Brahmagantu ; ಪದೇ ಪದೇ ಬೈಯಿಸಿಕೊಳ್ಳುತ್ತಿರುವ ದೀಪಾ ಸಿಕ್ಕ ಅವಕಾಶದಲ್ಲಿ ಗೆಲುವು ಸಾಧಿಸುತ್ತಾಳಾ..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ನರಸಿಂಹ ತಂಗಿಗೋಸ್ಕರ ಕಳಸದಿಂದ ಬೆಂಗಳುರಿಗೆ ಬಂದು ರಾಖಿ ಕಟ್ಟಿಸಿಕೊಂಡು ಹೋಗಿದ್ದಾನೆ. ತಂಗಿಗೆ ಕಾಲ್ಗೆಜ್ಜೆಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾನೆ. ದೀಪಾ ಅಣ್ಣನನ್ನು ಮನೆಯೊಳಗೆ ಕರೆಯದೆಯೇ ಹಾಗೆ ಕಳಿಸಿದ್ದಕ್ಕೆ ಬೇಸರ ಮಾಡಿಕೊಂಡಿದ್ದರೂ ಕೂಡ, ಅಣ್ಣ ಕೊಟ್ಟ ಉಡುಗೊರೆಯನ್ನು ಕಂಡು ಖುಷಿ ಪಟ್ಟಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲ ಎಂದು ತಿಳಿದ ದೀಪಾ, ಕಾಲ್ಗೆಜ್ಜೆಯನ್ನು ಧರಿಸಿಕೊಂಡು ಮನೆಯಲ್ಲೆಲ್ಲಾ ಕುಣಿದಾಡಿದ್ದಾಳೆ. ಗೆಜ್ಜೆ ಶಬ್ಧಕ್ಕೆ ಚಿರಾಗ್ ಬಹಳ ಇರಿಟೇಟ್ ಆಗಿದ್ದಾನೆ.

ಪದೇ ಪದೇ ಬೈಗುಳ ತಿನ್ನುತ್ತಿರುವ ದೀಪಾ

ದೀಪಾಳನ್ನು ನೋಡಿ ಚಿರಾಗ್ ಬೈಯುತ್ತಾನೆ. ಹೀಗೆಲ್ಲಾ ಶಬ್ಧ ಮಾಡಿ ಗಲಾಟೆ ಮಾಡಬೇಡಿ ಎಂದು ಹೇಳುತ್ತಾನೆ. ದೀಪಾಳಿಗೆ ಚಿರಾಗ್ ಬೈಗುಳದಿಂದ ಬೇಸರವಾಗುತ್ತದೆ. ನರಸಿಂಹ ಕಾಲ್ಗೆಜ್ಜೆಯನ್ನು ಕೊಟ್ಟ ವಿಚಾರ ಹೇಳಿದಾಗ, ನಾವ್ಯಾರು ಮನೆಯಲ್ಲಿ ಇಲ್ಲದಾಗ ನಿಮ್ಮ ಅಣ್ಣನನ್ನು ಮನೆಗೆ ಕರೆಸಿಕೊಳ್ಳುವಷ್ಟು ಧೈರ್ಯವೇ ಎಂದು ಪ್ರಶ್ನಿಸಿದ್ದಾನೆ. ಆಗ ಜಾಜಿ ಇಲ್ಲ ಕೊರಿಯರ್ ಬಂದಿದ್ದು ಎಂದು ಸಮಾಧಾನ ಮಾಡುತ್ತಾನೆ. ಇನ್ನು ಮನೆಗೆ ಬ್ಯುಸಿನೆಸ್ ವಿಚಾರ ಮಾತನಾಡಲು ಮನೆಗೆ ಬಂದವರಿಗೆ ದೀಪಾ ಕಾಫಿ ತಂದು ಕೊಡುತ್ತಾಳೆ. ಸೊಸೆ ಲಂಗ ದಾವಣಿ ಹಾಕಿಕೊಂಡು ಮನೆ ಕೆಲಸದವಳಂತೆ ಇದ್ದಿದ್ದಕ್ಕೆ ಸೌಂದರ್ಯಾಳಿಗೆ ಅವಮಾನವಾಗುತ್ತದೆ. ಅದಕ್ಕೂ ಸೌಂದರ್ಯ ದೀಪಾಳನ್ನು ಬೈದು ಕಳಿಸುತ್ತಾಳೆ. ದೀಪಾ ಮನೆಯಲ್ಲಿ ಎಲ್ಲರ ಬಳಿಯೂ ಬೈಗುಳ ತಿನ್ನುತ್ತಿದ್ದಾಳೆ. ಸುಕನ್ಯಾ ಕೂಡ ಬೇಕಂತಲೇ ದೀಪಾಳನ್ನು ಬೈಯುತ್ತಿರುತ್ತಾಳೆ.

