Brahmagantu; ಸಹಿ ಮಾಡಲು ಸರ್ಕಸ್ : ಸುಕನ್ಯಾ ಪ್ಲಾನ್ ಸೂಪರ್..!
ಬ್ರಹ್ಮಗಂಟು ಧಾರಾವಾಹಿಯಲ್ಲಿ ದೀಪಾಳ ಕಾಲಿಗೆ ಗಾಯವಾಗಿದ್ದರೂ ಔಷಧಿ ಹಚ್ಚಿಕೊಳ್ಳದೇ, ಕುಂಟುತ್ತಾ ಇಡೀ ಮನೆ ಕೆಲಸವನ್ನು ಮಾಡುತ್ತಿರುತ್ತಾಳೆ. ಮಾವನಿಗೆ ಕಾಫಿ ಕೊಡಲೆಂದು ದೀಪಾ ಕುಂಟುತ್ತಾ ರೂಮಿಗೆ ಹೋಗುತ್ತಾಳೆ. ಕಾಫಿ ತೆಗೆದುಕೊಂಡ ದೀಪಾ ಮಾವ ಸೊಸೆ ಕುಂಟುವುದನ್ನು ನೋಡುತ್ತಾನೆ.
ಏನಾಯ್ತಮ್ಮ ಎಂದು ಕೇಳಿದ್ದಕ್ಕೆ ದೀಪಾ ಕಾಲಿಗೆ ಗಾಯ ಆದ ಬಗ್ಗೆ ಹೇಳುತ್ತಾಳೆ. ಆಗ ಅವರ ಮಾವ ಬ್ಯಾಂಡೆಜ್ ಕೊಟ್ಟು ವಿಚಾರಿಸಿಕೊಳ್ಳುತ್ತಾನೆ. ಮಾವನ ಸೌಮ್ಯ ಸ್ವಭಾವ ಕಂಡು ದೀಪಾ ಖುಷಿ ಪಡುತ್ತಾಳೆ.
ನಾಟಕದವರನ್ನು ಕರೆ ತಂದಿರುವ ಅರವಿಂದ್
ಇತ್ತ ಅರವಿಂದ್ ರೂಪಾಳನ್ನು ನಂಬಿಸಲು ನಾಟಕದವರನ್ನು ಕರೆ ತಂದಿದ್ದಾನೆ. ಅಣ್ಣ ಅತ್ತಿಗೆ ಎಂದು ಹೇಳಿಕೊಂಡು ಬಂದಿರುವ ಇಬ್ಬರೂ ಕೂಡ ನಾಟಕ ಕಂಪನಿಯಿಂದ ಬಂದವರೇ. ಆದರೆ, ಇದು ರೂಪಾಳಿಗೆ ಗೊತ್ತಿಲ್ಲ. ಅವರಿಬ್ಬರೂ ಅರವಿಂದ್ ಬಳಿ ಸಾಕಷ್ಟು ಹಣವನ್ನು ಕೀಳಬಹುದು ಎಂದುಕೊಂಡಿದ್ದಾರೆ. ಅರವಿಂದ್ ರೂಪಾ ಹಣಕ್ಕೆ ಸ್ಕೆಚ್ ಹಾಕಿದ್ದು, ಇವರಿಬ್ಬರಿಗೆ ಪಂಗನಾಮ ಹಾಕುವುದು ಪಕ್ಕಾ. ಇನ್ನು ಹೋಟೆಲ್ ನಿಂದ ತಿಂಡಿ ತರಿಸಿರುವ ಅರವಿಂದ್ ಮನೆಯಲ್ಲೇ ಮಾಡಿದ್ದು ಎಂಬಂತೆ ತೋರಿಸಿಕೊಳ್ಳಲು ಮುಂದಾಗಿದ್ದಾನೆ. ಆದರೆ, ರೂಪಾ ಬುದ್ಧಿವಂತೆ. ಡಯಟ್ ಫುಡ್ ಅನ್ನು ಆರ್ಡರ್ ಮಾಡಿದ್ದು, ಅದಕ್ಕೆ ಅರವಿಂದ್ ಎರಡು ಸಾವಿರ ರೂಪಾಯಿ ಕಟ್ಟಿದ್ದಾನೆ.

