For Quick Alerts
  ALLOW NOTIFICATIONS  
  For Daily Alerts

  ನರ್ಸ್ ಜಯಲಕ್ಷ್ಮಿ ಬಗ್ಗೆ ಬ್ರಹ್ಮಾಂಡ ಟೈಂ ಬಾಂಬ್

  By ಉದಯರವಿ
  |

  'ಬಿಗ್ ಬಾಸ್' ರಿಯಾಲಿಟಿ ಶೋನಿಂದ ಹೊರಬಂದ ಬಳಿಕ ಬ್ರಹ್ಮಾಂಡ ನರೇಂದ್ರ ಬಾಬು ಶರ್ಮಾ ಅವರು ಹಲವಾರು ಬಾಂಬ್ ಗಳನ್ನು ಸಿಡಿಸಿದ್ದಾರೆ. ಅವುಗಳಲ್ಲಿ ಕೆಲವು ಠುಸ್ ಆಗಿದ್ದರೆ ಇನ್ನೂ ಕೆಲವು ಟೈಂ ಬಾಂಬ್ ನಂತೆ ಫಿಕ್ಸ್ ಆಗಿವೆ. ಅವೆಲ್ಲವೂ ಯಾವಾಗ ಸಿಡಿಯುತ್ತವೋ ಗೊತ್ತಿಲ್ಲ.

  'ಬಿಗ್ ಬಾಸ್' ಮನೆಯಿಂದ ಒಂದೇ ವಾರಕ್ಕೆ ಔಟ್ ಆಗಿದ್ದ ನರ್ಸ್ ಜಯಲಕ್ಷ್ಮಿ ಅವರ ಬಗ್ಗೆ ಅವರು ಹಾಕಿರುವ ಬಾಂಬ್ ಈಗ ಸ್ಫೋಟಗೊಂಡಿದೆ. ಅದೇನೆಂದರೆ ಜಯಲಕ್ಷ್ಮಿ ಅವರನ್ನು ಕೈಹಿಡಿಯುವ ಗಂಡು ನಿಜಕ್ಕೂ ಅದೃಷ್ಟಶಾಲಿ ಎಂದಿದ್ದಾರೆ.

  ಆದರೆ ಬಿಗ್ ಬಾಸ್ ನಲ್ಲಿ ನಮ್ಮಿಬ್ಬರ ಮೇಲೆ ಗುಮಾನಿ ಬರುವಂತೆ ತೋರಿಸಲಾಯಿತು. ಆದರೆ ಅದೆಲ್ಲಾ ರಿಯಲ್ ಅಲ್ಲ. ಏನೋ ಆಗಬಾರದು ಆಗಿಹೋಯಿತು. ಅವರ ಜೀವನದಲ್ಲಿ ಆ ರೀತಿ ಆಗಬಾರದಿತ್ತು ಎಂದಿದ್ದಾರೆ ಶರ್ಮಾ.

  ಅವರಿಗೆ ಆದಷ್ಟು ಬೇಗ ಮದುವೆಯಾಗಲಿ. ಶಿಘ್ರಮೇವ ಕಲ್ಯಾಣಮಸ್ತು ಎಂದಿದ್ದಾರೆ ಬ್ರಹ್ಮಾಂಡ ಗುರುಗಳು. ಈ ಶೋಗೆ ಬರುವುದಕ್ಕೂ ಮುನ್ನ ಅವರೇನು ಎಂದು ಗೊತ್ತಿರಲಿಲ್ಲ. ನಿಜಕ್ಕೂ ಅವರಿಗೆ ಒಳ್ಳೆಯ ಮನಸ್ಸಿದೆ. ಅವರ ಕೈಹಿಡಿಯುವ ಗಂಡು ಅದೃಷ್ಟಶಾಲಿ ಎಂದು ಹೇಳಿದ್ದಾರೆ ಶರ್ಮಾ.

  ಬಿಗ್ ಬಾಸ್ ಮನೆಯಲ್ಲಿ ನರ್ಸ್ ಜಯಲಕ್ಷ್ಮಿ ಅವರು ಬ್ರಹ್ಮಾಂಡ ಶರ್ಮಾ ಅವರಿಗೆ ತುಂಬಾ ಆತ್ಮೀಯರಾಗಿದ್ದರು. ಆರಂಭದಿಂಲೂ ಇವರಿಬ್ಬರೂ ತುಂಬಾ ಕ್ಲೋಸ್ ಆಗಿದ್ದರು. ಶರ್ಮಾ ಅವರ ಪುಟಗೋಸಿ, ಮುಂಡಾಮೋಚ್ತು, ಮುಂಡೇವು ಎಂಬ ಮಾತುಗಳಿಗೆ ಬೆರಗಾಗಿದ್ದರು.

  English summary
  Whoever marries Nurse Jayalakshmi the person will be luckiest said the Brahmanda fame Narendra Babu Sharma. He also claims that, I made a big mistake by being part of Bigg Boss Kannada. I would never commit such mistakes in my life. It's a big gambling and a fixing show."

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X