Brahmagantu; ಗಂಡನ ಮನೆಯಲ್ಲಿ ಮೊದಲ ದಿನವೇ ದೀಪಾ ಚಿರಾಗ್ ರೂಮ್ ನಲ್ಲಿ ಮಾಡಿದ್ದೇನು..?
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ಕೂಡ ಬೇರೆ ದಾರಿ ಇಲ್ಲದೇ ದೀಪಾಳನ್ನು ತನ್ನ ಮನೆಯಲ್ಲೇ ಉಳಿಸಿಕೊಳ್ಳಬೇಕಾಗಿದೆ. ಇದರಿಂದ ಅವಳಿಗೆ ಮನೆ ಕೆಲಸದವಳಾನ್ನಾಗಿ ಮಾಡಿದ್ದಾಳೆ. ಸ್ನಾನ ಮಾಡಿ ಲಂಗ ದಾವಣಿ ಹಾಕಿಕೊಂಡ ದೀಪಾ ತಮ್ಮ ರೂಮ್ ಚೆಲ್ಲಾ ಪಿಲ್ಲಿ ಆಗಿರುವುದನ್ನು ನೋಡಿ ಕ್ಲೀನ್ ಮಾಡುತ್ತಾಳೆ. ಕೆಲಸ ಕೇಳಲು ಬಂದಾಗ ಅವಳ ಸಹಪಾಠಿ ತಿಂಡಿ ತಿನ್ನಲು ಕೊಟ್ಟಿದ್ದಾಳೆ. ಆದರೆ, ಸುಕನ್ಯಾ ಈಗ ದೀಪಾ ಮೇಲೆ ಸವಾರಿ ಮಾಡುತ್ತಿದ್ದಾಳೆ. ತಿಂಡಿ ತಿನ್ನಲು ಕೂಡ ಬಿಡದೇ ಮಾವನ ರೂಮ್ ಕ್ಲೀನ್ ಮಾಡಲು ಹೇಳಿದ್ದಾಳೆ.
ಚಿರಾಗ್ ರೂಮ್ ಬೆಡ್ ಮೇಲೆ ದೀಪಾ
ಯಾವ ರೂಮ್ ಎಂದು ದೀಪಾ ಕೇಳಿದ್ದಕ್ಕೆ ಚಿರಾಗ್ ರೂಮ್ ಅನ್ನು ಮಾವನ ರೂಮ್ ಎಂದು ತೋರಿಸಿದ್ದಾಳೆ. ರೂಮ್ ಕ್ಲೀನ್ ಮಾಡಿ, ಒಬ್ಬಳೇ ಪಠ ಪಠ ಅಂತ ಮಾತನಾಡಿಕೊಳ್ಳುತ್ತಿರುವ ದೀಪಾ ಸುಸ್ತಾಗಿ ಹಾಗೆ ಮಂಚದ ಮೇಲೆ ಮಲಗಿದ್ದಾಳೆ. ಚಿರಾಗ್ ರೂಮಿಗೆ ಬರುತ್ತಿದ್ದಂತೆ ದೀಪಾಳನ್ನು ನೋಡಿ ಕೂಗಾಡುತ್ತಾನೆ. ಅದೇ ಸಮಯಕ್ಕೆ ಸುಕನ್ಯಾ ಬಂದು ಮಾವನ ರೂಮ್ ಗೆ ಹೋಗು ಎಂದರೆ ಚಿರಾಗ್ ರೂಮ್ ಗೆ ಬಂದಿದ್ದೀಯಾ. ಕೆಲಸ ಮಾಡುತ್ತಾ ಚಿರಾಗ್ ಅನ್ನು ಬುಟ್ಟಿಗೆ ಹಾಕಿಕೊಳ್ಳುವ ಪ್ಲಾನ್ ಆ ಎಂದು ಬೈಯುತ್ತಾಳೆ. ದೀಪಾ ಸತ್ಯ ಹೇಳಲು ಯತ್ನಿಸಿದರೂ ಸುಕನ್ಯಾ ಜೋರು ಮಾಡುತ್ತಾಳೆ. ಬೈಯಿಸಿಕೊಂಡು ಬೇರೆ ದಾರಿ ಇಲ್ಲದೇ ದೀಪಾ ಸುಮ್ಮನಾಗುತ್ತಾಳೆ.

