Brahmagantu; ಸತ್ಯ ಒಪ್ಪಿಕೊಂಡ ದೀಪಾ, ಸೌಂದರ್ಯ ಕೋಪಕ್ಕೆ ಗುರಿಯಾಗುತ್ತಾಳಾ..?

By ಪ್ರಿಯಾ ದೊರೆ

ಬ್ರಹ್ಮಗಂಟು ಧಾರಾವಾಹಿಯಲ್ಲಿ ರೂಪಾ ತಂದಿರುವ ಒಡವೆ ಮೇಲೆ ಕಣ್ಣು ಹಾಕಿರುವ ಅರವಿಂದ್ ಸುತ್ತಾ-ಮುತ್ತಾ ಕಳ್ಳತನವಾಗುತ್ತಿದೆ ಎಂದು ಕಥೆ ಕಟ್ಟಿ ಹೇಳಿದ್ದಾನೆ. ಆದರೆ, ರೂಪ ತನ್ನನ್ನೇ ನಂಬದವಳು ಅರವಿಂದ್ ಮಾತಿಗೆ ಸೊಪ್ಪು ಹಾಕದಂತೆ ಸುಮ್ಮನಿದ್ದಾಳೆ. ವತ್ಸಲಾ ತನಗೆ ತಿಳಿಯದಂತೆ ಮಗನನ್ನು ಸ್ಟೇಷನ್ ನಿಂದ ಬೇಲ್ ಕೊಟ್ಟು ಬಿಡಿಸಿದ್ದಾಳೆ. ಮುದ್ದು ಮಗ ನರಸಿಂಹ ಚೆನ್ನಾಗಿ ಬಾಳಿ ಬದುಕಬೇಕು ಎಂದು ಬಯಸಿದ್ದಾಳೆ. ಕೈ ತುತ್ತು ಕೊಟ್ಟು ಊಟ ಮಾಡಿಸಿದ್ದಾಳೆ. ಮಗ ಉದ್ಧಾರವಾಗಲಿ ಎಂದು ಬುದ್ಧಿ ಮಾತುಗಳನ್ನು ಹೇಳಿದ್ದಾಳೆ. ಇದೆಲ್ಲವನ್ನೂ ದೂರವೇ ನಿಂತು ನೋಡಿದ ಜಯರಾಂ ಮನದಲ್ಲೇ ಖುಷಿಪಟ್ಟಿದ್ದಾನೆ.

ಮಗನಿಗಾಗಿ ಮಿಡಿದ ಜಯರಾಂ-ವತ್ಸಲಾ

ಆದರೆ, ಬೇಕಂತಲೇ ಕೋಪ ತೋರಿಸಿದ ಜಯರಾಂ ಹೆಂಡತಿ ವತ್ಸಲಾಳಿಗೆ ಬೈಯುತ್ತಾನೆ. ಮನೆ ಹಾಳು ಮಾಡುವವನಿಗೆ ನೀನ್ಯಾಕೆ ಊಟ ಕೊಟ್ಟೆ. ಅದರ ಬದಲು ನಾಯಿಗೆ ಊಟ ಕೊಡು ನಿಯತ್ತಾಗಿರುತ್ತೆ ಎನ್ನುತ್ತಾನೆ. ಆದರೆ, ವತ್ಸಲಾ ತನ್ನ ಮಗನನ್ನು ವಹಿಸಿಕೊಂಡು ಮಾತನಾಡುತ್ತಾಳೆ. ಅಲ್ಲದೇ

brahmagantu-serial-31-july-episode-written-update

ಚಿರಾಗ್ ಜ್ವರಕ್ಕೆ ದೀಪಾ ಔಷಧಿ

ಇತ್ತ ಚಿರಾಗ್ ಗೆ ಜ್ವರ ಬಂದಿದ್ದರೂ ತನಗೇ ಏನೋ ಆಗಿದೆ ಎಂಬಂತೆ ದೀಪಾ ಒದ್ದಾಡಿದ್ದಾಳೆ. ಸೌಂದರ್ಯ ಕಣ್ಣು ತಪ್ಪಿಸಿ ಚಿರಾಗ್ ಗೆ ಸುಟ್ಟು ಹಾಕಿದ್ದಾಳೆ. ಇದರಿಂದ ಚಿರಾಗ್ ಕಿರುಚಿದ್ದು, ಸುಟ್ಟಿದ ಗಾಯವನ್ನು ನೋಡಿ ಸೌಂದರ್ಯ ಟೆನ್ಷನ್ ಆಗಿದ್ದಾಳೆ. ಚಿರಾಗ್ ಗೆ ಹೀಗೆ ಮಾಡಿದವರಾರು ಎಂದು ರಾತ್ರಿ ಮನೆಯವರನ್ನೆಲ್ಲಾ ಕೇಳಿದ್ದಾಳೆ. ಯಾರೋ ಬೇಕಂತಲೇ ಹೀಗೆ ಮಾಡಿರಬಹುದು ಎಂದು ಹುಡುಕಾಡಿದ್ದಾಳೆ. ಆದರೆ, ದೀಪಾ ಜಸ್ಟ್ ಎಸ್ಕೇಪ್ ಆಗಿದ್ದಾಳೆ.

