿಲ್ಲ ಎಂಬಂತೆ ಮಾತನಾಡಿ ಮಡಿಲು ತುಳಬಿ ಕಳಿಸುತ್ತಾಳೆ. ಇನ್ನು ಸೌಂದರ್ಯ ಮದುವೆ ಮುಗಿದ ಬಳಿಕ ಊರಿಗೆ ಹೋಗುವುದು ಬೇಡ ಎಂದು ಸೊಸೆಯನ್ನು ವೆಲ್ಕಂ ಮಾಡಿಕೊಳ್ಳಲು ಮನೆಗೆ ವಾಪಸ್ ಆಗಿದ್ದಾಳೆ.

brahmagantu-serial-10-july-episode-written-update

ದೀಪಾಳನ್ನು ಮನೆ ತುಂಬಿಸಿಕೊಳ್ಳುತ್ತಾಳಾ ಸೌಂದರ್ಯ

ಚಿರಾಗ್ ಮತ್ತು ಅವನ ಹೆಂಡತಿಗಾಗಿ ಅದ್ಧೂರಿ ಸ್ವಾಗತ ಕೋರಲು ತಯಾರಿ ನಡೆಸಿದ್ದಾಳೆ. ಜ್ಯೋತಿಷಿಗಳು ಫೋನ್ ಮಾಡಿ ಚಾಲೆಂಜ್‌ನಲ್ಲಿ ಸೋತಿದ್ದೀಯಾ ಎಂದು ಹೇಳುತ್ತಾರೆ. ಆದರೆ, ಸೌಂದರ್ಯ ನಂಬುವುದಿಲ್ಲ. ಮನೆಗೆ ಚಿರಾಗ್ ಬಂದಾಗ ಅವಳ ಹೆಂಡತಿ ಕುರೂಪಿ ಎಂಬುದನ್ನು ನೋಡಿ ಗಾಬರಿಯಾಗುತ್ತಾಳೆ. ನನ್ನ ಮನೆಯವರಲ್ಲದವರು ಯಾವತ್ತಿಗೂ ಈ ಮನೆಯೊಳಗೆ ಬರಬಾರದು ಎಂದು ಖಡಾಖಂಡಿತವಾಗಿ ಹೇಳುತ್ತಾಳೆ. ಗೆರೆ ದಾಟಿ ಬಂದರೆ ಯುದ್ಧವೇ ಆಗುತ್ತದೆ ಎಂದು ಹೇಳಿ, ಚಿರಾಗ್ ನನ್ನು ಮನೆಗೆ ಒಳಕ್ಕೆ ಕರೆದುಕೊಂಡು ಹೋಗುತ್ತಾಳೆ. ಮುಂದೆ ದೀಪಾ ಏನು ಮಾಡುತ್ತಾಳೆ ಎಂಬ ಕುತೂಹಲ ಮೂಡಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X