ಬಿಗ್ ಬಾಸ್ ಮನೆಯಲ್ಲಿ ಬ್ರಹ್ಮಾಂಡ ಐಟಂ ಡಾನ್ಸ್
ಒಂದು ಸುದೀಪ್ ಅವರ ಚಂದು ಚಿತ್ರದ ಸೊಂಟ ಸೂಪರು ಆದರೆ ಬಾರಿ ಡೇಂಜರು ಹಾಗೂ ಹಳೆಯ ಐಟಂ ಹಾಡು ಜೋಕೆ ನಾನು ಬಳ್ಳಿಯ ಮಿಂಚು ಹಾಡು ಹಾಗೂ ಸಿಂಗಾರಿ ಯಾರೇ ನೀ ಬುಲ್ ಬುಲ್ ಎಂಬ ಹಾಡಿಗೆ ಎಲ್ಲರೂ ಹೆಜ್ಜೆ ಹಾಕಿದರು.
ಇವಿಷ್ಟೂ ಹಾಡುಗಳಲ್ಲಿ ಮೈಮರೆತು ಕುಣಿದವರೆಂದರೆ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ. ಒಂದು ಐಟಂ ಹಾಡಿಗೂ ತಮ್ಮದೇ ಆದ ಶೈಲಿಯಲ್ಲಿ ಬ್ರಹ್ಮಾಂಡ ಗುರುಗಳು ನರ್ತಿಸಿದ್ದು ವೀಕ್ಷಕರಿಗೆ ಸಖತ್ ಮಜಾ ಕೊಡ್ತು.

ಇದೇ ಸಂದರ್ಭದಲ್ಲಿ ಅರುಣ್ ಸಾಗರ್ ಹಾಗೂ ಚಂದ್ರಿಕಾ ಅವರ ಸೊಂಟಗಳನ್ನು ಒಬ್ಬರಿಗೊಬ್ಬರು ಟಚ್ ಮಾಡಿಕೊಂಡು ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಚಂದ್ರಿಕಾ ಅವರು ತುಸು ನಾಚಿದರು. ತಮ್ಮದೂ ಒಂದು ಪಾಲು ಇರಲಿ ಎಂದು ಬ್ರಹ್ಮಾಂಡ ಗುರುಗಳು ಫ್ಲೈಯಿಂಗ್ ಕಿಸ್ ರವಾನಿಸಿದರು.
ಸಿಂಗಾರಿ ಯಾರೇ ನೀ ಬುಲ್ ಬುಲ್ ಎಂಬ ಹಾಡಿಗೆ ಕಡೆಗೆ ಎಲ್ಲರೂ ಗ್ರೂಪ್ ಡಾನ್ಸ್ ಮಾಡಿದರು. ಇಷ್ಟು ದಿನ ಸ್ವಲ್ಪ ಸೈಲೆಂಟ್ ಆಗಿದ್ದ ಬಿಗ್ ಬಾಸ್ ಮನೆ ಚಂದ್ರಿಕಾ ಪುನರಾಗಮನದ ಮೂಲಕ ಮತ್ತೆ ರಂಗೇರಿದೆ. ಇದು ಒಂಥರಾ ಅತಿರೇಕದ ಟಾಸ್ಕ್ ನಂತಿತ್ತು.
ವಿಧಿ ಇಲ್ಲದೆ ಬ್ರಹ್ಮಾಂಡ ಗುರುಗಳು ಕಾಷಾಯದಲ್ಲೇ ಅಮೋಘ ಸ್ಟೈಪ್ ಹಾಕಿದರು. ತಮ್ಮ ಹಾವಭಾವಗಳನ್ನು ಪ್ರದರ್ಶಿಸುತ್ತಾ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಪಡ್ಡೆಗಳು ನಾಚುವಂತೆ ಮಾಡಿದ್ದು ವಿಶೇಷ. ಕಡೆಗೆ ಒಂದು ಎಡವಟ್ಟು ಆಯಿತು. ಅದೇನೆಂದರೆ ಕುಣಿದು ಕುಣಿದು ಅವರ ಸೊಂಟ ಬಿದ್ದು ಹೋಯಿತು.


Click it and Unblock the Notifications











