Brahmagantu: ಗಂಡನ ಮನೆಯ ಮರ್ಯಾದೆ ಉಳಿಸಲು ದೀಪಾ ಮಾಡಿದ್ದೇನು..?
ಬ್ರಹ್ಮಗಂಟು ಧಾರಾವಾಹಿಯಲ್ಲಿ ದೇವಸ್ಥಾನದಲ್ಲಿ ಆಶ್ರಯ ಪಡೆದು, ತನ್ನ ಬದುಕು ಕಟ್ಟಿಕೊಳ್ಳಬೇಕು. ತಂದೆಗೆ ಹೊರೆಯಾಗದಂತೆ ಇರಬೇಕು ಎಂದು ದೇವಸ್ಥಾನವನ್ನು ದೀಪಾ ಸೇರುತ್ತಾಳೆ. ದೇವಿಯನ್ನು ಕಂಡ ಕೂಡಲೇ ನನ್ನ ಪಾಲಿಗೆ ತಂದೆ ಮನೆಯೂ ಮುಚ್ಚಿ ಹೋಗಿದೆ. ಈಗ ನನ್ನ ಗಂಡನ ಮನೆಯೂ ನನ್ನ ಪಾಲಿಗೆ ಇಲ್ಲದಂತಾಗಿದೆ. ನನ್ನ ಬದುಕಿಗೆ ನೀನೇ ಆಧಾರ ಎಂದು ದೇವರ ಮೇಲೆ ಭಾರ ಹಾಕುತ್ತಾಳೆ. ಅರ್ಚಕರಿಗೆ ಸಹಾಯ ಮಾಡುತ್ತಾ ಬಂದ ಭಕ್ತರಿಗೆ ಪ್ರಸಾದವನ್ನು ಹಂಚುತ್ತಿರುತ್ತಾಳೆ. ಇದೇ ಸಮಯಕ್ಕೆ ಸರಿಯಾಗಿ ದೀಪಾ ಅಣ್ಣ ನರಸಿಂಹ ಹಾಗೂ ತಂದೆ ಜಯರಾಂ ಇಬ್ಬರೂ ಆಗಮಿಸುತ್ತಾರೆ.
ಅಣ್ಣ, ಅಪ್ಪನನ್ನು ಕಂಡು ಮರೆಯಾದ ದೀಪಾ
ಇಬ್ಬರ ಕಣ್ಣಿಗೂ ಕಾಣಿಸಿಕೊಳ್ಳಬಾರದು ಎಂಬ ಕಾರಣಕ್ಕೆ ದೀಪಾ ಬಚ್ಚಿಟ್ಟುಕೊಳ್ಳುತ್ತಾಳೆ. ಜಯರಾಂ ನರಸಿಂಹನನ್ನು ಹುಡುಕುವಾಗ ಅರ್ಚಕರು ಬಂದು ದೀಪಾಳನ್ನು ಕೇಳುತ್ತಾರೆ. ಮದುವೆ ಬಟ್ಟೆಯಲ್ಲಿದ್ದ ಹುಡುಗಿ ಎಲ್ಲರಿಗೂ ಪ್ರಸಾದ ಕೊಡುತ್ತಿದ್ದಳು ಯಾರಾದರೂ ನೋಡಿದ್ದೀರಾ ಎಂದಾಗ, ಜಯರಾಂ ತನಗೆ ಇರುವುದು ಒಬ್ಬಳೇ ಮಗಳು ದೀಪಾ. ಅವಳನ್ನು ನೋಡಲು ಬೆಂಗಳೂರಿಗೆ ಬರಬೇಕಿತ್ತು. ಆದರೆ, ನನ್ನ ದುರಾದೃಷ್ಟ, ಮಗ ಎನಿಸಿಕೊಂಡ ನರಸಿಂಹ ನನ್ನು ಅರೆಸ್ಟ್ ಮಾಡಲು ಬಂದಿದ್ದೀನಿ ಎಂದು ಬೇಸರ ಮಾಡಿಕೊಳ್ಳುತ್ತಾನೆ. ರೂಪಾ ಕೂಡ ತನ್ನ ಮರಿಯಾದೆಯನ್ನು ತೆಗೆದ ಕಾರಣ, ಅವಳ ನೆನಪುಗಳನ್ನು ಸುಟ್ಟು ಹಾಕಿದ್ದಾನೆ ಜಯರಾಂ. ದೀಪಾ ಸುಖವಾಗಿರಬೇಕು ಎಂದು ದೇವರಲ್ಲಿ ಪ್ರಾರ್ಥಿಸುತ್ತಾನೆ. ಮನೆಯ ಪರಿಸ್ಥಿತಿಯನ್ನು ತಿಳಿದ ದೀಪಾ ನೊಂದುಕೊಳ್ಳುತ್ತಾಳೆ.

