Brahmagantu ; ಮನೆಗೆ ಬಂದ ಅಣ್ಣನಿಂದ ಸತ್ಯ ಮುಚ್ಚಿಟ್ಟ ದೀಪಾ : ನರಸಿಂಹನಿಗೆ ನಿಜ ಸಂಗತಿ ಗೊತ್ತಾಗುತ್ತಾ..?
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸೌಂದರ್ಯ ದೀಪಾಳಿಗೆ ಬೇಕಂತಲೇ ಹೊಸ ಅಧಿಕಾರವನ್ನು ಕೊಟ್ಟಿದ್ದಾಳೆ. ಇದರಿಂದ ದೀಪಾ ಗಾಬರಿಯಾಗಿದ್ದಾಳೆ. ಎಲ್ಲಾ ನಿರ್ಧಾರಗಳನ್ನು ದೀಪಾಳೇ ತೆಗೆದುಕೊಳ್ಳಬೇಕಿದೆ. ಸೌಂದರ್ಯ ನಿರ್ಧಾರದಿಂದ ಚಿರಾಗ್‌ಗೆ ಬೇಸರವಾಗಿದೆ.ಅತ್ತಿಗೆ ತನ್ನ ಬದುಕಿನ ಬಗ್ಗೆ ಇಂತಹ ನಿರ್ಧಾರ ತೆಗೆದುಕೊಂಡರಲ್ಲ ಎಂದು ಭೇಸರ ಮಾಡಿಕೊಳ್ಳುತ್ತಾನೆ.ಅಲ್ಲದೇ ಸೌಂದರ್ಯ ದೀಪಾಳನ್ನು ಹೆಂಡತಿಯನ್ನಾಗಿ ಸ್ವೀಕರಿಸುವ ನಿರ್ಧಾರ ನಿನ್ನ ಸ್ವಂತದ್ದಾಗಿರಲಿ ಎಂದು ಹೇಳಿದ್ದಾಳೆ. ಇದು ಚಿರಾಗ್ ಅನ್ನು ಇನ್ನಷ್ಟು ಗೊಂದಲಕ್ಕೆ ದೂಡಿದೆ.
ಬೇಸತ್ತಿರುವ ಚಿರಾಗ್ ದೀಪಾ ಜೊತೆಗೆ ಜಗಳ
ಚಿರಾಗ್ ಈಗ ತನ್ನ ಬದುಕಿನ ಬಗ್ಗೆ ಚಿಂತಿಸುತ್ತಾ ತಲೆ ಕೆಡಿಸಿಕೊಂಡಿದ್ದಾನೆ. ಎಲ್ಲರೂ ಊಟಕ್ಕೆ ಬಂದರೂ ಚಿರಾಗ್ ಬಂದಿರುವುದಿಲ್ಲ. ಮೊದಲ ಬಾರಿಗೆ ದೀಪಾ ಚಿರಾಗ್ ನನ್ನು ಊಟಕ್ಕೆ ಕರೆಯಲು ಬರುತ್ತಾಳೆ. ಎಲ್ಲರೂ ಊಟ ಮಾಡಲು ಕಾಯುತ್ತಿದ್ದಾರೆ ನೀವು ಬನ್ನಿ ಎನ್ನುತ್ತಾಳೆ. ದೀಪಾಳನ್ನು ನೋಡಿದ್ದೇ ತಡ ಚಿರಾಗ್ ಫ್ರಸ್ಟ್ರೇಷನ್ ನಲ್ಲಿ ಕೂಗಾಡುತ್ತಾನೆ. ಅತ್ತಿಗೆ ನಿಮಗೆ ಸೊಸೆಯಾಗುವ ಅವಕಾಶ ಕೊಟ್ಟಿರಬಹುದು. ಹಾಗಂತ ನಾನು ನಿಮಗೆ ಹೆಂಡತಿಯ ಸ್ಥಾನವನ್ನು ಯಾವತ್ತೂ ಕೊಡುವುದಿಲ್ಲ. ಹೆಂಡತಿ ಎಂದು ಅಧಿಕಾರ ತೋರಿಸಲು ನನ್ನ ಬಳಿ ಬರಬೇಡಿ ಎಂದು ಬೈಯುತ್ತಾನೆ. ಅಷ್ಟೇ ಅಲ್ಲದೇ, ದೀಪಾ ಈಗ ಔಟ್ ಹೌಸ್ ಗೂ ಹೋಗುವಂತಿಲ್ಲ. ಮಲಗಲು ಚಿರಾಗ್ ರೂಮ್ ಕೂಡ ತನ್ನ ಪಾಲಿಗಿಲ್ಲದಂತಾಗಿದೆ.

