ವೈವಾಹಿಕ ಜೀವನಕ್ಕೆ ಕಾಲಿಟ್ಟ ಮಿಲ್ಕಿ ಬ್ಯೂಟಿ: 'ಬ್ರಹ್ಮಗಂಟು' ನಟಿ ಶೋಭಿತಾ ಶಿವಣ್ಣ ಸಂಭ್ರಮ ಹೇಗಿತ್ತು?

By ಪೂರ್ವ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಬ್ರಹ್ಮಗಂಟು' ಧಾರಾವಾಹಿ ಮೂಲಕ ಪ್ರಸಿದ್ಧಿ ಪಡೆದ ನಟಿ ಶೋಭಿತಾ ಶಿವಣ್ಣ. ಉತ್ತಮ ನಟನೆಯಿಂದಲೆ ಕಿರುತೆರೆ ವೀಕ್ಷಕರ ಮನ ಗೆದ್ದ ಶೋಭಿತಾ ಸಿನಿಮಾಗಳ ಮೂಲಕವೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಶೋಭಿತಾ ಶಿವಣ್ಣ ಅವರ ನಟನೆಗೆ ಮರುಳಾಗದವರೇ ಇಲ್ಲ. ಆ ಮಟ್ಟಿಗೆ ವಿಲನ್ ಪಾತ್ರದಲ್ಲಿ ಮಿಂಚುತ್ತಿರೋ ಕ್ಯೂಟ್ ವಿಲನ್. ಈಕೆಗೆ 'ಬ್ರಹ್ಮಗಂಟು' ಧಾರಾವಾಹಿ ಉತ್ತಮ ಹೆಸರನ್ನು ತಂದುಕೊಟ್ಟಿತು.

Brahmagantu serial actress Shobitha Shivanna marriage story

ಕಿರುತೆಯಲ್ಲಿ ತನ್ನದೇ ಛಾಪು ಮೂಡಿಸಿದ ನಟಿ

ತಾನೊಬ್ಬ ಒಳ್ಳೆಯ ಕಲಾವಿದೆ ಆಗಬೇಕು ಎಂದು ಹಗಲಿರುಳು ಎನ್ನದೆ ಶ್ರಮವಹಿಸಿ, ಕೆಲಸ ಮಾಡಿ ಇದೀಗ ಸಿನಿಮಾ ಹಾಗೂ ಕಿರುತೆರೆಯಲ್ಲಿ ತನ್ನದೇ ಆದ ಛಾಪನ್ನು ಮೂಡಿಸುವಲ್ಲಿ ಈ ನಟಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ಶೋಭಿತಾ ಶಿವಣ್ಣ ಮೂಲತಃ ಸಕಲೇಶಪುರದವರು. ಅಲ್ಲಿಯೇ ಹುಟ್ಟಿ ಬೆಳೆದ ಇವರು ಶಿಕ್ಷಣ ಪಡೆದಿದ್ದು ಕೂಡ ಇಲ್ಲಿಯೇ. ಕಿರುತೆರೆರಂಗಕ್ಕೆ ಕಾಲಿಟ್ಟ ಇವರು ತನ್ನದೇ ಆದ ನಟನೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ ಎಂದರೆ ತಪ್ಪಾಗಲಾರದು.

Brahmagantu serial actress Shobitha Shivanna marriage story

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶೋಭಿತಾ

ಶೋಭಿತಾ ಶಿವಣ್ಣ ಕಿರುತೆರೆಯಲ್ಲಿ ತಮ್ಮ ನಟನೆಯಿಂದ ಇಷ್ಟು ವೀಕ್ಷಕರನ್ನು ಸೆಳೆದ ಬಳಿಕ, ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿಯಾಗಿ ನಡೆದ ಶೋಭಿತಾ ಶಿವಣ್ಣ ವಿವಾಹಕ್ಕೆ 'ಬಹ್ಮಗಂಟು' ಧಾರಾವಾಹಿಯ ಕಲಾವಿದರು ಹೋಗಿ ನವದಂಪತಿಗಳಿಗೆ ಸ್ವಾಗತಿಸಿದ್ದರು.

ಮಧು ವರರಿಗೆ ತಾರೆಯರ ಶುಭಾಶಯ

ಶೋಭಿತಾ ಶಿವಣ್ಣ ಮದುವೆಗೆ ಕಿರುತೆರೆಯ ಹಿರಿಯ ಹಾಗೂ ಕಿರಿಯ ಕಲಾವಿದರು ಆಗಮಿಸಿ ವಧು ವರರಿಗೆ ಆಶೀರ್ವಾದ ಮಾಡಿದ್ದಾರೆ. ಇದೀಗ ಇವರು ವಧು ವರರೊಂದಿಗೆ ತೆಗೆದುಕೊಂಡಿರುವ ಫೋಟೊಗಳು ವೈರಲ್ ಆಗಿದೆ. ಅಂದ್ಹಾಗೆ, ನಟಿ ಶೋಭಿತಾ ಮದುವೆಗೆ ಪ್ರಿಯಾಂಕಾ ಚಿಂಚೋಳಿ, ಸ್ವಾತಿ, ನಟಿ ವೀಣಾ ರಾವ್, ದಮಯಂತಿ ನಾಗರಾಜ್ ಸೇರಿದಂತೆ ಹಲವರು ಹಾಜರಾಗಿದ್ದರು.

ಸೋಷಿಯಲ್ ಮೀಡಿಯಾದಲ್ಲಿ ಮದುವೆ ಫೋಟೊ

ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ನವ ದಂಪತಿಯ ಫೋಟೋವನ್ನು ಶೇರ್ ಮಾಡಿ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನು ಧಾರಾವಾಹಿಯಲ್ಲಿ ಶೋಭಿತಾ ತನ್ನ ಪ್ರತಿಭೆಯಿಂದ ಜನರನ್ನು ಮನಸೂರೆಗೊಳಿಸಿದ್ದಾರೆ. ಹಾಗಂತ ಕೇವಲ ಕಿರುತೆರೆಯಲ್ಲಷ್ಟೇ ಅಲ್ಲ, ಸಿನಿಮಾದಲ್ಲಿ ನಟಿಸಿದ್ದಾರೆ.'ವಂದನಾ', 'ಅಟೆಂಪ್ಟ್‌ ಟು ಮರ್ಡರ್‌', 'ಜಾಕ್‌ಪಾಟ್' ಅಂತಹ ಸಿನಿಮಾಗಳಲ್ಲಿ ಶೋಭಿತಾ ನಟಿಸಿದ್ದಾರೆ. ಸದ್ಯ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಕೂಡ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ .

ಮದುವೆಗೆ ಆಗಮಿಸಿದ ಕಲಾವಿದರು

ಶೋಭಿತಾ ಶಿವಣ್ಣ ಮದುವೆ ಹಿಂದೂ ಸಂಪ್ರದಾಯದಂತೆ ಬಂಧು, ಬಾಂಧವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದೆ. ಇನ್ನು ಹಲವಾರು ಕಲಾವಿದರು ಆಗಮಿಸಿ ನವ ವಧು ವರರಿಗೆ ಶುಭ ಹಾರೈಸಿದ್ದಾರೆ. ವೈವಾಹಿಕ ಜೀವನದಲ್ಲಿ ಕಾಲಿಟ್ಟ ಬಳಿಕ ಶೋಭಿತಾ ಮತ್ತೆ ಸಿನಿಮಾ ಹಾಗೂ ಕಿರುತೆರೆಗೆ ಅನ್ನೋದನ್ನು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Brahmagantu serial actress Shobitha Shivanna marriage story, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X