Brahmagantu; ಗಂಡನ ಮನೆಯಲ್ಲಿ ಕೆಲಸದಾಕೆ ಆದ ದೀಪಾ : ಇನ್ಸ್ ಪೆಕ್ಟರ್ ಮಗಳಿಗೆ ನರಸಿಂಹ ಹೇಳಿದ್ದೇನು..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾ ಏನೇ ಆದರೂ ಈಗ ನಮ್ಮ ಮನೆಯ ಸೊಸೆ ಎಂದು ಚಿರಾಗ್ ತಂದೆ ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಆದರೆ, ದೀಪಾ ಮನೆಗೆ ಬರಲು ಕಾರಣ ತನ್ನ ಗಂಡನ ಮನೆಯ ಮರಿಯಾದೆ, ತನ್ನಿಂದ ಹಾಳಾಗಬಾರದು, ಜೊತೆಗೆ ತನ್ನ ತಂದೆ ಖುಷಿಯಾಗಿರಬೇಕು ಎಂದು ವಾಪಸ್ ಆಗಮಿಸಿದ್ದಾಳೆ. ಆದರೆ, ದೀಪಾ ಮನೆಗೆ ಬಂದಿರುವುದು ಯಾರಿಗೂ ಇಷ್ಟವಿಲ್ಲ. ಸೌಂದರ್ಯ ಕೋಪ ಮಾಡಿಕೊಂಡಿದ್ದಾಳೆ. ಮಾವನಿಗೆ ಎದುರು ಮಾತನಾಡಲಾಗದೇ ಸುಮ್ಮನಾಗಿದ್ದಾಳೆ.

Brahmagantu Serial 18 July episode written update

ದೀಪಾ ಈಗ ಚಿರಾಗ್ ಮನೆ ಕೆಲಸದವಳು

ಸೌಂದರ್ಯ ಅವರ ಮಾವ ರೂಮ್ ಸೇರಿಕೊಂಡ ಮೇಲೆ ದೀಪಾಳಿಗೆ ಬೈಯುತ್ತಾಳೆ. ಮಾವ ಹೇಳಿದರೂ ಎಂದಕೂಡಲೇ ನೀನು ಈ ಮನೆಯವಳಾಗಲು ನಾನು ಬಿಡುವುದಿಲ್ಲ. ನಿನ್ನಿಂದ ನನ್ನ ಮಗ ಚಿರಾಗ್ ಬಾಳು ಹಾಳಾಗೋದು ನನಗೆ ಇಷ್ಟವಿಲ್ಲ ಎಂದು ಹೇಳುತ್ತಾಳೆ. ನಿಮ್ಮ ಅಪ್ಪನಿಗೆ ಫೋನ್ ಮಾಡಿ ಬರೋದಕ್ಕೆ ಹೇಳುತ್ತೀನಿ. ಅವರ ಜೊತೆಗೆ ನಿನ್ನ ಮನೆಗೆ ವಾಪಸ್ ಹೋಗು ಎನ್ನುತ್ತಾಳೆ. ಆಗ ದೀಪಾ, ದಯವಿಟ್ಟು ನನ್ನನ್ನು ಇಲ್ಲಿಂದ ಕಳಿಸಬೇಡಿ. ನಾನು ಈ ಮದುವೆಗೆ ಒಪ್ಪಿದ್ದೇ ನನ್ನ ಅಪ್ಪನ ಖುಷಿಗಾಗಿ. ಅವರು ನನ್ನ ಮಗಳು ಚೆನ್ನಾಗಿದ್ದಾಳೆ ಎಂದು ನೆಮ್ಮದಿಯಾಗಿದ್ದಾರೆ. ಅವರಿಗೆ ಈ ವಿಚಾರ ಗೊತ್ತಾಗುವುದು ಬೇಡ ಎಂದು ಹೇಳುತ್ತಾಳೆ. ಆಗ ಸೌಂದರ್ಯ ಈ ಮನೆ ಕೆಲಸದವಳಾಗಿ ಇರು ಎಂದು ಹೇಳುತ್ತಾಳೆ.