ಮಗನನ್ನು ಅರೆಸ್ಟ್ ಮಾಡಿದ ಜಯರಾಂ
ತಂಗಿಯನ್ನು ನೋಡಲೆಂದು ತಪ್ಪಿಸಿಕೊಂಡು ಬೆಂಗಳೂರಿಗೆ ಬಂದ ನರಸಿಂಹ ಜಯರಾಂ ಕಣ್ತಪ್ಪಿಸಿಕೊಂಡು ಓಡಾಡುತ್ತಿರುತ್ತಾನೆ. ಸಿಕ್ಕಿದ ಕೂಡಲೇ ಜಯರಾಂ ಕೆನ್ನೆಗೆ ಬಾರಿಸಿ ಅರೆಸ್ಟ್ ಮಾಡುತ್ತಾನೆ. ಆದರೆ, ನರಸಿಂಹ ಒಂದೇ ಒಂದು ಸಲ ತಂಗಿ ದೀಪಾಳನ್ನು ನೋಡಿಕೊಂಡು ಬರುವುದಾಗಿ ಹೇಳುತ್ತಾನೆ. ಆದರೆ, ಜಯರಾಂ ಬಿಡದೇ ಅವನನ್ನು ವಾಪಸ್ ತನ್ನ ಊರಿಗೆ ಕರೆದುಕೊಂಡು ಬರುತ್ತಾನೆ. ತನ್ನ ಕೆಲಸವನ್ನು ಉಳಿಸಿಕೊಂಡ ಜಯರಾಂ, ಇನ್ನು ಮಗಳ ಬಗ್ಗೆ ಯೋಚಿಸಲು ಮುಂದಾಗಿದ್ದಾನೆ.
ಗಂಡನ ಮರ್ಯಾದೆ ಉಳಿಸುತ್ತಾಳಾ..?
ದೀಪಾ ಈಗ ತಮ್ಮ ಮನೆಯ ವರಾಂಗಣದಲ್ಲಿ ಕಾಣುತ್ತಿಲ್ಲ ಎಂಬ ಸತ್ಯ ತಿಳಿದ ಚಿರಾಗ್ ತಂದೆ ಗಾಬರಿಯಾಗುತ್ತಾರೆ. ನಮ್ಮ ಕುಟುಂಬದ ಮಾನ ಮರಿಯಾದೆ ಪ್ರಶ್ನೆ ಇದು ಎಂದು ದೇವಸ್ಥಾನಕ್ಕೆ ಸೊಸೆಯನ್ನು ಹುಡುಕಿಕೊಂಡು ಹೋಗುತ್ತಾರೆ. ದೇವಸ್ಥಾನದಲ್ಲಿ ಹುಡುಕಿದಾಗ ದೀಪಾ ಕಾಣಿಸುವುದಿಲ್ಲ. ಆದರೆ, ಅದೇ ಸಮಯಕ್ಕೆ ತಮ್ಮನಿಗೆ ಫೋನ್ ಮಾಡುವ ದೀಪಾ ಮಾವ ಮಾತನಾಡುತ್ತಾರೆ. ದೀಪಾ ಸಿಗಬೇಕು. ಇಲ್ಲದಿದ್ದರೆ, ನಮ್ಮ ಮನೆಯ ಮಾನ ಮರಿಯಾದೆ ಹಾಳಾಗುತ್ತದೆ ಎಂದು ನೊಂದುಕೊಳ್ಳುತ್ತಾರೆ. ಆಗ ದೀಪಾ ತನ್ನ ತಂದೆ ಮನೆಯ ಮಾನ ಉಳಿಸಲು ಯತ್ನಿಸಿದ ತಾನು ಗಂಡನ ಮನೆಯ ಮರಿಯಾದೆಯನ್ನು ಬೀದಿಗೆ ತರಬಾರದು ಎಂದು ಭಾವಿಸುತ್ತಾಳೆ.

ವಾಪಸ್ ತನ್ನ ಮನೆಗೆ ಬಂದ ದೀಪಾ
ದೇವರಿಗೆ ಕೈ ಮುಗಿದು ಮಾವನ ಕಾರಿನಲ್ಲಿ ಹೋಗಿ ಕೂರುತ್ತಾಳೆ. ಚಿರಾಗ್ ತಂದೆ ದೀಪಾಳನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಈ ವಿಚಾರವನ್ನು ತಿಳಿದ ಸೌಂದರ್ಯ ದೀಪಾಳನ್ನು ಬೈಯ್ಯಲು ಮುಂದಾಗುತ್ತಾಳೆ. ಆದರೆ, ಅವರ ಮಾವ ತಡೆದು, ಇದು ನಮ್ಮ ಮನೆಯ ಮರಿಯಾದೆ ಪ್ರಶ್ನೆ. ದೀಪಾ ಚಿರಾಗ್ ಕೂಡ ಬಾಳಲಿ ಎಂದು ನಾನು ಒತ್ತಾಯ ಮಾಡುವುದಿಲ್ಲ. ಆದರೆ, ಒಂದು ಸಾರಿ ಹೆಣ್ಣಿನ ಕುತ್ತಿಗೆಗೆ ಮೂರು ಗಂಟು ಬಿದ್ದ ಮೇಲೆ ಆಕೆ ನಮ್ಮ ಮನೆಯ ಸೊಸೆ ಆಗಿದ್ದಾಳೆ. ಅವಳು ಈ ಮನೆಯಲ್ಲಿ ಇರುವವರೆಗೂ ಅವಳು ನಮ್ಮ ಕುಟುಂಬದ ಸದಸ್ಯೆ ಆಗಿರುತ್ತಾಳೆ ಎಂದು ಹೇಳುತ್ತಾನೆ.


Click it and Unblock the Notifications