ಅಪ್ಪನ ಬಳಿ ಸುಳ್ಳು ಹೇಳಿದ ಮಗಳು
ಸುಕನ್ಯಾ ಬಟ್ಟೆಗಳನ್ನೆಲ್ಲಾ ಕೈಯಲ್ಲೇ ತೊಳೆಯಬೇಕು ಎಂದು ದೀಪಾಳಿಗೆ ಮತ್ತೊಂದು ಕೆಲಸವನ್ನು ಹೇಳುತ್ತಾಳೆ. ದೀಪ ಬಟ್ಟೆ ಒಗೆಯುವ ವೇಳೆಗೆ, ಜಯರಾಂ ಮಗಳನ್ನು ನೆನಪು ಮಾಡಿಕೊಂಡು ಫೋನ್ ಮಾಡುತ್ತಾನೆ. ಅಪ್ಪನ ಫೋನ್ ಎಂದು ಖುಷಿಯಿಂದ ಮಾತನಾಡುತ್ತಿರುತ್ತಾಳೆ. ಈ ಮನೆಯಲ್ಲಿ ರಾಣಿಯಾಗಿದ್ದೀನಿ. ಕೈಗೆ ಬಾದಮಿ ಕೊಟ್ಟು ಅತ್ತಿಗೆ ಕೂರಿಸಿದ್ದಾರೆ. ಕೈಗೂ ಬಾಯಿಗೂ ಕೆಲಸ ಇರುವುದರಿಂದ ಫೋನ್ ಮಾಡಲು ಆಗಲಿಲ್ಲ ಎಂದು ಸುಳ್ಳು ಹೇಳುತ್ತಾಳೆ. ಜಯರಾಮ ಮಗಳ ಮಾತುಗಳನ್ನು ಕೇಳಿ ಖುಷಿ ಪಡುತ್ತಾನೆ. ಅಷ್ಟರಲ್ಲಿ ಅಲ್ಲಿಗೆ ಸುಕನ್ಯಾ ಬರುತ್ತಾಳೆ. ಕೆಲಸ ಮಾಡು ಎಂದರೆ ಹರಟುತ್ತಿದ್ದೀಯಾ ಎಂದು ಬೈಯುತ್ತಾಳೆ. ದೀಪಾ ತಕ್ಷಣವೇ ಫೋನ್ ಕಟ್ ಮಾಡುತ್ತಾಳೆ.
ದೀಪಾಳನ್ನು ಹೆದರಿಸಿದ ಸುಕನ್ಯಾ
ಫೋನ್ ಕಿತ್ತುಕೊಳ್ಳುವ ಸುಕನ್ಯಾ ದೀಪಾಳಿಗೆ ಬಾಯಿಗೆ ಬಂದ ಹಾಗೆ ಬೈಯುತ್ತಾಳೆ. ಬಟ್ಟೆಗಳನ್ನೆಲ್ಲಾ ನೀಟ್ ಆಗಿ ತೊಳೆಯಭೇಕು. ಎಲ್ಲವೂ ಕಾಸ್ಟ್ಲಿ ಬಟ್ಟೆಗಳು ಎಂದು ಹೇಳುತ್ತಾಳೆ. ಜಯರಾಂ ಯಾಕೋ ಫೊನ್ ಕಟ್ಟ ಆಯ್ತು ಎಂದು ಪದೇ ಪದೇ ಮಾಡಿದರೂ ಸುಕನ್ಯಾ ರಿಸೀವ್ ಮಾಡುವುದಿಲ್ಲ. ಫೋನ್ ಬೇಕು ಎಂದರೆ, ನಿಮ್ಮ ಅಪ್ಪನಿಗೆ ನಿನ್ನ ಸ್ಥಿತಿ ಗೊತ್ತಾಗಬಾರದು ಎಂದು ಹೇಳುವ ಕೆಲಸಗಳನ್ನು ನೀಟ್ ಆಗಿ ಮಾಡಬೇಕು ಎಂದು ಹೆದರಿಸುತ್ತಾಳೆ. ದೀಪಾ ತಂದೆಯ ನೆಮ್ಮದಿಗೋಸ್ಕರ ಎಲ್ಲದಕ್ಕೂ ಒಪ್ಪಿಕೊಳ್ಳುತ್ತಾಳೆ.

ಸೌಂದರ್ಯಾಗೆ ಕಾದಿದ್ಯಾ ಗ್ರಹಚಾರಾ..?
ಇತ್ತ ಸೌಂದರ್ಯ ಅಣ್ಣ ಜ್ಯೋತಿಷಿಗಳಿಗೆ ಚಿರಾಗ್ ಮತ್ತು ದೀಪಾ ಮದುವೆಯ ಫೋಟೋಗಳನ್ನು ಕಳಿಸಿದ್ದಾನೆ. ಇದನ್ನು ನೋಡಿ ಖುಷಿಪಟ್ಟ ಜ್ಯೋತಿಷಿಗಳು ಸೌಂದರ್ಯಗೆ ಫೋನ್ ಮಾಡುತ್ತಾನೆ. ನಿನಗೆ ಉಡುಗೊರೆ ಕಳಿಸಿದ್ದೀನಿ ಎಂದು ಪಾದರಕ್ಷೆಗಳನ್ನು ಕಳಿಸಿದ್ದಾನೆ. ಈಗ ಸೌಂದರ್ಯ ತಾನು ಮಾಡಿದ ಚಾಲೆಂಜ್ ಪ್ರಕಾರ ಅವನ ಪಾರಕ್ಷೆಗಳನ್ನು ಹೊತ್ತುಕೊಂಡು ಊರೆಲ್ಲಾ ಮೆರವಣಿಗೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸೌಂದರ್ಯ ಈ ಗ್ರಹಚಾರವನ್ನು ಒಪ್ಪಿಕೊಳ್ಳುತ್ತಾಳಾ ಇಲ್ಲ ತಪ್ಪಿಸಿಕೊಂಡು ಓಡಿ ಹೋಗುತ್ತಾಳಾ ಎಂಬ ಕುತೂಹಲ ಮೂಡಿದೆ.


Click it and Unblock the Notifications











