Brahmagantu ; ಗಂಡನಿಗೆ ಜ್ವರ ಬಂದಿದೆ ಎಂದು ಗೋಳಾಡಿದ ದೀಪಾ ; ಮಗನಿಗೆ ಜಾಮೀನು ಕೊಡಿಸಿದ ತಾಯಿ..!

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ಜಯರಾಂ ಮಗ ನರಸಿಂಹನನ್ನು ಎಸ್ ಐ ಚೆನ್ನಾಗಿ ಹೊಡೆದಿದ್ದಾನೆ. ಆದರೂ ನರಸಿಂಹನಲ್ಲಿರುವ ಕೊಬ್ಬು ಸ್ವಲ್ಪವೂ ಕರಗಿಲ್ಲ. ಪೊಲೀಸರನ್ನೇ ಕೆಣಕುತ್ತಾ ಮಾತನಾಡುತ್ತಾನೆ. ಇದರಿಂದ ಎಸ್ ಐ ಕೋಪ ಹೆಚ್ಚಾಗಿ ಬಾಸುಂಡೆ ಬರುವಂತೆ ಜಯರಾಂ ಎದುರುಗಡೆಯೂ ಹೊಡೆಯುತ್ತಾನೆ. ಬಳಿಕ ಆದಷ್ಟು ಬೇಗನೇ ಬೇಲ್ ಕೊಡಿಸು ಇಲ್ಲದಿದ್ದರೆ, ನಿನ್ನ ಮಗನ ಮೇಲೆ ಏನಾದರೂ ಕೇಸ್ ಹಾಕುತ್ತೀನಿ. ರೌಂಡ್ ಮುಗಿಸಿಕೊಂಡು ಬರುವುದರೊಳಗೆ ಬೇಲ್ ಕೊಡಿಸು ಎನ್ನುತ್ತಾನೆ.

ಮಗನಿಗೆ ಬೇಲ್ ಕೊಟ್ಟ ತಾಯಿ

ಅದೂ ಕೂಡ ನೀನು ಸಹಿ ಹಾಕಬಾರದು. ನಿಮ್ಮ ಮನೆಯಲ್ಲಿ ಯಾರನ್ನಾದರೂ ಕರೆಸಬೇಕು ಎಂದು ಹೇಳುತ್ತಾನೆ. ಜಯರಾಂ ಮಗನಿಗೆ ಬೇಲ್ ಕೊಡಿಸು ಬಾ ಎಂದು ಕರೆಯಲಿ ಎಂದು ಯೋಚಿಸುತ್ತಿರುತ್ತಾನೆ. ಅಷ್ಟರಲ್ಲಿ ಜಯರಾಂ ಹೆಂಡತಿಯೇ ಗಂಡನಿಗಾಗಿ ತಿಂಡಿ ತೆಗೆದುಕೊಂಡು ಬರುತ್ತಾಳೆ. ಆಗ ಯಾರದೋ ಮಗನಿಗೆ ಜಾಮೀನು ಕೊಡಿಸಬೇಕು ಎಂದು ನೆಪ ಹೇಳುತ್ತಾನೆ.ಒಳ್ಳೆಯ ಹುಡುಗ ಸುಮ್ಮನೆ ಅರೆಸ್ಟ್ ಮಾಡಿದ್ದಾರೆ. ನಾನು ಬೇಲ್ ಗೆ ಸಹಿ ಹಾಕುವ ಹಾಗಿಲ್ಲ. ಹುಡುಗನ ತಂದೆ-ತಾಯಿ ಆಸ್ಪತ್ರೆಯಲ್ಲಿದ್ದಾರೆ ಎಂದು ಹೇಳುತ್ತಾನೆ. ಆಗ ಆಕೆ ನನ್ನ ಮಗ ಎಂದುಕೊಂಡು ನಾನೇ ಸಹಿ ಹಾಕುತ್ತೇನೆ ಎಂದು ಹೇಳಿ ಸಹಿ ಹಾಕುತ್ತಾಳೆ.