ರೂಪಾ ಬಗ್ಗೆ ಕೆಂಡ ಕಾರಿದ ಜಯರಾಂ
ಜಯರಾಂ ಠಾಣೆಗೆ ಸಿದ್ಧವಾಗಿದ್ದು, ತಿಂಡಿ ಕೇಳುತ್ತಾನೆ. ಅಷ್ಟರಲ್ಲಿ ಜಯರಾಂ ತಂಗಿ ಅತ್ತಿಗೆ ಬಳಿ ಹೋಗಿ ರೂಪಾ ಬಗ್ಗೆ ಚಾಡಿ ಹೇಳಿದ್ದಾಳೆ. ರೂಪಾ ಎಷ್ಟೇ ಆದರೂ ನಿಮ್ಮ ಮಗಳೇ. ಅವಳ ಪರಿಸ್ಥಿತಿ ಏನೋ.. ಒಂದು ಸಾರಿ ಅಣ್ಣನ ಬಳಿ ಮಾತನಾಡಿ ಅವಳನ್ನು ಹುಡುಕಿಸಿ. ನನಗಂತೂ ರೂಪಾಳನ್ನು ನೆನೆದರೆ ಕರುಳು ಕಿವುಚಿ ಬರುತ್ತದೆ. ದೀಪಾ ಏನೋ ಒಳ್ಳೆಯ ಮನೆಯನ್ನು ಸೇರಿಕೊಂಡಿದ್ದಾಳೆ. ಆದರೆ ರೂಪಾ ಗತಿ ಏನಾಗಿದೆಯೋ. ಅವಳು ಕೂಡ ನಿನ್ನ ಹೊಟ್ಟೆಯಲ್ಲೇ ಹುಟ್ಟಿದವಳು ಅಲ್ಲವೇ ಎಂದು ಹೇಳುತ್ತಾಳೆ. ಜಯರಾಂ ತಿಂಡಿ ತಿನ್ನುವಾಗ ರೂಪಾ ಬಗ್ಗೆ ಕೇಳಿದ್ದಕ್ಕೆ ಕೂಗಾಡುತ್ತಾನೆ. ನನಗೆ ದೀಪಾ ಒಬ್ಬಳೇ ಮಗಳು. ರೂಪಾ ಮತ್ತು ನರಸಿಂಹ ನನ್ನ ಪಾಲಿಗೆ ಸತ್ತು ಹೋಗಿದ್ದಾರೆ ಎಂದು ಅರಚಾಡುತ್ತಾನೆ.
ಸೈನಿಂಗ್ ಅಥಾರಿಟಿಗೆ ಕಿತ್ತಾಟ
ಇನ್ನು ಚಿರಾಗ್ ಮನೆಯಲ್ಲಿ ಎಲ್ಲರೂ ತಿಂಡಿ ತಿನ್ನಲು ಬಂದಿರುತ್ತಾರೆ. ಈ ವೇಳೆ ಚಿರಾಗ್ ತಂದೆ ಸೈನಿಂಗ್ ಅಥಾರಿಟಿಯನ್ನು ಸೌಂದರ್ಯಾಳಿಗೆ ಟ್ರಾನ್ಸ್ ಫರ್ ಮಾಡಬೇಕು ಎಂದು ತೀರ್ಮಾನಿಸಿರುತ್ತಾನೆ. ಇದು ಸುಕನ್ಯಾಳಿಗೆ ಇಷ್ಟವಿರುವುದಿಲ್ಲ. ಹಾಗಾಗಿ ಚಿರಾಗ್ ಹೆಸರಿಗೋ ಅಥವಾ ನಿಮ್ಮ ಮಗಳ ಹೆಸರಿಗೋ ಟ್ರಾನ್ಸ್ ಫರ್ ಮಾಡಿ ಎಂದು ತಗಾದೆ ತೆಗೆಯುತ್ತಾಳೆ. ಇದರಿಂದ ಸೌಂದರ್ಯ ಕೋಪ ಮಾಡಿಕೊಂಡು ತಿಂಡಿ ಬಿಟ್ಟು ಹೋಗುತ್ತಾಳೆ. ಇದರಿಂದ ಚಿರಾಗ್ ಕೋಪ ಮಾಡಿಕೊಂಡು ಎಲ್ಲರಿಗೂ ಬೈದು ಹೋಗುತ್ತಾನೆ.

ಅಧಿಕಾರಕ್ಕಾಗಿ ಸುಕನ್ಯಾ ಪ್ಲಾನ್
ಸೌಂದರ್ಯಾಳಿಗೆ ಚಿರಾಗ್ ಸಮಾಧಾನ ಮಾಡುತ್ತಾನೆ. ಸೌಂದರ್ಯ ಕೂಡ ಸಿಕ್ಕ ಅವಕಾಶದಲ್ಲೇ ನಿನ್ನ ಬದುಕನ್ನು ಆದಷ್ಟು ಬೇಗ ನಾನು ಸರಿ ಮಾಡುತ್ತೇನೆ ಎಂದು ಹೇಳುತ್ತಾಲೆ. ಇತ್ತ ಸುಕನ್ಯಾ ಬಟ್ಟೆಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡುತ್ತಾಳೆ. ಅವಳ ಮಗಳು ಬಂದು ಯಾಕೆ ಎಂದು ಕೇಳಿದ್ದಕ್ಕೆ ದೀಪಾಳನ್ನು ಮನೆಯಿಂದ ಹೊರಗೆ ಹಾಕಿ. ಈ ಮನೆಗೆ ನಾನು ಹುಡುಗಿಯನ್ನು ನೋಡಿ ಕರೆ ತಂದು ನಂತರ ಈ ಮನೆಯ ಅಧಿಕಾರವನ್ನು ಪಡೆಯಲು ಸ್ಕೆಚ್ ಹಾಕಿದ್ದಾಳೆ. ಈ ಪ್ಲಾನ್ ಬಗ್ಗೆ ಕೇಳಿದ ಅವಳ ಮಗಳು ನೀನು ಸೂಪರ್ ಬಿಡಮ್ಮ ಎಂದು ಹೇಳುತ್ತಾಳೆ.


Click it and Unblock the Notifications











