Brahmagantu ; ಮನೆ ಬೆಳಗಬೇಕಾದ ದೀಪಾ ಬದುಕಲ್ಲಿ ಕತ್ತಲೆ : ಕಳ್ಳರ ಕೈಗೆ ಸಿಕ್ಕವಳು ಏನಾದಳು..?
ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾ ಮನೆ ಬಿಟ್ಟು ಓಡಿ ಹೋಗಿದ್ದಕ್ಕೆ ದೀಪಾಳ ಜೊತೆಗೆ ಚಿರಾಗ್ ಮದುವೆ ಮಾಡಿ ಕಳಿಸಿಕೊಡಲಾಗಿದೆ. ದೀಪಾಳ ಬಗ್ಗೆ ಅಣ್ಣನಿಗೆ ಚಿಂತೆ ಶುರುವಾಗಿದೆ. ತಂಗಿಯನ್ನು ನೋಡಲೆಂದು ಹೊರಟಿರುವ ಅಣ್ಣನಿಗೆ ಇನ್ಸ್ ಪೆಕ್ಟರ್ ಮಗಳ ಜೊತೆಗೆ ಕಿರಿಕ್ ಆಗಿದ್ದು, ಜಯರಾಂ ಗೆ ದೂರು ಹೋಗಿದೆ. ನಿಮ್ಮ ಕುಡುಕ ಮಗ ನರಸಿಂಹನನ್ನು ಅರೆಸ್ಟ್ ಮಾಡದಿದ್ದರೆ, ನಿನ್ನ ಕೆಲಸ ಹೋಗುತ್ತದೆ ಎಂದು ಬೆದರಿಸಿದ್ದಾರೆ.ಹೀಗಾಗಿ ಜಯರಾಂ ಮಗನನ್ನು ಅರೆಸ್ಟ್ ಮಾಡಲು ಮುಂದಾಗಿದ್ದು, ನರಸಿಂಹ ಅಪ್ಪನಿಂದ ಎಸ್ಕೇಪ್ ಆಗಿ ತಂಗಿಯನ್ನು ನೋಡಲು ಬೆಂಗಳೂರಿನ ಕಡೆಗೆ ಪಯಣ ಬೆಳೆಸಿದ್ದಾನೆ.
ರೂಪಾಳ ನೆನಪಲ್ಲಿ ಕಳೆದು ಹೋದ ಚಿರಾಗ್
ಅತ್ತಿಗೆ ಮಾತನ್ನು ಮೀರದ ಚಿರಾಗ್, ತಾಳಿ ಕಟ್ಟಿ ಕರೆದುಕೊಂಡು ಬಂದು ಹುಡುಗಿಯನ್ನು ಲೆಕ್ಕದಲ್ಲೇ ಇಟ್ಟುಕೊಂಡಿಲ್ಲ. ಚಿರಾಗ್ ಅಕ್ಕ ತಮ್ಮನಿಗೆ ಬುದ್ಧಿ ಹೇಳುತ್ತಾಳೆ. ತಾಳಿ ಕಟ್ಟಿ ಕರೆದುಕೊಂಡು ಬಂದಿದ್ದೀಯಾ. ಅವಳ ಬದುಕಿನ ಬಗ್ಗೆ ಯೋಚನೆ ಮಾಡು ಎಂದು ಹೇಳಿದರೂ ಚಿರಾಗ್ ಕಿವಿಕೊಡುವುದಿಲ್ಲ. ರೂಪಾ ತನ್ನ ಕೆರಿಯರ್ ಗೋಸ್ಕರ ಈ ಮದುವೆ ಬೇಡ ಎಂದುಕೊಂಡು ಓಡಿ ಹೋಗಿದ್ದಾಳೆ ಎಂದು ಚಿರಾಗ್ ನಂಬಿದ್ದಾನೆ. ಅವಳ ರೂಪಕ್ಕೆ ಮಾರು ಹೋಗಿರುವ ಚಿರಾಗ್, ಅವಳ ನೆನಪಲ್ಲೇ ಇದ್ದಾನೆ. ತನ್ನ ಸುತ್ತಾ ಏನಾಗುತ್ತಿದೆ ಎಂಬುದನ್ನೂ ಮರೆತು ರೂಪಾಳನ್ನೇಋ ಸ್ಮರಿಸುತ್ತಿದ್ದಾಳೆ.