brahmagantu-serial-26-july-episode-written-update

ಸುಕನ್ಯಾ ಪ್ಲಾನ್ ಆಯ್ತು ಉಲ್ಟಾ

ಸ್ಟೇಷನ್ ನಿಂದ ಹೊರಟ ಬಳಿಕ ಎಸ್ ಐ ಸಿಕ್ಕಿ ಸತ್ಯ ಹೇಳುತ್ತಾನೆ. ಆಗ ಅವಳಿಗೆ ಬೇಸರವಾದರೂ ಸುಮ್ಮನಾಗುತ್ತಾಳೆ. ಮನೆಗೆ ಮಗ ಬಂದಾಗ ಅವನ ಕಷ್ಟವನ್ನು ವಿಚಾರಿಸುತ್ತಾಳೆ. ಇತ್ತ ಎಸ್ ಐ ಮಗಳು ಸಂಜನಾಳಿಗೆ ಕುಂತರೂ ನಿಂತರೂ ನರಸಿಂಹನೇ ಕಾಣಿಸುತ್ತಿರುತ್ತಾನೆ. ಇನ್ನು ಸುಕನ್ಯಾ ದೀಪಾಳಿಗೆ ಬಟ್ಟೆ ಐರನ್ ಮಾಡಲು ಕೊಟ್ಟು ಬೇಕಂತಲೇ ಬಟ್ಟೆ ಸುಡುವಂತೆ ಮಾಡಿ, ಕೊನೆಗೆ ದೀಪಾಳನ್ನು ಮನೆಯಿಂದ ಹೊರಗೆ ಹಾಕಲು ಯೋಚಿಸುತ್ತಾಳೆ. ಗಲಾಟೆ ಮಾಡಲು ಮುಂದಾಗುತ್ತಾಳೆ. ಇತ್ತ ಚಿರಾಗ್ ಅಕ್ಕನ ದುಪ್ಪಟ್ಟ ಬೆಂಕಿಗೆ ತಾಗುವಾಗ ದೀಪಾ ಹೋಗಿ ತಡೆಯುತ್ತಾಳೆ. ದೀಪಾ ಮತ್ತು ಅವಳು ಇಬ್ಬರೂ ಒಳ್ಳೆಯ ಗೆಳತಿಯರಾಗುತ್ತಾರೆ.

ಬಟ್ಟೆ ಡಿಸೈನ್ ಮಾಡಿಕೊಟ್ಟ ದೀಪಾ

ಐರನ್ ಆದ ಬಟ್ಟೆ ಚಿರಾಗ್ ಅಕ್ಕನದ್ದಾಗಿದ್ದು, ಸುಟ್ಟು ಹೋಗಿರುತ್ತದೆ. ಅದನ್ನು ಹೇಗಾದರೂ ಮಾಡ ಸರಿ ಮಾಡಬೇಕು ಎಂದು ದೀಪಾ ಲೇಸ್ ಹಾಕಿ ಹೊಲಿಗೆ ಹಾಕುತ್ತಾಳೆ. ಬಳಿಕ ಚಿರಾಗ್ ಅಕ್ಕನಿಗೆ ತೆಗೆದುಕೊಂಡು ಹೋಗಿ ಕೊಡುತ್ತಾಳೆ. ಇದನ್ನು ನೋಡಿದ್ದೇ ಖುಷಿಯಾಗುತ್ತಾಳೆ. ಚಿರಾಗ್ ಈ ಬಟ್ಟೆಯನ್ನು ಕೊಡಿಸಿದಾಗ ಆದ ಖುಷಿಗಿಂತಲೂ ಈಗ ನೀನು ಇಷ್ಟು ಚೆನ್ನಾಗಿ ಡಿಸೈನ್ ಮಾಡಿ ಕೊಟ್ಟಿರುವುದಕ್ಕೆ ಖುಷಿಯಾಗಿದೆ ಎನ್ನುತ್ತಾಳೆ. ದೀಪಾ ಮನಸ್ಸು ಬಿಚ್ಚಿ ಅವಳ ಅತ್ತಿಗೆ ಜೊತೆಗೆ ಮಾತನಾಡುತ್ತಾಳೆ. ತಾನು ಟೈಲರಿಂಗ್ ಮಾಡುವುದರಲ್ಲಿ ಎಕ್ಸ್ ಪರ್ಟ್ ಎಂದು ಹೇಳುತ್ತಾಳೆ.

brahmagantu-serial-26-july-episode-written-update

ಗಂಡನಿಗೆ ಜ್ವರ ಬಂದಿದ್ದು ದೀಪಾಳಿಗೆ ಗೊತ್ತಾಯ್ತು

ರಾತ್ರಿ ಎಲ್ಲರಿಗೂ ದೀಪಾ ಊಟ ಬಡಿಸುತ್ತಾಳೆ. ಆದರೆ, ಸೌಂದರ್ಯ ಮತ್ತು ಚಿರಾಗ್ ಗೆ ಬಡಿಸುವುದಿಲ್ಲ. ಅವರ ಮಾವ ಚಿರಾಗ್ ಗೂ ಬಡಿಸು ಎಂದಾಗ ಅವನು ಬೇಡ ಎನ್ನುತ್ತಾನೆ. ನೀರು ಚಿರಾಗ್ ಗೆ ನೆತ್ತಿಗೇರಿದಾಗ ತಲೆ ತಟ್ಟಿ ದೀಪಾ ನೀರು ಕೊಡುತ್ತಾಳೆ. ಆಗ ಸೌಂದರ್ಯ ಕೂಗಾಡುತ್ತಾಳೆ. ದೀಪಾಳನ್ನು ಈ ಕೂಡಲೇ ಹೊರಗೆ ಹೋಗಲು ಹೇಳುತ್ತಾಳೆ. ಆಗ ದೀಪಾ ಚಿರಾಗ್ ಗೆ ಜ್ವರ ಬಂದಿದೆ ಎಂದು ಒಬ್ಬಳೇ ಪೇಚಾಡುತ್ತಿರುತ್ತಾಳೆ. ಕೆಲಸದವಳ ಬಳಿ ತನ್ನ ಗಂಡನಿಗೆ ಜ್ವರ ಬಂದಿರುವ ವಿಚಾರವನ್ನು ಹೇಳುತ್ತಾ ಗೋಳಾಡುತ್ತಿರುತ್ತಾಳೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X