Brahmagantu; ಮಾಧ್ಯಮದ ಎದುರು ದೀಪಾ ಮಾತನಾಡಿದ್ದೇನು : ಸೌಂದರ್ಯ ಕೊಟ್ಟ ಅವಕಾಶವೇನು..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾಳನ್ನು ಸೌಂದರ್ಯ ಮನೆಯಿಂದ ಆಚೆ ಹಾಕಿದ್ದು, ಔಟ್ ಹೌಸ್ ನಲ್ಲೇ ಇರುವಂತಾಗಿದೆ. ದೀಪಾಳ ತಂದೆ-ತಾಯಿಗೆ ಈ ಸತ್ಯ ಗೊತ್ತಾಗಿಲ್ಲ. ಚಿರಾಗ್ ಮದುವೆಯ ಬಳಿಕ ಪ್ರೆಸ್ ಮೀಟ್ ನಡೆಯಬೇಕಿತ್ತು. ಅದನ್ನು ಹೇಗಾದರೂ ಮಾಡಿ ತಡೆಯೋಣ ಎಂದು ಸೌಂದರ್ಯ ಪ್ಲಾನ್ ಮಾಡಿದ್ದರೆ, ಪ್ರಭಾಕರ ಒಂದು ದಿನ ಮುನ್ನವೇ ಪ್ರೆಸ್ ಮೀಟ್ ಅರೇಂಜ್ ಮಾಡಿದ್ದಾನೆ. ಇದರಿಂದ ಸೌಂದರ್ಯಾಳಿಗೆ ಶಾಕ್ ಆಗಿದೆ. ಆದರೆ, ಮನೆಯಲ್ಲಿ ಚಿರಾಗ್ ಮತ್ತು ದೀಪಾ ಇಬ್ಬರೂ ಇಲ್ಲ ಎಂದು ಹೇಳಲು ಯೋಚಿಸುತ್ತಾಳೆ. ಪ್ರಭಾಕರ ಈ ಗುಟ್ಟನ್ನು ಮೀಡಿಯಾ ಮುಂದೆ ಬಿಟ್ಟುಕೊಟ್ಟಿದ್ದಾನೆ.


ಮಾಧ್ಯಮದ ಮುಂದೆ ಮರಿಯಾದೆ ಉಳಿಸಿದ ಸೊಸೆ

ಮಾಧ್ಯಮದ ಎದುರು ಸಿಕ್ಕಿ ಬಿದ್ದ ಸೌಂದರ್ಯ ಬೇರೆ ದಾರಿ ಇಲ್ಲದೇ, ಚಿರಾಗ್ ಅನ್ನು ಪ್ರೆಸ್ ಮೀಟ್ ಅಟೆಂಡ್ ಮಾಡುವಂತೆ ಒಪ್ಪಿಸಿದ್ದಾಳೆ. ಚಿರಾಗ್ ಅತ್ತಿಗೆ ಮಾತನ್ನು ದಿಕ್ಕರಿಸಲಾಗದೇ, ಸುಮ್ಮನಾಗಿದ್ದಾನೆ. ಇತ್ತ ದೀಪಾ, ಸೌಂದರ್ಯ ಹೇಳಿದಂತೆ ತಯಾರಾಗಿದ್ದಾಳೆ. ಮೈ ಮೇಲೆ ಒಡವೆ ಇಲ್ಲದ ಕಾರಣ ಅರ್ಚನಾ ಮನೆ ಸೊಸೆಗೆಂದು ತೆಗೆದಿಟ್ಟಿದ್ದ ಒಡವೆಗಳನ್ನು ನೀಡಿದ್ದಾಳೆ. ಮಾಧ್ಯಮದ ಎದುರು ಚಿರಾಗ್ ಮತ್ತು ದೀಪಾ ಕುಳಿತಿದ್ದು, ಚಿರಾಗ್ ಈ ಮದುವೆ ಇಷ್ಟವಿಲ್ಲ ಎಂಬುದನ್ನು ಎಲ್ಲೂ ತೋರಿಸಿಕೊಳ್ಳದಂತೆ ಮಾತನಾಡಿದ್ದಾನೆ. ದೀಪಾಳನ್ನು ಮಾತನಾಡಿಸಿದಾಗ ದೀಪಾ, ಈ ಮನೆಯಲ್ಲಿ ಎಲ್ಲರೂ ಹಿಂಸೆ ಕೊಡುತ್ತಿದ್ದಾರೆ ಎಂದೆಲ್ಲಾ ನೀವು ಭಾವಿಸಿದ್ದರೆ ಅದು ಸುಳ್ಳು. ನನ್ನನ್ನು ಈ ಮನೆಯಲ್ಲಿ ಎಲ್ಲರೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳುತ್ತಾಳೆ.

