»   » ರತಿ ಮನ್ಮಥರನ್ನು ಹೊರಗೆ ಕಳುಹಿಸಲು ಬ್ರಹ್ಮಾಂಡ ಪ್ಲಾನ್

ರತಿ ಮನ್ಮಥರನ್ನು ಹೊರಗೆ ಕಳುಹಿಸಲು ಬ್ರಹ್ಮಾಂಡ ಪ್ಲಾನ್

Posted By:
Subscribe to Filmibeat Kannada
<ul id="pagination-digg"><li class="next"><a href="/tv/chandrika-disgust-against-nikita-bigg-boss-074195.html">Next »</a></li></ul>

ಲೂಸ್ ಮಾದ ಅಲಿಯಾಸ್ ಯೋಗೇಶ್ ಅವರು ಬಿಗ್ ಬಾಸ್ ಮನೆಗೆ ಆಗಮಿಸಿದ ಬಳಿಕ ಅದ್ಯಾಕೋ ಏನೋ ಮನೆಯ ವಾತಾವರಣ ಇನ್ನಷ್ಟು ಹದಗೆಟ್ಟಿದೆ. ನಿಕಿತಾ ನಾಮಿನೇಟ್ ಆದರೆ ಯೋಗಿಯೂ ನಾಮಿನೇಟ್ ಆದಂತೆ. ನಿಕಿತಾ ಮನೆಯಲ್ಲಿ ಇರುವಷ್ಟು ದಿನವೂ ಯೋಗಿಯೂ ಇರಬಹುದು ಎಂದು ಈಗಾಗಲೆ ಬಿಗ್ ಬಾಸ್ ಹೇಳಿರುವುದು ಮನೆಯ ಸದಸ್ಯರಿಗೆ ಒಂಥರಾ ಮಜಾ ಕೊಟ್ಟಂತಿದೆ.

ಇಲ್ಲಿವೆ ನೋಡಿ 56 ಹಾಗೂ 57ನೇ ದಿನದ ಹೈಲೈಟ್ಸ್. ನಿಕಿತಾರನ್ನು ಕಳುಹಿಸಿದರೆ ಯೋಗಿ ಸಹ ಮನೆಯಿಂದ ಔಟ್ ಆಗುತ್ತಾನೆ ಎಂಬ ಬಗ್ಗೆ ನರೇಂದ್ರ ಬಾಬು ಶರ್ಮಾ ಕೊಂಚ ಸೀರಿಯಸ್ಸಾಗಿ ಯೋ‌ಚಿಸಿರುವಂತಿದೆ.

Etv Kannada reality show Bigg Boss

ಇದೇ ವಿಷಯವನ್ನು ಅವರು ಅನುಶ್ರೀ ಹಾಗೂ ವಿಜಯ್ ರಾಘವೇಂದ್ರ ಬಳಿ ಚರ್ಚಿಸಿದರು. ನೋಡಿ ನಿಕಿತಾರನ್ನು ನಾವು ಹೇಗಾದರೂ ಮನೆಯಿಂದ ಹೊರಹೋಗುವಂತೆ ಮಾಡಬೇಕು. ಆಗ ಒಂದೇ ಏಟಿಗೆ ಎರಡು ಹಕ್ಕಿ ಹೊಡೆದಂತಾಗುತ್ತದೆ ಎಂದರು.

ನಾವು ಈಗಲೇ ಪ್ಲಾನ್ ಹಾಕಿಕೊಳ್ಳೋಣ ರತಿಮನ್ಮಥರನ್ನು ಹೊರಗೆ ಕಳುಹಿಸೋಣ ಎಂದರು. ಇನ್ನೊಂದು ಕಡೆ ಅರುಣ್ ಸಾಗರ್ ಅವರಿಗೆ ಮನೆಯ ಎಲ್ಲ ಸದಸ್ಯರ ಬಟ್ಟೆ ಒಗೆಯುವ ಕಾಯಕ ನೀಡಲಾಗಿದೆ. ಅವರು ರಾಜ್ಯದ ಎಲ್ಲಾ ಬಟ್ಟೆ ಒಗೆಯುವವರ ಪರವಾಗಿ ನಾನು ಕೊಳೆ ತೆಗೆಯುತ್ತೇನೆ. ಎಲ್ಲರೂ ನನಗೆ ಶಕ್ತಿ ಕೊಡಿ ಎಂದು ಕೇಳಿಕೊಂಡು ತಮ್ಮ ಕಾಯಕ ಶುರುವಚ್ಚಿಕೊಂಡರು. ಇದಕ್ಕೆ ಧ್ವನಿಗೂಡಿಸಿದ ಯೋಗಿ ಬಟ್ಟೆ ತೊಳೆಯಲು ಬುಲೆಟ್ ಪ್ರಕಾಶ್ ಹೆಲ್ಫ್ ಕೇಳು ಎಂದು ತಮಾಷೆ ಮಾಡಿದ.

<ul id="pagination-digg"><li class="next"><a href="/tv/chandrika-disgust-against-nikita-bigg-boss-074195.html">Next »</a></li></ul>
English summary
Etv Kannada reality show Bigg Boss Kannada day 56th and 57th highlights. This week BB nominates Nikita, Rishika Sing and Narendra Babu Sharma to send out of the house. Chandrika and Nikita cold war continues in the house.
Please Wait while comments are loading...