ರೂಮ್ ಚೆಲ್ಲಾಪಿಲ್ಲಿ

ಅವರ ಮನೆಯಲ್ಲಿರುವ ಕೆಲಸದವರನ್ನೆಲ್ಲಾ ಕರೆದು, ಅದರಲ್ಲಿ ಒಬ್ಬಳಿಗೆ ನೀನು ಅಸಿಸ್ಟೆಂಟ್ ಆಗಿ ಇರು ಎಂದು ಹೇಳುತ್ತಾಳೆ. ದೀಪಾ ಇದಕ್ಕೆ ಒಪ್ಪಿಕೊಳ್ಳುತ್ತಾಳೆ. ಕೆಲಸದಾಕೆ ದೀಪಾಳನ್ನು ರೂಮಿಗೆ ಕರೆದುಕೊಂಡು ಹೋಗುತ್ತಾಳೆ. ಸ್ನಾನ ಮಾಡಿ ಬೇಗನೆ ಬಾ ಎಂದು ಹೇಳಿ ಹೋಗುತ್ತಾಳೆ. ಇತ್ತ ಚಿರಾಗ್ ಚಿಕ್ಕಮ್ಮ ಮತ್ತೊಬ್ಬ ಕೆಲಸದವಳನ್ನು ಕರೆದು ರೂಮ್ ಅನ್ನು ಚೆಲ್ಲಾಪಿಲ್ಲಿ ಮಾಡು ನಾನು ನಿನಗೆ ಹಣ ಕೊಡುತ್ತೇನೆ ಎಂದು ಹೇಳುತ್ತಾಳೆ. ದೀಪಾ ಸ್ನಾನಕ್ಕೆ ಹೋಗಿರುವಾಗ ಕೆಲಸದವಳು ಬೇಕಂತಲೇ ರೂಮ್ ಅನ್ನು ಚೆಲ್ಲಾಪಿಲ್ಲಿಯಾಗಿಸಿದ್ದು, ಇದರಿಂದ ದೀಪಾಳಿಗೆ ಯಾವ ರೀತಿ ಸಮಸ್ಯೆ ಆಗುತ್ತದೆಯೋ ಎಂದು ಕುತೂಹಲ ಮೂಡಿದೆ.

Brahmagantu Serial 18 July episode written update

ನರಸಿಂಹನನ್ನು ಬೈದ ಇನ್ಸ್ ಪೆಕ್ಟರ್ ಮಗಳು

ಜಯರಾಂ ನರಸಿಂಹನನ್ನು ಪೊಲೀಸ್ ಸ್ಟೇಷನ್ ಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ಇನ್ಸ್ ಪೆಕ್ಟರ್ ಫೋನ್ ತೆಗೆಯುವುದಿಲ್ಲ. ಜಯರಾಂ ಇನ್ಸ್ ಪೆಕ್ಟರ್ ಬರುವವರೆಗೂ ಕಾಯುತ್ತಿರುತ್ತಾನೆ. ಬಂದ ಬಳಿಕ ನರಸಿಂಹನನ್ನು ಅವರಿಗೆ ಒಪ್ಪಿಸಿಬಿಟ್ಟು ಹೋಗುತ್ತಾನೆ. ಇನ್ಸ್ ಪೆಕ್ಟರ್ ಮಗಳನ್ನು ಸ್ಟೇಷನ್ ಗೆ ಕರೆಸಿ, ಅವನಿಗೆ ಏನು ಶಿಕ್ಷೆ ಬೇಕಾದರೂ ಕೊಡು ಎಂದು ಹೇಳುತ್ತಾನೆ. ಇನ್ಸ್ ಪೆಕ್ಟರ್ ನ ಲಾಠಿ ತೆಗೆದುಕೊಂಡು ಅವರ ಮಗಳು ನರಸಿಂಹನ ಬಳಿ ಹೋಗುತ್ತಾಳೆ.

ಐ ಲವ್ ಯೂ ಎಂದ ನರಸಿಂಹ

ಈಗಲಾದರೂ ಗೊತ್ತಾಯ್ತಾ ನನ್ನ ತಾಕತ್ತು ಏನು ಅಂತ. ಇನ್ಮುಂದೆ ನನ್ನ ಬಗ್ಗೆ ಸ್ವಲ್ಪ ಎಚ್ಚರವಾಗಿರು ಎಂದೆಲ್ಲಾ ಅವಾಜ್ ಹಾಕುತ್ತಾಳೆ. ನಾನು ಮನಸ್ಸು ಮಾಡಿದರೆ ಏನುಬೇಕಾದರೂ ಮಾಡುತ್ತೀನಿ ಹುಷಾರ್ ಎಂದು ಹೆದರಿಸುತ್ತಾಳೆ. ನರಸಿಂಹ ಅವಳ ಮಾತಿಗೆ ಬಗ್ಗದೇ, ನಿಮ್ಮ ಬಳಿ ಮಾತನಾಡುವುದಿದೆ ಎಂದು ಹತ್ತಿರ ಕರೆಯುತ್ತಾನೆ. ಅವಳ ಕಿವಿಯ ಬಳಿ ಐ ಲವ್ ಯೂ ಎಂದು ಹೇಳುತ್ತಾನೆ. ಇದನ್ನು ಕೇಳಿ ಅವಳು ಶಾಕ್ ಆಗುತ್ತಾಳೆ. ನರಸಿಂಹನ ಮುಂದಿನ ಆಲೋಚನೆ ಏನು. ಯಾಕೆ ಅವಳಿಗೆ ಹೀಗೆ ಹೇಳಿದ ಎಂಬುದು ಕಾದು ನೋಡಬೇಕು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X