Brahmagantu Serial 14 August episode written update

ಹೊಟ್ಟೆ ಉರಿಯಿಂದ ಬೆಂದ ರೂಪಾ

ಈ ಮೂಲಕ ಮನೆಯ ಮಾನ ಮರ್ಯಾದೆ ಹರಾಜಾಗದಂತೆ ನೋಡಿಕೊಳ್ಳುತ್ತಾಳೆ. ದೀಪಾ ಮಾತನಾಡಿದ ರೀತಿಗೆ ಮಾಧ್ಯಮದವರು ಗಪ್ ಚುಪ್ ಆಗುತ್ತಾರೆ. ಇನ್ನು ಮಾಧ್ಯಮದಲ್ಲಿ ಬರುತ್ತಿರುವ ಪ್ರೆಸ್ ಮೀಟ್ ನೋಡಿದ ಜಯರಾಂ ಮತ್ತು ವತ್ಸಲಾ ಖುಷಿ ಪಟ್ಟಿದ್ದಾರೆ. ರೂಪಾ ಕೆಂಡಾಮಂಡಲವಾಗಿದ್ದಾಳೆ. ನಾನು ಇರಬೇಕಾದ ಜಾಗದಲ್ಲಿ ದೀಪಾ ಇದ್ದಾಳೆ. ಅರಮನೆಯಲ್ಲಿ ಮೆರೆಯುತ್ತಿದ್ದಾಳೆ ಎಂದು ಹೊಟ್ಟೆ ಉರಿದುಕೊಳ್ಳುತ್ತಾಳೆ. ಅರವಿಂದ್ ರೂಪಾಳನ್ನು ಸಮಾಧಾನ ಮಾಡಲು ಯತ್ನಿಸುತ್ತಾನೆ.

ದೀಪಾ-ಚಿರಾಗ್ ರಿಸೆಪ್ಷನ್ ಯಾವಾಗ..?

ಇನ್ನು ದೀಪಾ ಮನೆಗೋಸ್ಕರ ಮಾತನಾಡಿದ್ದನ್ನು ಖೇಳಿದ ಸೌಂದರ್ಯ ಅವಳಿಗೆ ಈ ಮನೆಯಲ್ಲಿ ಇನ್ಯಾವ ಕೆಲಸವನ್ನೂ ಹೇಳಬಾರದು ಎಂದು ನಿರ್ಧರಿಸಿದ್ದಾಳೆ. ಮಾಧ್ಯಮದವರು ಚಿರಾಗ್ ತಂದೆಯನ್ನು ರಿಸೆಪ಼್ನ್ ಬಗ್ಗೆ ಪ್ರಶ್ನಿಸುತ್ತಾರೆ. ಈ ಮದುವೆಯನ್ನು ಯಾರೂ ಅಪಾರ್ಥ ಮಾಡಿಕೊಳ್ಳಬಾರದು ಎಂಬ ಕಾರಣಕ್ಕೆ ಇನ್ನು ಎರಡು ದಿನಗಳಲ್ಲಿ ಚಿರಾಗ್ ಮತ್ತು ದೀಪಾಳ ರಿಸೆಪ್ಶನ್ ನಡೆಯುತ್ತದೆ ಎಂದಿದ್ದಾನೆ. ಇದರಿಂದ ಚಿರಾಗ್ ಗೆ ಬೇಸರವಾಗಿದೆ. ಅವಳನ್ನು ನಾನು ಹೆಂಡತಿ ಎಂದು ಒಪ್ಪಿಕೊಂಡಿಲ್ಲ. ಅಲ್ಲದೇ, ಈ ಮನೆಯಲ್ಲಿ ಮನೆ ಕೆಲಸದವಳಾಗಿದ್ದಾಳೆ ಅವಳ ಜೊತೆಗೆ ರಿಸೆಪ್ಶನ್ ಹೇಗೆ ಸಾಧ್ಯ ಎನ್ನುತ್ತಾನೆ. ಚಿರಾಗ್ ಅನ್ನು ಅವರ ತಂದೆ ದಯವಿಟ್ಟು ಇದೊಂದು ನಡೆಸಿಕೊಡು ಎಂದು ಕೇಳಿಕೊಳ್ಳುತ್ತಾರೆ.

Brahmagantu Serial 14 August episode written update

ದೀಪಾಳಿಗೆ ಸೊಸೆಯಾಗುವ ಅವಕಾಶ

ಜಾಜಿ ಚಿರಾಗ್ ಗೆ ಯಾವುದೇ ಕೆಲಸ ಮಾಡದಂತೆ ಹೇಳಿದ್ದಕ್ಕೆ ದೀಪಾ ಗಾಬರಿಯಾಗುತ್ತಾಳೆ. ಸೌಂದರ್ಯ ಜಾಜಿಯನ್ನು ಕರೆದು ಮಾತನಾಡಿಸುತ್ತಾಳೆ. ನಿನಗೆ ಈ ಮನೆಯ ಸೊಸೆಯಾಗಲು ಅವಕಾಶ ಮಾಡಿಕೊಡುತ್ತೇನೆ. ಆದರೆ, ಈ ಮನೆಯ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುತ್ತೀಯಾ. ಈ ಮನೆಯನ್ನು ಹೇಗೆ ನಡೆಸುತ್ತೀಯಾ ಎಂದು ನೋಡುತ್ತೇನೆ. ಈ ಪರೀಕ್ಷೆಯಲ್ಲಿ ಗೆದ್ದರೆ ಮಾತ್ರವೇ ನಿನಗೆ ಸೊಸೆಯಾಗುವ ಅವಕಾಶವಿದೆ ಎಂದು ಸೌಂದರ್ಯ ಕಂಡೀಷನ್ ಹಾಕಿದ್ದಾಳೆ.ೀಗ ದೀಪಾಳ ಬಾಳಲ್ಲಿ ಬೆಳಕು ಮೂಡುವ ಲಕ್ಷಣಗಳು ಗೋಚರಿಸುತ್ತಿದ್ದು, ವೀಕ್ಷಕರು ಹ್ಯಾಪಿ ಆಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X