Brahmagantu Serial 22 August episode written update

ಸಿಕ್ಕಿರುವ ಅವಕಾಶವನ್ನು ಕಳೆದುಕೊಳ್ಳುತ್ತಾಳಾ ಮನೆ ಸೊಸೆ

ಸೌಂದರ್ಯ ಕೊಟ್ಟಿರುವ ಅವಕಾಶವನ್ನು ಹೇಗೆ ನಿಭಾಯಿಸಬೇಕು ಎಂಬುದು ಅರ್ಥವಾಗದೇ ಎಲ್ಲಿ ಸೋತು ಹೋಗುತ್ತೇನೆ. ಈ ಮನೆಯ ಸೊಸೆಯಾಗಿ ಇರಲಾಗದೇ, ಮನೆ ಬಿಟ್ಟು ಹೋಗಬೇಕಾಗಿ ಬರುತ್ತದೋ ಎಂದು ಆತಂಕಗೊಂಡಿದ್ದಾಳೆ. ದೀಪಾಳ ಆತಂಕ ಕಂಡು ಅರ್ಚನಾ ಧೈರ್ಯ ಹೇಳಿದ್ದಾಳೆ. ನಿಧಾನವಾಗಿ ಎಲ್ಲವೂ ಸರಿ ಹೋಗುತ್ತದೆ. ಹೆದರದೇ, ಎಲ್ಲಾ ಕೆಲಸದಲ್ಲೂ ಭಾಗಿಯಾಗು. ಎಲ್ಲರಿಗೂ ನೀನು ಈ ಮನೆಗೆ ಅಗತ್ಯವಾಗಿರುವ ಹಾಗೂ ತಕ್ಕುನಾದ ಸೊಸೆ ಎಂದು ತೋರಿಸು ಎಂದು ಬುದ್ಧಿ ಹೇಳುತ್ತಾಳೆ. ದೀಪಾಳಿಗೆ ಅರ್ಚನಾ ಮಾತುಗಳನ್ನು ಕೇಳಿ ಸ್ವಲ್ಪ ಖುಷಿಯಾಗುತ್ತದೆ.

ಸಂಜನಾ ಕಾಲು ಗಾಯಗೊಳಿಸಿದ ನರಸಿಂಹ

ಇತ್ತ ಸಂಜನಾ ನರಸಿಂಹನ ಮೇಲಿನ ಸಿಟ್ಟಿಗೆ ಅವರ ಮನೆಗೆ ಹೋಗಿ ವತ್ಸಲಾ ಬಳಿ ಕಾಲು ಒತ್ತಿಸಿಕೊಳ್ಳುತ್ತಾಳೆ. ಇದನ್ನು ನೋಡಿದ ನರಸಿಂಹನಿಗೆ ಕೋಪ ಬರುತ್ತದೆ. ಜಗಳ ಏನಿದ್ದರೂ ನಮ್ಮಿಬ್ಬರ ನಡುವೆ ಇರಬೇಕು. ಮನೆಯವರ ವರೆಗೂ ತೆಗೆದುಕೊಂಡು ಹೋಗಬೇಡ ಎಂದು ನರಸಿಂಹ ಎಷ್ಟು ಹೇಳಿದರೂ ಕೇಳುವುದಿಲ್ಲ. ಸಂಜನಾ ನಡೆದುಕೊಂಡ ರೀತಿಯಿಂದ ನರಸಿಂಹನಿಗೆ ಕೋಪ ಬರುತ್ತದೆ. ಹಾಗಾಗಿ ನರಸಿಂಹ ಬೇಕಂತಲೇ ಸಂಜನಾ ಮನೆಗೆ ಹೋಗಿ ಅವಳ ಕಾಲನ್ನು ಬ್ಲೇಡ್ ನಿಂದ ಕಟ್ ಮಾಡುತ್ತಾನೆ. ಈಗ ನಿಮ್ಮ ಅಪ್ಪ ನಿನ್ನ ಕಾಲನ್ನು ಹಿಡಿಯುವಂತೆ ಮಾಡಿದ್ದೇನೆ ಎನ್ನುತ್ತಾನೆ.

brahmagantu-serial-22-august-episode-written-update


ಕಿತ್ತಾಡುತ್ತಲೇ ಪ್ರೀತಿಸುತ್ತಿರುವ ಜೋಡಿ

ನಾಗರಾಜ್ ಬಂದು ಮಗಳ ಕಾಲಿಗೆ ಬ್ಯಾಂಡೇಜ್ ಹಾಕುತ್ತಾನೆ. ಇದು ಸಂಜನಾಳಿಗೆ ಇಷ್ಟವಾಗುವುದಿಲ್ಲ. ನರಸಿಂಹ ಫೋನ್ ಮಾಡಿ ಮೂಯ್ಯಿಗೆ ಮೂಯ್ಯಿ ತೀರಿಸಿಕೊಂಡಿದ್ದಾಯ್ತು. ಇನ್ಮೇಲಿಂದ ಜಗಳ, ಕಿತ್ತಾಟ ಏನಿದ್ದರೂ ನಮ್ಮಿಬ್ಬರ ನಡುವೆ ಇರಬೇಕು ಎಂದು ವಾರ್ನಿಂಗ್ ಕೊಟ್ಟಿದ್ದಾನೆ. ಪ್ರತೀ ಸಲ ಎದುರಿಗೆ ಸಿಕ್ಕಿ ಜಗಳವಾಡಿದಾಗಲೂ ನರಸಿಂಹ ಸಂಜನಾಳನ್ನು ಐ ಲವ್ ಯೂ ಬೇಬಿ ಎಂದೇ ಕರೆಯುತ್ತಾನೆ. ಇಬ್ಬರೂ ಕಿತ್ತಾಡಿಕೊಂಡೇ ಪ್ರೀತಿಯಲ್ಲಿ ಬೀಳುತ್ತಾರಾ ಎಂಬ ಕುತೂಹಲ ಮೂಡಿದೆ. ನರಸಿಂಹ ಏನೋ ಪ್ರೀತಿಸುವ ಚಾನ್ಸ್ ಇದೆ, ಆದರೆ, ಸಂಜನಾ ಅವನ ಮೇಲೆ ಅಷ್ಟೋಂದು ಕೋಪ ಇಟ್ಟುಕೊಂಡಿದ್ದು, ಹೇಗೆ ಪ್ರೀತಿಸಬಹುದು ಎಂದು ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X