Brhamagantu: ಕಿರುತೆರೆಯಲ್ಲಿ ಈ ಜೋಡಿ ಈಗ ಫೇಮಸ್; ಯಾವ್ ಸೀರಿಯಲ್ ಗೊತ್ತಾ?
ಸಿನಿಮಾ ಆಗಲಿ, ಸೀರಿಯಲ್ ಆಗಲಿ ವೀಕ್ಷಕರ ಮೋಸ್ಟ್ ಫೇವರಿಟ್ ಜೋಡಿ ಒಂದಷ್ಟು ಇರುತ್ತಾರೆ. ಧಾರಾವಾಹಿಯಲ್ಲಿ ಅವರು ಜೋಡಿಯಾದರೂ ಜನರ ಮನಸ್ಸನ್ನು ಗೆದ್ದಿರುತ್ತಾರೆ. ಆ ರೀತಿಯಾದ ಜೋಡಿಗಳ ಸಂಖ್ಯೆ ಜೀ ಕನ್ನಡದ ಸೀರಿಯಲ್ ನಲ್ಲಿ ಹೆಚ್ಚಾಗಿನೇ ಇದಾವೆ. ಈ ಮೊದಲಿದ್ದ ಗಟ್ಟಿಮೇಳ ಧಾರಾವಾಹಿಯ ಅಮೂಲ್ಯ-ವೇದಾಂತ್, ಈಗಿನ ಪುಟ್ಟಕ್ಕನ ಮಕ್ಕಳು ಧಾರಾವಾಹಿಯ ಕಂಠಿ-ಸ್ನೇಹಾ ಹೀಗೆ ಮತ್ತೊಂದು ಹೊಸ ಜೋಡಿ ಹುಟ್ಟಿಕೊಂಡಿದೆ.
ಜೀ ಕನ್ನಡದಲ್ಲಿ ಈ ಮೊದಲು 'ಬ್ರಹ್ಮಗಂಟು' ಧಾರಾವಾಹಿ ಬರ್ತಿತ್ತು. ಆ ಧಾರಾವಾಹಿಯ ಕಥೆ ಸಮಾಜಕ್ಕೆ ಬಹಳ ಮುಖ್ಯವಾಗಿತ್ತು. ಆ ಧಾರಾವಾಹಿ ಮುಗಿದ ಬಳಿಕ ಜೀ ಕನ್ನಡ ಅದೇ ಟೈಟಲ್‌ನಲ್ಲಿ ಹೊಸ ಧಾರಾವಾಹಿಯನ್ನು ತಂದಿದೆ. 'ಬ್ರಹ್ಮಗಂಟು' ಹೊಸ ಕಥೆಯೊಂದಿಗೆ ಹೊಸ ರೂಪದಲ್ಲಿ ಬರುತ್ತಿದೆ. ಅದರಲ್ಲೂ ಈ ಧಾರಾವಾಹಿಯಲ್ಲೊಂದು ಜೋಡಿ ಸಖತ್ ಟ್ರೆಂಡ್ ಕ್ರಿಯೇಟ್ ಮಾಡುತ್ತಿದೆ. ಅದೇ ನರಸಿಂಹ ಹಾಗೂ ಸಂಜನಾ ಜೋಡಿ.

ಕೋಳಿ ಜಗಳವಾಡುವ ನರಸಿಂಹ-ಸಂಜನಾ
'ಬ್ರಹ್ಮಗಂಟು' ಧಾರಾವಾಹಿಯಲ್ಲಿ ಚಿರು ಹಾಗೂ ದೀಪಾ ವಿಚಾರ ಬಂದಾಗ ಎಲ್ಲರು ಸೀರಿಯಸ್ ಆಗಿ ನೋಡುತ್ತಾ ಇರುತ್ತಾರೆ. ಆದರೆ ದೀಪಾ ಅವರ ಅಣ್ಣ ನರಸಿಂಹನ ದೃಶ್ಯ ಬಂದಾಗ ಮನಸ್ಸಾರೆ ನಕ್ಕು ಬಿಡುತ್ತಾರೆ. ಯಾಕಂದ್ರೆ ನರಸಿಂಹ ಕುಡುಕ, ರೌಡಿನೇ ಇರಬಹುದು ಆದರೆ ಸಂಜನಾ ಜೊತೆ ಇದ್ದಾಗ ಫುಲ್ ರೊಮ್ಯಾಂಟಿಕ್ ಬಾಯ್ ರೀತಿ ಆಡುತ್ತಾನೆ. ಇಬ್ಬರು ಸಿಕ್ಕಾಗಲೆಲ್ಲಾ ಕೋಳಿ ಜಗಳ ಆಡುತ್ತಲೇ ಇರುತ್ತಾರೆ.