ಪ್ರಭಾಕರನಿಗೆ ಸೌಂದರ್ಯ ಪ್ಲಾನ್ ತಿಳಿಯುತ್ತಿಲ್ಲ
ಇತ್ತ ಪ್ರಭಾಕರನಿಗೆ ದೀಪಾಳಿಗೆ ಸೊಸೆಯಾಗುವ ಅವಕಾಶ ಸಿಕ್ಕಿದ್ದು ತಡವಾಗಿ ಗೊತ್ತಾಗಿ ಸೌಂದರ್ಯ ಇಂತಹ ನಿರ್ಧಾರವನ್ನು ಯಾಕಾಗಿ ತೆಗೆದುಕೊಂಡಳು ಎಂಬ ಅನುಮಾನ ಮೂಡಿದೆ. ಇದರ ಹಿಂದೆ ಸೌಂದರ್ಯಾಳ ಪ್ಲಾನ್ ಏನು ಎಂಬುದು ಕೂಡ ಗೊತ್ತಿಲ್ಲ.ಪ್ರಭಾಕರ ಸೌಂದರ್ಯ ಮನಸ್ಸಿನಲ್ಲಿ ಏನಿದೆ ಎಂದು ತಿಳಿದುಕೊಳ್ಳಲು ಪ್ರಯತ್ನ ಪಡುತ್ತಾನೆ. ಆದರೆ, ಸೌಂದರ್ಯ ಯಾವ ವಿಚಾರವನ್ನೂ ಅಣ್ಣನ ಬಳಿ ಹೇಳಿಕೊಳ್ಳುವುದಿಲ್ಲ. ಬದಲಿಗೆ ಮಾವ ಹೇಳಿದಂತೆ ಚಿರಾಗ್ ಮತ್ತು ದೀಪಾ ರೆಸೆಪ಼್ನ್ ಗೆ ತಯಾರಿ ಮಾಡಬೇಕು. ಬಟ್ಟೆ ಶಾಪಿಂಗ್ ಮಾಡಬೇಕು ಎಂದು ಕರೆದುಕೊಂಡು ಹೊರಡುತ್ತಾಳೆ.
ರಾಖಿಗಾಗಿ ಊರಿಂದ ಬಂದ ಅಣ್ಣ
ರಾಖಿ ಹಬ್ಬ ಹಿನ್ನೆಲೆ ಅರ್ಚನಾ ಚಿರಾಗ್ ಗೆ ರಾಖಿ ಕಟ್ಟಿ ಆರತಿ ಮಾಡುತ್ತಾಳೆ. ಚಿರಾಗ್ ಕೂಡ ಅಕ್ಕನಿಗೆ ಸ್ಪೆಷಲ್ ಗಿಫ್ಟ್ ಕೊಡಿಸಲು ಕರೆದುಕೊಂಡು ಹೋಗುತ್ತಾನೆ. ಇದನ್ನು ನೋಡಿದ ದೀಪಾ ತನ್ನ ಅಣ್ಣನನನ್ನು ನೆನೆಪು ಮಾಡಿಕೊಳ್ಳುತ್ತಾಳೆ. ಸೌಂದರ್ಯ ಕೂಡ ಪ್ರಭಾಕರನಿಗೆ ರಾಖಿ ಕಟ್ಟುತ್ತಾಳೆ. ಇವರೆಲ್ಲಾ ಮನೆಯಿಂದ ಹೊರಗೆ ಹೋದ ಬಳಿಕ ನರಸಿಂಹ ತಂಗಿಗಾಗಿ ಮನೆಗೆ ಬರುತ್ತಾನೆ. ವಾಚ್ ಮ್ಯಾನ್ ದೀಪಾ ಔಟ್ ಹೌಸ್ ನಲ್ಲಿ ಇದ್ದಾಳೆ ಎಂದು ಹೇಳಿದ್ದು, ಇದು ಶಾಕ್ ಆಗುತ್ತದೆ. ಔಟ್ ಹೌಸ್ ಬಳಿ ಹೋದಾಗ ಜಾಜಿ ಬಂದು ದೀಪಾ ಮೇಡಂ ಇಲ್ಲಿ ಇರುವುದಿಲ್ಲ. ಮನೆಯಲ್ಲಿರುತ್ತಾರೆ ಎಂದು ಲಾನ್ ಗೆ ಕರೆದುಕೊಂಡು ಹೋಗಿ ಕೂರಿಸುತ್ತಾಳೆ.

ದೀಪಾ ಬದುಕಿನ ಬಗ್ಗೆ ನರಸಿಂಹನಿಗೆ ಅನುಮಾನ
ದೀಪಾ ಅಣ್ಣನಿಗೋಸ್ಕರ ರಾಖಿ ತಯಾರಿಸಿ ಆರತಿ ಮಾಡಿ ಕಟ್ಟುತ್ತಾಳೆ. ಅಣ್ಣನನ್ನು ಒಳಗೆ ಕರೆಯಲಾಗದೇ ದೀಪಾ ಬೇಸರ ಮಾಡಿಕೊಳ್ಳುತ್ತಾಳೆ. ಎಲ್ಲರೂ ಬ್ಯುಸಿ ಇದ್ದೀವಿ ನಾನೂ ಹೊರಗೆ ಹೋಗಬೇಕು. ಇನ್ನೊಂದು ದಿನ ಬಿಡುವಿದ್ದಾಗ ಬಾ ಅಣ್ಣ ಎಂದು ಹೇಳಿ ಕಳಿಸುತ್ತಾಳೆ. ಆದರೆ, ನರಸಿಂಹ ಔಟ್ ಹೌಸ್ ನಲ್ಲಿದ್ದ ದೀಪಾ ಸೀರೆಯನ್ನು ಕಂಡು ಅನುಮಾನಗೊಂಡಿದ್ದಾನೆ. ತನ್ನ ತಂಗಿಯ ಬಟ್ಟೆ ಇಲ್ಲೇಕಿದೆ ಎಂದು ಜಾಜಿಯನ್ನು ಪ್ರಶ್ನಿಸಿದ್ದಾನೆ. ದೀಪಾ ಪರೀಸ್ಥಿತಿ ಬಗ್ಗೆ ನರಸಿಂಹನಿಗೆ ಸತ್ಯ ಗೊತ್ತಾಗುತ್ತಾ ಎಂದು ಕಾದು ನೋಡಬೇಕಿದೆ.


Click it and Unblock the Notifications