ದೀಪಾಳಿಗೆ ಅರ್ಚನಾಳಿಂದ ಸಹಾಯ

ಸುಟ್ಟಿಗೆ ಹಾಕಿ ಬಚ್ಚಿಕೊಂಡಿದ್ದ ದೀಪಾಳನ್ನು ಅರ್ಚನಾ ಸೇವ್ ಮಾಡಿದ್ದಾಳೆ. ದೀಪಾ ಬಗ್ಗೆ ಏನೂ ಗೊತ್ತಿಲ್ಲದೇ ಇದ್ದರೂ ಕೂಡ ಅರ್ಚಾನಾ ತನ್ನ ನಾದಿನಿ ಒಳ್ಳೆಯವಳು ಎಂಬುದನ್ನು ಅರ್ಥ ಮಾಡಿಕೊಂಡಿದ್ದಾಳೆ. ಹೀಗಾಗಿ ಸೌಂದರ್ಯಾಳಿಂದ ದೀಪಾಳನ್ನು ಅರ್ಚನಾ ಸೇವ್ ಮಾಡಿದ್ದಾಳೆ. ಅಷ್ಟೇ ಅಲ್ಲದೇ, ದೀಪಾಳಿಗೆ ನೀನೇ ಸುಟ್ಟಿಗೆ ಹಾಕಿದೆ ಎಂದು ಒಪ್ಪಿಕೊಳ್ಳಬೇಡ. ಹಾಗೇನಾದರೂ ಮಾಡಿದರೆ ಸೌಂದರ್ಯ ನಿನ್ನನ್ನು ಮನೆಯಿಂದ ಹೊರಗೆ ಹಾಕುವುದಂತೂ ಖಚಿತ ಎಂದಿದ್ದಾಳೆ. ಆದರೆ, ದೀಪಾ ಸತ್ಯ ಮುಚ್ಚಿಡುವ ಹುಡುಗಿಯಾ ಎಂಬುದೇ ಅನುಮಾನ.

brahmagantu-serial-31-july-episode-written-update

ಸತ್ಯ ಒಪ್ಪಿಕೊಂಡ ದೀಪಾ

ಬೆಳಗ್ಗೆ ಆಗುವುದರೊಳಗೆ ಚಿರಾಗ್ ಜ್ವರ ಕಡಿಮೆ ಆಗಿದೆ. ಇದು ಸುಟ್ಟಿಗೆ ಹಾಕಿದ್ದರಿಂದಲೇ ಸರಿ ಹೋಗಿದ್ದು ಎಂದು ಚಿರಾಗ್ ನಂಬಿದ್ದಾನೆ. ಗಂಡನ ಜ್ವರ ವಾಸಿ ಆಗಿದ್ದಕ್ಕೆ ದೀಪಾ ಕೂಡ ಖುಷಿಪಟ್ಟಿದ್ದಾಳೆ. ಖುಷಿಯಲ್ಲಿ ಕುಣಿದಾಡಿದ್ದು, ಮೂರು ದಿನದ ಊಟವನ್ನು ಒಂದೇ ಸಲ ಮಾಡಬೇಕು ಎಂದು ತೀರ್ಮಾನಿಸಿದ್ದಾಳೆ. ಆದರೆ, ಅಷ್ಟರಲ್ಲಿ ಸೌಂದರ್ಯ ಕೆಲಸದವರನ್ನೆಲ್ಲಾ ಒಟ್ಟಿಗೆ ಸೇರಿಸಿದ್ದಾಳೆ. ಚಿರಾಗ್ ಗೆ ರಾತ್ರಿ ಸುಟ್ಟಿಗೆ ಯಾರು ಹಾಕಿದ್ದು ಎಂದು ಹೇಳದೇ ಹೋದರೆ ಎಲ್ಲರಿಗೂ ಬರೆ ಹಾಕಿ, ಕೆಲಸದಿಂದ ಹೊರಗೆ ಕಳಿಸಬೇಕಾಗುತ್ತದೆ ಎಂದು ಬೆದರಿಸಿದ್ದಾಳೆ. ತನ್ನಿಂದ ಇತರರಿಗೆ ತೊಂದರೆ ಆಗಬಾರದು ಎಂದಿ ದೀಪಾ ಸತ್ಯ ಒಪ್ಪಿಕೊಂಡಿದ್ದಾಳೆ. ತಾನೇ ಸುಟ್ಟಿಗೆ ಹಾಕಿರುವುದು ಎಂದು ಹೇಳಿದ್ದು, ಸೌಂದರ್ಯ ಮನೆಯ ಸೊಸೆಗೆ ಯಾವ ಶಿಕ್ಷೆಯನ್ನು ಕೊಡುತ್ತಾಳೋ ಕಾದು ನೋಡಬೇಕಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X