Brahmagantu ; ಮಾವನ ಜೊತೆಗೆ ಮಾತನಾಡಿದ ಚಿರಾಗ್ : ರೂಪಾ ಬಾಳಲ್ಲಿ ಹೊಸ ಪಾತ್ರಗಳ ಆಗಮನ..!
ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾಳ ಅಂದಕ್ಕೆ ಮಾರು ಹೋಗಿ ಸೌಂದರ್ಯ ಮತ್ತು ಚಿರಾಗ್ ಜಯರಾಂ ಮನೆ ಸಂಬಂಧಕ್ಕೆ ಕೈ ಹಾಕುತ್ತಾರೆ. ಆದರೆ ಸೌಂದರ್ಯ ಲಕ್ ಬದಲಾಗಿರುತ್ತದೆ. ರೂಪಾ ಮಾಡೆಲ್ ಆಗಬೇಕು. ಹೀರೋಯಿನ್ ಆಗಿ ಮಿಂಚಬೇಕು. ಆಸ್ತಿ, ಅಂತಸ್ತು, ಐಶ್ವರ್ಯ ತುಂಬಿ ತುಳುಕಬೇಕು ಎಂದು ಕನಸು ಕಾಣುತ್ತಿರುವ ರೂಪಾ ಸೌಂದರ್ಯ ತಂದ ಸಂಬಂಧವನ್ನು ನಿರಾಕರಿಸಿದ್ದಾಳೆ. ಮದುವೆಯ ದಿನವೇ ಒಡವೆ, ಚಿನ್ನ, ಹಣ ಎಲ್ಲವನ್ನೂ ದೋಚಿಕೊಂಡು ತಾನು ಇಷ್ಟಪಟ್ಟು, ಸುಳ್ಳಿನ ಅರಮನೆಯನ್ನು ಕಟ್ಟಿರುವ ಅರವಿಂದ್ ಜೊತೆಗೆ ಓಡಿ ಹೋಗಿದ್ದಾಳೆ.
ಗೆಳೆಯನ ಮೋಸದ ಬಲೆಯಲ್ಲಿ ರೂಪಾ
ರೂಪಾಳ ಗೆಳೆಯ ಅರವಿಂದ್ ಪ್ರೀತಿ ಹೆಸರಲ್ಲಿ ಬಲೆ ಬೀಸಿದ್ದು, ಈಗ ಸಿನಿಮಾ ತಾರೆಯನ್ನಾಗಿ ಮಾಡುವುದಾಗಿ ನಂಬಿಸಿದ್ದಾನೆ. ಅವಳ ಬಳಿ ಇರುವ ಹಣ ಮತ್ತು ಒಡವೆಯನ್ನು ದೋಚಲು ಯತ್ನಿಸಿದ್ದಾನೆ. ಊರು ಬಿಟ್ಟು ಬಂದ ರೂಪಾಳಿಗೆ ದೊಡ್ಡ ಅರಮನೆಗೆ ಕರೆದುಕೊಂಡು ಬಂದಿದ್ದಾನೆ. ತಾನು ಮತ್ತು ರೂಪಾ ಇಬ್ಬರೇ ಈ ಮನೆಯಲ್ಲಿರುವುದಾಗಿ ಮೊದಲು ಸುಳ್ಳು ಹೇಳಿದ್ದಾನೆ. ಆದರೆ ಈಗ ಇದ್ದಕ್ಕಿದ್ದ ಹಾಗೆಯೇ ಅರವಿಂದ್ ಅಣ್ಣ ಮತ್ತು ಅತ್ತಿಗೆಯ ಆಗಮನವಾಗಿದ್ದು, ಮೂವರ ಕಣ್ಣು ರೂಪಾ ತಂದಿರುವ ಹಣ ಮತ್ತು ಒಡವೆ ಮೇಲಿದೆ. ತಂದೆಗೆ ಮೋಸ ಮಾಡಿ ಬಂದ ರೂಪಾ ಯಾವಾಗ ಅರವಿಂದ್ ನಿಂದ ಮೋಸ ಹೋಗುತ್ತಾಳೋ ಕಾದು ನೋಡಬೇಕಿದೆ.