ಹಠ ಸಾಧಿಸಿದ ಸೌಂದರ್ಯ
ದೀಪಾ ಮನೆಗೆ ಬಂದಾಗಿನಿಂದಲೂ ನಿಂತ ಜಾಗದಲ್ಲೇ ನಿಂತಿದ್ದಾಳೆ. ಸೌಂದರ್ಯ ಇದಕ್ಕೆ ಕೊಂಚವೂ ಕೇರ್ ಮಾಡುತ್ತಿಲ್ಲ. ಎಷ್ಟು ಹೊತ್ತು ಇರುತ್ತಾಳೋ ಇರಲಿ ಎಂದು ಸುಮ್ಮನಿದ್ದಾಳೆ. ದೀಪಾ ಮನಸ್ಸಿನಲ್ಲಿ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಾಗಿಲ್ಲ. ಅವರ ತಂದೆ ಜಯರಾಂ ಫೋನ್ ಮಾಡಿದಾಗ, ಮನೆ ಅರಮನೆಯಂತಿದೆ. ನಾನು ರಾಣಿಯಾಗಿದ್ದೀನಿ ಎಂದು ಸುಳ್ಳು ಹೇಳಿದ್ದಾಳೆ. ಆದರೆ, ಮುಂದೆ ಏನು ಮಾಡುತ್ತಾಳೋ ಗೊತ್ತಿಲ್ಲ. ಸೌಂದರ್ಯ ಮಾತ್ರ ದೀಪಾಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಹಠ ಮಾಡಿದ್ದಾಳೆ.
ಹಸಿ ಮೈಯಲ್ಲಿ ಬದುಕಿನ ದಾರಿ ಕಳೆದುಕೊಂಡ ದೀಪಾ
ಮಳೆ ಬಂದಾಗಲೂ ನಿಂತಲ್ಲೇ ನಿಂತು ತೋಯ್ದು ಹೋದ ದೀಪಾ ಅಚಲವಾಗಿದ್ದಾಳೆ. ಅಲ್ಲೇ ಇದ್ದ ವಾಚ್ ಮ್ಯಾನ್ ಬಳಿ ದೇವಸ್ಥಾನದ ಅಡ್ರೆಸ್ ಕೇಳಿದ್ದಾಳೆ. ಬ್ಯಾಗ್ ಹಿಡಿದುಕೊಂಡು ಹಸಿ ಮೈಯಲ್ಲೇ ದೇವಸ್ಥಾನದ ಕಡೆಗೆ ಹೊರಟಿದ್ದಾಳೆ. ದಾರಿ ಮಧ್ಯೆ ಪುಂಡರು ಕಂಡಿದ್ದು, ದೀಪಾ ಧರಿಸಿದ್ದ ಒಡವೆಯ ಹಿಂದೆ ಬಿದ್ದಿದ್ದಾರೆ. ದೀಪಾಳನ್ನು ಕಳ್ಳರು ಫಾಲೋ ಮಾಡಿದಾಗ ದೀಪಾ ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಕಳ್ಳರು ದೀಪಾಳ ಬೆನ್ನು ಹತ್ತಿದ್ದಾರೆ. ಅವರ ಕಣ್ಣಿಗೆ ಮರಳು ಎರಚಿ ತಪ್ಪಿಕೊಂಡು ಓಡಿ ಹೋಗುತ್ತಾಳೆ. ಮನೆ ಬೆಳಗಬೇಕಾದ ದೀಪಾ ಬದುಕು ಕತ್ತಲಾಗಿದೆ.

ರೌಡಿಗಳಿಂದ ತಪ್ಪಿಸಿಕೊಂಡ ದೀಪಾ
ಆದರೆ, ಅವರು ದೀಪಾಳನ್ನು ಬಿಡದೇ, ಒಡವೆ ಬಿಚ್ಚಿ ಕೊಡು ಎಂದು ಬೆದರಿಸುತ್ತಾರೆ. ಇದೇ ಸಮಯಕ್ಕೆ ಸರಿಯಾಗಿ ಪೊಲೀಸರು ಬಂದಿದ್ದು, ಕಳ್ಳರನ್ನು ಹಿಡಿದು ಅರೆಸ್ಟ್ ಮಾಡಿದ್ದಾರೆ. ದೀಪಾಳನ್ನು ಏನಾಯ್ತು. ಎಲ್ಲಿಗೆ ಬಿಡಬೇಕು, ಮದುವೆಯಾಗಿರುವ ಹುಡುಗಿ, ನಿನ್ನ ಗಂಡ ಮೋಸ ಮಾಡಿದ್ದಾನಾ ಎಂದು ಕೇಳಿದ್ದಕ್ಕೆ, ದೀಪಾ ಸುಳ್ಳು ಹೇಳಿದ್ದಾಳೆ. ನನ್ನ ಗಂಡ ತುಂಬಾ ಒಳ್ಳೆಯವರು ಆದರೆ, ನಾನೇ ಊರಿಗೆ ಹೊಸಬಳು. ಹಾಗಾಗಿ ತಾನು ದೇವಸ್ಥಾನದಿಂದ ತಪ್ಪಿಸಿಕೊಂಡಿದ್ದೀನಿ. ನಾನೇ ಹೋಗುತ್ತೀನಿ ಎಂದಿದ್ದಾಳೆ. ದೀಪಾ ಸುಳ್ಳು ಹೇಳುತ್ತಿರುವ ಬಗ್ಗೆ ಪೊಲೀಸರು ಗಮನಿಸಿದ್ದಾರೆ. ಆದರೆ, ದೀಪಾ ಮುಂದಿನ ದಾರಿ ಯಾವುದು ಎಂದು ಕಾದು ನೋಡಬೇಕಿದೆ.


Click it and Unblock the Notifications