ಜೋಡಿಯಾಗಿ ರೀಲ್ಸ್
ಇಬ್ಬರ ಜೋಡಿ ಈಗಾಗಲೇ ಎಲ್ಲರಿಗೂ ಇಷ್ಟವಾಗಿ ಬಿಟ್ಟಿದೆ. ಕ್ಯಾಮರಾ ಮುಂದಷ್ಟೇ ಇಬ್ಬರು ಸದಾ ಕಿತ್ತಾಡುವುದು, ರಿವೇಂಜ್ ತೀರಿಸಿಕೊಳ್ಳುವುದು. ಆದರೆ ರಿಯಲ್ ಲೈಫ್‌ನಲ್ಲಿ ಆ ರೀತಿ ಇಲ್ಲ. ಇಬ್ಬರು ತುಂಬಾನೇ ಆತ್ಮೀಯವಾಗಿದ್ದಾರೆ. ನರಸಿಂಹನಾಗಿ ಕಾಣಿಸಿಕೊಂಡಿರುವ ಭರತ್ ಹಾಗೂ ಸಂಜನಾ ಪಾತ್ರದ ಕೊಬ್ಬಿನ ರಾಣಿಯಾಗಿ ಕಾಣಿಸಿಕೊಂಡಿರುವ ಸಂಜನಾ ಶೂಟಿಂಗ್ ಸಮಯದಲ್ಲಿ ಗ್ಯಾಪ್ ಸಿಕ್ಕಿದ್ರೆ ಸಾಕು ರೀಲ್ಸ್‌ನಲ್ಲಿ ಬ್ಯುಸಿ ಆಗಿ ಬಿಡುತ್ತಾರೆ.
ಜೀವನದಲ್ಲಿ ಒಂದಾಗಿ ಅಂತಿದ್ದಾರೆ ಫ್ಯಾನ್ಸ್
ವೀಕ್ಷಕರ ಮನಸ್ಸನ್ನು ಗೆಲ್ಲುವುದು ಸುಲಭದ ಮಾತಲ್ಲ. ಜೋಡಿ ಇಷ್ಟವಾಗಬೇಕು ಅಂದ್ರೆ ಅವರಲ್ಲಿ ಸ್ಪಷಲ್ ಕ್ವಾಲಿಟೀಸ್ ಇರಬೇಕು. ಆಗಲೇ ವೀಕ್ಷಕರು ಅಪ್ಪಿ ಒಪ್ಪುವುದು. ಈಗ ವೀಕ್ಷಕರ ಮನಸ್ಸನ್ನು ಆರತಿ ಹಾಗೂ ಭರತ್ ಗೆದ್ದಿದ್ದಾರೆ. ಅವರಿಬ್ಬರು ವಿಡಿಯೋ ಮಾಡಿ ಹಾಕಿದ್ರು ಅಂದ್ರೆ ಸಾಕು ವಾವ್ ಜೋಡಿ ಸೂಪರ್ ಆಗಿದೆ. ನೀವಿಬ್ಬರು ಹೀಗೆ ಸದಾ ನಗುತ್ತಾ ಇರಿ. ರಿಯಲ್ ಆಗಿಯೂ ಜೋಡಿಯಾಗಿ ಬಿಡಿ ಎಂದೇ ಡಿಮ್ಯಾಂಡ್ ಇಡುತ್ತಾರೆ.
ಗ್ಲಾಮರ್ ಗೊಂಬೆ ಆರತಿ
ಆರತಿ ಪಡುಬಿದ್ರೆ ಈ ಮೊದಲು 'ಗಟ್ಟಿಮೇಳ' ಧಾರಾವಾಹಿಯ ಆರತಿ ಪಾತ್ರಕ್ಕೆ ರಿಪ್ಲೇಸ್ ಆಗಿದ್ದರು. ಧಾರಾವಾಹಿಯಲ್ಲಿ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಆರತಿ ರಿಯಲ್ ಲೈಫ್‌ನಲ್ಲಿ ಸಿಕ್ಕಾಪಟ್ಟೆ ಗ್ಲಾಮರಸ್. ಗೊಂಬೆಯಂತೆ ಕಾಣುತ್ತಾರೆ. ಈ ಸೀರಿಯಲ್ ನಲ್ಲಿ ಪೊಲೀಸ್ ಅಧಿಕಾರಿಯ ಮಗಳು. ಕೊಬ್ಬಿನ ರಾಣಿಯಾಗಿ, ಯಾರಿಗೂ ತಲೆಬಾಗುವುದೇ ಇಲ್ಲ ಎಂಬ ಕ್ಯಾರೆಕ್ಟರ್ ನಲ್ಲಿ ನಟಿಸಿದ್ದಾರೆ. ಅವರ ಕೊಬ್ಬು ಇಳಿಸುವ ಪಾತ್ರದಲ್ಲಿ ಭರತ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











