ಬ್ರಹ್ಮಾಂಡ ಬಿಟ್ಟ ಅಪಾನವಾಯುಗೆ ಸುದೀಪ್ ಸುಸ್ತು
ಈ ಶುಕ್ರವಾರ (ಮೇ 31) ಮೂಡಿಬಂದ 'ವಾರದ ಕಥೆ ಕಿಚ್ಚನ ಜೊತೆ' ಸೊಗಸಾಗಿತ್ತು. ತಮ್ಮದೇ ಆದಂತಹ ಆಕರ್ಷಕ ನಿರೂಪಣಾ ಶೈಲಿಗೆ, ಮೋಡಿ ಮಾಡುವ ಮಾತುಗಾರಿಕೆ ಮೂಲಕ ಸುದೀಪ್ ಪ್ರತಿವಾರ ತನ್ನ ವೀಕ್ಷಕ ಬಳಗವನ್ನು ರಂಜಿಸುತ್ತಿದ್ದಾರೆ. ಈ ವಾರವೂ ಅವರು ಖಂಡಿತ ನಿರಾಸೆಪಡಿಸಲಿಲ್ಲ.
ಜಲಸಂರಕ್ಷಣೆ ಟಾಸ್ಕ್ ಬಗ್ಗೆ ಪ್ರಸ್ತಾಪಿಸಿದ ಅವರು, ಎಲ್ಲರೂ ಆಟವನ್ನು ಚೆನ್ನಾಗಿ ಆಡಿದಿರಿ ಎಂದೂ ಬೆನ್ನುತಟ್ಟಿದರು. ಹಾಗೆಯೇ ಬ್ರಹ್ಮಾಂಡ ಗುರುಗಳು ಹಾಕಿದ ಗ್ಯಾಸ್ ಬಾಂಬ್ ನೆನದು ಎದ್ದುಬಿದ್ದು ನಗಾಡಿದರು. ಅಲ್ಲಾರೀ ಅರುಣ್ ಸಾಗರ್ ನೀವೇಗೆ ಸಹಿಸಿಕೊಂಡಿರಿ ಎಂದೂ ಅವರನ್ನು ಮಾತಿನಲ್ಲೇ ಚಿವುಟಿದರು.

ಲೂಸ್ ಮಾದ ಯೋಗೀಶ್ ಅವರು ಮಾತನಾಡುತ್ತಾ, ನಮ್ಮ ತಂದೆಯವರ ಹುಟ್ಟುಹಬ್ಬ. ನಾನು ಮನೆಯಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಹಾಗಾಗಿ ಇಲ್ಲಿಂದಲೇ ಹುಟ್ಟುಹಬ್ಬ ತಿಳಿಸುತ್ತೇನೆ ಎಂದು ಸುದೀಪ್ ಅವರಲ್ಲಿ ವಿನಂತಿಸಿಕೊಂಡರು. ಬಳಿಕ ತಮ್ಮ ತಂದೆಯವರಿಗೆ ಬರ್ತ್ ಡೇ ಶುಭಾಶಯಗಳನ್ನೂ ಹೇಳಿದರು.
More from Filmibeat
English summary
Etv Kannada reality show Bigg Boss week end programme 'Vaarada Kathe Kichchana Jothe' highlights. Arun Sagar and Chandrika's hide and seek game, Sudeep lightly slams Vijay Raghavendra for criticizing on BB. Sudeep gives caution to the inmates who are spend more time for sleeping.
bigg boss narendra babu sharma rishika singh sudeep reality show ಬಿಗ್ ಬಾಸ್ ನರೇಂದ್ರ ಬಾಬು ಶರ್ಮಾ ರಿಷಿಕಾ ಸಿಂಗ್ ಸುದೀಪ್ ರಿಯಾಲಿಟಿ ಶೋ


Click it and Unblock the Notifications