ಸುಕನ್ಯಾ ಕೈಯಲ್ಲಿ ಸಿಕ್ಕಿ ನರಳುತ್ತಿರುವ ದೀಪಾ
ಇತ್ತ ಅಪ್ಪ-ಅಮ್ಮನ ಖುಷಿ ಮತ್ತು ಮರಿಯಾದೆಗೋಸ್ಕರ ಮದುವೆಯಾಗಿ ಬಂದು ದೀಪಾ ಎರಡು ದಿನದಿಂದ ಅನ್ನ ನೀರು ಇಲ್ಲದೇ ಬಾಡಿ ಹೋಗಿದ್ದಾಳೆ. ಅಪ್ಪನಿಗೆ ಫೋನ್ ನಲ್ಲಿ ಸುಳ್ಳು ಹೇಳಿದ್ದು, ಇಲ್ಲಿ ಮನೆಯ ಕೆಲಸದವಳಾಗಿ ಕಷ್ಟಪಡುತ್ತಿದ್ದಾಳೆ. ಸುಕನ್ಯಾ ಅಂತೂ ಹೇಗಾದರೂ ಮಾಡಿ ಕಾಟ ಕೊಟ್ಟು ದೀಪಾಳನ್ನು ಈ ಮನೆಯಿಂದ ಓಡಿಸಬೇಕು. ಆಗ ತನಗೆ ತಿಳಿದಿರುವ ಕಡೆಯಿಂದ ಹುಡುಗಿಯನ್ನು ತಂದು ಚಿರಾಗ್ ಮದುವೆ ಮಾಡಿ ಹೆಸರು ಮಾಡಬೇಕು ಎಂದು ಆಸೆ ಪಟ್ಟಿದ್ದಾಳೆ. ಹೀಗಾಗಿ ದೀಪಾಳಿಗೆ ಕಷ್ಟದ ಮೇಲೆ ಕಷ್ಟ ಕೊಡುತ್ತಿದ್ದಾಳೆ.
ಚಿರಾಗ್ ಜೊತೆಗೆ ಮಾತನಾಡಿದ ದೀಪಾ ತಂದೆ
ಸೌಮದರ್ಯಾಗೆ ಕಾಫಿ ಕೊಡು ಎಂದು ಸುಕನ್ಯಾ ಕಳಿಸಿದ್ದು. ದೀಪಾ ಕಾಲಿಗೆ ಏಟಾಗಿದೆ. ದೀಪಾ ನಡೆದಲ್ಲೆಲ್ಲಾ ರಕ್ತ ಹೆಜ್ಜೆ ಗುರುತಾಗಿದ್ದು., ಇದನ್ನು ನೋಡಿದ ಸೌಂದರ್ಯ ಬೈಯುತ್ತಾಳೆ. ಮಗಳು ಫೋನ್ ಕಟ್ ಮಾಡಿದಳು ಎಂದು ವಾಪಸ್ ಜಯರಾಂ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಾನೆ. ದೀಪಾ ಮನೆ ತುಂಬಾ ನೆಂಟರಿದ್ದಾರೆ. ಎಲ್ಲರನ್ನೂ ಮಾತನಾಡಿಸುವುದರಲ್ಲಿ ಬ್ಯುಸಿ ಇದ್ದೀನಿ ಎಂದು ಸುಳ್ಳು ಹೇಳುತ್ತಾಳೆ. ಚಿರಾಗ್ ಜೊತೆಗೆ ಮಾತನಾಡಬೇಕು ಎಂದು ಜಯರಾಂ ಬಯಸಿದ್ದಕ್ಕೆ ದೀಪಾ ಮತ್ತೆ ಚಿರಾಗ್ ರೂಮ್ ಗೆ ಹೋಗಿದ್ದಾಳೆ. ಅಪ್ಪನ ಜೊತೆಗೆ ಮಾತನಾಡುವಂತೆ ಕೇಳಿಕೊಂಡಿದ್ದು, ಕಾಲ್ ಬಂದ ಕೂಡಲೇ ರಿಸೀವ್ ಮಾಡಿದ್ದಾಳೆ. ಚಿರಾಗ್ ಅನಿವಾರ್ಯವಾಗಿ ಅವರ ಜೊತೆಗೆ ಮಾತನಾಡಿದ್ದಾನೆ.

ಸೌಂದರ್ಯ ಕಣ್ತಪ್ಪಿಸಿದ ದೀಪಾ
ವೀಡಿಯೋ ಕಾಲ್ ನಲ್ಲಿ ಮಾತನಾಡಿದರೂ ಜಯರಾಂ ತಂಗಿಗೆ ದೀಪಾ ಬದುಕಿನ ಬಗ್ಗೆ ನಂಬಿಕೆಯೇ ಇಲ್ಲ. ಅವಳು ಸುಳ್ಳು ಹೇಳುತ್ತಿದ್ದಾಳೆ. ದೀಪಾಳಿಗೆ ಆ ಮನೆಯಲ್ಲಿ ಯಾವ ಮರಿಯಾದೆಯನ್ನು ಕೊಟ್ಟಿಲ್ಲ ಎಂದು ಮನೆಯಲ್ಲಿ ವಾದ ಮಾಡುತ್ತಾಳೆ. ಇನ್ನು ಸೌಂದರ್ಯ ಚಿರಾಗ್ ರೂಮ್ ಗೆ ಆಗಮಿಸಿದ್ದು, ದೀಪಾ ಬಚ್ಚಿಟ್ಟುಕೊಳ್ಳುತ್ತಾಳೆ. ಯೋಚಿಸಬೇಡ ಚಿರಾಗ್ ಅವಳಿಂದ ನಿನಗೆ ಆದಷ್ಟು ಬೇಗ ಮುಕ್ತಿ ಕೊಡಿಸುತ್ತೇನೆ ಎಂದು ಸಮಾಧಾನ ಮಾಡಿ ಹೊರಡುತ್ತಾಳೆ. ಈ ವೇಳೆ ಅದೇ ರೂಮ್ ನಲ್ಲಿ ಬಚ್ಚಿಟ್ಟುಕೊಂಡ ದೀಪಾ ಸೌಂದರ್ಯ ಕಣ್ತಪ್ಪಿಸಿದ್ದು, ಚಿರಾಗ್ ಗೆ ಇರಿಟೇಟ್ ಮಾಡಿದ್ದಾಳೆ.


Click it and Unblock the Notifications











